ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಭಾಗ ೨

December 31, 2005 - 5:39am — ಶ್ಯಾಮ ಕಶ್ಯಪ

ಭಾಗ ೨

ಶ್ಯಾಮ ಕಶ್ಯಪ's picture

೫
ಕನಸುಗಳು ಬಹಳ ವಿಚಿತ ಬಿಡ್ರಿ. ಸಾಮಾನ್ಯವಾಗಿ ನನ್ನ ಕನಸುಗಳು ನನ್ನ ಜೀವನದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಒಂದು ವಿಚಿತ್ರ ಕಾಂಟೆಕ್ಶ್ತ್ ತರುತ್ತದೆ. ಉದಾಹರಣೆಗೆ ಪರೀಕ್ಷೆಯ ಸಮಯದಲ್ಲಿ ಹೀಗೊಂದು ಕನಸು ಬಿದ್ದಿತ್ತು. ದಿನಾ ಸ್ಚಿಮ್ಮಿಂಗ್ ಪೂಲಿನಲ್ಲಿ ಈಜಿದರೂ ನಮ್ಮಜ್ಜಿಯ ಜೊತೆ ತೋಟಕ್ಕೆ ಹೋದಾಗ ಕಲ್ಯಾಣಿಯಲ್ಲಿ ಈಜಲಾಗದೇ ಮುಳುಗಿದ್ದು ಹೀಗೆ.. ಆದರೆ ಈ ಬಾರಿ ನನ್ನ ಕನಸುಗಳು ವೈಚಿತ್ಯ್ರದ ಎಲ್ಲಾ ಮಟ್ಟಗಳನ್ನು ದಾಟುತ್ತದೆಯೆಂದು ನಾನು ಊಹಿಸರಲಿಲ್ಲ. ಈಗ ಕೆಲವು ದಿನಗಳಿಂದ ಮಲಗಿದಾಗಲೆಲ್ಲ, ಪುರಾತನ ನಾಗರೀಕತೆಯ ಕಥೆಗಳು ಕಂತು ಕಂತಾಗಿ ನನ್ನ ಸ್ವಪ್ನಗಳಲ್ಲಿ ಪ್ರಸಾರವಾಗತೊಡಗಿತು, ಜಾಹಿರಾತುಗಳ ಸಹಿತ! ಆದರೆ ಬರುತ್ತಿದ್ದ ಜಾಹೀರಾತೂ ಒಂದೇ ಎನ್ನಿ (ರಾಪಿಡೆಕ್ಸ್ ಭೃಗೂಚಿ ಕೋರ್ಸ್)

ನಾನು ಮೇಲೆ ಹೇಳಿದ ಪ್ರಾಣಿ ನನಗೆ ಸುಮಾರು ಕಥೆಗಳನ್ನು ಹೇಳಿದೆ. ಒಂದೊಂದೂ ವಿಚಿತ್ರವಾದದ್ದು, ಒಂದಕ್ಕೊಂದಕ್ಕೆ ಸಂಬಂಧವಿರದದ್ದು. ಆದರೂ ಎಲ್ಲವೂ ಯಾವುದೋ ಧಾರವಾಹಿಯೋ ಅಥವ ಡಾಕ್ಯುಮೆಂಟರಿಯ ಕಂತುಗಳು ಅಂತ ನನಗೆ ಹೇಗನ್ನಿಸಿತೋ ಇಂದಿಗೂ ನನಗೆ ಅರಿವಾಗಿಲ್ಲ. ಒಟ್ಟಿನಲ್ಲಿ ಈ ಕಥೆಗಳ ಸಾರಾಂಶವನ್ನು ನಿಮಗಾಗಲೇ ಹೇಳಿದ್ದೇನೆ. ನನಗೆ ಕುತೂಹಲ ಮೂಡಿಸಿದ್ದು ಇವೆಲ್ಲ ನನಗೇ ಏಕೆ ಬರುತ್ತಿದೆ ಅಂತ.. ಕರ್ಕಶ ಸಂಗೀತ ಕೇಳಿದರೆ ಇಷ್ಟೆಲ್ಲ ತಲೆಕೆಡತ್ತ ಅಂತ ಅನುಮಾನವಾಗ ತೊಡಗಿತು. ಕನಸುಗಳಲ್ಲಿ ಆ ಪುರಾತನ ಪ್ರಾಣಿ ಬಂದದ್ದು ಹೌದು.. ಆದರೆ ಇದುವರೆಗೆ ಕನ್ಸಸುಗಳನ್ನು ಚಲನಚಿತ್ರಗಳಂತೆ ಮಾತ್ರ ನಾನು ನೋಡಿದ್ದು. ಇರಲಿ, ಕನಸಿನಲ್ಲಿ ಯಾಕೆ ಟಿವಿ ಒಂದು ಬಗೆಯ ಇಂಟರಾಕ್ಷನ್ ಡಿವೈಸ್ ಆಗಬಾರದು? ಕನಸುಗಳು ರಿಯಲ್ ಟೈಮಿನಲ್ಲಿಯೇ ತಾನೆ ಬಿತ್ತರವಾಗುವುದು.. ನಾವು ತರ್ಡ್ ಪರ್ಸನ್ ಅಂತ ಯಾಕೆ ಸುಮ್ಮನಿರಬೇಕು, ಈ ಬಾರಿ ಏನಾದರೂ ಮಾಡಿ ಚೂರು ಪಾರು ಕಲಿತ ಭೃಗೂಚಿಯಲ್ಲಿಯೇ ಆ ಪ್ರಾಣಿಯನ್ನು ಪ್ರಶ್ನಿಸಿ ಬಿಡೋಣ ಅಂತ ನಿರ್ಧರಿಸಿದೆ.

