ಸ್ವಂತ ಅನುಭವ
- ಸ್ವಂತ ಅನುಭವ By: Sunil Jayaprakash (Dec 20 2005 - 10:30pm)
- ಸ್ವಂತ ಅನುಭವ ೨ By: Sunil Jayaprakash (Dec 21 2005 - 5:30pm)
- ಸ್ವಂತ ಅನುಭವ ೩ By: Sunil Jayaprakash (Dec 21 2005 - 10:44pm)
- ಇದು ಏಕೆ ಹೀಗೆ? By: tvsrinivas41 (Dec 21 2005 - 7:58pm)
- ನಿರೀಕ್ಷೆ By: tvsrinivas41 (Dec 21 2005 - 9:39am)
- ಸ್ವಂತ ಅನುಭವ ೨ By: Sunil Jayaprakash (Dec 21 2005 - 5:30pm)

RSS:
ಸ್ವಂತ ಅನುಭವ
ಶ್ರೀನಿವಾಸರೇ, ನೀವು ಬರೀ ಕವನವಷ್ಚೇ ಅಲ್ಲ, ನಿರೂಪಣೆಯನ್ನೂ ಚೆನ್ನಾಗೆ ಬರೆಯುತ್ತೀರಿ.
ನಿಜವಾಗಿಯೂ ನಿಮ್ಮ ಮಗನ ಶಾಲೆಯವರು ಮಾಡಿದ ಕೆಲಸ ಉಚಿತವಾಗೇ ಇದೆ. ಓದಿಗಿಂತ ಹೆಚ್ಚಾಗಿ ನಮಗೆ ಬೇಕಿರುವುದೇ ಇಂತಹ ಚಟುವಟಿಕೆಗಳು ಹಾಗು ಒಡನಾಟಗಳು (exposure ಗೆ ಸಮನಾಗಿ ಉಪಯೋಗಿಸಿರುವೆ. ಸರಿಯೇ?).
ನನ್ನ ಸ್ವಂತ ಅನುಭವವನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ನನಗೆ ಹತ್ತನೇ ಇಯತ್ತಿನ ತನಕ ಸೈಕಲ್ ತುಳಿಯುವುದಕ್ಕೂ ಬರುತ್ತಿರಲಿಲ್ಲ. ಅನಿವಾರ್ಯ ಕಾರಣಗಳಿಗೆ ಕೇವಲ ಒಂದು ವರ್ಷದ ಮಟ್ಟಿಗೆ ನಾವು ತುಮಕೂರಿಗೆ ಮನೆ ಸಾಗಿಸಬೇಕಾಯಿತು. ನನ್ನ ಜೀವನದಲ್ಲಿ ಆ ಒಂದು ವರ್ಷ ನನ್ನ ಬಾಳ ಅಧ್ಯಾಯದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಪುಟಗಳಾದವು.
ತುಮಕೂರು ನನ್ನ ಜೀವನಕ್ಕೆ ಭದ್ರ ಬುನಾದಿಯನ್ನೊದಗಿಸಿದ ಕಲ್ಪತರು ನಾಡು. ನನ್ನ ಶಾಲೆ ಸ್ವಲ್ಪ ದೂರದಲ್ಲಿದ್ದ ಕಾರಣ ನನ್ನ ತಂದೆ ಒಂದು ಸೈಕಲ್ ಕೊಡಿಸಿದರು. ಸಣ್ಣವನಿದ್ದಾಗ ನನ್ನ ಅಣ್ಣ ಒಂದೆರೆಡು ಬಾರಿ ಕೈಹಿಡಿದು ಬಾಡಿಗೆ ಸೈಕಲ್ ಹೊಡಿಸಿದ್ದ. ಆದರೆ ನಾನೇನು ಒಳ್ಳೆಯ ಅಭ್ಯಾಸ ಮಾಡಿರಲಿಲ್ಲ. ಈಗ ನೋಡಿದರೆ, ನನ್ನ ಬಳಿ ಸೈಕಲ್ ಇದೆ, ಹೇಳಿಕೊಡುವವರು ಯಾರು ಇಲ್ಲ. ಏನು ಮಾಡುವುದು. ಸರಿ ನಮ್ಮ ಮನೆಬಳಿಯಿದ್ದ ಖಾಲಿ ಸೈಟಿನಲ್ಲಿ ನಾನೇ ಅಭ್ಯಾಸ ಆರಂಭಿಸಿದೆ. ಏನೊ, ಸುಮಾರಾಗಿ ಕಲಿತೆ. ಒಂದು ದಿನ, ಸರಿ ನೋಡು ಸಕತ್ತಾಗಿ ಸೈಕಲ್ ತುಳಿತೀನಿ ಅಂತ ನಮ್ಮಣ್ಣನ್ನ ಕರೆದುಕೊಂಡು ಹೋದೆ, ಎರಡು ಹೆಜ್ಜೆ ಹೋಗುವಷ್ಟರಲ್ಲಿ ಯಾರಿಗೊ ಡಿಕ್ಕಿ ಹೊಡೆದೆ. ಅವರು ಅದೇ ತಾನೆ ಹೊಸ ಪ್ಯಾಂಟ್ ಧರಿಸಿ ಹೊರ ಬಂದಿದ್ದರು ಅವರ ಪ್ಯಾಂಟ್ ಹರಿಯಿತು. ನನ್ನ ಕೈಯಲ್ಲಿ ರಕ್ತ ಚಿಮ್ಮಿತು.ಇದಾಗಿದ್ದು ಭಾನುವಾರ. ನಮ್ಮ ತಂದೆ ಹೇಳಿದರು, ಎದೆಗುಂದಬೇಡ ಎಂದು. ಮಾರನೇ ದಿನವೇ ನಾನು ಸೈಕಲ್ ತುಳಿದು ಶಾಲೆಗೆ ಹೊರಟೆ. ಮಾರ್ಗದಲ್ಲೇನಾಯಿತು ಎಂಬುದನ್ನ ನಾಳೆ ತಿಳಿಸುತ್ತೇನೆ.
____________________________
ಮುಂದೆ ಹೋಗು ಇಲ್ಲವೆ ಪಕ್ಕಕ್ಕಾದ್ರು ಬಾ. ಹಿಂದಕ್ಕಂತು ಬೇಡವೋ ಮಗು.
ಮಗು ಮಗು, ನಗು ನಗು, ನಗುವೇ ಜೀವನ.