ಉ: ಬಾಗಲಕೋಟೆಯ ಸುತ್ತ ಮುತ್ತ - ೧
- ಉ: ಬಾಗಲಕೋಟೆಯ ಸುತ್ತ ಮುತ್ತ - ೧ By: gc (Aug 8 2007 - 10:45am)
- ಉ: ಬಾಗಲಕೋಟೆಯ ಸುತ್ತ ಮುತ್ತ - ೧ By: Khavi (Aug 8 2007 - 6:01pm)
- ಉ: ಬಾಗಲಕೋಟೆಯ ಸುತ್ತ ಮುತ್ತ - ೧ By: rajeshnaik111 (Aug 9 2007 - 10:36pm)
- ಉ: ಬಾಗಲಕೋಟೆಯ ಸುತ್ತ ಮುತ್ತ - ೧ By: Khavi (Aug 8 2007 - 6:01pm)
- ಉ: ಬಾಗಲಕೋಟೆಯ ಸುತ್ತ ಮುತ್ತ - ೧ By: imshettar (Aug 8 2007 - 10:16am)
- ಉ: ಬಾಗಲಕೋಟೆಯ ಸುತ್ತ ಮುತ್ತ - ೧ By: imshettar (Aug 8 2007 - 10:15am)
- ಉ: ಬಾಗಲಕೋಟೆಯ ಸುತ್ತ ಮುತ್ತ - ೧ By: ಸಂಗನಗೌಡ (Aug 7 2007 - 11:25pm)
- ಉ: ಬಾಗಲಕೋಟೆಯ ಸುತ್ತ ಮುತ್ತ - ೧ By: mananthprabhu (Aug 7 2007 - 10:29pm)
- ಉ: ಬಾಗಲಕೋಟೆಯ ಸುತ್ತ ಮುತ್ತ - ೧ By: hamsanandi (Aug 7 2007 - 10:04pm)
- ಉ: ಬಾಗಲಕೋಟೆಯ ಸುತ್ತ ಮುತ್ತ - ೧ By: hamsanandi (Aug 10 2007 - 2:45am)
- ಉ: ಬಾಗಲಕೋಟೆಯ ಸುತ್ತ ಮುತ್ತ - ೧ By: rajeshnaik111 (Aug 7 2007 - 10:17pm)
- ಉ: ಬಾಗಲಕೋಟೆಯ ಸುತ್ತ ಮುತ್ತ - ೧ By: hamsanandi (Aug 7 2007 - 10:08pm)

RSS:
ಉ: ಬಾಗಲಕೋಟೆಯ ಸುತ್ತ ಮುತ್ತ - ೧
ಐಹೊಳೆಯಲ್ಲಿ ೧೨೫ಕ್ಕೂ ಹೆಚ್ಚಿನ ದೇವಳಗಳಿವೆಯೆಂದು ಹೇಳಲಾಗುತ್ತಿದ್ದರೂ, ಇವುಗಳಲ್ಲಿ ಹೆಚ್ಚಿನವು ನಶಿಸಿಹೋಗಿವೆ. ಸುಂದರವಾಗಿ, ಆಕರ್ಷಕವಾಗಿ ಕಾಣುವಂತದ್ದು ಇಲ್ಲಿರುವ ದುರ್ಗಾ ದೇವಸ್ಥಾನ. ಈ ದೇವಸ್ಥಾನವನ್ನು ಚಾಳುಕ್ಯ ದೊರೆ ಎರಡನೇ ಪುಲಕೇಶಿಯ ಆಸ್ಥಾನದಲ್ಲಿದ್ದ ರವಿಕೀರ್ತಿ ಎಂಬವನು ನಿರ್ಮಿಸಿದ್ದ ಎಂದು ಹೇಳಲಾಗುತ್ತದೆ. ಚಾಳುಕ್ಯರು ಐಹೊಳೆಯಲ್ಲಿ ಮೊದಲು ದೇವಸ್ಥಾನಗಳನ್ನು ಕಟ್ಟಿಸಿದ್ದರು. ನಂತರ ಪಟ್ಟದಕಲ್ಲಿನ ದೇವಸ್ಥಾನಗಳನ್ನು ಕಟ್ಟಿಸಿದರು. ಐಹೊಳೆಯಲ್ಲಿರುವ ದೇವಸ್ಥಾನಗಳ ಶೈಲಿಯನ್ನು 'ಹಳೇ ಚಾಳುಕ್ಯ ಶೈಲಿ' ಎನ್ನಲಾಗುತ್ತದೆ. ಹೆಚ್ಚಿನ ವಿವರ ಇಲ್ಲಿದೆ.
ಒಂದು ತಿದ್ದುಪಡಿ ಹೇಳಬೇಕು.
ರವಿಕೀರ್ತಿ ನಿರ್ಮಿಸಿದ ಗುಡಿ ದುರ್ಗ ಗುಡಿಯಲ್ಲ (ಅಂದಹಾಗೆ. ಅದು ದುರ್ಗಾ ದೇವತೆಯ ಗುಡಿಯಲ್ಲ, ದುರ್ಗದ (ಕೋಟೆ) ಒಳಗೆ ಇರುವ ಗುಡಿ ಎಂಬ ಅರ್ಥದಲ್ಲಿ ಈ ಹೆಸರು ಬಂದಿರಬಹುದು)
ರವಿಕೀರ್ತಿ ನಿರ್ಮಿಸಿದ್ದು ಮೇಗುತಿ ಗುಡಿ. ಇದು ಐಹೊಳೆ ಹಳ್ಳಿಯ ಹೊರವಲಯದಲ್ಲಿರುವ ಜೈನ ದೇವಸ್ಥಾನ. ಎರಡು ಅಂತಸ್ತಿನದು. ಅಲ್ಲಿರುವ ರವಿಕೀರ್ತಿಯ ಶಾಸನದಿಂದ ಇದು ಬಹಳ ಪ್ರಸಿದ್ಧಿ ಪಡೆದಿದೆ. ಈ ಶಾಸನ ಹಲವು ಕಾರಣಗಳಿಂದ ಬಹಳ ಮುಖ್ಯವಾಗುತ್ತದೆ.
೧. ಕಲಿಯುಗ ಇಂತಹ ವರ್ಷದಿಂದ (೩೧೦೨ ಕ್ರಿ.ಪೂ) ಪ್ರಾರಂಭವಾಗುತ್ತೆ ಎಂದು ಹೇಳುವುದಕ್ಕೆ, ಮೊತ್ತಮೊದಲ ಶಾಸನಾಧಾರ ಇದು.
೨. ಸಂಸ್ಕೃತದ ಮಹಾಕವಿಯನ್ನು ಹೆಸರಿಸುವ ಮೊದಲ ಶಾಸನಾಧಾರ ಇದು. ಅವನ ಕಾಲ ನಿರ್ಣಯಕ್ಕೆ ಒಂದು ದೊಡ್ಡ ಆಧಾರ.
೩. ಶಾಸನ ಸಂಸ್ಜೃತದಲ್ಲಿದ್ದರೂ, ಲಿಪಿ ಕನ್ನಡದ್ದು.
-ಹಂಸಾನಂದಿ