ಉ: ನಾವೆಂಥಾ ಜನ!
- ಉ: ನಾವೆಂಥಾ ಜನ! By: gc (Jul 25 2007 - 11:10pm)
- ಉ: ನಾವೆಂಥಾ ಜನ! By: ಶ್ಯಾಮ ಕಶ್ಯಪ (Jul 26 2007 - 1:58pm)
- ಉ: ನಾವೆಂಥಾ ಜನ! By: kpbolumbu (Jul 30 2007 - 7:02pm)
- ಉ: ನಾವೆಂಥಾ ಜನ! By: jaiguruji (Jul 26 2007 - 11:46am)
- ಉ: ನಾವೆಂಥಾ ಜನ! By: gc (Jul 26 2007 - 8:11pm)
- ಉ: ನಾವೆಂಥಾ ಜನ! By: muralihr (Jul 26 2007 - 8:37pm)
- ಉ: ನಾವೆಂಥಾ ಜನ! By: gc (Jul 26 2007 - 8:11pm)
- ಉ: ನಾವೆಂಥಾ ಜನ! By: ಶ್ಯಾಮ ಕಶ್ಯಪ (Jul 26 2007 - 1:58pm)
- ಉ: ನಾವೆಂಥಾ ಜನ! By: prapancha (Jul 25 2007 - 3:58pm)
- ಉ: ನಾವೆಂಥಾ ಜನ! By: santoshgs (Jul 25 2007 - 3:13pm)
- ಉ: ನಾವೆಂಥಾ ಜನ! By: roshan_netla (Jul 25 2007 - 3:12pm)
- ಉ: ನಾವೆಂಥಾ ಜನ! By: jaiguruji (Jul 25 2007 - 2:07pm)
- ಉ: ನಾವೆಂಥಾ ಜನ! By: ಶ್ಯಾಮ ಕಶ್ಯಪ (Jul 25 2007 - 2:20pm)
- ಉ: ನಾವೆಂಥಾ ಜನ! By: jaiguruji (Jul 26 2007 - 11:36am)
- ಉ: ನಾವೆಂಥಾ ಜನ! By: ಶ್ಯಾಮ ಕಶ್ಯಪ (Jul 25 2007 - 2:20pm)
- ಉ: ನಾವೆಂಥಾ ಜನ! By: ವೈಭವ (Jul 25 2007 - 12:20pm)
- ಉ: ನಾವೆಂಥಾ ಜನ! By: ಶ್ರೀನಿಧಿ (Jul 25 2007 - 11:24am)
- ಉ: ನಾವೆಂಥಾ ಜನ! By: hamsanandi (Jul 25 2007 - 11:55am)


RSS:
ಉ: ನಾವೆಂಥಾ ಜನ!
ಆ ವ್ಯಕ್ತಿ ಯಾರು ಅಂತ ನನಗೂ ಚೆನ್ನಾಗಿ ಗೊತ್ತು ! ಆದರೂ ಪ್ರಶ್ನಿಸುವ ಉದ್ದೇಶವೆಂದರೆ..
ಇವತ್ತು ನಮ್ಮಲ್ಲಿ ವ್ಯಕ್ತಿಯ ಸಾಧನೆಗಿಂತ, ವ್ಯಕ್ತಿಪೂಜೆ ಮಹತ್ವ ಪಡೆದುಕೊಂಡು ಆ ವ್ಯಕ್ತಿಯನ್ನ ವೈಭವಿಕರಿಸುವದನ್ನೆ ಅನೇಕ ಅನುಯಾಯಿಗಳು / ಅಭಿಮಾನಿಗಳು ಕಸಬು ಮಾಡಿಕೊಂಡಿದ್ದಾರೆ. ನಾನು ಭೈರಪ್ಪನವರ ಕಾದಂಬರಿಗಳ ಓದುಗ ಮತ್ತು ಅಭಿಮಾನಿ ಕೂಡ - ಕೆಲವನ್ನ ನಾನು ಮೆಚ್ಚಿಕೊಂಡಿದ್ದೇನೆ. ಆದರೆ ಹಾಗಂತ ನಾನು ಭೈರಪ್ಪನವರಿಗೆ ಇಂದ್ರ, ಚಂದ್ರ ಅಂಥ ಹೊಗಳುವದಾಗಲಿ ಅಥವಾ "ಭೈರಪ್ಪ ’ಮಾತ್ರ’ ಕವಿ ಕಂಠೀರವ, ಕಾದಂಬರಿ ಸಾರ್ವಭೌಮ, ವಿಮರ್ಶಾ ರತ್ನಾಕರ, ಅಪ್ರತಿಮ ತತ್ವಶಾಸ್ತ್ರಜ್ಞ" ಇತ್ಯಾದಿ ಬಿರುದು ಬಾವಲಿಯಿಂದ ಇಲ್ಲದ ಶ್ರೇಷ್ಟತೆಯನ್ನ ಆರೋಪಿಸುವದು - ನಾನು ಭೈರಪ್ಪನವರಿಗೆ ಮಾಡುವ ಶುದ್ಧ ಅಪಚಾರವೆಂದು ಭಾವಿಸುವೆ. ನಾನು ಆ ರೀತಿ ಮಾಡಿದರೆ ಜನ ಭೈರಪ್ಪನವರ ಕಾದಂಬರಿಗಳನ್ನು ಕೂಡ ಸಂಶಯ ದೃಷ್ಟಿಯಿಂದ ನೋಡಲು ಪ್ರಾರಂಭಿಸಬಹುದು. ಅದು ಒಬ್ಬ ಉತ್ತಮ(ಸಾರ್ವಭೌಮ ಅಲ್ಲ ಮತ್ತೆ!) ಕಾದಂಬರಿಕಾರನಿಗೆ ನಾನು ಅವಮಾನ ಮಾಡಿದಂತೆ !
ಅದೇ ರೀತಿ ನೀವು ಹೇಳುತ್ತಿರುವ ’ಆ ವ್ಯಕ್ತಿ’ ಕೂಡ ಉತ್ತಮ ಕಥೆಗಳನ್ನ ಬರೆದಿದ್ದಾರೆ ಮತ್ತು ಕವನಗಳನ್ನ ಕೂಡಾ. ಹಾಗಂತ ಏಕಮಾತ್ರ ಮಹಾನ್ ಸೂಕ್ಷಪ್ರಜ್ಞೆಯ ವಿಮರ್ಶಕರು ಅವರು ಎಂದು ಇಲ್ಲದ ಶೇಷ್ಟತೆಯನ್ನ ಆರೋಪಿಸುವದು/ಬಿಂಬಿಸುವದು ಮೊದಲು ’ಆ ವ್ಯಕ್ತಿ’ಗೆ ತಾವು ಮಾಡುವ ಅಪಚಾರ, ಜೊತೆಗೆ ಇನ್ನುಳಿದ ಸಹೃದಯ ವಿಮರ್ಶಕರನ್ನ ಅವಗಣನೆ ಮಾಡಿದಂತೆ!