ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್'
- ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್' By: hpn (Aug 9 2007 - 9:26pm)
- ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್' By: hpn (Aug 9 2007 - 9:33pm)
- ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್' By: Abhaya Simha (Aug 6 2007 - 9:20pm)
- ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್' By: anivaasi (Aug 7 2007 - 5:44pm)
- ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್' By: muralihr (Aug 6 2007 - 2:01pm)
- ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್' By: anivaasi (Aug 7 2007 - 5:39pm)
- ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್' By: anivaasi (Aug 6 2007 - 2:32am)

RSS:
ಉ: ಬರ್ಗ್‌ಮನ್‌ನ 'ವಿಂಟರ್ ಲೈಟ್'
ಅಭಯ ಸಿಂಹ,
ನಿಮ್ಮ ಮೆಚ್ಚುಗೆಗೆ ಥ್ಯಾಂಕ್ಸ್.
ವಿಂಟರ್ ಲೈಟ್ ಚಿತ್ರವನ್ನು ಸ್ವೀಡಿಷ್ ಜನ ಮೊದಲು ತೆರೆ ಕಂಡಾಗ ಹೇಗೆ ತೆಗೆದುಕೊಂಡರೋ ಗೊತ್ತಿಲ್ಲ. ಇಂಡಿಯಾದ ಸಿನೆಮಾ ಜಗತ್ತಿನಲ್ಲಿ ಸತ್ಯಜಿತ್ ರಾಯ್ ಕೂಡ ಒಂದು ರೀತಿಯ ಅಬರೇಷನ್ ಇರಬಹುದಾ ಎಂದು ಒಮ್ಮೊಮ್ಮೆ ದಿಗಿಲಾಗುತ್ತದೆ.
ಒಂದು ಜನಾಂಗದ ಸಿನೆಮಾ ಆ ಜನಾಂಗದ ಉಳಿದೆಲ್ಲಾ ಬದುಕಿನ ವಿವರಗಳಿಗೂ ಕೊಂಡಿ ಹಾಕಿಕೊಂಡಿರುತ್ತದೆ ಅನ್ನುವುದಂತೂ ನಿಜ. ಸಿನೆಮಾವನ್ನು ಗಂಭೀರವಾಗಿ ತೆಗೊಳ್ಳುವ ಮನೋಭಾವದ ಕೊರತೆಯಿರುವಾಗ, ಅದನ್ನು ಗಂಭೀರವಾಗಿ ಚರ್ಚಿಸುವ ಕೊರತೆಯಿರುವಾಗ, ಗಂಭೀರವಾಗಿ ಚಿತ್ರ ಮಾಡುವವರ ಕೊರತೆ ತುಂಬಾ ಸಹಜ. ಗಂಭೀರ ಚಿತ್ರ-> ಗಂಭೀರ ಚರ್ಚೆ-> ಸಿನೆಮಾ ಬಗ್ಗೆ ಗಂಭೀರ ಮನೋಭಾವ ಎಂದು ಮತ್ತೊಂದು ದಿಕ್ಕಿನಲ್ಲೂ ನೋಡುವವರಿದ್ದಾರೆ. ಬಹುಶಃ ಎರಡು ರೀತಿಯಲ್ಲೂ ಒಂದಿಷ್ಟು ಸತ್ಯಾಂಶ ಇದ್ದೀತು. ಆದರೂ ನಮ್ಮ ಯುವಕರಿಗೆ, ನಡುವಯಸ್ಸಿನವರಿಗೆ ಮತ್ತು ಹಿರಿಯರಿಗೂ ಕೂಡ ಕೌಮಾರ್ಯದವರಿಗಾಗಿ ಮಾಡಿದ ಚಿತ್ರಗಳಷ್ಟೇ ನೋಡಲು ಸಿಕ್ಕುವುದು ವಿಪರ್ಯಾಸವಲ್ಲವೆ?
ಉಳಿದಂತೆ ಚರ್ಚೆ, ವಿಮರ್ಶೆ ಮತ್ತು ಇನ್ನಿತರ ಸಿನೆಮಾ ಸಂಬಂಧಿತ ಚಟುವಟಿಕೆ ಕೂಡ ಈ ರೀತಿಯ ಚಿತ್ರಗಳ ಸುತ್ತ ಸುತ್ತುವ ವ್ಯವಸ್ಥೆ ಏರ್ಪಟ್ಟಿರುವುದು ಕೂಡ ಗಮನಿಸಿ. ಮುಂಗಾರು ಮಳೆ ಬಗ್ಗೆಗಿನ ನನ್ನ ಯೋಚನೆಗಳು ಸಂಪದದಲ್ಲಿ ಒಂದು ಗಂಭೀರ ಚರ್ಚೆಗೆ ಬಾಗಿಲು ತೆರೆಯಬಹುದು ಅಂದಕೊಂಡಿದ್ದೆ. ಆದರೆ ಅದರ ಪ್ರತಿಕ್ರಿಯೆಗಳು ಮತ್ತಾವುದೋ ದಿಕ್ಕಿನತ್ತ ಬೆರಳು ತೋರಿದವು.
ಅಧ್ಯಯನದ ಬಗ್ಗೆ ಹೇಳುವುದಾದರೆ: ನಾನು ಓದಿದ 'Cinema and Urban Poor in South India' ಎಂಬ Sara Dickey ಎಂಬಾಕೆಯ ಪುಸ್ತಕ ಜನಪ್ರಿಯ ಚಿತ್ರ ಮತ್ತು ಅದರ ಪ್ರೇಕ್ಷಕರ ನಡುವಿನ ನಂಟನ್ನು ಅಧ್ಯಯನಪೂರ್ಣವಾಗಿ ಚರ್ಚಿಸುತ್ತದೆ. ಜನಪ್ರಿಯ ಚಿತ್ರಗಳು ಪ್ರೇಕ್ಷಕರ ಜತೆ ನಡೆಸುವ ಸಂವಾದದ ಬಗ್ಗೆ ಒಳನೋಟಗಳನ್ನು ಕೊಡುತ್ತದೆ. ೧೯೯೦ರ ಆಸುಪಾಸು ಮದುರೈ ನಗರದಲ್ಲಿ ನಡೆಸಿದ ಆಧ್ಯಯನವಾದರೂ ಅದರಲ್ಲಿರುವ ಹೊಳಹುಗಳು ಬೇರೆ ಭಾಷೆಗಳಿಗೂ ಅನ್ವಯಿಸುತ್ತದೆ ಮತ್ತು ಇಂದಿಗೂ ಆ ಸಂವಾದದ ಚಹರೆಗಳು ಹೆಚ್ಚಾಗಿ ಬದಲಾಗಿಲ್ಲ ಅನಿಸುತ್ತದೆ. ಅದರಲ್ಲಿ ಚರ್ಚಿತವಾಗಿರುವ ತಮಿಳು ಚಿತ್ರಗಳು, ಅದರ ಪ್ರೇಕ್ಷಕರು, ವಿಮರ್ಶಕರು, ನಿರ್ದೇಶಕರು ಎಲ್ಲರೊಡೆಗಿನ ಮಾತುಕತೆ ಈವತ್ತಿನ ಉಳಿದ ಭಾಷೆಯ ಚಿತ್ರೋದ್ಯಮದ ಬಗ್ಗೆಗೂ ಬೆಳಕು ಚೆಲ್ಲುವಂಥದು.