ಅಂದು ಸ್ವಪ್ನದಲ್ಲಿ ಪ್ರಾಣಿ ಬಂದಾಗ,ಭೃಗೂಚಿಯಲ್ಲಿ ಕೇಳಿಯೇ ಬಿಟ್ಟೆ,

ಪೋ ರಾಂಜೇ ಲಾ ಬ್ರೀತ್ ಕೋ
"ನನ್ನ ಕನಸಿನ್ನಲ್ಲೇಕೆ ಬರುತ್ತಿರುವೆ ನೀನು?"

ಶ್‍ಶ್‍ಶ್‍ಹಾ.. ಟೇಂತ್, ರಬಕ ಸ್ತ್ರಾಚೀ?
"ಅರೆ, ಹೀನಜೀವಿ, ಈಗ ಕಲಿತೆಯಾ ಮಾತಾಡಲು?"

ಪೋ ಲಾತಾ ಬ್ರೂಂಚ್ ಸರಟ್ ಗ್ರಮೇಕ
"ದುಷ್ಟತನದಿಂದ ಪ್ರಯತ್ನಿಸಿ ನನ್ನ ಪ್ರಶ್ನೆಗೆ ಉತ್ತರ ಕೊಡು"

ಸೋ ರಬಕೇತ್ ತಶ್ರೂತ್! ತರಬಕ್ ಅರಿಗ್ರಿಮ ಟೇಂತ್"
"ನಿನ್ನ ಭಾಷೆ ಅನರ್ಹ ಕೇಳಲು! ಮಾತಾಡಬೇಡ, ಕೊಲ್ಲುತ್ತೇನೆ ಹೀನಜೀವಿಯೆ"

ಇನ್ನು ನನ್ನ ಭಾಷಾಪಾಂಡಿತ್ಯ ಪ್ರದರ್ಶಿಸುವುದು ಒಳಿತಲ್ಲವೆಂದು ಸುಮ್ಮನಿದ್ದೆ. ಪ್ರಾಣಿ ಈಗ ಕನ್ನಡದಲ್ಲಿ ಮುಂದುವರಿಸಿತು.

"ನನ್ನ ಅಸ್ಥಿತ್ವವಿರುವುದೇ ಶಕ್ತಿಯಲ್ಲಿ. ನನ್ನ ಶಕ್ತಿಯ ಆವಾಹನೆಯಾಯಿತು ನಿನ್ನ ಮನ:ಪರಧೆಯಲ್ಲಿ . ಇಲ್ಲಿದ್ದೇನೆ ಅದಕ್ಕೆ.

"ಅಂದರೆ?"

"ಕರೆದದ್ದು ನೀನು. ನನ್ನದು ಉತ್ತರ ಮಾತ್ರ"

ನಾನು ನಿನ್ನನ್ನು ಕರೆದದ್ದು ಹೇಗೆ?

"ಶಕ್ತಿಯೆಂದರೇನು? ವಾತಾವರಣದಲ್ಲಿರುವ ಅಲೆಗಳು. ಈ ಜಾಗದಲ್ಲಿ ಅಂತಹ ಅಲೆಗಳಿಗೇನು ಕಮ್ಮಿಯೇ? ಸಣ್ಣ ಪ್ರಮಾಣದಲ್ಲಿ ರೇಡಿಯೋ ಆಕ್ಟಿವ್ ಕಿರಣಗಳಿವೆ. ನನ್ನ ಅಲೆಗಾತ್ರಗಳಿಗೆ ಇವುಗಳಿಂದ ಅಗಾಧ ಪರಿಣಾಮವಾಗುತ್ತದೆ. ಉಷ್ಣಾಂಶ ತೀರ ಕಮ್ಮಿಯಿರುವುದರಿಂದ ಸರಿಯಾದ ವಾತವರಣ ನಿರ್ಮಿತಗೊಂಡರೆ ಗಾಳಿಯೇ ಸೂಪರ್‍ಕಂಡಕ್ಟರ್ ಆಗುತ್ತದೆ. ನಿನ್ನ ಮೆದುಳಿನಲ್ಲಿ ನೀನು ಕೇಳುವ ಸಂಗೀತದಿಂದ ಯೋಚನಾ ಲಹರಿಗಳಲ್ಲಿ ಸೂಕ್ಷ್ಮ ಬದಲಾವಣೆಗಳಾಗುತ್ತವೆ. ಯಾವಾಗ ಅವುಗಳ ಅಳತೆ ನನ್ನ ಶಕ್ತಿಯ ಅಲೆಗಳಿಗೆ ಸಮನಾಗುತ್ತದೆಯೋ ಆಗ ನಿನ್ನ ಮೆದುಳಿನಲ್ಲಿ ನನ್ನ ಆವಾಹನೆಯಾಗುತ್ತದೆ. ನೀವಿನ್ನೂ ನಂಬದ ಟೆಲಿಪತಿ ಆಗುವುದೇ ಹೀಗೆ. ಆದರೆ ನನ್ನಂತಹ ಪೈಶಾಚಿಕ ಶಕ್ತಿಯನ್ನು ಆವಾಹನಿಸಲು ಈ ಜಾಗದ ವೈಶಿಷ್ಟ್ಯತೆ ಹಾಗು ನಿನ್ನ ಮೆದುಳಿನ ತರಂಗಗಳೇ ಕಾರಣ. ನನ್ನ ಭೌತಿಕ ದೇಹ, ನಿನ್ನ ಮೆದುಳಿನ ಪರಧೆಯ ಮೇಲೆ ನಿನಗೆ ನನ್ನ ದೇಹದ ಮೇಲಿರುವ ಊಹೆ."

ನನಗೆ ಹೆದರಿಕೆ, ನಗು ಒಮ್ಮೆಲೇ ಬಂತು.. ಇದ್ಯಾವ ಲೆಕ್ಚರ್ ಕೊಡುವ ಭೂತ ಅಂತ ಅನ್ನಿಸಿತು. ಗ್ವೆನಿತ್ ಪಾಲ್ಟ್ರೋವ್‍ನ ಹಾಲಿವುಡ್ ಕಾಮಿಡಿಯೂ ನೆನಪಾಯಿತು!

ಗರ್ಜಿಸಿತು ಭೂತ.
"ನನ್ನ ತರಂಗಗಳಿಲ್ಲುರುವ ತನಕ ನಿನ್ನ ಮೆದುಳಿನಲ್ಲಿ ಮೂಡುವ ಎಲ್ಲಾ ಯೋಚನೆಗಳು ನನಗೆ ತಿಳಿಯುತ್ತದೆ ಹೀನಜೀವಿ! "

ತಕ್ಷಣ ಏಕಚಿತ್ತನಾಗಿ ಕ್ಷಮೆ ಕೋರಿದೆ. ಇದಾದ ನಂತರ ನಾವು ಸುಮಾರು ಚರ್ಚೆ ನಡೆಸಿದೆವು. ಭೃಗೂಚಿ ಭಾಷೆಯ ಬಗ್ಗೆ, ಪುರಾತನ ನಾಗರೀಕತೆಗಳ ಬಗ್ಗೆ, ಆ ಪ್ರಾಣಿಯ ಜೊತೆ ಒಂದು ಬಗೆಯ ಸ್ನೇಹ ಬೆಳದಿತ್ತು! ತನ್ನ ಬಾಲ್ಯದ ಬಗ್ಗೆ ಮಾತಾಡುತ್ತಿತ್ತು ಆ ಪ್ರಾಣಿ. ಅದರ ಹೆಸರು ಪ್ರೆಸ್ತಕಾಯ ಅಂತೆ. ಕ್ರಾಸ್‍ಬ್ರೀಡಿಂಗ್ ಕೇಸ್ ಇದು. ಫಿನ್ನಿಶ್ ಭೂತಕ್ಕೂ ಭಾರತೀಯ ರಾಕ್ಶಸಿಯೊಬ್ಬಳಿಗೆ ಹುಟ್ಟಿದ ಪುತ್ರನಂತೆ ಪ್ರೆಸ್ತಕಾಯ. ಭೃಗೂಚಿಯಲ್ಲಿ ಪ್ರೆಸ್ತ ಅಂದರೆ ವೈಭವ ಅಂತ ಅರ್ಥ. ಆದರೆ ನನಗೆ ಮಾತ್ರ ಪ್ರೆಸ್ತಕಾಯ ಡೈನಾಸರಸ್ ಮತ್ತು ಬಾವಲಿಯ ಕ್ರಾಸ್ ಕಂಡಂತೆ ಕಾಣುತ್ತಿದ್ದ. ನನ್ನ ಜಾರ್ಡೈನಿನ ಊಹಿತ ಮಿತ್ರ ಇದೇನೆ ಅನ್ನುವ ಯೋಚನೆಯೂ ಈಗೀಗ ಬರುತ್ತಿದೆ.

(ಒಂದು ಸಣ್ಣ ಕರೆಕ್ಷನ್. ಪತಂಜಲಿಯ ಸಂಸ್ಕೃತ ಅಂತ ಮೊದಲಿನ ಕಂತಿನಲ್ಲಿ ಬರೆದಿದ್ದೇನೆ. ಪಾಣಿನಿಯ ಸಂಸ್ಕೃತ ಎಂದಿರಬೇಕಾಗಿತ್ತು. ಪ್ರೆಸ್ತಕಾಯ ಕೂಡ ಪಾಣಿನಿಯೇ ಸರಿ ಅಂತ ಹೇಳಿದ್ದಾನೆ! )

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಗ್ಲೂರ ತ್ರಾಕ: "ಜಗತ್‍ಸಮರ" - ಭಾಗ ೧ By: ಶ್ಯಾಮ ಕಶ್ಯಪ (12 replies) December 30, 2005 - 5:28am
  • confusionಭರಿತ By: hpn (Jan 1 2006 - 8:04am)
    • ಇನ್ನೂ ಕಥೆ ಮುಗಿದಿಲ್ಲ! By: ಶ್ಯಾಮ ಕಶ್ಯಪ (Jan 1 2006 - 11:15am)
      • 'ತೆಗಳೂಚಿ' By: (Jan 1 2006 - 3:10pm)
        • confusion By: ಶ್ಯಾಮ ಕಶ್ಯಪ (Jan 2 2006 - 2:32am)
  • ಭಾಗ ೨ By: ಶ್ಯಾಮ ಕಶ್ಯಪ (Dec 31 2005 - 5:39am)
    • ಕೊನೆಯ ಕಂತು By: ಶ್ಯಾಮ ಕಶ್ಯಪ (Jan 5 2006 - 2:54am)
    • ಒಂಥರ ಚೆನ್ನಾಗಿದೆ , ಮುಂದುವರಿಸಿ. By: shreekant.mishrikoti (Jan 3 2006 - 3:22pm)
    • ಪಾಣಿನೆ ಭಾಷೆಯೇ? By: tvsrinivas41 (Dec 31 2005 - 4:48pm)
      • ಭೃಗೂಚಿ By: ಶ್ಯಾಮ ಕಶ್ಯಪ (Jan 1 2006 - 4:57am)
  • ಮೆಟಲ್ ಮಾಯೆ By: ಪ್ರದೀಪ್ ಕಿಶೋರ್ (Dec 30 2005 - 11:27pm)
    • ಮೆಟಲ್ ಪಾಂಡಿತ್ಯ! By: ಶ್ಯಾಮ ಕಶ್ಯಪ (Dec 31 2005 - 5:43am)
      • ಚೆನ್ನಾಗಿತ್ತು ಸರ್ ನಿಮ್ಮ ಕಥೆ By: (Jan 3 2006 - 2:56am)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು


ವಿನಾಶಕಾಲೇ ವಿಪರೀತ ಸಿಧ್ಧಿ!

— ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator