ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ ।
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ।।
ಸೊಗಸಿನೆಳಸಿಕೆಗೊಂದು, ತನ್ನಾತ್ಮಕ್ಕಿನ್ನೊಂದು ।
ಬಗೆಯೆಷ್ಟೊ ಮೊಗವಷ್ಟು -- ಮಂಕುತಿಮ್ಮ ।।

— ಡಿ.ವಿ.ಜಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸುದ್ದಿ ಸ್ವಾರಸ್ಯ

ಐದು ಹೆಡೆಯ ಸರ್ಪ

ಐದು ಹೆಡೆಯ ಸರ್ಪ

ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ಎಂಬಲ್ಲಿ ಈ ಐದು ಹೆಡೆಯ ಸರ್ಪ ಪತ್ತೆ ಆಗಿದೆ ಎಂಬ ಮಿಂಚಂಚೆಯೊಂದು ಇತ್ತೀಚೆಗೆ ಬಂತು. ಐದು ಹೆಡೆಯ ಸರ್ಪಗಳೂ ಇರುತ್ತವೆಯೇ?

ಈ ಚಿತ್ರ ನಕಲಿ ಎಂದೇನೂ ಅನಿಸುತ್ತಿಲ್ಲ.

http://sampada.net/i...

ಇದರ ಸತ್ಯಾಸತ್ಯತೆಗಳನ್ನು ಬಲ್ಲವರು ತಿಳಿಸುವಿರಾ?

ಧನ್ಯವಾದಗಳು

ಕಲಿಯುಗದ ಶ್ರೀ ಕೃಷ್ಣ

ನಿತ್ಯಾನ೦ದ ಪರಮಹ೦ಸರು ತಾವು ಶ್ರೀ ಕೃಷ್ಣನ ಅಪರಾವತಾರ ಎ೦ಬುದನ್ನು ತಮ್ಮ ರಾಸಲೀಲೆಯಲ್ಲಿ ನಿಜಕ್ಕೂ ಬಹಿರ೦ಗ ಪಡಿಸಿದ್ದಾರೆ ಹಾಗೂ ಜನಸಾಮಾನ್ಯರ ಮಟ್ಟದಲ್ಲಿನ ಆಧ್ಯಾತ್ಮಿಕತೆಯ ಚಿ೦ತನೆಗೆ ಅವನತಿಯ ಹಾದಿ ತೋರಿಸಿದ್ದಾರೆ.  ಇದನ್ನು ಎಲ್ಲಾ ನಾಗರೀಕರು ಖ೦ಡಿಸುವುದು ಅಗತ್ಯವಾಗಿರುತ್ತದೆ. ಈ ಘಟನೆಯಿ೦ದ ಎಲ್ಲಾ ಆಧ್ಯಾತ್ಮಿಕ ಮಾರ್ಗದರ್ಶಿಗಳ ಮೇಲೆ ಕಪ್ಪು ತೆರೆ ಬಿದ್ದ೦ತಾಗಿದೆ.

ಶುಚಿ

ಇವತ್ತು ಮಾರ್ಚ್ ೧ನೇ ತಾರೀಖು. ರಾಗಿಗುಡ್ಡ ದೇವಸ್ತಾನದಲ್ಲಿ ಇಂದಿನಿಂದ ಬಯಲು ರಂಗಮಂಟಪದಲ್ಲಿ ಒಂದು ತಿಂಗಳು ಪ್ರವಚನ ಕಾರ್ಯಕ್ರಮಗಳು ನಡೆಯುತ್ತವೆ. ಈ ಕಾರ್ಯಕ್ರಮಕ್ಕೆ ರಂಗಮಂಟಪವನ್ನು ಸಜ್ಜು ಮಾಡುವಬಗ್ಗೆ ಹೋದವರ್ಷವೇ ಇಲ್ಲಿ ಪ್ರಸ್ತಾಪ ಮಾಡಿದ್ದೆ. ಇವತ್ತೂ ಕಾರ್ಯಕ್ರಮಕ್ಕೆ ಹೋಗಿದ್ದೆ. ಇವತ್ತು ನನಗೆ ಅನ್ನಿಸಿದ್ದು ಈ ಬೆಂಗಳೂರು ನಗರದಲ್ಲಿ ಅಷ್ಟು ಬೃಹತ್ ಅಂಗಳವನ್ನು (ಸುಮಾರು ೩೦೦ ಅಡಿ ಉದ್ದ ೧೫೦ ಅಡಿ ಅಗಲ) ಸಗಣಿಯಿಂದ ಸಾರಿಸಲು ಬೇಕಾಗಬಹುದಾದ ಸಗಣಿ ಬೆಂಗಳೂರು ನಗರದಲ್ಲಿ ಹೊಂದಿಸಲು ಎಷ್ಟು ಕಷ್ಟವಾಗಿರಬಹುದು ಅಂತ; ಏಕೆಂದರೆ ಇಲ್ಲಿ ಅಷ್ಟು ಜಾನುವಾರು ಒಂದೇ ಕಡೆ ವಾಸವಾಗಿರುವುದು ದುರ್ಲಭ.

ಬೆಂಗಳೂರು ಕೋಟೆಗೆ ಪರಿಚಯ - ಬರುತ್ತೀರ?

ನಮಸ್ಕಾರ!

ಇಂಟ್ಯಾಕ್ ಸಂಸ್ಥೆ ೨-೩ ತಿಂಗಳಿಗೊಮ್ಮೆ, heritage walk  ಓಂದನ್ನು ನಡಿಸುತ್ತಾರೆ. ಈ ಬಾರೆ, heritage walk  ಕನ್ನಡದಲ್ಲಿದೆ. ಅದರೆ ಬಗ್ಗೆ ಕಮಾಹಿತಿಯನ್ನು ಕೆಳಗೆ paste  ಮಾಡಲಾಗಿದೆ. ದಯವಿಟ್ಟು ನೋಡಿ, ಆಸಕ್ತಿ ಇದ್ದರೆ, ಸೇರಿ ..  ಮುಂದೆ ಓದಿ »

ಕೇಂದ್ರ ಸರ್ಕಾರದ ಹೊಸ ನೀತಿ - ವರಮಾನ ತೆರಿಗೆ ಪಾನ್ ಕಾರ್ಡ್ ದಿನಾಂಕ ೦೧-೦೪-೨೦೧೦ ರಿಂದ

ಕೇಂದ್ರ ಸರ್ಕಾರ ೧ನೇ ಏಪ್ರಿಲ್ ೨೦೧೦ ರಿಂದ ವರಮಾನ ತೆರಿಗೆಯಲ್ಲಿ ಕೆಲವು ಬದಲಾವಣೆಯನ್ನು ತಂದಿದೆ, ಯಾವುದೇ ವ್ಯಕ್ತಿಯು ವರಮಾನದಲ್ಲಿ ಸಂಬಳ ಅಥವಾ ವ್ಯವಹಾರಸ್ಥರು ಪಾನ್ ಕಾರ್ಡ್ ಹೊಂದಿಲ್ಲದಿದ್ದಲ್ಲಿ ಕೆಳಗಿನ ಸವಲತ್ತು ಹಾಗು ದಂಡವನ್ನು ವಸೂಲಿ ಮಾಡುವ ಇರಾದೆ ವ್ಯಕ್ತಪಡಿಸಿದೆ.
೧. ಸಂಬಳದಾರರು ಪಾನ್ ಕಾರ್ಡ್ ಹೊಂದಿಲ್ಲದಿದ್ದಲ್ಲಿ ಮತ್ತು ಅವರ ಆದಾಯ ತೆರಿಗೆಯನ್ನು ಕಟ್ಟದವರಾಗದಿದ್ದಲ್ಲಿ - ಅವರು ಕೆಲಸ ಮಾಡುವ ಸಂಸ್ಥೆಯೇ ಸಂಬಳದಲ್ಲಿ ಶೇ ೨೦% ಭಾಗವನ್ನು ಹಿಡಿದುಕೊಂಡು ಉಳಿದ ಸಂಬಳವನ್ನು ಕೊಡುವುದು.
೨. ಸಂಬಳದಾರರು ಪಾನ್ ಕಾರ್ಡ್ ಹೊಂದಿದ್ದು ಅವರು ಆದಾಯ ತೆರೆಗಿಯ ಪಾವತಿಗೆ ಅರ್ಹರಾಗದಿದ್ದರು, ಸಂಸ್ಥೆಯು ಉದ್ಯೋಗಿಗಳ ಪಾನ್ ಕಾರ್ಡ್ ವಿವರವನ್ನು ಇರಿಸಿಕೊಳ್ಳುವುದು.
೩. ಇನ್ನು ಸಂಸ್ಥೆಯ ಪಾನ್ ಕಾರ್ಡ್ ವಿವರ ಹಾಗು ಕಾಲ ಕಾಲಕ್ಕೆ ಅದು ಕಟ್ಟುವ ಶುಲ್ಕ (ಟಿಡಿಎಸ್) ವಿವರಗಳು ಸರಿಯಾಗಿದ್ದು, ಹಾಗು ಅದು ವರಮಾನ ತೆರಿಗೆ ಇಲಾಖೆಗೆ ಸಂದಾಯವಾಗುತ್ತಿದ್ದರೆ, ಸಂಸ್ಥೆಯು ಸಂದಾಯಮಾಡಿದ ಶುಲ್ಕದ ವಾರ್ಷಿಕ ಮೊತ್ತದ ಶೇಕಡ ೧%ರಷ್ಟನ್ನು ಸೋಡಿ ಬಿಡುವ ಯೋಚನೆಯು ಸೇರಿದೆ.
 ಮುಂದೆ ಓದಿ »

ಹೊಸ ಜಿಲ್ಲೆಯಾಗಿ ಯಾದಗಿರಿ: ಕೊನೆಗೂ ನನಸಾದ ಬಹುದಿನದ ಕನಸು

1997ರಲ್ಲೇ ಜಿಲ್ಲೆಯಾಗಬೇಕೆಂಬ ಕೂಗು ಕೇಳಿಬಂದಿದ್ದರೂ, ಯಾದಗಿರಿ ’ಗುಡ್ಡ’ಕ್ಕೆ ಜಿಲ್ಲೆಯ ಮೆರಗು ಸಿಕ್ಕಿದ್ದು ಮತ್ತೊಂದು ದಶಕದ ನಂತರವೇ. ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ಯೋಚನೆ ಸರ್ಕಾರಕ್ಕೆ ಬಂದಾಗ, ಗೋಕಾಕ ಮತ್ತು ಚಿಕ್ಕೋಡಿಯ ಜನರು ರೊಚ್ಚಿಗೆದ್ದು ತಮ್ಮ ನಗರವೇ ಜಿಲ್ಲೆಯಾಗಬೇಕೆಂಬ ಹಠ ಹಿಡಿದರು. ಪರಿಣಾಮವಾಗಿ, ಬೆಳಗಾವಿ ಇನ್ನೂ ಹಾಗೆಯೇ ಇದೆ. ಅಂತಹದೇ ಬಿಸಿ ಗಾಳಿ ಗುಲ್ಬರ್ಗ ಜಿಲ್ಲೆಯಲ್ಲೂ ಬೀಸಿದಾಗ, ಯಾದಗಿರಿ ಮತ್ತು ಶಹಪೂರ ತಾಲ್ಲೂಕುಗಳೂ ಜಿಲ್ಲೆಯ ಸ್ಥಾನಕ್ಕಾಗಿ ಸೆಣೆಸಿದವು. ಹಲವು ವರ್ಷಗಳ ಮಾತಿನ ಚಕಮಕಿಯ ನಂತರ ಕೊನೆಗೆ ನಕ್ಕಿದ್ದು ಯಾದಗಿರಿ ಗುಡ್ಡ.

ಯಾದಗಿರಿ, ಒಂದು ಜಿಲ್ಲೆಗೆ ಬೇಕಾದ ಎಲ್ಲ ಅರ್ಹತೆಗಳಿರುವಂತಹ ನಗರ. ಖರ್ಗೆಯವರಂತಹ ಧುರೀಣರ ರಾಜಕೀಯ ಬೆಂಬಲ ಪಡೆದಂತಹ ನಗರ. ಸೆಪ್ಟೆಂಬರ್ 26, 2009ರಂದು ಗುಲ್ಬರ್ಗಾದಲ್ಲಿ ಜುರುಗಿದ ಐತಿಹಾಸಿಕ ಸಚಿವ ಸಂಪುಟ ಸಭೆಯ ನಂತರ ಮುಖ್ಯಮಂತ್ರಿಗಳು ಯಾದಗಿರಿ ನೂತನ ಜಿಲ್ಲೆಯನ್ನಾಗಿ ಅಸ್ತಿತ್ವಕ್ಕೆ ಬರಲಿದೆ ಎಂದು ಘೋಷಿಸಿದರು (ಈ ಘೋಷಣೆಯಿಂದ ಪಕ್ಕದ ಶಹಪೂರದಲ್ಲಿ ಆಗಬಹುದಾದ ಗಲಭೆಯನ್ನು ತಡೆಯಲು ಆಗಲೇ ಅಗತ್ಯವಾದ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು!). ಅಕ್ಟೋಬರ 31ರಂದೇ ಜಾರಿಗೆ ಬರಬೇಕಾಗಿದ್ದ ಜಿಲ್ಲೆಯ ಸ್ಥಾನ, ನೆರೆಯ ಹಾವಳಿಯಿಂದ ಮುಂದೂಡಲ್ಪಟ್ಟಿತು. ಬಹಳಷ್ಟು ಜನ ಜಿಲ್ಲೆಯ ಸ್ಥಾನ ಮತ್ತಷ್ಟು ದೂರ ಹೋಯಿತು ಎಂದೇ ತಿಳಿದಿದ್ದರು. ಕೇಂದ್ರ ಜನಗಣತಿ ಇಲಾಖೆಯು ಗಣತಿ ಕಾರ್ಯ ಕೈಗೊಳ್ಳಲಿರುವ ಕಾರಣ ಈ ತಿಂಗಳ 31ರ ನಂತರ ಕಂದಾಯ ಗ್ರಾಮ, ತಾಲ್ಲೂಕು, ಉಪವಿಭಾಗ ಹಾಗೂ ಜಿಲ್ಲೆಯ ಗಡಿಗಳನ್ನು ಬದಲಿಸಲು ಬರುವುದಿಲ್ಲ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು, ಡಿಸೆಂಬರ್ 30ರ ಒಳಗೆ ಯಾದಗಿರಿಯನ್ನು ಜಿಲ್ಲೆಯನ್ನಾಗಿ ಮಾಡುವ ಧೃಡ ನಿರ್ಧಾರವನ್ನು ಮಾಡಿದ್ದಾರೆ [ಪ್ರಜಾ ವಾಣಿ]. ಅದಲ್ಲದೇ ಜ್ಯೋತಿಷಿಗಳು "ಡಿಸೆಂಬರ್ 30, ಬಧವಾರ, ತ್ರಯೋದಶಿ, ರೋಹಿಣಿ ನಕ್ಷತ್ರವಿದ್ದು, ಬೆಳಗಿ ಜಾವ, ಅಂದರೆ, 5.30ರಿಂದ  11ಗಂಟೆಯವರೆಗಿನ ಮಹೂರ್ತ ಒಳ್ಳೆಯದಿದ್ದು, ಈ ಸಮಯದಲ್ಲಿ ಕೈಗೊಂಡ ನಿರ್ಧಾರಗಳು ಬಹಳ ಕಾಲ ಬಾಳುತ್ತವೆ" ಎಂದು (ಜ್ಸೋತಿಷಿ ಚನ್ನಬಯ್ಯ ಸ್ವಾಮಿಗಳು) ಹೇಳಿರುವುದು ಯಡಿಯೂರಪ್ಪನವರಿಗೆ ಯಾದಗಿರಿಯನ್ನು ಜಿಲ್ಲೆಯಾಗಿ ಘೋಷಿಸಲು ಮತ್ತಷ್ಟು ಸ್ಪೂರ್ತಿಯನ್ನು ಕೊಟ್ಟಿರಬೇಕು!!

 ಮುಂದೆ ಓದಿ »

ಪರಿಷತ್ ಪ್ರಸಂಗ! (ಒಂದು ಸುನೀತ)

ಪರಿಷತ್ ಚುನಾವಣೆಗೆ ಸಜ್ಜಾಯ್ತು ರಂಗ
ಹುರಿಯಾಳುಗಳದಿನ್ನು ಕೀರ್ತನೆ ಅಭಂಗ!

ಒಂದಾದರೈ ಮತ್ತೆ ಬದ್ಧ ವೈರಿಗಳು
ಹೊಂದಾಣಿಕೆಯ ಲಾಭ ಎಣಿಸುವ ಕುಳಗಳು

ಹೊರಗಡೆಗೆ ದೋಸ್ತಿಯಾದರೆ ಒಳಗೆ ಕುಸ್ತಿ
ಪರಮ ನೀಚರ ಗುರಿಯು ಬರಿ ಮೋಜು-ಮಸ್ತಿ

ಒಬ್ಬೊಬ್ಬ ಮತದಾರನಿಗು ಹಣದ ಗಂಟು
’ಅಬ್ಬಬ್ಬ’ ಎನುವಂತೆ ಹಣ ಹರಿಯಲುಂಟು

ಹಣ ಪಡೆವ ಮತದಾರನೂ ಲೀಡರಯ್ಯ!
ಜನರಿಂದ ಆಯ್ಕೆಯಾದಂಥ ಮಹನೀಯ!

ಆರಿಸುವವರು ಮತ್ತು ಆಯ್ಕೆಯಾಗ್ವವರು
ಸೇರಿ ನಡೆಸುವರೀ ಭ್ರಷ್ಟ ಕಾರ್ಬಾರು

ಪರಿಷತ್ ಚುನಾವಣೆಗೆ ಸಜ್ಜಾಯ್ತು ರಂಗ
ಹುರಿಯಾಳುಗಳ ಮುಂದೆ ಬಡಪ್ರಜೆಯು ಮಂಗ!

ದೊರೆ ನಗುವುದಕ್ಕೆ ಏನು ಮಾಡಬೇಕು?

(ನಗೆ ನಗಾರಿ ನಗದು ಬ್ಯೂರೋ)

ಪ್ರಜೆಗಳೇ ಪ್ರಭುವಾಗಿರುವ ಪ್ರಜಾಪ್ರಭುತ್ವದಲ್ಲಿ ದೊರೆಯಾದವನು ಪ್ರಜೆಗಳಿಗಾಗಿ ಮಾಡುವ ತ್ಯಾಗಗಳು ಅಪಾರ. ರಾಜ ಪ್ರಭುತ್ವವಿದ್ದಾಗಲೇ ಈ ಸಂಸ್ಕೃತಿಗೆ ಓನಾಮ ಹಾಕಿದವ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ. ಡ್ರೈ ಕ್ಲೀನರ್ ಒಬ್ಬನ ಮಾತಿಗೆ ಮಡದಿಗೇ ಡೈವೋರ್ಸ್ ನೀಡುವ ಅತಿ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಸಾಮಾನ್ಯದ ಮಾತೇ? ಈ ನಿರ್ಧಾರಕ್ಕೆ ಯಾವ ವಿಧದಲ್ಲೂ ಕನಿಷ್ಠವಲ್ಲದ ನಿರ್ಧಾರವನ್ನು ಕರ್ನಾಟಕವೆಂದ ರಾಜ್ಯದ ದೊರೆಯು ತೆಗೆದುಕೊಂಡಿದ್ದಾನೆ. ಜನತೆಯ ಆಶೋತ್ತರಗಳಿಗಾಗಿ ಹಿಂದೆ ಯಾರೂ ಮಾಡದ ತ್ಯಾಗವನ್ನು ನಾಡಿನ ಅಧಿಪತಿ ಮಾಡಲು ಮುಂದಾಗಿದ್ದಾನೆ.

ತಾನು ಇನ್ನು ಮುಂದೆ ಸಿಡುಕು ಮೋರೆಯನ್ನು ಹೊತ್ತು ತಿರುಗುವುದಿಲ್ಲ. ಯಾರ ಮೇಲೆಯೂ ರೇಗುವುದಿಲ್ಲ. ನಗುಮುಖದಿಂದಲೇ ಇರುವೆ. ಸದಾನಂದ ಗೌಡರಿಗೆ ಪೈಪೋಟಿ ನೀಡುವ ಮಟ್ಟಿಗೆ ಹಲ್ಕಿರಿಯುವೆ.  ಮುಂದೆ ಓದಿ »

ಮುಂಬೈನಲ್ಲಿ, ಸುಪ್ರಸಿದ್ಧ ಹರಿಕಥಾ ವಿದುಷಿ. ಜಿ. ಶೋಭಾ ನಾಯ್ಡು !

