ಆದರ್ಶ ಎಂದರೆ
- ಕಣ್ತೆರೆಸುವ ವಿಚಾರ By: tvsrinivas41 (Dec 29 2005 - 9:48pm)
- ಆದರ್ಶ ಅ೦ದರೆ ಏನು ? By: muralihr (Dec 28 2005 - 11:46am)
- ಆದರ್ಶ ಎಂದರೆ By: Sunil Jayaprakash (Dec 28 2005 - 1:37pm)
- "ಆದರ್ಶ ವ್ಯಕ್ತಿ" ನೂರಕ್ಕೆ ನೂರರಷ್ಟು ಸಮಂಜಸ By: gvmt (Dec 29 2005 - 11:24pm)
- ಆದರ್ಶ ಎಂದರೆ By: Sunil Jayaprakash (Dec 28 2005 - 1:37pm)


RSS:
ಆದರ್ಶ ಎಂದರೆ
ಆದರ್ಶವೆನ್ನುವುದು ವ್ಯಕ್ತಿಯಲ್ಲ. ಅದು ಆಯಾ ಕಾಲದಲ್ಲಿ ಸಮಾಜಕ್ಕೊಳಿತಾಗಬಲ್ಲ ಸಾಮಾಜಿಕ ಮೌಲ್ಯಗಳು. ಮಾನವೀಯ ಮೌಲ್ಯಗಳು ಅಂತ ಏನನ್ನ ನಾವು ಇಂದು ಕರೀತೇವೆಯೊ ಅದು ಸರ್ವಕಾಲಿಕವಾಗಬೇಕು ಎಂಬ ನಿಯಮಗಳೇನು ಇಲ್ಲ. ನಾವು ಅನುಸರಿಸಬೇಕಾದುದು ಆದರ್ಶ ವ್ಯಕ್ತಿಯನ್ನಲ್ಲ. ತತ್ವಗಳನ್ನ. ಈ ತತ್ವಗಳೇ ಆದರ್ಶ. ನೀವು ಎಂದೆಂದಿಗೂ ಮುರಳಿಯೇ, ಅಥವಾ ನಾನು ಎಂದೆಂದಿಗೂ ನಾನೆ.
ಉದಾಹರಣೆಗೆ, ದೇಶಭಕ್ತಿಯೊಂದು ಆದರ್ಶ. ನಾನು(ವು) ಈ ಆದರ್ಶವನ್ನ ಅಳವಡಿಸಿಕೊಂಡ ಮಾತ್ರಕ್ಕೆ ನಾನು(ವು) ನೆಹರು ಅಥವಾ ಭಗತ್ ಸಿಂಗನಾಗವುದಿಲ್ಲ. ನಾನು(ವು) ಅಹಿಂಸಾ ತತ್ವವನ್ನ ಪಾಲಿಸಿದ ಮಾತ್ರಕ್ಕೆ ಗಾಂಧಿ ಅಥವಾ ಬುದ್ದನಾಗುವುದಿಲ್ಲ. ಅದು ನನ(ಮ) ಗೆ ಬೇಕೂ ಇಲ್ಲ. ನಾನು ನಾನಾಗಿಯೇ, ಅಥವಾ ನಾವು ನಾವುಗಿಯೇ ಈ ಸಮಾಜಕ್ಕೊಳಿತಾಗಬಲ್ಲ ತತ್ವಗಳನ್ನು ಆದರ್ಶ ವೆಂದು ಕರೆಯಬೇಕೇ ವಿನಃ ಆದರ್ಶ ವ್ಯಕ್ತಿಯೆನ್ನುವುದು ಸಮಂಜಸವಲ್ಲ.
ಸರಳತೆ ಆದರ್ಶ , ಹೆಚ್. ನರಸಿಂಹಯ್ಯನವರು ಈ ಆದರ್ಶ ಪಾಲಿಸಿದ ಉದಾತ್ತ ಜೀವಿ.
ನಿಮ್ಮ ಅನಿಸಿಕೆ ಏನು ??