ಉ: ಪಚ್ಚೆಕಲ್ಲು ಪಾಣಿ ಪೀಠ...
- ಉ: ಪಚ್ಚೆಕಲ್ಲು ಪಾಣಿ ಪೀಠ... By: shrivalli (Aug 21 2007 - 3:13pm)
- ಉ: ಪಚ್ಚೆಕಲ್ಲು ಪಾಣಿ ಪೀಠ... By: Sunil Jayaprakash (Aug 21 2007 - 3:30pm)
- ಉ: ಪಚ್ಚೆಕಲ್ಲು ಪಾಣಿ ಪೀಠ... By: mahesha (Aug 21 2007 - 3:37pm)
- ಉ: ಪಚ್ಚೆಕಲ್ಲು ಪಾಣಿ ಪೀಠ... By: ಸಂಗನಗೌಡ (Aug 21 2007 - 5:46pm)
- ಉ: ಪಚ್ಚೆಕಲ್ಲು ಪಾಣಿ ಪೀಠ... By: sindhu (Aug 21 2007 - 8:29pm)
- ಉ: ಪಚ್ಚೆಕಲ್ಲು ಪಾಣಿ ಪೀಠ... By: shrivalli (Aug 22 2007 - 3:06pm)
- ಉ: ಪಚ್ಚೆಕಲ್ಲು ಪಾಣಿ ಪೀಠ... By: girish.rajanal (Dec 11 2007 - 6:15pm)
- ಉ: ಪಚ್ಚೆಕಲ್ಲು ಪಾಣಿ ಪೀಠ... By: ಶ್ರೀನಿವಾಸ ವೀ. ಬ೦ಗೋಡಿ (Dec 12 2007 - 4:57pm)
- ಉ: ಪಚ್ಚೆಕಲ್ಲು ಪಾಣಿ ಪೀಠ... By: girish.rajanal (Dec 11 2007 - 6:15pm)
- ಉ: ಪಚ್ಚೆಕಲ್ಲು ಪಾಣಿ ಪೀಠ... By: shrivalli (Aug 22 2007 - 3:06pm)
- ಉ: ಪಚ್ಚೆಕಲ್ಲು ಪಾಣಿ ಪೀಠ... By: sindhu (Aug 21 2007 - 8:29pm)
- ಉ: ಪಚ್ಚೆಕಲ್ಲು ಪಾಣಿ ಪೀಠ... By: ಸಂಗನಗೌಡ (Aug 21 2007 - 5:46pm)
- ಉ: ಪಚ್ಚೆಕಲ್ಲು ಪಾಣಿ ಪೀಠ... By: mahesha (Aug 21 2007 - 3:37pm)
- ಉ: ಪಚ್ಚೆಕಲ್ಲು ಪಾಣಿ ಪೀಠ... By: Sunil Jayaprakash (Aug 21 2007 - 3:30pm)
- ಉ: ಪಚ್ಚೆಕಲ್ಲು ಪಾಣಿ ಪೀಠ... By: navidyarthi (Aug 21 2007 - 2:44pm)
- ಉ: ಪಚ್ಚೆಕಲ್ಲು ಪಾಣಿ ಪೀಠ... By: mahesha (Aug 20 2007 - 3:39pm)

RSS:
ಉ: ಪಚ್ಚೆಕಲ್ಲು ಪಾಣಿ ಪೀಠ...
ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು.
ಹರಿಗೋಲು ಇದೇ ಅಂತ ಗೊತ್ತಿದ್ದರೂ ಅದನ್ನು ಹಿಡಿದು ಸಾಗುವ ಕೌಶಲ್ಯ, ತಾಳ್ಮೆ ಎಲ್ಲ ಕಲಿಯಬೇಕಿದೆ ನಾನು. ದಾರಿ ದೂರವಿದೆ.
ಮೊನ್ನೆ ನನ್ನ ಅತ್ತೆ ಮಾವನವರೊಡನೆ ಅವರ ಭಜನೆ ಗುಂಪಿನ ವಾರ್ಷಿಕೋತ್ಸವಕ್ಕೆ ಹೋಗಿದ್ದೆ. ೧೨-೧೩ ವರ್ಷಗಳ ನಂತರ ಅನುಭವಿಸಿದ ಆ ಆಂಬಿಯೆನ್ಸ್ ನನ್ನನ್ನ ಹಳೆಯ ಹಳದಿಹಳದಿ ಫೋಟೋಗಳಂತಹ ನೆನಪುಗಳಲ್ಲಿ ತೇಲಿಬಿಟ್ಟಿತು. ಮತ್ತು ಆ ಹಿರಿಯಜೀವಗಳು ತಮ್ಮ ತಮ್ಮ ಬದುಕಿನ ಎಲ್ಲ ಎದುರುಅಲೆಗಳನ್ನ ಪುಟ್ಟ ತಾಳ, ಶನಿವಾರ ಸಂಜೆಯ ಅರ್ಧ ಮುಕ್ಕಾಲು ಗಂಟೆ ಭಜನೆಯ ಹರಿಗೋಲು ಹಿಡಿದು ದಾಟುತ್ತ ಹೋಗುವ ವಿಷಯ ವಿಶಿಷ್ಟವೆನಿಸಿತು. ಒಳನೋಟದ ಹರಿವೊದಗಿಸಿತು.
ನನಗೆ ಈ ಸಂಜೆಯ ಭಜನೆಯ ಧಾರ್ಮಿಕತೆಗಿಂತಲೂ ಅದರಲ್ಲಿ ಪಡಿ ಮೂಡಿರುವ ಬದುಕುವ ರೀತಿ, ಶಿಸ್ತು, ದಿನದ ಎಲ್ಲ ಕೆಲಸ,ಒತ್ತಡ, ಹಾರಾಟಗಳ ನಡುವೆ ಇಳಿಸಂಜೆಯಲ್ಲಿ ಹೊಳೆಯುವ ಒಂದಿಷ್ಟು ಪ್ರಶಾಂತ ನಿಮಿಷಗಳು ತುಂಬ ಹಿಡಿಸಿದೆ. ಹಳೆಯದೇನನ್ನೋ ಕಳಕೊಂಡ ಹಳಹಳಿಯಲ್ಲ ಈ ಬರಹ. ಇಂದಿನ ನಮ್ಮ ಜೀವನದರೀತಿಯಲ್ಲಿ ಇಂತದೊಂದು ಅಭಿವ್ಯಕ್ತಿ ಎಷ್ಟು ಅಪ್ಯಾಯಮಾನ ಅನ್ನುವುದನ್ನು ಹೇಳಬೇಕಿತ್ತು ನನಗೆ.
ಬೆನಕ ಬೆನಕಾ ಏಕದಂತಾ
ಪಚ್ಚೆಕಲ್ಲು ಪಾಣಿ ಪೀಠಾ
ಮುತ್ತಿನುಂಡೆ ಹೊನ್ನಗಂಟೆ
ಯಿಂದ
ಒಪ್ಪುವಾ ವಿಘ್ನೇಶ್ವರ ದೇವರಿಗೆ
ಇಪ್ಪತ್ತೊಂದು ನಮಸ್ಕಾರಗಳು..
ಎಂಬುದು ನನ್ನ ಮತ್ತು ತಮ್ಮನ ಬಾಲ್ಯದ ಸಂಜೆಗತ್ತಲಲ್ಲಿ ಹೊಳೆದು ಬೆಳಗಿದ ಶ್ಲೋಕ. ಈಗಲೂ ಅಪ್ಪನ ಸಂಜೆಗಳ ಸಂಗಾತಿ. ನಾನು ಆಚರಣೆಗಳ ತಿರುಳಿಗಿಂತಾ ಆ ಪೂಜೆ ಮತ್ತು ಪೂಜಾಮೂರ್ತಿಗಳನ್ನು ನಂಬಲಾಗದೆ, ನಂಬದಿರಲೂ ಆಗದೆ, ಕತ್ತಲು ಬೆಳಕುಗಳ ದಾರಿ ಮಧ್ಯದ ಅಲೆಮಾರಿ..
ಈ ಶ್ಲೋಕವನ್ನು ಬೇರೆ ಬೇರೆ ಭಾಗಗಳ ಜನರು ಬೇರೆಬೇರೆಯಾಗಿ ಹೇಳುತ್ತಾರೆ. ನಾವು ಸಣ್ಣವರಿದ್ದಾಗ ಅದನ್ನೆಲ್ಲ ಕೇಳಿ, ನಮ್ಮ ದಿನದ ಶ್ಲೋಕದಲ್ಲಿ ಅಚಾನಕ್ ಆಲ್ಟರೇಶನ್ ಮಾಡಿಕೊಂಡು ಖುಷಿ ಪಟ್ಟ ಕ್ಷಣಗಳೂ ಇವೆ.
ತುಳಸೀಕಟ್ಟೆಯ ತಕಧಿಮಿತಾ ಓದಲು ಕಾಯುತ್ತಿದ್ದೇನೆ.
ಪ್ರೀತಿಯಿರಲಿ
ಸಿಂಧು.