ಬೆಂಗಳೂರಿನಿಂದ ಆಗಮಿಸಿದ, ದಿವಂಗತ ಶ್ರೀ ಗುರುರಾಜುಲು ನಾಯ್ಡುರವರ ಪುತ್ರಿ, ಪ್ರಸಿದ್ಧ ಹರಿಕಥಾ ವಿದೂಷಿ, ('ಕರ್ನಾಟಕ ರಾಜ್ಯೋತ್ಸವ ಕೀರ್ತನ ರತ್ನ'  'ಗಾನಸರಸ್ವತಿ ಕಳಶ ಪ್ರಶಸ್ತಿ' ಪುರಸ್ಕೃತೆ) ಶ್ರೀಮತಿ, ಶೋಭಾ ನಾಯ್ಡುರವರು,  ತಮ್ಮ ತಂದೆಯವರದೇ ಶೈಲಿಯಲ್ಲಿ ತಮ್ಮ ಹರಿಕಥಾಕೀರ್ತನೆಯ ರಸದೌತಣವನ್ನು ಕನ್ನಡ ರಸಿಕರಿಗೆ ಉಣಬಡಿಸಲು ಶ್ರಮಿಸುತ್ತಿದ್ದಾರೆ. ಅದರಂತೆ ಮುಂಬೈನಗರ ಹಾಗೂ ಉಪನಗರಗಳ ಕನ್ನಡ ಕೀರ್ತನ ಪ್ರಿಯರಿಗಾಗಿಯೇ  ಶೋಭಾರವರು, ತಮ್ಮ ಕಾರ್ಯಕ್ರಮಗಳನ್ನು ೨೦೦೯ ರ ಅಕ್ಟೋಬರ್ ತಿಂಗಳಿನಲ್ಲಿ ಹಮ್ಮಿಕೊಂಡಿದ್ದರು. ಅವುಗಳು ಹೀಗಿದ್ದವು :

೧. ’ವೀರ ಬಬ್ರುವಾಹನ’ (ಗುರುವಾರ, ೧, ಅಕ್ಟೋಬರ್, ೨೦೦೯ ಸಾಯಂಕಾಲ, ೬. ಗಂಟೆಗೆ),  ಮುಂದೆ ಓದಿ »

ವಿಶಿಷ್ಟ ಆಚರಣೆಯ ಹೋಳಿಗೆಮ್ಮ ಹಬ್ಬ

ಇದರ ಹೆಸರೇ ಹೋಳಿಗೆಮ್ಮ ಹಬ್ಬ ಎಂದು. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ಇತ್ತೀಚೆಗೆ ಇದನ್ನು ಆಚರಿಸಲಾಯಿತು. ಪ್ರತಿವರ್ಷವೂ ಇದನ್ನು ಆಚರಿಸಲಾಗುತ್ತದೆ.
ಹೆಸರೇ ಹೇಳುವಂತೆ ಹೋಳಿಗೆ ನೈವೇದ್ಯ ಮಾಡುವ ಈ ವಿಶೇಷ ಹಬ್ಬವನ್ನು ಹೆಂಗಳೆಯರು ಸಂಭ್ರಮದಿಂದ ಆಚರಿಸುತ್ತಾರೆ. ಗ್ರಾಮ ದೇವತೆಯು ತಮಗೆಲ್ಲ ನೆಮ್ಮದಿ ನೀಡಲಿ, ಯಾವ ಕಾಯಿಲೆಯೂ ಬಾರದಿರಲೆಂದು ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಹೋಳಿಗೆಮ್ಮ ಹಬ್ಬದಂದು ಗ್ರಾಮ ದೇವತೆಯಾದ ಊರಮ್ಮನಿಗೆ ಹೋಳಿಗೆಯ ಎಡೆಯನ್ನೇ ಮಾಡಬೇಕಾಗುತ್ತದೆ.  ಮುಂದೆ ಓದಿ »

Syndicate content