ಉ: “ಕಬ್ಬಿಗರ ಕಾವಂ” ಆಂಡಯ್ಯ
- ಉ: “ಕಬ್ಬಿಗರ ಕಾವಂ” ಆಂಡಯ್ಯ By: cmariejoseph (Sep 2 2007 - 12:42pm)
- ಉ: “ಕಬ್ಬಿಗರ ಕಾವಂ” ಆಂಡಯ್ಯ By: Khavi (Sep 3 2007 - 3:06pm)
- ಉ: “ಕಬ್ಬಿಗರ ಕಾವಂ” ಆಂಡಯ್ಯ By: Sunil Jayaprakash (Aug 28 2007 - 6:44pm)
- ಉ: “ಕಬ್ಬಿಗರ ಕಾವಂ” ಆಂಡಯ್ಯ By: mahesha (Aug 28 2007 - 4:59pm)
- ಉ: “ಕಬ್ಬಿಗರ ಕಾವಂ” ಆಂಡಯ್ಯ By: ವೈಭವ (Aug 28 2007 - 8:35pm)
- ಉ: “ಕಬ್ಬಿಗರ ಕಾವಂ” ಆಂಡಯ್ಯ By: hamsanandi (Aug 29 2007 - 1:49am)
- ಉ: “ಕಬ್ಬಿಗರ ಕಾವಂ” ಆಂಡಯ್ಯ By: ವೈಭವ (Aug 29 2007 - 12:19pm)
- ಉ: “ಕಬ್ಬಿಗರ ಕಾವಂ” ಆಂಡಯ್ಯ By: hamsanandi (Aug 29 2007 - 1:49am)
- ಉ: “ಕಬ್ಬಿಗರ ಕಾವಂ” ಆಂಡಯ್ಯ By: Khavi (Aug 28 2007 - 5:05pm)
- ಉ: “ಕಬ್ಬಿಗರ ಕಾವಂ” ಆಂಡಯ್ಯ By: ವೈಭವ (Aug 28 2007 - 8:35pm)


RSS:
ಉ: “ಕಬ್ಬಿಗರ ಕಾವಂ” ಆಂಡಯ್ಯ
ವಿನಾಯಕ ಕಬ್ಬಿಗರ ಕಾವದ ಬಗ್ಗೆ ತಿಳಿಸಿಕೊಟ್ಟಿದ್ದು ತುಂಬಾ ನಲಿವೆನಿಸಿತು. "ಕಬ್ಬಿಗರ ಕಾವನ್" ಹಲವು ಕೋನಗಳಿಂದ ನನಗೆ ಇಷ್ಟವಾಯಿತು. "ಕನ್ನಡಕ್ಕೆ ತಗುಲಿದ್ದ ಅಪವಾದವನ್ನು ಹೋಗಲಾಡಿಸಬೇಕೆಂಬ ಉದ್ದೇಶದಿಂದ ಬರೆದ ಕಾವ್ಯ" ಎಂಬ ಅಂಶವನ್ನು ಬಿಟ್ಟು ನೋಡಿದರೂ ಇದರಲ್ಲಿದ್ದ ತುಂಬಾ ವಿಷಯಗಳು ನನ್ನನ್ನು ಸೆಳೆದಿತ್ತು.
೧. ಮೊಟ್ಟಮೊದಲು, ಈ ಕಾವ್ಯದಲ್ಲಿ ನನಗೆ ತುಂಬಾ ಇಷ್ಟವಾದದ್ದು ಇದರ ಬರುವ ಪಾತ್ರಗಳ ಹೆಸರು. ನನೆವಿಲ್ಲಬಲ್ಲಹ, ಕರ್ವುವಿಲ್ಲ ..ಹೀಗೆ. ಒಂದು ಕಡೆ, ನಾಯಕನನ್ನು (ಮನ್ಮಥನನ್ನು) "ನನ್ನಿ" ಎಂದು ಕರೆಯಲಾಗಿದೆ. ನಾನು ಈಗಾಗಲೇ "ನನ್ನಿ ಮಾವ" ಆಗಿಬಟ್ಟಿರುವುದರಿಂದ ಇದು ತುಸು ಹೆಮ್ಮೆಯ ವಿಷಯವೇ ಸರಿ

೩. ಮನ್ಮಥನ ಸೈನ್ಯದ ವಿವರಣೆ "ಔಟ್ ಆಫ್ ದ ಬಾಕ್ಸ್ ಥಿಂಕಿಂಕ್" ಅಂತ ಏನು ಹೇಳ್ತಾರೆ ಹಾಗಿದೆ. ಓದಿಯೇ ಅನುಭವಿಸಬೇಕು. ಇದು ಯಾವ ರಸವನ್ನು ಸ್ಫುರಿಸುತ್ತದೆ ಎಂದು ತಿಳಿದಿಲ್ಲ
೪. ಕಾವ್ಯದ ಕೊನೆಯಲ್ಲಿ ಬರುವ "ದೃಷ್ಮಿ ಪ್ರಣಯ" ಕಾವ್ಯಕ್ಕೆ ಬೇಕಾದ ಒಂದು ಹಿಡಿತವನ್ನು ನಿರೂಪಿಸುತ್ತಲೇ, ರಸಿಕರಿಗೆ ಒಳ್ಳೆಯ ಓದನ್ನು ಉಣಬಡಿಸುತ್ತದೆ.
ನಾವು ಕಬ್ಬಿಗರ ಕಾವದಿಂದ ತೆಗೆದುಕೊಳ್ಳಬಹುದಾದ ಒಂದು ಮುಖ್ಯ ಅಂಶವೆಂದರೆ, ಕನ್ನಡದ ತುಡಿತವೆಂಬುದನ್ನು ಒಂದೇ ಒಂದು ಕ್ಷೇತ್ರಕ್ಕೆ ಸೀಮಿತವಾಗಿಸದೆ(ನಾಟಕ, ಸಿನಿಮಾ, ಸಾಹಿತ್ಯ..) ನಾವು ಏನನ್ನು ಇಷ್ಟಪಡುತ್ತೇವೆಯೋ ಅದೆಲ್ಲದರ ಅನುಭವವನ್ನು ಕನ್ನಡದಲ್ಲಿ ಹೇಳುವಂತಾಗಬೇಕು ಎಂಬುದು. ಕಬ್ಬಿಗರ ಕಾವ, ಕನ್ನಡವನ್ನು ಕಾಪಾಡಿದ ಕಾವ್ಯ, ಆದರೆ ಅದು "ಶೃಂಗಾರ" ಮತ್ತು "ದೈವಭಕ್ತಿ"ಗಳ ಮೂಲಕ ಇದನ್ನು ಸಾಧ್ಯವಾಗಿಸಿದೆ. (ನೆನಪಿಸಿಕೊಳ್ಳಿ, ಮನ್ಮಥ ಜಿನ ಸನ್ಯಾಸಿಗಳನ್ನು ಹೊಡೆಯಲು ಹೋದಾಗ ಏನಾಗುತ್ತದೆ ಎಂಬುದನ್ನು).