ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ?

August 8, 2007 - 5:23pm — ismail

ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ?

ismail's picture

ವಿಕ್ರಮಾದಿತ್ಯನಿಗೆ ನಿರಂತರವಾಗಿ ಕಥೆ ಹೇಳುತ್ತಾ ಹೋದ ಬೇತಾಳನಿಗೇಕೆ ಪುಸ್ತಕ ಖರೀದಿಸುವ, ಆಯುವ ಚಿಂತೆ? ತಾನು ಹೇಳಿದ ಕಥೆಗಳನ್ನೆಲ್ಲಾ ಪುಸ್ತಕವಾಗಿಸುವುದು ಹೇಗೆ ಎಂದು ಕೇಳಿದ್ದರೆ ಲೈಬ್ರರಿಗೆ ಹಿಡಿದ ಗೆದ್ದಲುಗಳಂಥ ಪ್ರಕಾಶಕರೇ ಹೇಳಿಕೊಡುತ್ತಿದ್ದರು. ವಿಷಯಾಂತರ ಬೇಡ ಎಂಬ ಕಾರಣಕ್ಕೆ ಬೇತಾಳನ ಪ್ರಶ್ನೆಗಳಿಗೆ ಉತ್ತರ ಕೊಡಲು ಪ್ರಯತ್ನಿಸುತ್ತೇನೆ. ಈ ಪ್ರಶ್ನೆಗಳನ್ನು ಬೇತಾಳ ನನಗೆ ನೇರವಾಗಿ ಕೇಳದೇ ಇರುವುದರಿಂದ ತಪ್ಪು ಉತ್ತರ ಹೇಳಿದರೂ ತಲೆ ಒಡೆದು ಸಾವಿರ ಹೋಳಾಗಲಾರದು ಎಂಬ ಧೈರ್ಯವಿದೆ.

1.ಪುಸ್ತಕದ ಕವರ್ ಪೇಜ್, ಟೈಟಲ್ ಅದಕ್ಕಿರುವ ಟ್ಯಾಗ್ ಲೈನ್ ಎಲ್ಲವನ್ನೂ ನೋಡಿದ ನಂತರವೇ ನಾನು ಪುಸ್ತಕ ಖರೀದಿಸುವುದು. ಎಷ್ಟೋ ಬಾರಿ ಟೈಟಲ್ ಚೆನ್ನಾಗಿದೆ ಎಂಬ ಕಾರಣಕ್ಕೆ ಪುಸ್ತಕ ಖರೀದಿಸಿ ಖುಷಿಯಾದುದೂ ಇದೆ. ನಾನು ಮಾರ್ಕ್ವೆಜ್ ನ ಕ್ರಾನಿಕಲ್ ಆಫ್ ಡೆತ್ ಪೋರ್ ಟೋಲ್ಡ್ ಖರೀದಿಸಿದಾಗ ಮಾರ್ಕ್ವೆಜ್ ಯಾರೂ ಎಂದೇ ಗೊತ್ತಿರಲಿಲ್ಲ. ಬರೇ ಟೈಟಲ್ ನೋಡಿ ಆಕರ್ಷಿತನಾಗದೇ ಹೋಗಿದ್ದರೆ ನನಗೆ ಆ ಲೇಖಕನ ಬಗ್ಗೆ ತಿಳಿಯಲು ಹಲವಾರು ವರ್ಷಗಳು ಬೇಕಾಗುತ್ತಿತ್ತು.  ಉಂಬರ್ಟೋ ಇಕೋನ ಪುಸ್ತಕಗಳನ್ನು ಅವನ ಹೆಸರನ್ನು ನೋಡಿ ಖರೀದಿಸಿದ್ದೇನೆ. ಇವತ್ತಿನವರೆಗೂ ಅವನು ನನಗೆ ನಿರಾಶೆ ಹುಟ್ಟಿಸಲಿಲ್ಲ.

2.ಪುಸ್ತಕದ ಪೀಠಿಕೆಯನ್ನು ಓದುವುದು ಅನುಕೂಲಕರವೇನೋ ಹೌದು. ಆದರೆ ಇದು ಯಾವಾಗಲೂ ಪ್ರಯೋಜನಕ್ಕೆ ಬರುತ್ತದೆ ಎಂದು ಹೇಳಲು ಬರುವುದಿಲ್ಲ. ಪ್ರಖ್ಯಾತರು ಮುನ್ನುಡಿ ಬರೆದ ಅನೇಕ ಪುಸ್ತಕಗಳನ್ನು ಖರೀದಿಸಿ ಇಂಗು ತಿಂದ ಮಂಗನಂತಾಗಿದ್ದೇನೆ.

3.ಲೇಖಕರ ಹೆಸರು ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತದೆ. ಬೇರೊಬ್ಬರು ಲೇಖಕರು ಉಲ್ಲೇಖಿಸಿದ್ದರೆ, ಇಲ್ಲವೇ ನಾವೇ ಅವರ ಇತರ ಕೃತಿಗಳನ್ನು ಓದಿದ್ದರೆ ಉಪಕಾರಕ್ಕೆ ಬರುತ್ತದೆ. ಪಾವ್ಲೋ ಕೊಯೆಲ್ಹೋನ ವೆರೋನಿಕಾ ಡಿಸೈಡ್ಸ್ ಟು ಡೈ ಓದಿ ಅವನ ಇತರ ಪುಸ್ತಕಗಳನ್ನೆಲ್ಲಾ ಖರೀದಿಸಿ ಮಂಗನಾದ ಕಥೆ ಬಹಳ ದೊಡ್ಡದು. ಅದನ್ನು ಇಲ್ಲಿ ಹೇಳುವುದಿಲ್ಲ.

ವಾಸ್ತವದಲ್ಲಿ ನಾನು ಪುಸ್ತಕ ಆರಿಸಲು ಈ ಎಲ್ಲಾ ತಂತ್ರಗಳನ್ನೂ ಒಟ್ಟಿಗೇ ಬಳಸುತ್ತೇನೆ. ಇಷ್ಟರ ಮೇಲೆ ಇನ್ಟೂಷನ್ ಕೂಡಾ ಕೆಲಸ ಮಾಡುತ್ತದೆ. ಬ್ಲರ್ಬ್ ಓದಿ, ಮಧ್ಯೆ ಯಾವುದೋ ಪುಟ ಓದಿ ಖರೀದಿಸಿದ ಅನೇಕ ಪುಸ್ತಕಗಳು ಹೊಸತೊಂದು ಜಗತ್ತನ್ನೇ ತೋರಿಸಿಕೊಟ್ಟಿವೆ. ವಿಮರ್ಶೆಗಳನ್ನು ಓದಿ ಖರೀದಿಸುವುದೂ ಇದೆ. ಇದರಲ್ಲಿಯೂ ರಿಸಲ್ಟ್ 50-50 ಮಾತ್ರ.

ಇಸ್ಮಾಯಿಲ್ ನನ್ನ ಬ್ಲಾಗ್: http://ismail.in

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ? By: betala (7 replies) August 7, 2007 - 7:43pm
  • ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ? By: pallavi.dharwad (May 26 2008 - 1:00pm)
  • ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ? By: sankul (Sep 28 2007 - 2:16pm)
  • ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ? By: gc (Aug 7 2007 - 10:03pm)
    • ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ? By: ismail (Aug 8 2007 - 5:23pm)
  • ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ? By: hpn (Aug 7 2007 - 9:48pm)
  • ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ? By: mahesha (Aug 7 2007 - 8:01pm)
    • ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ? By: shreekant.mishrikoti (Aug 8 2007 - 1:15pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಕನ್ನಡಿಗ ಅರವಿಂದ ಅಡಿಗಗೆ ಬೂಕರ್ ಗರಿ
    October 16, 2008 - 12:50pm
  • bvenkatraya
    ಉ: ಗೆದ್ದೆತ್ತಿನ ಬಾಲ
    October 16, 2008 - 12:39pm
  • gurubaliga
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:38pm
  • mahesha
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:34pm
  • mahesha
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:32pm
  • gurubaliga
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:29pm
  • mowna
    ಉ: ಕನ್ನಡಿಗ ಅರವಿಂದ ಅಡಿಗಗೆ ಬೂಕರ್ ಗರಿ
    October 16, 2008 - 12:10pm
  • ASHOKKUMAR
    ಉ: ಸೈಕಲ್ ರಿಕ್ಷಾಗೆ ಸೌರಶಕ್ತಿ
    October 16, 2008 - 12:05pm
  • gurubaliga
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:05pm
  • mahesha
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:01pm
ಇನ್ನಷ್ಟು


"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator