ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಕಥಾ ಮಾಲಿಕೆ

ಮುಲ್ಲಾ ನಸ್ರುದ್ದೀನ್ ಕತೆಗಳು (ಕಥಾ ಮಾಲಿಕೆ)

ಮುಲ್ಲಾ ಕಥೆ: ಕೆಲವೊಮ್ಮೆ ಪೆದ್ದನಂತೆ ನಟಿಸುವುದೇ ಲಾಭದಾಯಕ!

January 17, 2007 - 8:15am — Shyam Kishore

     ಆ ಊರಿನ ಎಲ್ಲರ ಬಾಯಲ್ಲೂ ಮುಲ್ಲಾ ನಸ್ರುದ್ದೀನ್ ಮಾತೇ. ಮುಲ್ಲಾ ಆ ಊರಿನಲ್ಲಿ ಭಿಕ್ಷೆ ಬೇಡಲು ಹೋದ ಕಡೆಯಲ್ಲೆಲ್ಲ, ಯಾರೇ ಆಗಲಿ ಅವನ ಮುಂದೆ ಒಂದು ದೊಡ್ಡ ಮತ್ತು ಇನ್ನೊಂದು ಚಿಕ್ಕ ನಾಣ್ಯಗಳನ್ನು ಇಟ್ಟರೆ, ಮುಲ್ಲಾ ಚಿಕ್ಕ ನಾಣ್ಯವನ್ನೇ ಆರಿಸಿಕೊಳ್ಳುತ್ತಿದ್ದ. ಆ ಊರಿನಲ್ಲಿ ಚಿಕ್ಕ ನಾಣ್ಯದ ಬೆಲೆ ದೊಡ್ಡ ನಾಣ್ಯಕ್ಕಿಂತ ಕಡಿಮೆ. ಹಾಗಾಗಿ ಮುಲ್ಲಾನ ಈ ಆಯ್ಕೆ ಎಲ್ಲರಿಗೂ ಬಹಳ ತಮಾಶೆಯಾಗಿ ಕಾಣುತ್ತಿತ್ತು. ಜನ ನಾ ಮುಂದು, ತಾ ಮುಂದು ಅನ್ನುವಂತೆ ಮುನ್ನುಗ್ಗಿ ಭಿಕ್ಷೆ ಹಾಕಿ ಮಜ ತೆಗೆದುಕೊಳ್ಳುತ್ತಿದ್ದರು.  ಮುಂದೆ ಓದಿ »

  • ಮುಲ್ಲಾ ನಸ್ರುದ್ದೀನ್ ಕತೆಗಳು (ಕಥಾ ಮಾಲಿಕೆ)
~.~
  • 2 ಪ್ರತಿಕ್ರಿಯೆಗಳು
  • 803 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮುಲ್ಲಾ ಕಥೆ: ಊಟಕ್ಕೆ ಬಂದ ವಿದ್ವಾಂಸ

January 23, 2006 - 10:42am — olnswamy
ಮುಲ್ಲಾನ ಕತ್ತೆ

ನಸ್ರುದ್ದೀನ್ ಮುಲ್ಲಾ ಒಮ್ಮೆ ವಿದ್ವಾಂಸನೊಬ್ಬನನ್ನು ತನ್ನ ಮನೆಗೆ ಊಟಕ್ಕೆ ಕರೆದ.  ವಿದ್ವಾಂಸನಿಗೋ ಬಹಳ ಗರ್ವ. ಮುಲ್ಲಾನ ಮನೆಗೆ ಬಂದ. ಬಾಗಿಲು ತಟ್ಟಿದ. ಮತ್ತೆ ತಟ್ಟಿದ. ಉತ್ತರವಿಲ್ಲ. ಕಿಟಕಿಯೊಳಗೆ ಇಣುಕಿದ. ಯಾರೂ ಇಲ್ಲ. ಕ್ಷಣ ಕ್ಷಣಕ್ಕೂ ವಿದ್ವಾಂಸನ ಕೋಪ ಏರುತ್ತಿತ್ತು. “ನಾನು ಯಾರು ಎಂದು ಮುಲ್ಲಾಗೆ ಗೊತ್ತಿಲಲವೇ? ನನ್ನಂಥವನನ್ನು ಕಾಯಿಸುವುದೇ? ನನ್ನ ಪಾಂಡಿತ್ಯಕ್ಕೆ ಅವಮಾನ, ನನಗೆ ಅವಮಾನ” ಎಂದು ಕುದಿ ಕುದಿದು ಮತ್ತೆ ಮನೆಯ ಮುಂಭಾಗಕ್ಕೆ ಬಂದ. ಮುಲ್ಲಾನ ಮನೆಯ ಬಾಗಿಲ ಮೇಲೆ ದೊಡ್ಡದಾಗಿ “ಮೂರ್ಖ” ಎಂದು ಬರೆದು ಹೊರಟುಬಿಟ್ಟ.  ಮುಂದೆ ಓದಿ »

  • ಮುಲ್ಲಾ ನಸ್ರುದ್ದೀನ್ ಕತೆಗಳು (ಕಥಾ ಮಾಲಿಕೆ)
~.~
  • ೧ ಪ್ರತಿಕ್ರಿಯೆ
  • 958 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮುಲ್ಲಾ ಕಥೆಗಳು: ೧೦:ಗೆಳೆಯನ ಗೆಳೆಯ, ಸಾರಿನ ಸಾರು

January 12, 2006 - 9:09am — olnswamy

ಒಮ್ಮೆ ಮುಲ್ಲಾನ ನಂಟನೊಬ್ಬ ಬಂದಿದ್ದ. ದೂರದ ಹಳ್ಳಿಯಲ್ಲಿದ್ದವನು ಅವನು. ಬರುವಾಗ ಬಾತುಕೋಳಿಯೊಂದನ್ನು ತಂದಿದ್ದ. ಮುಲ್ಲಾಗೆ ಸಂತೋಷವಾಯಿತು. ಬಾತು ಕೋಳಿಯನ್ನು ಬೇಯಿಸಿ ಸಾರು ಮಾಡಿಸಿದ. ಅತಿಥಿಯೊಡನೆ ಖುಷಿಯಾಗಿ ಊಟ ಮಾಡಿದ. ಕೊಂಚ ಹೊತ್ತಿನ ನಂತರ ಇನ್ನೊಬ್ಬ ಬಂದ. “ನಾನು ನಿಮ್ಮ ನಂಟನ ಗೆಳೆಯ” ಅಂದ. ಮತ್ತೊಬ್ಬ ಬಂದ. “ನಾನು ನಿಮ್ಮ ನಂಟನ ಗೆಳೆಯನ ಗೆಳೆಯ” ಅಂದ. ಹೀಗೇ ಗೆಳೆಯನ ಗೆಳೆಯನ...ಎಂದು ಹೇಳಿಕೊಂಡು ಬರುವವರು ಹೆಚ್ಚಾದರು. ಎಲ್ಲರೂ ಊಟಕ್ಕೆ ಬಂದವರೇ ಹೊರತು ಮುಲ್ಲಾಗೆ ಕೊಡಲು ಏನೂ ತಂದಿರಲಿಲ್ಲ. ಎಲ್ಲರಿಗೂ ಊಟಕ್ಕಿಟ್ಟು ಮುಲ್ಲಾನಿಗೆ ಸಾಕಾಗಿಹೋಯಿತು.  ಮುಂದೆ ಓದಿ »

  • ಮುಲ್ಲಾ ನಸ್ರುದ್ದೀನ್ ಕತೆಗಳು (ಕಥಾ ಮಾಲಿಕೆ)
~.~
  • ೧ ಪ್ರತಿಕ್ರಿಯೆ
  • 925 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮುಲ್ಲಾ ಕಥೆಗಳು: ೯: ಯಾರೂ ಅಲ್ಲ!

January 12, 2006 - 9:07am — olnswamy

ಒಮ್ಮೆ ನಸ್ರುದ್ದೀನ್ ಮುಲ್ಲಾ ಅರಮನೆಯಲ್ಲಿ ನಡೆಯುತ್ತಿದ್ದ ಸಮಾರಂಭಕ್ಕೆ ಹೋಗಿದ್ದ. ಅಲ್ಲಿ ಭೋಜನದ ಏರ್ಪಾಟು ನಡೆದಿತ್ತು. ಮುಲ್ಲಾ ಸೀದಾ ಹೋಗಿ ಅಲ್ಲಿದ್ದ ಎಲ್ಲಕ್ಕಿಂತ ಚೆಲವಾದ, ಎತ್ತರವಾದ ಕುರ್ಚಿಯ ಮೇಲೆ ಕುಳಿತ.  ಮುಂದೆ ಓದಿ »

  • ಮುಲ್ಲಾ ನಸ್ರುದ್ದೀನ್ ಕತೆಗಳು (ಕಥಾ ಮಾಲಿಕೆ)
~.~
  • Login or register to post comments
  • 866 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮುಲ್ಲಾ ನಸ್ರುದ್ದೀನ್:೬.ಸಾಗಿಸಿದ್ದು ಏನು? ೭. ಅದ್ಭುತವಾದ ಬೇಟೆ ೮. ಮುಖವನ್ನು ಕದ್ದಾರು

September 24, 2005 - 7:44am — olnswamy

೬ ಸಾಗಿಸಿದ್ದು ಏನು?

ಮುಲ್ಲಾ ದಿನವೂ ತನ್ನ ಕತ್ತೆಯನ್ನು ಗಡಿಯಾಚೆಗೆ ಒಯ್ಯುತ್ತಿದ್ದ. ಕತ್ತೆಯ ಬೆನ್ನ ಮೇಲೆ ಒಣ ಹುಲ್ಲಿನ ಮೂಟೆಗಳಿರುತ್ತಿದ್ದವು. ಗಡಿಯ ಕಾವಲು ಕಾಯುವವರ ಬಳಿ ತಾನು ಕಳ್ಳಸಾಗಾಣಿಕೆ ಮಾಡುತ್ತಿದ್ದೇನೆ ಎಂದು ನಿಜ ಹೇಳುತ್ತಿದ್ದ. ಅವರು ಮೂಟೆಯ ಹುಲ್ಲನ್ನೆಲ್ಲ ಪರೀಕ್ಷಿಸುತ್ತಿದ್ದರು. ಅವನನ್ನೂ ತಪಾಸಣೆ ಮಾಡುತ್ತಿದ್ದರು. ಏನೂ ಇರುತ್ತಿರಲಿಲ್ಲ. ಮುಲ್ಲಾ ತಾನು ಕಳ್ಳಸಾಗಾಣಿಕೆ ಮಾಡುತ್ತಿದ್ದೇನೆ ಎಂದು ಹೇಳುವುದನ್ನೂ ಬಿಡಲಿಲ್ಲ. ಕೆಲವೊಮ್ಮೆ ಹುಲ್ಲನ್ನು ನೀರಲ್ಲಿ ಮುಳುಗಿಸಿ, ಹಲವೊಮ್ಮೆ ಹುಲ್ಲನ್ನು ಸುಟ್ಟು ಕೂಡ ನೋಡಿದರು. ಏನೂ ಸಿಗಲಿಲ್ಲ. ಮುಲ್ಲಾ ಮಾತ್ರ ಶ್ರೀಮಂತನಾಗುತ್ತ ನಡೆದ. ಕೆಲವು ವರ್ಷಗಳ ನಂತರ ಮುಲ್ಲಾ ಬೇರೆ ರಾಜ್ಯಕ್ಕೆ ಹೋದ. ಅಲ್ಲಿ ಹಿಂದೆ ಗಡಿಯ ಕಾವಲು ಕಾಯುತ್ತಿದ್ದ ಅಧಿಕಾರಿ ಭೇಟಿಯಾದ. “ಮುಲ್ಲಾ, ನೀನು ಆ ದೇಶದಲ್ಲಿದ್ದಾಗ ಅದೇನು ಕಳ್ಳ ಸಾಗಾಣಿಕೆ ಮಾಡುತ್ತಿದ್ದೆ? ನಾವು ಎಷ್ಟು ಹುಡುಕಿದರೂ ಸಿಗುತ್ತಿರಲಿಲ್ಲವಲ್ಲ, ದಯವಿಟ್ಟು ಹೇಳು” ಎಂದು ಕೇಳಿದ. ಮುಲ್ಲಾ “ನಾನು ದಿನವೂ ಕತ್ತೆಗಳನ್ನು ಬೇರೆ ರಾಜ್ಯಕ್ಕೆ ತೆಗೆದುಕೊಂಡು ಹೋಗಿ ಮಾರುತ್ತಿದ್ದೆ” ಎಂದ.  ಮುಂದೆ ಓದಿ »

  • ಮುಲ್ಲಾ ನಸ್ರುದ್ದೀನ್ ಕತೆಗಳು (ಕಥಾ ಮಾಲಿಕೆ)
~.~
  • Login or register to post comments
  • 1105 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
12ಮುಂದಿನ ›ಕೊನೆಯ »
Syndicate content

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು


ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ
ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ |
ವೆಲ್ಲವರಿಗಿಲ್ಲ ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator