ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?

August 5, 2007 - 3:40am — hamsanandi

ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?

hamsanandi's picture

ಇದನ್ನ ಹೊಸ ಎಳೆಯಲ್ಲಿ ಬರೆಯಬಹುದಾಗಿತ್ತು - ಸಧ್ಯಕೆ ಇಲ್ಲಿರಲಿ ಎಂದು ಬರೆಯುತ್ತಿದ್ದೇನೆ.

ಮಿಶ್ರಿಕೋಟಿಯವರೂ, ಸಂಗನಗೌಡರು ಹೇಳುತ್ತಿರುವ ಅ-ಆ-ಇ-ಈ ವಿಷಯದ ಬಗ್ಗೆ ನನ್ನ ಅನಿಸಿಕೆ ಹೀಗೆ:

೧. ಮೊದಲಿಗೆ ದಕ್ಷಿಣ ಕರ್ನಾಟಕದವರು (ನೀವು ವಿಶೇಷವಾಗಿ ಹಾಸನ ಮಂಡ್ಯದವರನ್ನು ಹೆಸರಿಸಿದ್ದಕ್ಕೆ ನಾನು ಬರೆಯಲೇಬೇಕಾಯಿತು) ನೀವು ಹೇಳುವ ಹಾಗೆ ಆ ಆ.. ಎಂದು ಹೇಳುತ್ತಾರೆ ಎಂಬುದು ಸರಿಯಲ್ಲ.

೨. ಹೇಗೆ ಈ ಎನ್ನುವುದು ಇ ಯ ಎರಡರಷ್ಟು ಉದ್ದ ಇದೆಯೋ, ಊ ಅನ್ನುವುದು ಉ ರ ಎರಡರಷ್ಟು ಉದ್ದ ಇದೆಯೋ ಹಾಗೇ ಆ ಎನ್ನುವುದನ್ನು ಅ ಎಂಬುದರ ಎರಡರಷ್ಟು ಉದ್ದ ಹೇಳುತ್ತೇವೆ ನಾವು. ಈ ಮತ್ತು ಇ ಯಲ್ಲಿ ಹೇಗೆ ಶಬ್ದವ್ಯತ್ಯಾಸವಿಲ್ಲದೇ ಬರೀ ಅದನ್ನು ಎಷ್ಟು ಹೊತ್ತು ಉಚ್ಚರಿಸುತ್ತೇವೆ ಎನ್ನೋದರಿಂದಲೇ ಅಕ್ಷರಗಳನ್ನು ಗುರುತಿಸ್ತೇವೋ, ಹಾಗೇ ಆ ಮತ್ತು ಆ ಗಳು ಕೂಡ.

೩. ಇದು ತಪ್ಪು ಅಂತ ಹೇಳೋ ಮೊದಲು ಮುಂದೆ ಓದಿ Smiling

೪. ಆದರೆ, ಕನ್ನಡದಲ್ಲಿ ಎರಡು ಅ ಉಚ್ಚಾರಗಳು ಬಳಕೆಯಲ್ಲಿರುವ ಪದಗಳಿವೆ - ಆದರೆ, ಅವೆರಡಕ್ಕೂ ಒಂದೇ visual representation. ಇದಕ್ಕೆ technical term ಏನೆಂಬುದು ಮರೆತಿದ್ದೇನೆ (half rounded vowel?)

ಈಗ ಈ ಸಾಲುಗಳನ್ನು ಓದಿ - ಇಲ್ಲಿ ಎರಡೂ ಬಗೆಯ ಉಚ್ಚಾರಗಳಿಗೆ ಉದಾಹರಣೆಗಳಿವೆ - ಮನದಟ್ಟಾಗದಿದ್ದರೆ, ವಿವರ ಅಡಿಯಲ್ಲಿ;

* ಅವರು ನನ್ನ ಅಮ್ಮ;

* ಅಕ್ಕ, ಮೂರು ಪಾವು ಅಕ್ಕಿ ಹಾಕೇ! ಅನ್ನ ಉದುರಾಗಿರಲಿ

* ಕತ್ತೆ ಹಾಗೆ ಕುಣೀಬೇಡ ; ಕತ್ತು ಮುರಿದುಬಿಡತ್ತೆ!

* ಅಡವಿಯಲ್ಲೊಂದು ಅಡುಗೂಲಜ್ಜಿ ಮನೆ ಇತ್ತಂತೆ

* ನಾನು ಒಳಗೆ ಬಂದಾಗಲೇ, ನಮ್ಮ ತಂದೆ ಹೊರಗೆ ಹೋದರು

*ಅರಿವಿದ್ದವನಿಗೆ ಜಗಳವಿಲ್ಲ

ಅವರು, ಅಮ್ಮ, ಅಕ್ಕ, ಅನ್ನ, ಕತ್ತೆ, ಅಡವಿ, ತಂದೆ,ಜಗಳ -> ಇಲ್ಲಿ ಬರುವ ಅಕಾರ ಆ ಕಾರದ ಅರ್ಧ; ಬೇರೇನೂ ವ್ಯತ್ಯಾಸವಿಲ್ಲ
(ಇದು ಹಾಸನ, ಮಂಡ್ಯದವರು Eye-wink ಅಕ್ಶರಮಾಲೆ ಹೇಳಿಕೊಡೋ ರೀತಿ)

ಇದೇನಪ್ಪ, ಜಗಳ, ಕತ್ತೆಗಳಲ್ಲಿ ಅಕಾರ ಎಲ್ಲಿ ಎನ್ನಬೇಡಿ. ಜ್ + ಅ = ಜ ಅಲ್ಲವೆ?

ಅಕ್ಕಿ, ಅರಿವು, ಕತ್ತು, ಅಡುಗೂಲಜ್ಜಿ -> ಇಲ್ಲಿ ಬರುವ ಅ ಕಾರ, ದೀರ್ಘ ಆ ದ ಅರೆಭಾಗ ಮಾತ್ರವಲ್ಲ, ಬಾಯಿಯ ಬೇರೆ ಸ್ಥಳದಲ್ಲೇ ಹೊರಡತ್ತೆ. ಇದೇ ಉತ್ತರ ಕರ್ನಾಟಕದಲ್ಲಿ ಅಕ್ಷರಮಾಲೆಯಲ್ಲಿ ಹೇಳಿಕೊಡುವ ರೀತಿ)

ಈಗ ಕಂಡಿತಲ್ಲ? ಎರಡು ಶಬ್ದಗಳಿಗೆ ಒಂದೇ ಅಕ್ಷರ ಇರುವುದರಿಂದ ಹೀಗಿದೆ ಅಷ್ಟೆ. ಹಾಗಾಗಿ, ಎರಡೂ ಕಡೆಯವರೂ ಸರಿ ಅನ್ನಬಹುದು. ಮುಖ್ಯವಾಗಿ, ಹಾಸನ ಮಂಡ್ಯ್ರದವರು ಧಾರವಾಡ ಬಿಜಾಪುರದ ಕಡೆಯವರಿಗಿಂತ ಹೆಚ್ಚಿನ ತಪ್ಪೇನೂ ಮಾಡ್ತಿಲ್ಲ ಈ ವಿಷಯದಲ್ಲಿ Smiling

ಒಂದು ಉಚ್ಚಾರವನ್ನು, ಇನ್ನೊಂದು ಉಚ್ಚಾರ ಬಳಸುವ ಪದದಲ್ಲ್ಲಿ ಬಳಸಿದರೆ ಅದು ಸರಿ ಕೇಳದು:

ನಮ್ಮ ತಂದೆ ಊರಿಗೆ ಹೋಗುವ ಮೊದಲೇ ಪುಸ್ಕಕ ತಂದಿಟ್ಟಿದ್ದರು -> ಇಲ್ಲಿ ಎರಡು ತಂದೆಗಳಲ್ಲಿ, ಅ ಕಾರವನ್ನು ಬದಲಾಯಿಸಿ, ಹೇಗೆ ಕೇಳುತ್ತೆ ನೋಡಿ

-ಹಂಸಾನಂದಿ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: kishorpatwardhan (14 replies) August 3, 2007 - 11:14pm
  • ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: shreekant.mishrikoti (Aug 4 2007 - 12:16pm)
    • ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: kishorpatwardhan (Aug 4 2007 - 1:28pm)
      • ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: shreekant.mishrikoti (Aug 4 2007 - 3:10pm)
        • ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: ಸಂಗನಗೌಡ (Aug 4 2007 - 10:16pm)
          • ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: hamsanandi (Aug 5 2007 - 3:40am)
            • ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: kishorpatwardhan (Aug 5 2007 - 8:36am)
        • ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: kishorpatwardhan (Aug 4 2007 - 5:49pm)
  • ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: ಸಂಗನಗೌಡ (Aug 4 2007 - 12:54am)
  • ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: ಸಂಗನಗೌಡ (Aug 4 2007 - 12:25am)
  • ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: mahesha (Aug 3 2007 - 11:39pm)
    • ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: ಸಂಗನಗೌಡ (Aug 4 2007 - 12:13am)
      • ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: hamsanandi (Aug 4 2007 - 12:34am)
  • ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: ವೈಭವ (Aug 3 2007 - 11:30pm)
    • ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ? By: hamsanandi (Aug 3 2007 - 11:41pm)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 10:05am
  • gururajkodkani
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:56am
  • mahesha
    ಉ: ಏಕೆ ಕರ್ನಾಟಕದೆಡೆಗೆ ತಾತ್ಸಾರ
    August 22, 2008 - 9:49am
  • uniquesupri
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:40am
  • Sunil Jayaprakash
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 9:33am
  • uniquesupri
    ಉ: ಎಲ್ಲ ತುಸುಹೊತ್ತು...
    August 22, 2008 - 9:22am
  • uniquesupri
    ಉ: ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
    August 22, 2008 - 9:18am
  • savithasr
    ಉ: ಲಾಲಿ
    August 22, 2008 - 9:16am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:14am
  • uniquesupri
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 9:12am
ಇನ್ನಷ್ಟು


ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಡೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

— -ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator