ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸಂದರ್ಶನಗಳು

’ಚಂದನ ವಾಹಿನಿ’ ಯಲ್ಲಿ ’ಶ್ರೀವತ್ಸ ಜೋಶಿಯವರ ಜೊತೆ ಸಂವಾದ’ !

ಜನವರಿ ೫ ನೇ ತಾರೀಖು ಚಂದನ ವಾಹಿನಿಯಲ್ಲಿ ಬೆಳಿಗ್ಯೆ, ೭ ಗಂಟೆಗೆ, ’ಬೆಳಗು,’ ಕಾರ್ಯಕ್ರಮದಲ್ಲಿ ನಡೆದ ’ಸಂವಾದ’ ದ ಕೆಲವು ತುಣುಕುಗಳು !,   ಮುಂದೆ ಓದಿ »

ಇದು ಜಾಹೀರಾತಲ್ಲ - ಮಂಸೋರೆ ಚಿತ್ರಪ್ರದರ್ಶನ

ಸಂತೆಯೊಳಗಿನ ಅನಾಮಿಕರು - ಸ್ಥಳನಿರ್ದಿಷ್ಟ ಜನಸಂಪರ್ಕದ ಕಲಾಕೃತಿಗಳ ಪ್ರದರ್ಶನ

Its not an ad...

ಇದು ಜಾಹೀರಾತಲ್ಲ.. ಮೆಟ್ಟಿಲು ಹತ್ತಿ ಬಂದು ನೋಡಿರಲ್ಲ...

IMAG0062

ಕೆಂಪೆಗೌಡ ರಸ್ತೆಯ ಪಾದಚಾರಿ ಮೇಲುಸೇತುವೆಯಲ್ಲಿ ಮಂಸೋರೆ ತಮ್ಮ ಚಿತ್ರದೊಂದಿಗೆ  ಮುಂದೆ ಓದಿ »

ಯುವ ಬ್ಲಾಗಿಗನ ಸಂದರ್ಶನ

ನಗೆ ಸಾಮ್ರಾಟ್: ನಮಸ್ಕಾರ್ ಸರ್. ಹೇಗಿದ್ದೀರಾ?

ಯುವ ಬ್ಲಾಗಿಗ: Fine dude. How are you?

ನ.ಸಾ: ಚೆನ್ನಾಗಿದ್ದೀನಿ ಸರ್. ಇದು ಕನ್ನಡದ ಪತ್ರಿಕೆಗಾಗಿನ ಸಂದರ್ಶನ. ಕನ್ನಡದಲ್ಲಿ ಮಾತನಾಡಿದರೆ ಚೆಂದ ಇತ್ತು.

ಯು.ಬ್ಲಾ: ನೋ ಪ್ರಾಬ್ಲಮ್ ಡೂಡ್. ಐ ಆಮ್ ಕಂಫರ್ಟಬಲ್ ವಿಥ್ ಕನ್ನಡ ಆಲ್ಸೋ!  ಮುಂದೆ ಓದಿ »

ವಿವೇಕ್ ಶಾನಭಾಗ್ ಸಂದರ್ಶನ

ವಿವೇಕ್ ಶಾನುಭಾಗ್

ಇಂಡಿಯನ್ ಫೌಂಡೇಶನ್ ಫರ್ ಆರ್ಟ್ಸ್ ಸಂಸ್ಥೆ ತನ್ನ ತ್ರೈಮಾಸಿಕದ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಿರುವ ನಮ್ಮ ಖ್ಯಾತ ಕತೆಗಾರ, ದೇಶಕಾಲ ಪತ್ರಿಕೆಯ ಸಂಪಾದಕ ವಿವೇಕ್ ಶಾನಭಾಗರ ಸಂದರ್ಶನದ ಕನ್ನಡ ಅನುವಾದ ಇಲ್ಲಿದೆ: ದೇಶಕಾಲದ ಸ್ಥೂಲ ಪರಿಚಯ "ದೇಶಕಾಲಕ್ಕೆ ಮೂರುವರ್ಷ" ಎಂಬ ಲೇಖನದಲ್ಲಿ ಲಭ್ಯವಿದೆ.

ಬರಹಗಾರ ಮತ್ತು ದೇಶಕಾಲದ ಸಂಪಾದಕ ವಿವೇಕ್ ಶಾನಭಾಗ್ ಇಲ್ಲಿ ಕನ್ನಡ ಸಾಹಿತ್ಯಕ್ಕೆ ಸಣ್ಣ ಪತ್ರಿಕೆಗಳ ಕೊಡುಗೆ ಮತ್ತು ತನ್ನ ಪತ್ರಿಕೆ ಹೇಗೆ ತನ್ನದೇ ಆದ ಒಂದು ಸ್ಥಾನ ಕಲ್ಪಿಸಿಕೊಂಡಿದೆ ಎಂಬ ಬಗ್ಗೆ ಮಾತನಾಡಿದ್ದಾರೆ:

ಪ್ರಶ್ನೆ: ಕನ್ನಡದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಪತ್ರಿಕೆಗಳ ಒಂದು ಒಟ್ಟಾರೆ ಚಿತ್ರಣವನ್ನು ನಮ್ಮ ಓದುಗರಿಗೆ ನೀಡಬಹುದೆ?

ಸಾಹಿತ್ಯಿಕ ಪತ್ರಿಕೆಗಳ ಒಂದು ದೊಡ್ಡ ಪರಂಪರೆಯೇ ಕನ್ನಡಕ್ಕಿದೆ. ಮಾಸ್ತಿ, ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಯು.ಆರ್.ಅನಂತಮೂರ್ತಿ ಮತ್ತು ಇನ್ನೂ ಹಲವು ಪ್ರಮುಖ ಬರಹಗಾರರು ಸಾಹಿತ್ಯಿಕ ಪತ್ರಿಕೆಗಳನ್ನು ಸಂಪಾದಿಸಿ ಪ್ರಕಟಿಸಿದ್ದರು. ಹೆಚ್ಚಿನವು ದೀರ್ಘಕಾಲ ಉಳಿಯಲಿಲ್ಲ ಎಂಬುದು ನಿಜವಾದರೂ ಹೊಸ ಬರಹಗಾರರನ್ನು ಉತ್ತೇಜಿಸುವ ಮೂಲ ಉದ್ದೇಶವನ್ನು ಅವು ಈಡೇರಿಸಿವೆ. ನಮ್ಮ ಹೆಚ್ಚಿನ ಹೆಚ್ಚಿನ ಸಾಹಿತ್ಯಿಕ ಬೆಳವಣಿಗೆಗಳು, ಬದಲಾವಣೆಗಳು ಈ ವಲಯದಿಂದ ಸ್ಪೂರ್ತಿ ಪಡೆದಿವೆ.  ಮುಂದೆ ಓದಿ »

ಕೆ.ಎಸ್‌. ನಿಸಾರ್‌ ಅಹಮದ್‌ ಸಂದರ್ಶನ

ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ನಿಮಗೆ ದೊರಕಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

-ನನ್ನ ಬದುಕಿನ ಅತ್ಯಂತ ಸಾರ್ಥಕ ಕ್ಷಣಗಳಲ್ಲಿ ಇದೂ ಒಂದು. ಇದಕ್ಕೆ ಮೂರ್ನಾಲ್ಕು ಕಾರಣಗಳಿವೆ. ನಾಲ್ಕು ವರ್ಷಗಳ ಹಿಂದೆಯೇ ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಅಂತ ವದಂತಿಯಾಗಿತ್ತು. ತುಂಬಾ ಜನ ದೂರವಾಣಿ ಮೂಲಕ ಶುಭ ಕೋರಿದ್ದರು ಕೂಡ. ಸಹಜವಾಗಿ ತುಂಬಾ ಖುಷಿಯಾಗಿತ್ತು. ಆದರೆ, ಅದಾದ ಕೆಲವೇ ಗಂಟೆಗಳಲ್ಲಿ ನಾನು ಆಯ್ಕೆಯಾಗಿಲ್ಲ ಅಂತ ಗೊತ್ತಾಗಿ ನಿರಾಸೆ ಆಯ್ತು. ಆಸೆ ಹುಟ್ಟಿಸಿ ಆಮೇಲೆ ಹೀಗಾದರೆ ಎಲ್ಲೋ ಎಂಥಾ ಮನುಷ್ಯನಿಗಾದ್ರೂ, ಎಂಥಾ ಸ್ಥಿತಪ್ರಜ್ಞನಿಗಾದ್ರೂ ಸ್ವಲ್ಪ ಬೇಸರ ಆಗುತ್ತೆ. ಆದ್ರೂ ಸಾವರಿಸಿಕೊಂಡೆ. ಹಾಗೆ ನೋಡಿದ್ರೆ ಇಷ್ಟರವರೆಗೆ ನನಗೆ ಬಂದಿರುವಂಥ ಪ್ರಶಸ್ತಿಗಳೆಲ್ಲ ಆಯಾಚಿತವಾಗಿ ಬಂದಂಥವು. ಯಾರ ಕೈಕಾಲು ಹಿಡಿದು ಪಡೆದುಕೊಂಡದ್ದೇನಲ್ಲ. ಹಾಗಾಗಿ ಬರಬೇಕಾಗಿದ್ದು ಬಂದೇ ಬರುತ್ತೆ ಅನ್ನೋ ನಂಬಿಕೆ ಇತ್ತು. ದೈವ ಕೃಪೆಯಿಂದ ಎಂಥಾ ಹೊತ್ತಲ್ಲಿ ಬಂದಿದೆ ಅಂದರೆ, ಕರ್ನಾಟಕ ಸುವರ್ಣ ರಾಜ್ಯೋತ್ಸವದ ಹೊನ್ನಸಗೆ ಆಚರಿಸುತ್ತಿದೆ. ಶಿವಮೊಗ್ಗದಲ್ಲಿ- ನಾನು ಎಲ್ಲಿ ಅತ್ಯಂತ ಮಹತ್ವದ, ಪುಷ್ಕಳವಾದ, ಧಾರಾಳವಾದ ಕವಿತೆಗಳನ್ನು ಬರೆದನೋ ಅಲ್ಲಿ ಸಮ್ಮೇಳನ ನಡೆಯುತ್ತಿದೆ. ಶಿವಮೊಗ್ಗ ನನ್ನ ಎರಡನೇ ಸೃಜನಶೀಲತೆಯ ತವರು ಅಂತ ಹೇಳಿಕೊಂಡಿದ್ದೇನೆ. ಬೆಂಗಳೂರು ಬಿಟ್ಟರೆ ಶಿವಮೊಗ್ಗ ನನಗೆ ಅತ್ಯಂತ ಪ್ರಿಯವಾದ ಊರು. ಏಕೆಂದರೆ ನನಗೆ ಅಲ್ಲಿ ಏಕಾಂತ ಸಿಕ್ತು. 1967ರ ಹೊತ್ತಲ್ಲಿ ಆಟೋಗಳು ಇರ್ಲಿಲ್ಲ, ಬರೀ ಜಟಕಾ ಗಾಡಿಗಳಿದ್ವು. ಶಿವಮೊಗ್ಗ ತನ್ನ ಹಳ್ಳಿ ಸೊಗಡಿನ ಮುಗ್ಧತೆ ಕಾಪಾಡಿಕೊಂಡು ಬಂದಿತ್ತು. ಇವತ್ತು ಹಿರಿಯಕ್ಕನ ಚಾಳಿ ಅಂತ ಬೆಂಗಳೂರಿನ ಚಾಳಿ ಬಡಿದಿದೆ ಅದಕ್ಕೆ. ಆ ಕಾಲದಲ್ಲಿ ತುಂಬಾ ನಿರಾಳವಾಗಿತ್ತು. ಕೈಚಾಚಿದಲ್ಲಿ ಗದ್ದೆ, ತೋಟ, ಹೊಳೆ, ಕಾಲುವೆ, ಪಕ್ಷಿಗಳು.... ಅತ್ಯಂತ ಆನಂದ ನೀಡುವ, ಪ್ರಶಾಂತ ವಾತಾವರಣ. ಹಾಗಾಗಿ ಶಿವಮೊಗ್ಗದಲ್ಲಿ ಈ ಸ್ಥಾನ ಸಿಕ್ಕಿದ್ದಂತೂ ನನಗೆ ಉಡುಗೊರೆ ಕೊಟ್ಟ ಹಾಗಿದೆ. ಇನ್ನೊಂದು ವಿಚಾರವೆಂದರೆ, ಶಿವಮೊಗ್ಗದಲ್ಲಿ ನಾನು ಯಾವ ಕೋಣೆಯಲ್ಲಿ ಕುಳಿತು ಸಾಮಾನ್ಯ ಶಿಷ್ಟ ಜನ, ವಿಮರ್ಶಕರು ಇವತ್ತಿಗೂ ಒಳ್ಳೆಯ ಪದ್ಯಗಳು ಅಂತ ಮೆಚ್ಚಿಕೊಂಡಿರುವ ಕವಿತೆಗಳನ್ನು ಬರೆದೆನೋ ಆ ಕೋಣೆಗೂ ಈಗ ಸಮ್ಮೇಳನ ನಡೆಯುತ್ತಿರುವ ವೇದಿಕೆಗೂ ಒಂದೇ ರಸ್ತೆ ಅಡ್ಡ. ಇದು ಕಾಕತಾಳೀಯವೋ, ಯೋಗಾಯೋಗವೋ ಗೊತ್ತಿಲ್ಲ. ಯಾವುದೋ ಅಲೌಕಿಕ ಶಕ್ತಿಯ ಕೃಪೆ ಇರುವುದಂತೂ ನಿಜ. ಆ ಶಕ್ತಿಗೆ ನನ್ನ ನಮಸ್ಕಾರ.  ಮುಂದೆ ಓದಿ »

Syndicate content