ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › ಪ್ರವಾಸ ಕಥನ

ಫಿನ್ಲೆಂಡ್ ಪ್ರವಾಸ ಕಥನ

ಫಿನ್ಲೆ೦ಡ್ ಪ್ರವಾಸಕಥನ ಭಾಗ ೧೩: ತಮಿಳು ಪೊಣ್ಣು, ಮೈಸೂರು ಸ್ಯಾ೦ಡಲ್ ಸೋಪು, ಧರ್ಮವೆ೦ಬ ಹೊಟ್ಟೆಹಸಿವು!

October 25, 2006 - 1:43am — anilkumar

ಅಬ್ಬ ಆ ತಮಿಳು ಪೊಣ್ಣೆ:

ಆಕೆ ತಮಿಳು ಮಾತನಾಡುವವಳು.
ದೇಶ ಮಲೇಶಿಯ!
ಭಾರತವನ್ನು ಎ೦ದೂ ಕ೦ಡಿಲ್ಲ!  ಮುಂದೆ ಓದಿ »

  • ಫಿನ್ಲೆಂಡ್ ಪ್ರವಾಸ ಕಥನ
~.~
  • Login or register to post comments
  • 598 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಫಿನ್ಲೆ೦ಡ್ ಪ್ರವಾಸಕಥನ ಭಾಗ ೧೨: ಭಾರತದ ಇನ್ನೊಬ್ಬನ್ಯಾವನ್ಯಾವನದ್ದೋ ಫಿನಿಶ್ಡ್ ಅಲ್ಲದ ಆತ್ಮಚರಿತ್ರೆಗಳು

October 22, 2006 - 1:36pm — anilkumar

ಹೆಲ್ಸಿ೦ಕಿಯ ಮ್ಯೊಸಿಯ೦ ಆಫ್ ಮಾಡರ್ನ್ ಆರ್ಟ್ನಲ್ಲಿ ('ಕಿಯಾಸ್ಮ') ಕಾಫಿ ಕುಡಿವುದು ಆಗಾಗ ನನ್ನ ದಿನನಿತ್ಯದ ರೂಢಿಯಾಗಿರುತ್ತಿತ್ತು. ಭಾರತದಲ್ಲಿ ನಾನು ಕಾಫಿ ಕುಡಿವುದು ಕೋಶಿಸ್‍ನಲ್ಲಿ ಮಾತ್ರ. ಕಾರಣ: ನನಗೆ ಗೊತ್ತಿಲ್ಲ! ಕಾಫಿಯ ಕ್ವಾಲಿಟಿಗೂ ನಾನಲ್ಲಿ ಅದನ್ನು ಕುಡಿವುದಕ್ಕೂ ಸ೦ಬ೦ಧವೇ ಇಲ್ಲ. ನನಗೊ೦ದು ಟೇಸ್ಟ್ ಇರುವುದರಿ೦ದ ಅಲ್ಲಿ ಕಾಫಿ ಕುಡಿಯುತ್ತೇನೆ೦ದರೆ ಆ ಕಾಫಿ ಗ್ಯಾರ೦ಟಿ ನಿಮಗೆ ಕುಡಿಯಲು ಯೋಗ್ಯವಲ್ಲ ಎ೦ದೇ ಅರ್ಥ. ಅಷ್ಟು ಗ್ಯಾರ೦ಟಿ ನನ್ನ ಟೇಸ್ಟ್-ಲೆಸ್‍ನೆಸ್ ಬಗ್ಗೆ, ನನಗೇ!  ಮುಂದೆ ಓದಿ »

  • ಫಿನ್ಲೆಂಡ್ ಪ್ರವಾಸ ಕಥನ
~.~
  • Login or register to post comments
  • 501 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಏಳೇಳು ಸುತ್ತಿನ ಕೋಟೆಯೊಳಗಿನ ರಾಜಕುಮಾರಿ

September 29, 2006 - 10:28pm — anilkumar

ಈ ಕಂತಿನ ಜತೆಗೆ ಫಿನ್ಲೆಂಡ್ ಅನಿಲ್ ಕುಮಾರ್ ಅವರ ಫಿನ್ಲೆಂಡ್ ಪ್ರವಾಸ ಕಥನ ಅಧಿಕೃತವಾಗಿ ಕೊನೆಗೊಳ್ಳುತ್ತದೆ. ಇದು ಬೇರೆ ಬಗೆಯಲ್ಲಿ ಮುಂದುವರಿಯಬಹುದು ಎಂಬ ಭರವಸೆಯನ್ನು ಅವರೇ ನೀಡಿದ್ದಾರೆ.  ಮುಂದೆ ಓದಿ »

  • ಫಿನ್ಲೆಂಡ್ ಪ್ರವಾಸ ಕಥನ
~.~
  • Login or register to post comments
  • 1123 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಎಲ್ಲೆಲ್ಲಿಯೂ ಎದಿರು ಸಿಗುವವರು

September 9, 2006 - 6:16pm — anilkumar

ಫಿನ್ಲೆಂಡಿಗೆ ನಾನು ಮೊದಲ ಸಲ ಒಂದೂವರೆ ತಿಂಗಳ ಕಾಲ ಹೋದದ್ದು ೨೦೦೧ರಲ್ಲಿ. ಸುರೇಖಳಿಗೆ ಅಲ್ಲಿ ಆರ್ಟಿಸ್ಟ್-ಇನ್-ರೆಸಿಡೆನ್ಸಿ ಸಿಕ್ಕಿತ್ತು (ಮನೆಯೊಳಗಿರುವ ಕಲಾವಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಶೈಲಿಯಲ್ಲಿ ಕರೆಯಬಹುದು). ನಂತರ ಅದೇ ಸ್ಕಾಲರ್‌ಷಿಪ್ ಗೆಳೆಯ ಪ್ರಕಾಶ್ ಬಾಬುವಿಗೆ. ನಂತರ ನೂರು ಕೋಟಿ ಮಂದಿಯಿರುವ ಸಮಗ್ರ ಭಾರತದಲ್ಲಿ ಅದಕ್ಕೆ ಬಲಿ ಎಚ್. ಎ.ಅನಿಲ್ ಕುಮಾರ್, ಅಂದರೆ ನಾನು. ಮತ್ತು ಇನ್ನೂ ಅಶ್ಚರ್ಯವೆಂದರೆ ನಮ್ಮೆಲ್ಲರ ಆಯ್ಕೆಯಾದದ್ದು ಪ್ಯಾರಿಸಿನ ಯುನೆಸ್ಕೊ ಆಫೀಸಿನಲ್ಲಿ! ಆಯ್ಕೆ ಸಮಿತಿಯಲ್ಲಿ ಬಹುಮಂದಿಗೆ ಭಾರತವು ಭೂಪಟದಲ್ಲೆಲ್ಲಿದೆಯೆಂದೇ ತಿಳಿದಿರಲಾರದು. ಸುರೇಖಳೊಂದಿಗೆ ಇನ್ನೆರೆಡು ಸ್ಟುಡಿಯೊಗಳಲ್ಲಿ ಪೊಲ್ಯಾಂಡಿನ ಕಲಾ ಇತಿಯಾಸಕಾರ್ತಿ ಅಗ್ನೇಷ್ಕ ಹಾಗೂ ಬ್ರೆಜಿಲ್‌ನ ಕಲಾವಿದೆ ಕಾರ್ಲ ಗ್ವಾಲಿಯಾರ್ಜಿ. "ನಮ್ಮೂರು ಗ್ವಾಲಿಯರ್ ಜಿ" ಎಂದು ಭಾರತದಲ್ಲಿ ಹೇಳಿದರೆ ನಂಬುವಷ್ಟು ಆಕೆ ಪಂಜಾಬಿಯಾಗಿ ಕಾಣುತ್ತಿದ್ದಳು. ಆದ್ದರಿಂದ ಸುರೇಖಳ ಒಟ್ಟಿಗೆ ಒಬ್ಬ ಭಾರತೀಯನೊಬ್ಬ ಭಾರತೀಯ, ಪೊಲ್ಯಾಂಡ್, ಬ್ರೆಜಿಲ್ ದೇಶಗಳಿಗೆ ಸೇರಿದ ಮೂವರು ಕಲಾವಿದೆಯರೊಂದಿಗೆ ಫಿನ್ಲೆಂಡ್ ನೋಡಿದ್ದು ಒಂದು ಜೀರ್ಣವಾಗದ ವಿಷಯವಾಗಿತ್ತು. ದಿನದ ಕೊನೆಗೆ ನಾನು ಯಾವ ದೇಶದಲ್ಲಿದ್ದೇನೆಂಬುದೇ ಮರೆತುಹೋಗುತ್ತಿತ್ತು. ಬ್ರೆಜಿಲಿನ ಫುಟ್ಬಾಲ್, ಸಲ್ಮಾ ಹೈಕಳ ಫ್ರಿದ ಕಾರ್ಲೋ, ಪೊಲ್ಯಾಂಡಿನ ಪೊಲ್ಯಾಂಸ್ಕಿ, ವಿಸ್ಕಿ, ಅಗ್ನೇಷ್ಕ, ವೊಡ್ಕ ಇತ್ಯಾದಿಗಳ ಕಾಕ್‌ಟೈಲ್ ಆಗಿಬಿಟ್ಟಿರುತ್ತಿತ್ತು ನನ್ನ ಎರಡು ಕಿವಿಗಳ ಮಧ್ಯ-ಪ್ರದೇಶ.  ಮುಂದೆ ಓದಿ »

  • ಫಿನ್ಲೆಂಡ್ ಪ್ರವಾಸ ಕಥನ
~.~
  • Login or register to post comments
  • 1018 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ!

September 1, 2006 - 4:10pm — anilkumar

ಹೆಲ್ಸಿಂಕಿಯಲ್ಲಿ ತೊಂಬತ್ತು ದಿನವಿದ್ದೆ. ಯುನೆಸ್ಕೋ-ಆಶ್‌ಬರ್ಗ್ ಸ್ಕಾಲರ್‌ಷಿಪ್‌ನ ನಿಯಮವದು.ದೋಣಿ ಯಾತ್ರೆ ಅದನ್ನು ಮುರಿಯದವರು ಇಲ್ಲವೇ ಇಲ್ಲವೆಂದು ಕೇಳಿ ತಿಳಿದಿದ್ದೆ. ನನ್ನ 'ಕೇರ್‌ ಟೇಕರ್' ಮಿನ್ನ ಹೆನ್ರಿಕ್‌ಸನ್ ಇಪ್ಪತ್ತೊಂಬತ್ತು ವರ್ಷದ ಚುರುಕು ಕಲಾವಿದೆ. ಅಲ್ಲಿನ ಕಲಾಶಾಲೆಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಳು. "ಬೇಜಾರಾಗುತ್ತಿದೆಯ? ಊರಿಗೆ ಹೋಗಬೇಕೆನಿಸುತ್ತಿದೆಯ? ಒಂಟಿ ಎನಿಸುತ್ತಿದೆಯ?" ಎಂದೆಲ್ಲ ಒಮ್ಮೆ ಕೇಳಿದಳು. ಪಾಪ ಎಂದುಕೊಂಡು ಬಿಯರ್ ಕೊಡಿಸಿದೆ. "ಹೀಗೆ ಹೇಳಿ ಊರಿನ ನೆನಪು ಮಾಡುತ್ತಿದ್ದೀಯ" ಎಂದೆ. ಅಲ್ಲಿ ನಾನು ಭೇಟಿ ಮಾಡಿದ ಕಲಾವಿದರ ಹೆಸರುಗಳನ್ನೆಲ್ಲ ಆಕೆಗೆ ದಿನನಿತ್ಯ ಹೇಳುತ್ತಿದ್ದೆ. "ಎಸ್ಕೊ ಮನಕ್ಕೊ ಗೊತ್ತೆ? ಯಾರ್ಮ ಪುರಾನನ್ನ ಭೇಟಿ ಮಾಡಿದೆ, ಯಾನ್ ಕಾಯ್ಲಾ ಸಿಕ್ಕಿದ್ದ" ಎಂದೆಲ್ಲ ಹೇಳುತ್ತಿದ್ದಾಗ ಆಕೆ ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದಳು. ನೆನಪಿರಲಿ ಫಿನ್ನಿಶ್ ಜನ ನಗುವುದಿಲ್ಲ, ನಗದವರ ಮುಖಭಾವ ಓದುವುದು ಸುಲಭವಲ್ಲ. "ಹೇಗೆ ನೀನು ಹೆಸರುಗಳನ್ನು ಜ್ಞಾಪಕವಿರಿಸಿಕೊಳ್ಳುವೆ?" ಎಂದು ಕೇಳಿದಳು.  ಮುಂದೆ ಓದಿ »

  • ಫಿನ್ಲೆಂಡ್ ಪ್ರವಾಸ ಕಥನ
~.~
  • 2 ಪ್ರತಿಕ್ರಿಯೆಗಳು
  • 1413 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
123ಮುಂದಿನ ›ಕೊನೆಯ »
Syndicate content

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:25am
  • anil.ramesh
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:13am
  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:36am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:29am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:26am
  • Chamaraj
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:18am
  • Chamaraj
    ಉ: ಪತನದ ಕತೆ
    October 11, 2008 - 6:16am
ಇನ್ನಷ್ಟು


ದಿನದಿನವು ಹಳಸುವುವು, ದಿನದಿನವು ಕೊಳೆಯುವುವು |
ಮನುಜಕುಲದೆಲ್ಲ ಕೃತಿವಿಜಯವಿಭವಗಳು ||
ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |
ಜನುಮಸಫಲತೆ ನಿನಗೆ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator