ಉ: ನಾವೆಂಥಾ ಜನ!
- ಉ: ನಾವೆಂಥಾ ಜನ! By: gc (Jul 25 2007 - 11:10pm)
- ಉ: ನಾವೆಂಥಾ ಜನ! By: ಶ್ಯಾಮ ಕಶ್ಯಪ (Jul 26 2007 - 1:58pm)
- ಉ: ನಾವೆಂಥಾ ಜನ! By: kpbolumbu (Jul 30 2007 - 7:02pm)
- ಉ: ನಾವೆಂಥಾ ಜನ! By: jaiguruji (Jul 26 2007 - 11:46am)
- ಉ: ನಾವೆಂಥಾ ಜನ! By: gc (Jul 26 2007 - 8:11pm)
- ಉ: ನಾವೆಂಥಾ ಜನ! By: muralihr (Jul 26 2007 - 8:37pm)
- ಉ: ನಾವೆಂಥಾ ಜನ! By: gc (Jul 26 2007 - 8:11pm)
- ಉ: ನಾವೆಂಥಾ ಜನ! By: ಶ್ಯಾಮ ಕಶ್ಯಪ (Jul 26 2007 - 1:58pm)
- ಉ: ನಾವೆಂಥಾ ಜನ! By: prapancha (Jul 25 2007 - 3:58pm)
- ಉ: ನಾವೆಂಥಾ ಜನ! By: santoshgs (Jul 25 2007 - 3:13pm)
- ಉ: ನಾವೆಂಥಾ ಜನ! By: roshan_netla (Jul 25 2007 - 3:12pm)
- ಉ: ನಾವೆಂಥಾ ಜನ! By: jaiguruji (Jul 25 2007 - 2:07pm)
- ಉ: ನಾವೆಂಥಾ ಜನ! By: ಶ್ಯಾಮ ಕಶ್ಯಪ (Jul 25 2007 - 2:20pm)
- ಉ: ನಾವೆಂಥಾ ಜನ! By: jaiguruji (Jul 26 2007 - 11:36am)
- ಉ: ನಾವೆಂಥಾ ಜನ! By: ಶ್ಯಾಮ ಕಶ್ಯಪ (Jul 25 2007 - 2:20pm)
- ಉ: ನಾವೆಂಥಾ ಜನ! By: ವೈಭವ (Jul 25 2007 - 12:20pm)
- ಉ: ನಾವೆಂಥಾ ಜನ! By: ಶ್ರೀನಿಧಿ (Jul 25 2007 - 11:24am)
- ಉ: ನಾವೆಂಥಾ ಜನ! By: hamsanandi (Jul 25 2007 - 11:55am)

RSS:
ಉ: ನಾವೆಂಥಾ ಜನ!
ಹೌದು ಸಿಸ್ಯಾ
ನಮ್ಮಲ್ಲಿ ಬರೆದದ್ದನ್ನೆಲ್ಲಾ ನಂಬುವ ಮೂರ್ಖತನ ಹೆಚ್ಚು. ಬರೀ ಬರೆದದ್ದೇ ಅಲ್ಲ. ಇನ್ಯಾರೋ ಈ ಪುಸ್ತಕದಲ್ಲಿ ಹೀಗೆ ಇದೆ ಎಂದರೆ ಸಾಕು - ವಿಧಾನಸೌಧಕ್ಕೆ ಒಂದು ಮೆರವಣಿಗೆ ಹೊರಡುತ್ತದೆ. ಇದು ಎರಡು ಪುಸ್ತಕಗಳ ವಿರುದ್ಧವೂ ನಡೆದಿದೆ.
ಆವರಣದ ವಿಷಯದಲ್ಲಿ ಅದನ್ನು ಜನ ಮೆಚ್ಚಿದ್ದು ಅನೇಕರಿಗೆ ಕಣ್ಣು ಕೆಂಪಾಗುವಂತೆ ಮಾಡಿತ್ತಷ್ಟೇ. ಆದರೆ ಅದರಲ್ಲಿರುವ ಆಕರ ಗ್ರಂಥಗಳ ಬಗೆಗೆ ನಾನು ಮಾತು ಕೇಳಿದ್ದು ಕಡಿಮೆ. ಅಲ್ಲದೇ ಮಾರ್ಕ್ಸಿಸ್ಟ್ ಇತಿಹಾಸವೊಂದೇ ನಿಜ, ಭೈರಪ್ಪ ಬರೆದದ್ದು RSSವಾದಿ ಎಂದು ಹೀಯಾಳಿಸೋ ಬದಲು ಅದರ ಆಧಾರಗಳನ್ನು ಏಕೆ ಗಮನಿಸಲಿಲ್ಲ? (ಆ ಆಕರ ಪುಸ್ತಕಗಳಲ್ಲಿ ನೋಬೆಲ್ ಪ್ರಶಸ್ತಿ ಪಡೆದ ನೈಪಾಲ್ ಅವರ ಪುಸ್ತಕದ ಹೆಸರೂ ಇದೆ ಎಂದು ಎಷ್ಟು ಜನ ಗಮನಿಸಿದ್ದಾರೆ? ). ಇದೇ ರೀತಿಯ ವಾದ ಬಂಜಗೆರೆ ಅವರ ಪುಸ್ತಕದ ಬಗೆಗೂ ಇದೆ. ಖಂಡಿಸುವ ಎಷ್ಟು ಜನ ಆ ಪುಸ್ತಕ ಓದಿದ್ದಾರೋ ನಾಕಾಣೆ. ಮುಟ್ಟುಗೋಲು ಹಾಕಿದರೆ ಅಕಸ್ಮಾತ್ ಪುಸ್ತಕದಲ್ಲಿರುವ ತಪ್ಪುಗಳೂ ಮುಚ್ಚಿ ಹೋಗುತ್ತದೆ , ಬರೀ ದ್ವೇಷ ಉಳಿಯುತ್ತದೆ ಎಂದೇಕೆ ಜನರಿಗೆ ಅರ್ಥ ಆಗುವುದಿಲ್ಲವೋ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