Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ
ಅಯ್ಯೋ ಮನಸೇ! ಇರೋದ್ ಸ್ಯಾನ್ ಹೋಸೆ ಅಂತ್ಯಾಕ್ ನಿರಾಸೆ?
ದೋಸೆಮೇಲಾದ್ರೆ ತಡೀಲಾರ್ದಾಸೆ ಮೆಂತ್ಯ ಅಕ್ಕಿ ಮೇಲುದ್ದಿನ್ಬೇಳೇ ಹಾಕಿ ನೆನೆಸೇ!
ನಾಕು ಗಂಟೆ ಬಿಟ್ಟು ರುಬ್ಬು ಗುಂಡಲ್ಹಾಕಿ ಚೆನ್ನಾಗ್ ತಿರುವಿಟ್ರೆ ತಯಾರ್ ದೋಸೆಹಿಟ್ಟು!
ಮಾರ್ನೆ ಬೆಳಿಗ್ಗೆ ನಾನ್-ಸ್ಟಿಕ್ ಕಾವ್ಲೆ ಒಲೆಮೇಲಿಟ್ರೆ ಶುರು ನೋಡಾಗ್ಲೆ ಸೌಟಿಗೊಂದು ದೋಸೆ
ಅಜ್ಜಿಯು ಮಾಡಿದ ಮೆಂತ್ಯದ ದೋಸೆ ಅಮ್ಮನು ಮಾಡಿದ ಉದ್ದಿನ ದೋಸೆ ಮಡದಿಯು ಮಾಡಿದ ಮಸಾಲೆ ದೋಸೆ
ಯಾವ್ದಾದ್ರೂ ದೋಸೆ ಯಾರ್ಮಾಡಿದ್ರು ದೋಸೆ ತಿನ್ನಲು ಸೊಗಸೇ!
-ಹಂಸಾನಂದಿ
ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ ನೆನೆನೆನೆದು | ಸತ್ಯಭಕ್ತಿಯ ಸೇವೆಗೆಯ್ದವಂ ಭರತಂ || ನಿತ್ಯಜೀವನದಿ ನೀನಾ ನಯವನನುಸರಿಸೊ | ಸತ್ವದಾಶೆಯ ನೀಗಿ -- ಮಂಕುತಿಮ್ಮ ||
— ಡಿ ವಿ ಜಿ
ಉ: ದೋಸೆ
ಅಯ್ಯೋ ಮನಸೇ!
ಇರೋದ್ ಸ್ಯಾನ್ ಹೋಸೆ
ಅಂತ್ಯಾಕ್ ನಿರಾಸೆ?
ದೋಸೆಮೇಲಾದ್ರೆ
ತಡೀಲಾರ್ದಾಸೆ
ಮೆಂತ್ಯ ಅಕ್ಕಿ
ಮೇಲುದ್ದಿನ್ಬೇಳೇ
ಹಾಕಿ ನೆನೆಸೇ!
ನಾಕು ಗಂಟೆ ಬಿಟ್ಟು
ರುಬ್ಬು ಗುಂಡಲ್ಹಾಕಿ
ಚೆನ್ನಾಗ್ ತಿರುವಿಟ್ರೆ
ತಯಾರ್ ದೋಸೆಹಿಟ್ಟು!
ಮಾರ್ನೆ ಬೆಳಿಗ್ಗೆ
ನಾನ್-ಸ್ಟಿಕ್ ಕಾವ್ಲೆ
ಒಲೆಮೇಲಿಟ್ರೆ
ಶುರು ನೋಡಾಗ್ಲೆ
ಸೌಟಿಗೊಂದು ದೋಸೆ
ಅಜ್ಜಿಯು ಮಾಡಿದ
ಮೆಂತ್ಯದ ದೋಸೆ
ಅಮ್ಮನು ಮಾಡಿದ
ಉದ್ದಿನ ದೋಸೆ
ಮಡದಿಯು ಮಾಡಿದ
ಮಸಾಲೆ ದೋಸೆ
ಯಾವ್ದಾದ್ರೂ ದೋಸೆ
ಯಾರ್ಮಾಡಿದ್ರು ದೋಸೆ
ತಿನ್ನಲು ಸೊಗಸೇ!
-ಹಂಸಾನಂದಿ