21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

chArvAka, jinaru mattu gautama buddharu huTTadiddare namma gati Enu ?

July 26, 2012 - 9:12pm
gunashekara murthy

 ಚಾರ್ವಾಕ, ಜಿನರು ಮತ್ತು ಗೌತಮ ಬುದ್ಧರು ಹುಟ್ಟದಿದ್ದರೆ ನಮ್ಮ ಗತಿ ಏನು ?

 
ಕ್ರಿ.ಪೂ ೪ ನಾಲ್ಕನೇ ಶತಮಾನದೊತ್ತಿಗೆ ಭಾರತದಲ್ಲಿ ಸನಾತನಧರ್ಮದಿಂದ ಅಸಮಾನತೆ ಅಂಧಶ್ರೆದ್ಧೆ ಅಸಹಕಾರ ಮೌಢ್ಯ ವಿಲಕ್ಷಣ ಕರ್ಮಾಚರಣೆ ಜಾತಿ-ಭೇಧದಿ ಹಿಂಸೆ ದೌರ್ಜನ್ಯವೇ ತುಂಬಿತ್ತು ಆಗ ಹುಟ್ಟಿಕೊಂಡ ಈ ಮತ \ ಧರ್ಮಗಳು ಜನರನ್ನು ರಕ್ಷಿಸಿತ್ತು.
 
ಚಾರ್ವಾಕ
              ಚಾರ್ವಾಕನು ಬಂದು ಈ ಜಗತ್ತಿನ ಸೃಷ್ಟಿ_ಸ್ಥಿತಿ_ಲಯಗಳು ಸ್ವಾಭಾವಿಕವಾದದ್ದು. ಈ ಈಶ್ವರನ ಅವಶ್ಯಕತೇ ಇಲ್ಲ. ಪುರುಷ ಮತ್ತು ಪ್ರಕೃತಿ ಸಹಯೋಗದಿಂದಲೇ ಈ ಸೃಷ್ಟಿ ಎಂಬುದು ಚಾರ್ವಾಕರ ನಾಸ್ತಿಕರ ವಾದ. ಇದರಲ್ಲಿ ದೇವರ ಅವಶ್ಯಕತೆಯೇ ಇಲ್ಲ ಬೇಕಿಲ್ಲ. ದೇವರಿದ್ದಾನೆ ಎನ್ನಲು ಇದುವರಿವಿಗೂ ಯಾವ ಪ್ರಮಾಣವು ಸಿಕ್ಕಿಲ್ಲ ಸಿಕ್ಕುವುದಿಲ್ಲ. ಈ ಪ್ರಪಂಚದಲ್ಲಿ ಪಂಚೇಂಧ್ರಿಯಗಳಿಗೆ ಸಿಕ್ಕುವುದೆಲ್ಲಾ ಸತ್ಯ ಮಿಕ್ಕೆಲ್ಲವು ಮಿಥ್ಯ. ಈ ಪ್ರಪಂಚದಲ್ಲಿ ಹುಟ್ಟಿದವರು ತಮ್ಮ ವರ್ತಮಾನ ಕಾಲದ ಬಗ್ಗೆ ಯೋಚಿಸಿ ಸುಖಿಸಲು ಪ್ರಯತ್ನಪಡಬೇಕೆ ದುಃಖವನ್ನು ಸಹಿಸಿಕೊಳ್ಳಲೇ ಬೇಕು. ವಿನಹ ಪೂಜೆ- ಪುನಸ್ಕಾರ ದೇಹದಂಡನೆ ಮೂರ್ಖರ ಮಾಡುವ ಕೆಲಸವೇ ಸರಿ. ಇಂದು ಭಾರತದಲ್ಲಿ ಇಂತಹ ಮುಠ್ಠಾಳರೇ ಹೆಚ್ಚು. ಈ ದೇವರಗಳ ಅವಶ್ಯಕತೆಯೇ ಇಲ್ಲವೆಂದು ಅವರ ಕೊಡಿಗೆ ಏನೂ..........ಯಿಲ್ಲವೆಂದು ಇಲ್ಲಿ ದೃಢಿಕರಿಸಿದ್ದಾನೆ. 
 
ಜೈನಾ ಮತ 
              ಅಂತರಂಗ ಬಹಿರಂಗ ಶುದ್ಧಿಯಾದವನಿಗೆ "ಜಿನಾ" ಎನ್ನುತ್ತಾರೆ 
ಅಂದರೆ ಪವಿತ್ರಾತ್ಮನಾದವನೆಂದು ಅರ್ಥ. ಜೈನಮತ ಸಂಸ್ಥಾಪಕರು ೨೩ ಇಪ್ಪತ್ತು ಮೂರುಜನ ಬಂದು ಹೋದರು ೨೪ನೇ ತೀರ್ಥಂಕರಿಗೆ ಬಹು ದೊಡ್ಡ ಗೌರವವಿದೆ ಕಾರಣ, ಆತನು ಮಾಡಿದ ಸಂದೇಶವೇ ಜನರನ್ನು ಮುಟ್ಟಿತು ಅದಕ್ಕೆ ಒಳ್ಳೆಪ್ರಚಾರವು ಸಿಕ್ಕಿತು. 
             ಈ ಭವದಲ್ಲಿ ಕೋಟ್ಯಾನು ಕೋಟಿ ಜೀವರಾಶಿಗಳು ದಿನನಿತ್ಯ 
ಹುಟ್ಟುತ್ತಿದೆ ಸಾಯುತ್ತದೆ. ಈ ಜಗದ ನಿಯಮ ಸೃಷ್ಟಿಯ ಸಂಗತಿ ಕೂಡ. ಹಿಂದಿನ, ಈಗಿನ, ಮುಂದಿನ ( ಭೂತ, ವರ್ತ, ಭವಿಷ್ಯತ್ ) ಬಗ್ಗೆ ಏನು ಅರಿಯದು ಈ ಜೀವಿಗಳ ಹುಟ್ಟಿನ ಗುರಿ ಉದ್ದೇಶ ಪ್ರಪಂಚಿಕ ಸಂಭಂಧ ಕಂಡುಹಿಡಿಯಲು ದೇವಮನುಷ್ಯರಿಂದಲೂ, ಸಾಧು ಸಂತರೂ ವಿಙ್ಞಾನಿಗಳು ಮೇಧಾವಿಗಳು ಅರಿಯಲು ವಿಫಲರೇ ಆಗಿದ್ದಾರೆ. ಆತ್ಮ ಜಗತ್ ಈಶ್ವರದ ಬಗ್ಗೆ ತಮಗೆ ತಿಳಿದಂತೆ ವ್ಯಾಖ್ಯಾನಿಸಿ ತಮ್ಮ ತಮ್ಮ ತತ್ವ ಸಿದ್ಧಾಂತ ಅಭಿಪ್ರಾಯವನ್ನು ಮಂಡಿಸಿದ್ದಾರೆ.
 
            ದಯೇಯೇ ಧರ್ಮದ ಮೂಲ ಮಂತ್ರವನ್ನೇ ಹಿಡಿದು ಅಂದಿನ ಪಶುಬಲಿ ಯಾಗ ಯಙ್ಞಗಳಲ್ಲಿ ಅಶ್ವ ಹಸು ಕುರಿ ಕೋಣಗಳ ಬಲಿಯನ್ನು  ಯಾಗ ಯಙ್ಞಗಳನ್ನು ತಡೆಹಿಡಿಯಿತು
             ಇದರಲ್ಲಿ ತ್ರಿರತ್ನ ( ಮೂರುವಿಧ )ಗಳು ಸಾಧನ ಸೂತ್ರಗಳು
             ೧ .ಸಮ್ಯಕ್ ದರ್ಶನ
 
             ೨ .ಸಮ್ಯಕ್ ಙ್ಞಾನ
 
             ೩ .ಸಮ್ಯಕ್ ಚರಿತ್ರೆ
 
೧ .ಸಮ್ಯಕ್ ದರ್ಶನ   ೧. ಲೋಕ ಮೌಢ್ಯತ್ವ
                     ೨. ದೇವ ಮೌಢ್ಯತ್ವ
                     ೩. ಪಾಷಾಂಡಿ ಮೌಢ್ಯತ್ವ  
 
೧. ಲೋಕಮೌಢ್ಯತ್ವ :-  ನದಿ ( ಗಂಗಾನದಿ ) ಕೊಳ, ಸಮುದ್ರ ಸ್ನಾನ ಯಾಗ ಯಙ್ಞಗಳಿಂದ ಪುಣ್ಯ ದೊರೆಯುವುದೆನ್ನುವುದು ಲೋಕಮೌಢ್ಯ 
 
೨. ದೇವ ಮೌಢ್ಯತ್ವ :- ದೇವತೆಗಳನ್ನು ಆರಾಧಿಸುವುದು ಅರ್ಚನೆ ಮಂತ್ರ ಇವು ದೇವ ಮೌಢ್ಯತ್ವ.
 
೩. ಪಾಷಾಂಡಿ ಮೌಢ್ಯತ್ವ :- ಕಪಟ ಸನ್ಯಾಸಿ ಕಪಟ ಗುರುಗಳಿಂದ ಭೋಧನೆ ಆಲಿಕೆ  ರೂಪ ಮದ, ಕುಲ ಮದ, ಐಶ್ವರ್ಯಮದ, ಜಾತಿ ಮದ, ಬಲ ಮದ, ಇವು ಪಾಷಾಂಡಿ ಮೌಢ್ಯತ್ವ
 
               ಆತ್ಮವನ್ನು ಭಾರತೀಯ ದರ್ಶನಗಳು ಆತ್ಮ ಅಖಂಡವೆಂದು ಪ್ರತಿಪಾದಿಸಿದರೆ, ಜೈನವು ಅದಕ್ಕೆ ವಿರುದ್ಧವಾಗಿ ಆತ್ಮನು ಅವಯವಗಳ ಮೂಲಕ ಕರ್ಮರೇಣುಗಳು ಆತ್ಮವನ್ನು ಪ್ರವೇಶಿಸಿ ಅದರ ಮೂಲಸ್ವರೂಪವನ್ನು ಮಲಿನ ಗೊಳಿಸುತ್ತದೆಂದೂ ಭಾವಿಸುತ್ತಾರೆ. ಜೋತೆಗೆ ಆತ್ಮ್ನನ್ನು ಆಣುವೆಂದೂ, ವಿಭುವೆಂದೂ ಭಾವಿಸುತ್ತಾರೆ. ತನ್ನ ಪ್ರಮಾಣವನ್ನು ತಾನು ಆಕ್ರಮಿಸಿಕೊಳ್ಳುವ ಭೌತಿಕ ಶರೀರಕ್ಕೆ ಅನುಗುಣವಾಗಿ ವ್ಯೆತ್ಯಾಸವಾಗುತ್ತದೆಂದು ಭಾವಿಸುವರು. ಇರುವೆಗೆ ಚಿಕ್ಕ ಆತ್ಮಗಳು ಮತ್ತು ಆನೆಗೆ ದೊಡ್ಡ ಆತ್ಮಗಳಿರುವುದೆಂದು ಜೈನಾ ಸಿದ್ಧಾಂತ. ಜೈನಾ ಸಿದ್ಧಾಂತದಂತೆ ಕೆಲವು ಸ್ಪರ್ಶ ಮಾತ್ರ ರಸನ ಮಾತ್ರ ಘ್ರಾಣ ಮಾತ್ರ ಕೆಲವಿದ್ದರೆ ಕೆಲವು ನಯನವಿರುವ ಜೀವಿಗಳು ಇದೆ. ಮನುಷ್ಯನಿಗೆ ಮಾತ್ರ ಪಂಚೇಂದ್ರಿಯ ೫ ಐದುವುಳ್ಳವನಾಗಿರುತ್ತಾನೆ.
 
ಬೌದ್ಧ ಮತ :-
               ಕ್ರಿ ಪೂ ೬ ಆರನೇ ಶತಮಾನದಲ್ಲಿ ಹುಟ್ಟಿ ದೇವರನ್ನು ನಿರಾಕರಿಸಿತ್ತಾದರೂ ಅದರ ಬಗ್ಗೆ ಯಾವ ಹೇಳಿಕೆಯನ್ನು ನೀಡದೆ 
ಕಾರಣ, ಹೇಳುವುದರಿಂದ ಬರೀ ಘರ್ಷಣೆಗಳು ಮಾತ್ರ ಹೆಚ್ಚುತ್ತದೆ, ಎಂದು ಭಾವಿಸಿ ತನ್ನ ಸಿದ್ಧಾಂತವನ್ನು ಮಾತ್ರ ಪ್ರಚಾರಪಡಿಸಿತು. ದಯೇಯೇ ಧರ್ಮದ ಮೂಲ ಮಂತ್ರವನ್ನೇ ಇದು ಪ್ರತಿಪಾದಿಸಿದರೂ ಆಸೆಯೇ ದುಃಖಕ್ಕೆ ಮೂಲಕಾರಣ ವೆಂದು ಹೇಳಿತು. ಜೈನದಲ್ಲಿದ್ದ ಅತಿದೊಡ್ಡ ದೇಹ ದಂಡನೆಯನ್ನು ನೇಮ ನಿಷ್ಟೆಗಳನ್ನು ಸಡಲಿಸಿದ ಕಾರಣ ಬಹು ಸನಾತನರೂ ಭೌದ್ಧ ಧರ್ಮವನ್ನು ಅಪ್ಪಿದರು. ನಮ್ಮ ಭಾರತದೇಶವಲ್ಲದೇ ಹೊರದೇಶಗಳಲ್ಲೂ ತನ್ನ ಅನೂಯಾಯಿಗಳ ಕಂಡಿತು 
 
               ನಮ್ಮ ಸನಾತನ ಧರ್ಮವು ಕಾಲದಿಂದಲೂ ನಿಂತ ನೀರಾಗಿತ್ತು. ನಮ್ಮ ಪುರಾಣಗಳಲ್ಲಿ ಓದಿದವರಿಗೆ ಗೊತ್ತು ಬರೀ ಬುರುಡೆ ಕಥೆಗಳು ತುಂಬಿ ತುಳುಕುತ್ತಿತ್ತು ತುಳುಕುತ್ತಿದೆ . ಬರೀ ಯುದ್ಧ ಕಲಹ ಹಿಂಸೆ ಕಲ್ಮಶ ಕೊಳಕು ಅಸಹ್ಯವೇ, ಈಗಿನಂತೆ ಜಾತಿ ಮತ, ಮೇಲು ಕೀಳು, ಮೌಢ್ಯ ಅಂಧಶ್ರೆದ್ಧೆ, ರಾಜಕೀಯ ತುಂಬಿತ್ತು.  
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by gunashekara murthy on

ಇದು ಅರಿಯದೆ 6 ಬಾರಿ ಪ್ರಕಟ ಕೊಂಡಿದೆ ಈ ಬರಹವನ್ನು ತೆಗೆದು ಹಾಕಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.