ಕನ್ನಡ ಇನ್ಪುಟ್ ಪ್ಲಗಿನ್
- ಸ್ವಾಗತ By: suresh_k (Dec 16 2005 - 5:57pm)
- ಸರಿ By: tvsrinivas41 (Dec 16 2005 - 7:44pm)
- ಖಂಡಿತ ಅತಿಯಾಗಲಿಲ್ಲ By: (Dec 16 2005 - 6:49pm)
- ಕನ್ನಡ ಕನ್ನಡ! By: tvsrinivas41 (Dec 15 2005 - 9:41am)
- ಕನ್ನಡ ಇನ್ಪುಟ್ ಪ್ಲಗಿನ್ By: Rohit (Dec 15 2005 - 10:04am)
- ಕನ್ನಡ ಇನ್ಪುಟ್ ಪ್ಲಗಿನ್ By: (Dec 15 2005 - 1:06pm)
- ಕನ್ನಡ ಇನ್ಪುಟ್ ಪ್ಲಗಿನ್ By: Rohit (Dec 15 2005 - 10:04am)

RSS:
ಕನ್ನಡ ಇನ್ಪುಟ್ ಪ್ಲಗಿನ್
ದೇವನಾಗರಿ ಲಿಪಿಗೆ ಈಗಾಗಲೇ ಜಾವಾಸ್ಕ್ರಿಪ್ಟ್ input method ಇರೋದ್ರಿಂದ ಅವರ ಕೆಲಸ ಸುಲಭ, ಆದ್ದರಿಂದಲೇ ಮರಾಠಿಗೆ ಈಗಾಗಲೇ ಅಂಥದ್ದು ಲಭ್ಯ.
'ಸಂಪದ'ಕ್ಕೂ ಒಂದು ಇದೇ ರೀತಿಯ ಪ್ಲಗಿನ್ ಬರೆದಿರುವೆ. ಆದರೆ ಅದರಲ್ಲಿ WX (ಐ ಐ ಟಿಯವರು ರೂಪಿಸಿದ) input method ಲಭ್ಯವಿರುವುದು. ನಮ್ಮ ಕನ್ನಡಿಗರು ನೋಡಿದ್ರೆ ಬರಹ ಶೈಲಿಯ input methodಗೆ ಚೆನ್ನಾಗಿ ಒಗ್ಗಿಕೊಂಡುಬಿಟ್ಟಿದ್ದಾರೆ (ಬರಹ ಸಂಪೂರ್ಣ ಐಟ್ರಾನ್ಸ್ ಕೂಡ ಅಲ್ಲ). WX ರೀತಿಯದ್ದನ್ನು ಬರಹ ಶೈಲಿಗೆ ಕನ್ವರ್ಟ್ ಮಾಡುವುದು ಸುಲಭದ ಅದೂ ಜಾವಾಸ್ಕ್ರಿಪ್ಟ್ ನಲ್ಲಿ ಸುಲಭದ ಕೆಲಸವೇನಲ್ಲ. ಆದ್ದರಿಂದ ಸ್ವಲ್ಪ ದಿನ ಹಿಡಿದೇ ಹಿಡಿಯುವುದು.
ಜೊತೆಗೆ ಈ ಜಾವಾಸ್ಕ್ರಿಪ್ಟ್ ಇನ್ಪುಟ್ ಮೆಥಡ್ ಗಳ ತೊಂದರೆಯೇನೆಂದರೆ ಟಾಗಲ್ ಮಾಡುವ ಸೌಲಭ್ಯ ಕಷ್ಟ - ಟಾಗಲ್ ಮಾಡೋದಕ್ಕೆ ಯಾವುದಾದರೂ accelerator ಬಳಸಿದ್ರೆ ಅದೇ ಶಾರ್ಟ್ ಕಟ್ ಬ್ರೌಸರಿನ ಯಾವುದಾದರೂ ಒಂದು ಶಾರ್ಟ್ ಕಟ್ ಜೊತೆ conflict ಆಗುತ್ತದೆ. ಜಾವಾಸ್ಕ್ರಿಪ್ಟ್ ಉಪಯೋಗಿಸಿ ಇಂಥದ್ದೊಂದು ಹಾಕುವುದರಿಂದ ಉಳಿದವರಿಗೂ ತೊಂದರೆಯಾಗಬಾರದು, ಅಲ್ವೆ? ಕೊನೆಗೊಂದು ದಿನ ನಿಮ್ಮ ಕಂಪ್ಯೂಟರಿನಲ್ಲಿಯೇ IME ಅಳವಡಿಸಿಕೊಳ್ಳಬೇಕೇ ವಿನಹ ಈ ಜಾವಾಸ್ಕ್ರಿಪ್ಟ್ arrangementಗೆ ಸದಸ್ಯರು ಒಗ್ಗಿಕೊಂಡು ಬಿಟ್ಟರೆ ಇನ್ನಷ್ಟು ಕಷ್ಟ!
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"