ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ
- ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ By: mahesha (Aug 15 2007 - 11:02am)
- ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ By: betala (Aug 15 2007 - 6:49pm)
- ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ By: mahesha (Aug 15 2007 - 7:19pm)
- ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ By: betala (Aug 15 2007 - 7:26pm)
- ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ By: mahesha (Aug 15 2007 - 9:20pm)
- ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ By: betala (Aug 15 2007 - 7:26pm)
- ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ By: mahesha (Aug 15 2007 - 7:19pm)
- ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ By: betala (Aug 15 2007 - 6:49pm)

RSS:
ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ
ಬಂಬಿಡದ ಬಂಬೇತಾಳಣ್ಣ..!!!
ಈಗ ನಂನ ಒಳನಿಸಿಕೆಯಲ್ಲಿ ಈ ಕನ್ನಡಿಗನಿಗೆ ಸ್ವತಂತ್ರ ಸಿಕ್ಕಿಲ್ಲ.!! ನನಗೆ ಎಂದು ಸಂಪೂರ್ಣ ಸ್ವಾತಂತ್ರ್‍ಯ ಸಿಕ್ಕುವುದು ಅಂದ್ರೆ?
ಎಂದು
೧) ನನಗೆ passport ಕನ್ನಡದಲ್ಲಿ ಕೊಡ್ತಾರೆ.
೨) ನಾನು ಎಂದು ಗಳಿಕೆ-ತೆರಿಗೆಯನ್ನು ಕನ್ನಡದಲ್ಲಿ ಅರ್ಜಿತುಂಬಿ ಕೊಡ್ತೀನಿ
೩) ಎಂದು ಒಬ್ಬ ಕನ್ನಡೊನು/ಳು ಕನ್ನಡದಲ್ಲಿ ಆಣೆ ( ಪ್ರಮಾಣವಚನ ) ಮಾಡಿ, ಪ್ರಧಾನಮಂತ್ರಿ, ರಾಷ್ಟ್ರಪತಿ ಆಗ್ತಾನೆ/ಳೆ
೪) ಎಂದು ಇಂಡಿಯಾ ದೇಶವು ಯುರೊಪಿಯನ್ ಯುನಿಯನ್ ಅಂತ, ಮಲೇಸಿಯದಂತೆ, ಸಿಂಗಾಪುರದಂತೆ, ತೆಂಕಣಾಪ್ರಿಕದಂತೆ, ಅಮೇರಿಕದಂತೆ ಕನ್ನಡದಲ್ಲೂ ಕೇಂದ್ರ ಸರಕಾದ ಕಡತಗಳ ( ಕಡಮೆ ಅಂದರೆ ನಮ್ಮ ದೇಸದ ಎಲ್ಲ ಮಂದಿಗೆ, ಕನ್ನಡಿಗರಿಗೆ ನಂಟಾದವು ) ಬಂದ ನಾಳು.
ನಮ್ಮ ಕನ್ನಡ ಸಿನಿಮಗಳಿಗೆ censor ceritificate ಯಾಕೆ ಇಂಗಲೀಸಲ್ಲಿ? ಕನ್ನಡದಾಗೇ ಇದು ಮಕ್ಕಳ ಸಿನಿಮ, ಇದು ಕುಟುಂಬದ ಸಿನಿಮ, ಇದು ದೊಡ್ಡೊರ ಸಿನಿಮ, ಇದು ಪೋಲಿ ಸಿಮಿಮ ಅಂನಕ್ಕೆ ಏನ್ ದಾಡಿ.
೫) ಕನ್ನಡದಲ್ಲಿ ಏನು ಬೇಕಾದರೂ ಓದಬಹುದು.
ನನಗೆ ಇನ್ನು ಸಂಪೂರ್ಣ ಸ್ವತಂತ್ರವಿಲ್ಗ. ನಾನು ಈ ದೇಸದ ಎರಡನೇ ದರ್ಜೆಯ ಸೀಮಿತ ಸ್ವಾತಂತ್ರ್‍ಯವುಳ್ಳ, lingually, enthnically neglected minority citizen.
ಹೊಟ್ಟೆಯುರಿತದೆ. ಡೆಲ್ಲಿಯಿಂದ ಚಿಕಾಗೋಗೆ ಹೋಗೋವಾಗ, ನಮ್ಮ ದೇಸದ immigration officer ನಂಗೆ ಸರಿಯಾಗಿ ಹಿಂದಿ ಬರಲ್ಲ ಅಂತ ಸಿಟ್ಟು ಮಾಡಿಕೊಂಡು ಕಡೆಗಣ್ಣಿನಿಂದ ನೋಡಿದಾಗ. ಏನು ನಂಗೆ ನನ್ನ ತಾಯ್ನುಡಿ ಕನ್ನಡ ಬರಲ್ವಾ? ನಮ್ಮವ್ವನ ಮಾತು ಕನ್ನಡ ಆದವೊತ್ತಿಗೆ ನಾವು ಕಡಮೆಯಾ?
ಹೊಟ್ಟೆಯುರಿತದೆ, ಯಾವಾಗ ನಾನು, ನನ್ನ ಗೆಳೆಯರು ೫೦ ಸಾವಿರ, ೨ ಲಕುಸ ಗಳಿಕೆ-ತರಿಕೆ ಕಟ್ಟುವಾಗ ಇಂಗಲೀಸು ಇಲ್ಲ ಹಿಂದಿಯಾಗೆ ಅರ್ಜಿತುಂಬಬೇಕಂತೆ. ಕನ್ನಡದಲ್ಲಿ ಯಾಕೆ ನಮಗೆ ಅರ್ಜಿತುಂಬಕ್ಕೆ ಅವಕಾಶವಿಲ್ಲ? ನಮ್ಮ ರೊಕ್ಕ ಬೇಕು, ನಮ್ಮ ನೆಲ ಬೇಕು, ನಮ್ಮ ದುಡಿಮೆ ಬೇಕು, ಆದ್ರೆ ನಮ್ಮ ನುಡಿಬೇಡ್ವಾ?
ಕರುಳು ಕಿವುಚ್ತದೆ, ಯಾವಾಗ ಕನ್ನಡನಾಡಿನ ಒಬ್ಬ ಪ್ರಧಾನಿ ಆದರೂ, ಅವನಿಗೆ ಹಿಂದಿ ಬರಲ್ಲ, ಅಂತ national media ಹೀಗಳೆದಾಗ. ಅವನಿಗೆ ಯಾಕೆ ಹಿಂದಿ ಬರಬೇಕು? ಅವನಿಗೆ ಯಾಕೆ ಇಂಗ್ಲೀಸ್ ಬರಬೇಕು? ನಾವು ಅವನಿಗೆ vote ಹಾಕಿತಾನೆ ಕಳಿಸಿದ್ದು? ನಮ್ಮ vote ಉತ್ತರ ಪ್ರದೇಶ, ಬಿಹಾರದೊರ ಓಟಿಗಿಂತ ಕೀಳೇ, ಕಡಮೆಯೇ?
ನಮ್ಮಾಳು ಲಾಲೂ ಮುಂತಾದವರಿಂತ ಯಾವುದರಲ್ಲಿ ಕಡಮೆ, ಇವರೇನು ಓದಿಲ್ವಾ? ಮಂದಿ ಮೆಚ್ಚು ಪಡೆದಿಲ್ವಾ? ಹಿಂದಿ ಬರದೇ ಇರೋದೇ ಒಂದು ಕೊರತೆಯಂತೆ ಉತ್ತರದ ಗದ್ದುಗೆಗೆ!!
