ಸಪ್ತಗಿರಿ ಸಂಪದ (ಪೌರಾಣಿಕ ಕಥಾನಕ)
ಸಪ್ತಗಿರಿ ಸಂಪದ(ಪೌರಾಣಿಕ ಕಥಾನಕ) ಸಂಚಿಕೆ-3
August 23, 2006 - 1:27pm — ritershivaramದೇವರು ಎಲ್ಲಿದ್ದಾನೆ? ಇಲ್ಲ ಅವನು ಇದ್ದಿದ್ದರೆ ಇಷ್ಟೆಲ್ಲಾ ಅನಾಹುತಗಳು ಆಗುತ್ತಿರಲಿಲ್ಲ ಎಂದು ಹೇಳುತ್ತೇವೆ. ಅಂಥವರು ಈಗಾಗಲೇ ಹೇಳಿದಂತೆ ಈ ಜಗತ್ತಿನ ತ್ರಿಗುಣಾತ್ಮಕ ತತ್ವವನ್ನು ಮನಗಾಣಬೇಕಾಗುತ್ತದೆ. ಈಗ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಪರಪಮ ಪಾಪಿಗಳೂ ಹೆಚ್ಚುತ್ತಲೇ ಇದ್ದಾರಷ್ಟೇ... ಕೇವಲ ಕಾಲುಭಾಗ ಮಾತ್ರವೆ ಆದರೂ ಸಾತ್ವಿಕ ಶಕ್ತಿ ಯಾವಾಗಲೂ ಬೆಂಕಿ ಮುಚ್ಚಿದ ಕೆಂಡದಂತೆಯೆ ಇರುತ್ತದೆಯಲ್ಲ... ಅದು ಸಿಡಿದೆದ್ದ ಸಂದರ್ಭಗಳಲ್ಲೆಲ್ಲ ಪಾಪಿಗಳ ದಮನವಾಗುತ್ತಲೆ ಇರುತ್ತದೆಯಾದರೂ ನಾವು ಅವರ ಸಂಖ್ಯೆ ಹೆಚ್ಚುತ್ತಲೆ ಇರುವುದು ಇನ್ನೂ ನಡೆದೇ ತೀರುವುದರಿಂದ, ಎಷ್ಟೇ ದುಷ್ಟ ನಿಗ್ರಹವಾದರೂ ಕೂಡ ನಮಗೆ ತೃಪ್ತಿ ಇಲ್ಲವಾಗಿರುತ್ತದೆ
ದೇವರಿಲ್ಲ ಎಂದು ಸುಲಭವಾಗಿ ಹೇಳಿಬಿಡುವ ವ್ಯಕ್ತಿ ತಾನು ಸ್ವತಃ ದೇವರೇ ಆಗಿರಬೇಕಷ್ಟೇ. ಆತನ ಅಪರಾಧಗಳಿಗೆ ಕ್ಷಮೆ ಎಂಬುದೇ ಇಲ್ಲವಲ್ಲ... ! ಹಾಗೆಯೆ, ದೇವರಿದ್ದಾನೆಂದು ಪರಮ ಭಕ್ತಿಯಿಂದ ಮಾಡಬಾರದ ಪಾತಕಗಳನ್ನೂ ಮಾಡುವ ವ್ಯಕ್ತಿ ಕೂಡ ಕ್ಷಮಾರ್ಹನಲ್ಲ; ಅವನಿಗೆ ಆ ದೇವರೇ ಅವನ ಜೀವಿತದಲ್ಲಿ ನಾವೇ ಕಾಣುವಂತೆ ಶಿಕ್ಷೆ ವಿಧಿಸದಿರಲಾರ. ಶಿಶುಪಾಲ ನೂರೊಂದು ತಪ್ಪು ಮಾಡುವವರೆಗೆ ಶ್ರೀ ಕೃಷ್ಣ ಕಾದು ಕುಳಿತವನಂತೆ ನಾವು ಅಂಥ ಪಾತಕಿಗಳ ಪಾಪದ ಕೊಡ ತುಂಬುವ ತನಕವೂ ಕಾಯುವುದು ಅನಿವಾರ್ಯ.....
ದೇವರು, ಮನುಷ್ಯನಿಗೆ ದೈವತ್ವದಲ್ಲಿ ನಂಬಿಕೆ ಎಂದರೆ- ಸತ್ಯ ಧರ್ಮ, ಪ್ರಾಮಾಣಿಕತೆ, ಇತರರಿಗೆ ಉಪದ್ರವ ಕೊಡದೇನೆ, ದ್ವೇಷಾಸೂಯೆಗಳಿಗೆ ಮನ ತೆರದೇನೆ, ಕಷ್ಟಕಾರ್ಪಣ್ಯಗಳನ್ನು ಎದುರಿಸುತ್ತಲೇ ಬದುಕನ್ನು ನಿಭಾಯಿಸುವುದು. ಯಾವಾಗಲೂ, ಸಭ್ಯರಿಗೆ, ಜ್ಞಾನಿಗಳಿಗೇ ಈ ಜಗತ್ತಿನಲ್ಲಿ ತೊಂದರೆಗಳು ಅಧಿಕ. ಅದು ವಿಧಿ ನಿಯಮವೇ ಸರಿ. ಅದನ್ನು ಮೀರಿ ಅಡ್ಡ ದಾರಿ ಹಿಡಿಯುವುದೆಂದರೆ ಅಪಗತಿ ತಂದು ಕೊಂಡಂತೆಯೆ ಸರಿ. ಅಷ್ಟೇಕೆ , ಮಾನವೀಯ ಪ್ರಜ್ಞೆಯೊಂದಿದ್ದರೆ, ಸಾಲದು ದೈವ ಶ್ರದ್ಧೆ ಇರಲೇಬೇಕು. ನೀವೇ ಯೋಚಿಸಿ; ಅದಿಲ್ಲದಿದ್ದರೆ, ಈ ಜಗತ್ತು ತನ್ನ ವ್ಯಾಪಾರ ವ್ಯವಹಾರದಲ್ಲಿಯೂ ನಂಬಿಕೆಯುಳ್ಳವರಿಲ್ಲದೇನೆ ಸ್ತಗಿತಗೊಳ್ಳುವುದಿಲ್ಲವೇ? ವ್ಯವಹಾರದಲ್ಲಿ ಎಷ್ಟೇ ಲೆಕ್ಕಪತ್ರಗಳು, ದಾಖಲೆಗಳಿರಲಿ ನಂಬಿಕೆಯ ಮೇಲೇ ಕೊಟ್ಯಂತರ ರೂ.ಗಳ ವಹಿವಾಟು ನಡೆಯುತ್ತಲೇ ಇರುವುದನ್ನು ಕಾಣುತ್ತಲೇ ಇದ್ದೇವೆ. ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು, ಬೃಹತ್ ಬಂಡವಾಳ ಶಾಹಿಗಳೂ ಇಂದಿಗೂ ದೇವರನ್ನು ನಂಬದೇನೆ ತಮ್ಮ ಹಣ ಹೂಡಿಕೆ ಮಾಡದಿರುವವರು ವಿರಳವೇ ಸರಿ. ಕೋಟಿಗಟ್ಟಲೆ ಚೆಲ್ಲುವ ಚಿತ್ರೋದ್ಯಮಿಗಳಂತೂ, ದೇವರು ಹಾಗೂ ತಮ್ಮ ಭವಿಷ್ಯದಲ್ಲಿ ನಂಬಿಕೆ ಎಂದಿಗೂ ಬಿಡಲಾರರಲ್ಲ...!
********* ಮುಂದೆ ಓದಿ »

- Login or register to post comments
- 709 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

ಸಪ್ತಗಿರಿ ಸಂಪದ(ಪುರಾಣ ಕಥಾನಕ) ಸಂಚಿಕೆ-3
August 23, 2006 - 11:56am — ritershivaramದೇವರು ಎಲ್ಲಿದ್ದಾನೆ? ಇಲ್ಲ ಅವನು ಇದ್ದಿದ್ದರೆ ಇಷ್ಟೆಲ್ಲಾ ಅನಾಹುತಗಳು ಆಗುತ್ತಿರಲಿಲ್ಲ ಎಂದು ಹೇಳುತ್ತೇವೆ. ಅಂಥವರು ಈಗಾಗಲೇ ಹೇಳಿದಂತೆ ಈ ಜಗತ್ತಿನ ತ್ರಿಗುಣಾತ್ಮಕ ತತ್ವವನ್ನು ಮನಗಾಣಬೇಕಾಗುತ್ತದೆ. ಈಗ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಪರಪಮ ಪಾಪಿಗಳೂ ಹೆಚ್ಚುತ್ತಲೇ ಇದ್ದಾರಷ್ಟೇ... ಕೇವಲ ಕಾಲುಭಾಗ ಮಾತ್ರವೆ ಆದರೂ ಸಾತ್ವಿಕ ಶಕ್ತಿ ಯಾವಾಗಲೂ ಬೆಂಕಿ ಮುಚ್ಚಿದ ಕೆಂಡದಂತೆಯೆ ಇರುತ್ತದೆಯಲ್ಲ... ಅದು ಸಿಡಿದೆದ್ದ ಸಂದರ್ಭಗಳಲ್ಲೆಲ್ಲ ಪಾಪಿಗಳ ದಮನವಾಗುತ್ತಲೆ ಇರುತ್ತದೆಯಾದರೂ ನಾವು ಅವರ ಸಂಖ್ಯೆ ಹೆಚ್ಚುತ್ತಲೆ ಇರುವುದು ಇನ್ನೂ ನಡೆದೇ ತೀರುವುದರಿಂದ, ಎಷ್ಟೇ ದುಷ್ಟ ನಿಗ್ರಹವಾದರೂ ಕೂಡ ನಮಗೆ ತೃಪ್ತಿ ಇಲ್ಲವಾಗಿರುತ್ತದೆ
ದೇವರಿಲ್ಲ ಎಂದು ಸುಲಭವಾಗಿ ಹೇಳಿಬಿಡುವ ವ್ಯಕ್ತಿ ತಾನು ಸ್ವತಃ ದೇವರೇ ಆಗಿರಬೇಕಷ್ಟೇ. ಆತನ ಅಪರಾಧಗಳಿಗೆ ಕ್ಷಮೆ ಎಂಬುದೇ ಇಲ್ಲವಲ್ಲ... ! ಹಾಗೆಯೆ, ದೇವರಿದ್ದಾನೆಂದು ಪರಮ ಭಕ್ತಿಯಿಂದ ಮಾಡಬಾರದ ಪಾತಕಗಳನ್ನೂ ಮಾಡುವ ವ್ಯಕ್ತಿ ಕೂಡ ಕ್ಷಮಾರ್ಹನಲ್ಲ; ಅವನಿಗೆ ಆ ದೇವರೇ ಅವನ ಜೀವಿತದಲ್ಲಿ ನಾವೇ ಕಾಣುವಂತೆ ಶಿಕ್ಷೆ ವಿಧಿಸದಿರಲಾರ. ಶಿಶುಪಾಲ ನೂರೊಂದು ತಪ್ಪು ಮಾಡುವವರೆಗೆ ಶ್ರೀ ಕೃಷ್ಣ ಕಾದು ಕುಳಿತವನಂತೆ ನಾವು ಅಂಥ ಪಾತಕಿಗಳ ಪಾಪದ ಕೊಡ ತುಂಬುವ ತನಕವೂ ಕಾಯುವುದು ಅನಿವಾರ್ಯ.....
ದೇವರು, ಮನುಷ್ಯನಿಗೆ ದೈವತ್ವದಲ್ಲಿ ನಂಬಿಕೆ ಎಂದರೆ- ಸತ್ಯ ಧರ್ಮ, ಪ್ರಾಮಾಣಿಕತೆ, ಇತರರಿಗೆ ಉಪದ್ರವ ಕೊಡದೇನೆ, ದ್ವೇಷಾಸೂಯೆಗಳಿಗೆ ಮನ ತೆರದೇನೆ, ಕಷ್ಟಕಾರ್ಪಣ್ಯಗಳನ್ನು ಎದುರಿಸುತ್ತಲೇ ಬದುಕನ್ನು ನಿಭಾಯಿಸುವುದು. ಯಾವಾಗಲೂ, ಸಭ್ಯರಿಗೆ, ಜ್ಞಾನಿಗಳಿಗೇ ಈ ಜಗತ್ತಿನಲ್ಲಿ ತೊಂದರೆಗಳು ಅಧಿಕ. ಅದು ವಿಧಿ ನಿಯಮವೇ ಸರಿ. ಅದನ್ನು ಮೀರಿ ಅಡ್ಡ ದಾರಿ ಹಿಡಿಯುವುದೆಂದರೆ ಅಪಗತಿ ತಂದು ಕೊಂಡಂತೆಯೆ ಸರಿ. ಅಷ್ಟೇಕೆ , ಮಾನವೀಯ ಪ್ರಜ್ಞೆಯೊಂದಿದ್ದರೆ, ಸಾಲದು ದೈವ ಶ್ರದ್ಧೆ ಇರಲೇಬೇಕು. ನೀವೇ ಯೋಚಿಸಿ; ಅದಿಲ್ಲದಿದ್ದರೆ, ಈ ಜಗತ್ತು ತನ್ನ ವ್ಯಾಪಾರ ವ್ಯವಹಾರದಲ್ಲಿಯೂ ನಂಬಿಕೆಯುಳ್ಳವರಿಲ್ಲದೇನೆ ಸ್ತಗಿತಗೊಳ್ಳುವುದಿಲ್ಲವೇ? ವ್ಯವಹಾರದಲ್ಲಿ ಎಷ್ಟೇ ಲೆಕ್ಕಪತ್ರಗಳು, ದಾಖಲೆಗಳಿರಲಿ ನಂಬಿಕೆಯ ಮೇಲೇ ಕೊಟ್ಯಂತರ ರೂ.ಗಳ ವಹಿವಾಟು ನಡೆಯುತ್ತಲೇ ಇರುವುದನ್ನು ಕಾಣುತ್ತಲೇ ಇದ್ದೇವೆ. ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು, ಬೃಹತ್ ಬಂಡವಾಳ ಶಾಹಿಗಳೂ ಇಂದಿಗೂ ದೇವರನ್ನು ನಂಬದೇನೆ ತಮ್ಮ ಹಣ ಹೂಡಿಕೆ ಮಾಡದಿರುವವರು ವಿರಳವೇ ಸರಿ. ಕೋಟಿಗಟ್ಟಲೆ ಚೆಲ್ಲುವ ಚಿತ್ರೋದ್ಯಮಿಗಳಂತೂ, ದೇವರು ಹಾಗೂ ತಮ್ಮ ಭವಿಷ್ಯದಲ್ಲಿ ನಂಬಿಕೆ ಎಂದಿಗೂ ಬಿಡಲಾರರಲ್ಲ...!
********* ಮುಂದೆ ಓದಿ »

- Login or register to post comments
- 584 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

ಸಪ್ತಗಿರಿ ಸಂಪದ (ಪೌರಾಣಿಕ ಕಥಾನಕ) ಸಂಚಿಕೆ-1
August 18, 2006 - 7:13pm — ritershivaramಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ |
ಶ್ರೀಮದ್ವೆಂಕಟನಾಥಾಯ ಶ್ರೀನಿವಾಸಾಯತೇನಮಃ ||
ಜಗತ್ತು ತ್ರಿಗುಣಾತ್ಮಕವಾಗಿದೆ. ಇಲ್ಲಿ ಮೂರು ಭಾಗ ಜಲಾವೃತವಾಗಿದೆ. ಒಂದು ಭಾಗ ಮಾತ್ರ ಭೂಮಿ. ಈ ಒಂದು ಭಾಗ ಭೂಮಿಯಲ್ಲಿ ಮೂರು ಭಾಗ ಪರಮ ಪಾಪಿಗಳೆ ತುಂಬಿದ್ದಾರೆ. ಹೌದು, ಪರಮ ಪಾಪಿಗಳಿಗೇ ಸುಭಿಕ್ಷ ಕಾಲವೆಂದರು ನಮ್ಮ ಹರಿದಾಸರು 15ನೇ ಶತಮಾನದಲ್ಲಿಯೆ. ಈಗ ಜನ ಸಂಖ್ಯೆ ಹೆಚ್ಚುತ್ತಲೇ ಇದೆ ಪರಮ ಪಾಪಿಗಳೂ ಹೆಚ್ಚುತ್ತಲೆ ಇದ್ದಾರೆ. ಹೌದು, ಮೂರು ಭಾಗ ಪರಮ ಪಾಪಿಗಳಾದರೆ, ಇನ್ನೊಂದು ಭಾಗದಲ್ಲಿ ಸಾತ್ವಿಕರು. ಈ ಸಾತ್ವಿಕರಿಂದಲೇ ಇಡೀ ಜಗತ್ತು ಅಸ್ತಿತ್ವದಲ್ಲಿರುವುದು; ಚಲನೆಯಲ್ಲಿರುವುದು. ಜಗತ್ತಿನಲ್ಲಿ ಸಾತ್ವಿಕ ಶಕ್ತಿಯೆ ಮೇಲು. ನಾವು ಯಾರ ಜೊತೆ ಬದುಕ ಬೇಕೆಂಬುದ ನಮ್ಮ ಆಯ್ಕೆಗಷ್ಟೇ ಎದಿರಾಗಿ ಬಿಡುವ ಸವಾಲು ಅಲ್ಲವೇ...? ಮುಂದೆ ಓದಿ »

- Login or register to post comments
- 721 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

RSS: