ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ
- ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ By: betala (Sep 11 2007 - 3:08am)
- ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ By: pavanaja (Sep 8 2007 - 10:01am)
- ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ By: betala (Sep 8 2007 - 5:45pm)
- ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ By: pavanaja (Sep 9 2007 - 12:39pm)
- ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ By: betala (Sep 8 2007 - 5:45pm)
- ಉ: ಐ-ಫೊನ್ - ನಿಮಗಾಗಿ ಓಡೊಡಿ ಬಂದಿದೆ By: createam (Sep 8 2007 - 12:03am)
- ಉ: ಐ-ಫೊನ್ - ನಿಮಗಾಗಿ ಓಡೊಡಿ ಬಂದಿದೆ By: betala (Sep 8 2007 - 2:43am)


RSS:
ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ
ಆಪಲ್ ಐಫೋನ್ ಹೈಪ್ ಏನು? ಹೌದು. ಅದು ಹೈಪ್ ಅಲ್ಲದೆ ಮತ್ತೇನೂ ಅಲ್ಲ. ಅದರ ಕೊರತೆಗಳ ಬಗ್ಗೆ ಅಂತರಜಾಲದಲ್ಲಿ ಹಲವು ಕಡೆ ದೊಡ್ಡ ಪಟ್ಟಿಗಳೆ ಸಿಗುತ್ತವೆ. ನನ್ನ ಕಿರು ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ. ಈ ಲೇಖನವನ್ನು ಬಸವನಗುಡಿ ಕ್ಷೇತ್ರಕ್ಕೆ ಸೀಮಿತವಾದ Supporter ಎಂಬ ಹೆಸರಿನ ಪತ್ರಿಕೆಗಾಗಿ ಬರೆದದ್ದು. ಆದುದರಿಂದ ಲೇಖನ ಚಿಕ್ಕದಾಗಿದೆ. ಭಾರತದಲ್ಲಿ ಐಫೋನ್ ಲಭ್ಯವಿಲ್ಲ. ಅದರ ಬಹುಪಾಲು ಗುಣವಿಶೇಷಗಳನ್ನು ಹೊಂದಿರುವ ಎಚ್‌ಟಿಸಿ ಟಚ್ ಫೋನ್ (+ ಅಂಗೈಗಣಕ) ಏರ್‌ಟೆಲ್ ಮೂಲಕ ಲಭ್ಯವಿದೆ. ಅದನ್ನು unlock ಮಾಡಲೂ ಅಂತರಜಾಲದಲ್ಲಿ ತಂತ್ರಾಂಶಗಳು ಲಭ್ಯವಿವೆ (ಇಂತಹ hackಗಳು ಐಫೋನ್‌ಗೂ ಲಭ್ಯವಿವೆ). ಎಚ್‌ಟಿಸಿ ಟಚ್ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನನ್ನು ಒಳಗೊಂಡಿದೆ. ಅದರ ಸೌಕರ್ಯಗಳು ಇದನ್ನು ಬೇಗನೆ ಜನಪ್ರಿಯ ಮಾಡಿದೆ. QWERTY keyboard ಇಲ್ಲ ಎನ್ನುವುದೊಂದೆ ಕೊರತೆ. ಈ ಎಲ್ಲದಕ್ಕೆ ಉತ್ತರ ರೂಪವಾಗಿ HTC Kaiser ಎಂಬ ಫೋನ್ ಸದ್ಯದಲ್ಲೇ ಬರಲಿದೆ. ಅದು ಭಾರತದಲ್ಲಿ ಯಾವಾಗ ದೊರೆಯುತ್ತದೋ ಗೊತ್ತಿಲ್ಲ.
ನಾನೊಬ್ಬ ಗ್ಯಾಜೆಟ್ ಪ್ರಿಯ. ಆದುದರಿಂದಲೇ Supporter ಪತ್ರಿಕೆಗೆ ಗ್ಯಾಜೆಟ್‌ಗಳ ಬಗ್ಗೆ ಬರೆಯಲು ಒಪ್ಪಿಕೊಂಡದ್ದು. ಆ ಅಂಕಣದ ಲೇಖನಗಳನ್ನು ಇಲ್ಲಿ ಓದಬಹುದು. ಎಚ್‌ಟಿಸಿ ಟಚ್ ಬಗ್ಗಯೂ ಬರೆದಿದ್ದೇನೆ. ಆ ಲೇಖನ ಪತ್ರಿಕೆಯಲ್ಲಿ ಮುದ್ರಣ ರೂಪದಲ್ಲಿ ಬಂದ ನಂತರ ಅಂತರಜಾಲತಾಣದಲ್ಲಿ ಸೇರಿಸುತ್ತೇನೆ. ಆದುದರಿಂದ ಈ ತಾಣಕ್ಕೆ ಆಗಾಗ ಭೇಟಿ ನೀಡುತ್ತಿರಿ.
-ಪವನಜ
-----------
Vishva Kannada
Think globally, Act locally