ಈ ಎಲ್ಲ ಸಂಕಟದಿಂದಲೇ ಬೇತಾಳಯ್ಯ ನಾವು ಸುಮಾರು ೪೦-೫೦ ಮಂದಿ ಗೆಳೆಯರು ಸುಮಾರು ಏಡುಗಳಿಂದ ಈ ಯಾವ ಸ್ವತಂತ್ರ ದಿನಕ್ಕೂ, ಗಣತಂತ್ರ ದಿನಕ್ಕೂ ಸಂಭ್ರಮ ಪಡಲ್ಲ. ಇದು ನಮಗೆ ವಿಶೇಷವೂ ಅಲ್ಲ. ನಮ್ಮ ಸ್ವತಂತ್ರ ಶ್ರೀಮಂತ ಸುಸಂಸ್ಕೃತ ಮೈಸೂರು ಕನ್ನಡ ರಾಷ್ಟ್ರ ತನ್ನ ಸ್ವಾತಂತ್ರ್‍ಯ ಕಳೆದುಕೊಂಡ ದಿನ. [ ನಮ್ಮ ತಾತನಂತೋ ಪ್ರತೀ ಸ್ವತಂತ್ರದಿನಾಚರಣೆಯಂದೂ ಈ ಶಂಖ ಊದದೇ, ನಮ್ಮ ಮೈಸೂರು ಸಂಸ್ಥಾನ ಅಂತ ಕೊರಗದೇ ಇದ್ದದ್ದು ನೋಡಿಲ್ಲ ನಾನು ] ( ಈಗಿರುವ ಕರ್ನಾಟಕಪೂರ್ತಿ ಮೈಸೂರು ಕನ್ನಡ ದೇಶವೇ ಆಗಿತ್ತು, 1799ರಲ್ಗಿ ಬ್ರಿಟೀಶರು ನಮ್ಮ ಮೈಸೂರು ಕನ್ನಡ ರಾಷ್ಟ್ರವನ್ನು ಆಕ್ರಮಿಸಿ, ಟಿಪ್ಪಿವನ್ನು ಸೋಲಿಸಿ, ಮರಾಠರು, ನಿಜಾಮರು, ಮತ್ತು ಬ್ರಿಟೀಶರು ಹಂಚಿಕೊಂಡರು, ಏಕೀಕರಣದಿಂದ ಕನ್ನಡದೇಶಕ್ಕೆ ಯಾವ ಹೊಸ ಜಾಗ ಬರಲಿಲ್ಲ, ಕಳೆದು ಹೋದವು ಬಂದವಷ್ಟೇ )
ಇವೊತ್ತು ಏನ್ಗುರುನಲ್ಲೂ ಇದೇ ಬಂದೈತೆ( ನಾನು ಏನ್ಗುರುನಾಗೆ ಬರೆಯಲ್ಲ. ಇದು ದಿಟ ).
ಅದಕ್ಕೆ ನಾನು ಕೊಳಂಬೆಯವರ ಪದ್ಯವನ್ನು ಮಾರ್ಮಿಕವಾಗಿ ಹಾಕಿ ಸುಮ್ಮನಾದೆ. ನನಗೆ ಈ ಪೊಳ್ಳು, ಎರಡನೇ ದರ್ಜೆ ಪ್ರಜೆಪಟ್ಟಕ್ಕೆ , ನನ್ನ ನುಡಿಗೆ ಎರಡನೇ ದರ್ಜೆಯ ಪಟ್ಟಕ್ಕೆ ದುಃಖ, ಬೇಸರ, ಸಿಟ್ಟು, ರೋಸು ಎಲ್ಲವೂ ಇದೆ. ಆದರೆ ಈ ಪ್ರಜೆಪಟ್ಟ ಬೇಕಿಲ್ಲ ಅನ್ನಕ್ಕೆ ಆಗಲ್ಲ, ನಮ್ಮ ದೇಶ ಅಂತ ನಂಟು ಇದ್ದೇ ಇದೆಯಲ್ಲ.
ಆದ್ರೂ ನಮ್ಮ ದೇಶವನ್ನು ಬೈಯೋದು ತಪ್ಪು, ನಮ್ಮ ದೇಶಕ್ಕೆ ಮೋಸ ಮಾಡೋದು ತಪ್ಪು ಅಂತಲೂ ಇದೆ.