ಸಿಂಹದ ಮುಪ್ಪು ಪೂರ್ಣ ಪಾಠ
- ಸಿಂಹದ ಮುಪ್ಪು ಪೂರ್ಣ ಪಾಠ By: olnswamy (Dec 16 2005 - 12:30pm)
- ಉ: ಸಿಂಹದ ಮುಪ್ಪು ಪೂರ್ಣ ಪಾಠ By: shreekant.mishrikoti (Aug 25 2008 - 3:17pm)
- ಉ: ಸಿಂಹದ ಮುಪ್ಪು ಪೂರ್ಣ ಪಾಠ By: shreekant.mishrikoti (Aug 26 2008 - 5:42pm)
- ತುಂಬಾ ಸಂತೋಷ By: tvsrinivas41 (Dec 16 2005 - 7:58pm)
- ಪಾಪಿಗಳಲ್ಲ.ಭಾಗ್ಯವಂತರು By: Sunil Jayaprakash (Dec 16 2005 - 10:42pm)
- ಸೂಳ್ ಪಡೆಯಲಪ್ಪುದು ಕಾಣಾ: ಇಡೀ ಪದ್ಯ. By: olnswamy (Dec 16 2005 - 12:34pm)
- Re: ಸೂಳ್ ಪಡೆಯಲಪ್ಪುದು ಕಾಣಾ: ಇಡೀ ಪದ್ಯ. By: Sunil Jayaprakash (Dec 16 2005 - 1:49pm)
- ಪೂಜ್ಯ ನಮನಗಳು By: Sunil Jayaprakash (Dec 16 2005 - 12:57pm)
- ಉ: ಸಿಂಹದ ಮುಪ್ಪು ಪೂರ್ಣ ಪಾಠ By: shreekant.mishrikoti (Aug 25 2008 - 3:17pm)

RSS:
ಸಿಂಹದ ಮುಪ್ಪು ಪೂರ್ಣ ಪಾಠ
ಪಂಪದನ ಬಗ್ಗೆ ಆಸಕ್ತಿ ಹುಟ್ಟಿರುವುದಕ್ಕೆ ಅಚ್ಚರಿ ಮತ್ತು ಸಂತೋಷ.
ನೀವು ಬಯಸಿದ ಕಂದ ಪದ್ಯದ ಪಾಠ ಹೀಗಿದೆ: ಪಂಪ ಭಾರತ, ಆಶ್ವಾಸ ೧೦, ಪದ್ಯ ೧೯. ಮೈಸೂರು ವಿವಿ. ಪ್ರಕಟಣೆ, ವಿಕ್ರಮಾರ್ಜುನ ವಿಜಯಂ, ಭಾಗ ಎರಡು, ವರ್ಷ ೧೯೬೦ (ಎರಡನೆಯ ಮುದ್ರಣ). ಇಲ್ಲಿ ಶಕಟ ರೇಫ ಮತ್ತು ಱಳಗಳನ್ನು ಬಳಸಿಲ್ಲ.
ಸಿಂಗದ ಮುಪ್ಪುಂ ನೆಗಳ್ದೀ
ಗಾಂಗೇಯರ ಮುಪ್ಪುಮಿಳಿಕೆವಡೆಗುಮೆ ವನಮಾ
ತಂಗಗಳಿನಸುಹ್ರುಚ್ಚತು
ರಂಗ ಬಲಂಗಳಿನದೆಂದು ಮಂಗಾಧಿಪತೀ
ಕ್ಷಮೆ: ಮೂರನೆಯ ಸಾಲಿನಲ್ಲಿ ಸುಹ್ರುತ್ ಎಂದು ಬೆರಳಚ್ಚಿಸಿದ್ದೇನೆ. ವಟ್ರಸುಳಿಯ ಕೀಲಿಗಳು ಮರೆತಿದ್ದೇನೆ. ಅಲ್ಲಿ [ಹ]ಗೆ ವಟ್ರಸುಳಿ ಇದೆ ಎಂದು ತಿಳಿದುಕೊಳ್ಳಿ.
ಸಾಲುಗಳನ್ನು ಬಿಡಿಸಿಕೊಂಡರೆ ಹೀಗಾಗುತ್ತದೆ:
ಸಿಂಗದ ಮುಪ್ಪುಂ
ನೆಗಳ್ದ ಈ ಗಾಂಗೇಯರ ಮುಪ್ಪುಂ
ಇಳಿಕೆವಡೆಗುಮೆ?
ವನಮಾತಂಗಗಳಿನ್ ಅಸುಹ್ರುತ್ ಚತುರಂಗ ಬಲಗಳಿನ್
ಅದೆಂದುಮ್ ಅಂಗಾಧಿಪತೀ
ಇದರ ಮುಂದಿನ ಪದ್ಯವೂ ಸುಪ್ರಸಿದ್ಧವಾದದ್ದು:
ಕುಲಜರನ್ ಉದ್ಧತರಂ ಭುಜಬಲಯುತರಂ ಹಿತರನ್ ಈ ಸಭಾ ಮಧ್ಯದೊಳಗೆ ಅಗ್ಗಲಿಸಿದ ಮದದಿಂ
ನಾಲಗೆ ಕುಲಮಂ ತುಬ್ಬುವವೊಲು ಉಱದೆ ನೀಂ ಕೆಡೆ ನುಡಿವೈ
ಇದಕ್ಕೆ ಉತ್ತರವಾಗಿ ಕರ್ಣ ಹೇಳುವ ಮಾತು ಬಹು ಉಲ್ಲೇಖಿತ:
ಕುಲಮನೆ ಮುನ್ನಂ ಉಗ್ಗಡಿಸಿಪಿರೇಂ ಗಡ
ನಿಮ್ಮ ಕುಲಂಗಳ್ ಆಂತು ಮಾರ್ಮಲೆವವನನ್ ಅಟ್ಟಿ ತಿಂಬುವೆ
ಕುಲಂ ಕುಲಮಲ್ತು
ಚಲಂ ಕುಲಂ
ಗುಣಂ ಕುಲಂ
ಅಭಿಮಾನಮ್ ಒಂದೆ ಕುಲಂ
ಅಣ್ಮು ಕುಲಂ
ಬಗೆವಾಗಳೀ ಕಲಹದೊಳ್ ಅಣ್ಣ
ನಿಮ್ಮ ಕುಲಮ್ ಆಕುಲಮಂ ನಿಮಗುಂಟು ಮಾಡುಗುಂ
(ಇಲ್ಲಿ ಗದ್ಯ ರೂಪದಲ್ಲಿ ಬೆರಳಚ್ಚು ಮಾದಿದ್ದೇನೆ. ಇದು ಚಂಪಕ ಮಾಲಾ ಛಂದಸ್ಸಿನ ವ್ರುತ್ತ
ಕಠಿಣ ಪದಗಳು: ಉಗ್ಗಡಿಸು=ಜೋರಾಗಿ ಹೇಳಿಕೊಳ್ಳು
ಮಾರ್ಮಲೆವನ್=ವಿರೋಧಿ, ಮೇಲೆ ಬಿದ್ದು ಬರುವ ಶತ್ರು
ಅಣ್ಮು=ಪರಾಕ್ರಮ, ಶೌರ್ಯ