ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?
- ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: mahesha (Jul 28 2007 - 10:48pm)
- ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: Aram (Jul 29 2007 - 1:28am)
- ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: gc (Jul 29 2007 - 10:02pm)
- ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: mahesha (Jul 29 2007 - 11:58pm)
- ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: ವೈಭವ (Jul 30 2007 - 3:53pm)
- ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: mahesha (Jul 30 2007 - 4:24pm)
- ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: ವೈಭವ (Jul 30 2007 - 4:33pm)
- ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: mahesha (Jul 30 2007 - 4:24pm)
- ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: ವೈಭವ (Jul 30 2007 - 3:53pm)
- ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: mahesha (Jul 29 2007 - 11:58pm)
- ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: mahesha (Jul 29 2007 - 2:17am)
- ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: gc (Jul 29 2007 - 10:02pm)
- ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: Aram (Jul 29 2007 - 1:28am)
- ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: gc (Jul 28 2007 - 7:48pm)
- ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: Aram (Jul 28 2007 - 5:29pm)
- ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: ASHOKKUMAR (Jul 28 2007 - 10:43am)
- ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: roshan_netla (Jul 27 2007 - 3:51pm)
- ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? By: mahesha (Jul 27 2007 - 3:13pm)


RSS:
ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?
ನನ್ನನಿಸಿಕೆಯಲ್ಲಿ ಸಕ್ಕದಕ್ಕೆ ಈ ಹೊರತು ಬೇಕು, ಮತ್ತು ಸರಿ.( ಆದರೆ ಇದನ್ನು ಬರೀ ಅಂಕ ಗೋರುವ ಒಂದು ಕಳ್ಳದಾರಿ ಎಂದು ನೋಡಬಾರದು. ಅದು ಸಕ್ಕದ ಕಲಿಕೆಯನ್ನು ಕೀಳುರುಚಿಯಲ್ಲಿ ಕಂಡಂತೆ )
ಸಕ್ಕದಕ್ಕೇ ಹೊರತು ಯಾಕೆಂದರೆ.
೧) ಸಕ್ಕದ ಒಂದು ಆಡು ನುಡಿಯಲ್ಲ. ಈಗ ಆದೊಂದು ಬರೀ ಹೊತ್ತಗೆಯಲ್ಲಿ ಇರುವ ನುಡಿ (ಗ್ರಾಂಥಿಕ/ಶಾಸ್ತ್ರೀಯ)
೨)ಸರಕಾರಿ ಸಕ್ಕದದ ಪರೀಕಸೆಯಲ್ಲಿ ಸಕ್ಕದದಕ್ಕಿ ಪ್ರಬಂಧದಂತ ಉತ್ತರ ಇರಲ್ಲ. ಸಕ್ಕದದಲ್ಲೇ ಉತ್ತರ ಬರೆಯುವುವು ಹೆಚ್ಚೆಂದರೆ ನಾಲ್ಕು ಸಾಲಿನವು.
೩) ನಮ್ಮ ಸಕ್ಕದ ಕಲಿಯುವುದಕ್ಕೂ, ಕನ್ನಡ ಕಲಿಯುವುದಕ್ಕೂ ಹಲವು ಬೇರೆ ಬೇರೆ ಗುರಿಗಳಿವೆ.
ಸಕ್ಕದದ ಕಲಿಕೆಯ ಮುಕಿಯ ಗುರಿಗಳು ( ನನ್ನಂತೆ )
೧) ಸಕ್ಕದದ ಕಬ್ಬಗಳನ್ನು ಓದುವುದು. ಓದಿ ನಮ್ಮ ನಮ್ಮ ನುಡಿಗಳಲ್ಲಿ ಹೇಳುವುದು. ಸಕ್ಕದದಲ್ಲಿ ಮಾತಾಡುವುದು ಅಲ್ಲ.
೨) ಸಕ್ಕದದಲ್ಲಿ ಹೊಸ ಹೊಸ ನೆಗಳ್ಚಿಗೆ/ರಚನೆಗೆ( ಹಲವು ಸರತಿ ಹಳೆಯದನ್ನು ಅರಿಯಲೂ ಕೂಡ), ನಾವು ಕಲಿಯುವ ಸರಕಾರಿ ಸಕ್ಕದ ಏನೆಂದರೇನು ಸಾಲದು. ಅದಕ್ಕೆ ಅದರ ಗುರಿ ನಮ್ಮನ್ನು ಸಕ್ಕದದಲ್ಲಿ ಹೊಸ ನೆಗಳ್ಚಿಗೆ ಅಣಿಯಲ್ಲ. ಇರುವ ಹಳೆಯ ಸಕ್ಕದದ ಕಬ್ಬಗಳನ್ನು ಅರಿಯುವುದು.
೩) ಸರಕಾರಿ ಸಕ್ಕದದಲ್ಲಿ, ವೇದ-ನುಡಿಯ ವ್ಯಾಕರಣವಿಲ್ಲ.
೪)ಸಕ್ಕದವನ್ನು ಒಂದು ಹೊರನುಡಿ( ಹೊಸನುಡಿ ) ಅಂತೆ ನಮಗೆ ಕಲಿಯಲು ಇಟ್ಟಿರುವುದು.( ಕನ್ನಡವು ನೆಲನುಡಿ, ಹೊರನುಡಿಯಲ್ಲ)
೫) ಸಕ್ಕದವು ಆಡುನುಡಿಯಲ್ಲದೇ ಇರುವುದರಿಂದ ಅದನ್ನು ಹರಡಲು, ಹೆಚ್ಚು ಮಂದಿ ಓದುವಂತೆ ಮಾಡಲು, ಕೊಂಚ ಹೆಚ್ಚು ಇಂಬು, ಸಲಿಗೆ ಬೇಕು. ಸಕ್ಕದದಲ್ಲೇ ೧೨೫ ಅಂಕಗಳಿಗೂ ಬರೆಯಿರಿ ಅಂದರೆ, ಹೆಚ್ಚಿನವರು ಹೆದರಿ ಸಕ್ಕದ ಓದುವುದೇ ಇಲ್ಲ, ಏಕೆಂದರೆ ಸಕ್ಕದದಲ್ಲೇ ಉತ್ತರಗಳನ್ನು ಬರೆಯಲು ತಕ್ಕ ತಕ್ಕುಮೆಯನ್ನು ನಾವು ನಮ್ಮ ಸರಕಾರಿ ಸಕ್ಕದ ಕಲಿಕೆಯಲ್ಲಿ ಪಡೆಯುವುದೇ ಇಲ್ಲ. ( ಶೃಂಗೇರಿ ಮಠದ(ಇಂತಹ) ಪರೀಕಸೇ ಮಾಡಿಕೊಂಡವರಿಗೆ, ಸಕ್ಕದದಲ್ಲೇ ಉತ್ತರ ಬರೆಯುವಲ್ಲಿರುವ ಎಡರು ಚನ್ನಾಗಿ ಗೊತ್ತಿರುವುದು. )
ಇನ್ನು ಕನ್ನಡದ ಕಲಿಕೆಯ ಗುರಿ( ನನ್ನಂತೆ )
೧) ಕನ್ನಡ ಈ ನಾಡಿನ ನೆಲದ ನುಡಿ. ಈ ನಾಡಿನ ಮಂದಿಯ ಆಡುನುಡಿ, ಅದಕ್ಕೆ ಇದನ್ನು ಸಕ್ಕದದ ಮಟ್ಟದಲ್ಲಿ ಬರೀ ಓದಿಕೊಂಡು ತಿಳಿಯುವಂತೆ ಹೇಳಿಕೊಡಕ್ಕೆ ಆಗಲ್ಲ.
೨) ಹಳೆಗನ್ನಡ ಕನ್ನಡದ ಇತಿಹಾಸ, ನಮ್ಮ ಕನ್ನಡದ ಬೆಳೆವಣಿಗೆಯಲ್ಲಿ ಹಳೆಗನ್ನಡ, ನಡುಗನ್ನಡಗಳು ಒಂದು ಮುಕಿಯ ಹಂತಗಳು, ಇದರ ಪರಿಚಯ ನಮಗೆ ಬೇಕೇ ಬೇಕು. ಇಲ್ಲದೇ ಹೋದರೆ ಪಂಪ, ರನ್ನ, ಕುಮಾರವ್ಯಾಸ, ಬಸವಣ್ನ ಇವರ ಪರಿಚಯವೇ ಇರಲ್ಲ.
೩) ಕನ್ನಡವನ್ನು ೧೦-೧೨ ತರಗತಿಯ ಹುಡುಗ ಕನ್ನಡ ನೆಲದಲ್ಲಿ ಆಗಲೇ ಮಾತಾಡುತ್ತಿರುತ್ತಾನೆ. ಅವನಿಗೆ ಕನ್ನಡ ಒಂದು ಹೊರನುಡಿಯಲ್ಲ( ವಲಸೆ ಬಂದವರನ್ನು ಲೆಕ್ಕಕ್ಕೆ ತಗೆದುಕೊಳ್ಳಕ್ಕೆ ಇಲ್ಲ ಬರಲ್ಲ ). ಅವನಿಗೆ ಕನ್ನಡದಲ್ಲಿ ಹೆಚ್ಚಿನ ಮಟ್ಟದ ಕಲಿಸಿಕೆ ಬೇಕು. ಅವನು ಕನ್ನಡವನ್ನು ಅರಿತರೇ ಸಾಲದು, ಅದರ ಇತಿಹಾಸ( ಹಳೆಗನ್ನಡ ) ಮತ್ತು ಅದರಲ್ಲೇ ಹೊಸ ಹೊಸ ನೆಗಳ್ವು ಮಾಡ-ತಕ್ಕವನಾಗಬೇಕು. ಅದಕ್ಕೆ ಕನ್ನಡದ ಹಲವು ಕಬ್ಬ ಬಗೆಗಳ ಪರಿಚಯಬೇಕು.
ಸಕ್ಕದಕ್ಕೆ ಕೊಟ್ಟ ಸಡಿಲಿಕೆಗಳನ್ನು ಮಂದಿ ಕೆಟ್ಟಬಳಕೆ ಮಾಡಿದರೆ, ಅದು ಹೆಮ್ಮೆಯೇ? ಸಕ್ಕದದಲ್ಲಿ ಆಸಕ್ತಿಯಿಲ್ಲದ ಹುಡುಗನಿಗೆ, "ಅಂಕ ಗೋರೋ" ಎಂದು ಸಕ್ಕದ ತುರುಕಿದಂತಲ್ಲವೇ?( ಇದನ್ನೇ ಪಟ್ಟಣದ ಹಲವು ಮಂದಿ ಮಾಡೋದು )
ಏನೇ ಆದರು ಹಳಗನ್ನಡವನ್ನು ಸರಕಾರ ಇಟ್ಟಿರುವುದು "ಗಂಟಲಿಗೆ ತುರುಕಿದಂತಲ್ಲ"( ವಲಸಿಗ/ಬೇರೆ ನುಡಿಯವರ ಅನಿಸಿಕೆ ಬಿಡಿ, ಅವರಿಗೆ ಕನ್ನಡ ಕಲಿಯೋದೇ ದೊಡ್ಡ ಎಡರು ).
ಒಂದು ಸುದ್ದಿ, ನಮ್ಮ ಊರಲ್ಲಿ ಹೈಸ್ಕೂಲಲ್ಲಿ ಸಕ್ಕದ ಹೇಳಿಕೊಡುತ್ತಿದ್ದ ಒಂದೇ ಒಂದು ಸಾಲೆಯೂ, ಹುಡುಗರು ಸಕ್ಕದ ಕಲಿಯುತ್ತಿಲ್ಲ ಎಂದು ಈಗ ಸಕ್ಕದದ ಗುರುಗಳನ್ನು ಹಿಂದಿ ಕಲಿಸಲು ಹಾಕಿ, ಸಕ್ಕದವನ್ನು ಕೊಡುವುದನ್ನು ನಿಲ್ಲಿಸಿಬಿಟ್ಟಿದೆ
. ಆದರೆ ಹುಡುಗರೇ ಸಕ್ಕದ ಕಲಿಯುವುದಕ್ಕೆ ಹಿಂಜರಿಯುತ್ತಿದ್ದಾರಂತೆ.
ಸಕ್ಕದಕ್ಕೆ ಕೊಟ್ಟಿರುವ ಸಡಿಲಿಕೆಯನ್ನು ತೆಗೆದು, ೧೨೫ ಅಂಕಗಳಿಗೂ "ತಪ್ಪಿಲ್ಲದ ಶುದ್ಧ ಸಂಸ್ಕೃತ"ದಲ್ಲೇ ಬರೆಯಿರಿ, ಅಂದ್ರೆ ಈ "ಅಂಕಕ್ಕಾಗಿ ಹಲುಬೋ" ಮಂದಿಗಳೇ ಮೊದಲು ಅದರಿಂದ ದೂರ ಓಡೋದು, ದಿಟವಾದ ಆಸಕ್ತಿ ಇರೋರು ಓದೇ ಓದ್ತಾರೆ!
=========================================
ತಿಳಿದಷ್ಟು ತಿಳಿಯಾಗುವುದು ತಿಳಿವು !