ಉ: ಅವನಿಲ್ಲ
- ಉ: ಅವನಿಲ್ಲ By: benaka (Aug 30 2007 - 2:55pm)
- ಉ: ಅವನಿಲ್ಲ By: mahesha (Aug 30 2007 - 3:57pm)
- ಉ: ಅವನಿಲ್ಲ By: benaka (Aug 31 2007 - 11:52pm)
- ಉ: ಅವನಿಲ್ಲ By: mahesha (Aug 30 2007 - 3:57pm)
- ಉ: ಅವನಿಲ್ಲ By: Sunil Jayaprakash (Aug 29 2007 - 10:28am)
- ಉ: ಅವನಿಲ್ಲ By: Khavi (Aug 29 2007 - 2:01pm)
- ಉ: ಅವನಿಲ್ಲ By: basavarajdengi (Aug 29 2007 - 6:16pm)
- ಉ: ಅವನಿಲ್ಲ By: Khavi (Aug 29 2007 - 2:01pm)
- ಉ: ಅವನಿಲ್ಲ By: mahesha (Aug 29 2007 - 10:05am)
- ಉ: ಅವನಿಲ್ಲ By: anivaasi (Aug 29 2007 - 9:23am)

RSS:
ಉ: ಅವನಿಲ್ಲ
ಬೆನಕ..
ನಿಮ್ಮ ಪದ್ಯವನ್ನು ಬಿಡಸಲೆತ್ನವಿದು.
ತಂಜೊಡರ = ತಣ್ + ಸೊಡರ = ತಣ್ಣಗೆ ಇರುವ ಸೊಡೆರು(ಹಣತೆಯ ಬತ್ತಿ. ಹಣತೆ )
ನೆತ್ತರೆಣ್ಣೆಯ = ನೆತ್ತರೆಂಬ ಎಣ್ಣೆ
ಪಸೆಯಾರಿದೊಡೇಂ = ಪಸೆಯು(ಹಸೆಯು, ಎಣ್ಣೆತನ, ತೇವ, ವದ್ದೆ) + ಆರಿದೊಡೆ(ಆರಿದರೆ. ಇಂಗಿದರೆ) + ಏಂ(ಏನು)
ಪೊಸೆವತ್ತಿನರದ = ಪೊಸೆ(ಹೊಸೆ)+ ಪತ್ತಿ(ಹತ್ತಿ) + ನರದ
ನುಲಿಕದಡಿ = ನುಲಿಕದ(ನುಲಿಕೆ, ನುಲಿಚು, twist) ಅಡಿ
ತುಂಡಾದೊಡೇಂ = ತುಂಡು(ಹರಿದು ಹೋಗುದ ಚೂರು ) + ಆದೊಡೆ( ಆದರೆ ) + ಏಂ(ಏನು)
ಎಲರ = ಎಲರ(ಗಾಳಿಯ)
ಸುಳಿಯೊಡೆದು = ಸುಳಿಯು + ಒಡೆದು = (ಸುಳಿಗಾಳಿ, ಸುಂಟರಗಾಳಿ ಬಂದು )
ಬಿಕ್ಕಿ = ಬಿಕ್ಕಳಿಸಿ, ಬಿಗಿದ(ಬಿಗಿದುಕೊಂಡು)
ಉಸಿರು = ಪ್ರಾಣ
ಸಿಕ್ಕಿದೊಡೇಂ = ಸಿಲುಕಿಕೊಂಡರೆ ಏನು
ಪರಿವೆಯರಿವೆ = ಪರಿವೆಯ(ಒಲುಮೆಯ) + ಅರಿವೆ ( ಅರಿಮೆ, ಅರಿವು, ಬಟ್ಟೆ )
ಹರಿದರಿವನೆರೆವ = ಹರಿದು + ಅರಿವನು + ಎರೆವ
ನೆನವು = ನೆನಪು/ನೆನಹು
ಬೆಳಗುತಿರಲ್ = ಬೆಳಗುತ್ತಿದ್ದರೆ.
ಚನ್ನಾಗಿದೆ ನಿಮ್ಮ ಹೋಲಿಕೆಗಳು
ನಾನು ಹೀಗೆ ಅರಿತ ಮಾಡಿಕೊಂಡೆಂ
ಸೊಡರು ತಣ್ಣಾಗಿ ನಂದಿಹೋಗಿ ನೆತ್ತರೆಂಬ ಎಣ್ಣೆಯ ಪಸೆ/ತೇವ ಆರಿದರೇನು?
ಹೊಸೆಯುವಾಗ ನರವೆಂಬ ಹತ್ತಿಯು ನುಲಿಕೆಗೆ ದೆಸೆಯಿಂದ ತುಂಡಾಗಿ ಕಿತ್ತುಹೋದರೇನು?
ಗಾಳಿಯ ಸುಳಿಯಾಗಿ(ಉರುಳಾಗಿ) ಬಿಗಿದುಕೊಂಡು ಉಸಿರು ಕಟ್ಟಿಸಿ ಸಿಲುಕಿಸಿದರೇನು?
ಒಲುಮೆ, ಕೂರ್ಮೆಯ, ಮೋಹದ, ಪರಿವೆಯ ಅರಿಮೆ ಎಂಬ ಬಟ್ಟೆಯು ಹರಿದು ಅರಿವನ್ನು ಸುರಿಯುವ ನೆನಪು ಹೊಳೆಯುತ್ತಿರುವಾಗ!
ನೀವು ಹೀಗೆ ಬರೆದಿದ್ದಿರೇಂ?
ನಲ್ಗವನವು ನನ್ನಿ!