ಉ: ಚಿಬ್ಲು , ಮುಗ್ಲು .....
- ಉ: ಚಿಬ್ಲು , ಮುಗ್ಲು ..... By: ವೈಭವ (Sep 19 2007 - 9:33pm)
- ಉ: ಚಿಬ್ಲು , ಮುಗ್ಲು ..... By: hamsanandi (Sep 19 2007 - 11:32pm)
- ಉ: ಚಿಬ್ಲು , ಮುಗ್ಲು ..... By: mahesha (Sep 20 2007 - 6:31am)
- ಉ: ಚಿಬ್ಲು , ಮುಗ್ಲು ..... By: ವೈಭವ (Sep 20 2007 - 12:06am)
- ಉ: ಚಿಬ್ಲು , ಮುಗ್ಲು ..... By: karthik (Sep 20 2007 - 12:59pm)
- ಉ: ಚಿಬ್ಲು , ಮುಗ್ಲು ..... By: hamsanandi (Sep 19 2007 - 11:32pm)
- ಉ: ಚಿಬ್ಲು , ಮುಗ್ಲು ..... By: benaka (Sep 19 2007 - 1:39pm)
- ಉ: ಚಿಬ್ಲು , ಮುಗ್ಲು ..... By: ಶ್ರೀನಿವಾಸ ವೀ. ಬ೦ಗೋಡಿ (Sep 19 2007 - 2:40pm)
- ಉ: ಚಿಬ್ಲು , ಮುಗ್ಲು ..... By: ಶ್ರೀನಿವಾಸ ವೀ. ಬ೦ಗೋಡಿ (Sep 20 2007 - 10:43am)
- ಉ: ಚಿಬ್ಲು , ಮುಗ್ಲು ..... By: Sunil Jayaprakash (Sep 19 2007 - 4:48pm)
- ಉ: ಚಿಬ್ಲು , ಮುಗ್ಲು ..... By: ಶ್ರೀನಿವಾಸ ವೀ. ಬ೦ಗೋಡಿ (Sep 19 2007 - 2:40pm)
- ಉ: ಚಿಬ್ಲು , ಮುಗ್ಲು ..... By: mahesha (Sep 19 2007 - 1:01pm)


RSS:
ಉ: ಚಿಬ್ಲು , ಮುಗ್ಲು .....
ಬೆನಕ, ಸಿರಿನಿವಾಸ, ಸುನಿಲ, ಮಾಯ್ಸ ನನ್ನಿ, ತಮ್ಮ ಮರುಲಿಗಳಿಗಾಗಿ
ಬೇರೆ ಬೇರೆ ತಿಳಿವುಗಳು ಸಿಕ್ಕವು.
ನನಗೆ ಗೊತ್ತಿರುವುದು/ ನಾನು ಬಳಸುವುದು ಈ ಅರ್ತಗಳಲ್ಲಿ:-
ಚಿಬ್ಲು ಅಂದಾಗ ನನಗೆ ನೆನಪು ಬರುವುದು ಚಿಬ್ಲಿಡ್ಲಿ . ನಾವು ಈಗಲೂ ಇಡ್ಲಿ ಬೇಯಿಸಲು ಈ ತೆಳ್ಳಗಿನ ಬಿದುರಿನಲ್ಲಿ ಮಾಡಿದ ಚಿಬ್ಲುಗಳನ್ನೆ ಬಳಸೋದು.
ಮುಗ್ಲು = ಹಳಸಾಗಿರುವುದು. ಕೊಳೆತು ಹೋಗಿರುವುದು
ಮೊಗ್ಲು = ಮಗ್ಗುಲು. ಆದರೆ ಆಡುನುಡಿಯಲ್ಲಿ ಮೊಗ್ಲು ಆಗಿದೆ. ಮಾದರಿ: ಬಲ್ ಮೊಗ್ಲಲ್ಲಿ ಏಳಪ್ಪ , ಎಡ್ ಮೊಗ್ಲಲ್ಲಿ ಏಳಬೇಡಪ್ಪೊ

ಉನಿ = ಒದ್ದೆ ಮಾಡು, ನೆನೆ ಹಾಕು . ಇನ್ನೊಮ್ದು ಅರ್ತದಲ್ಲಿ ಇದು ಕೆಲಸಗಳನ್ನು pending ನಲ್ಲಿ ಇಡು ಅಂತ ಆಗುತ್ತೆ.
ಉದಾ: ಅವತ್ತಿನ ಕೆಲಸ ಅವತ್ತೇ ಮಾಡ್ದೆ ಏನ್ ಉನಿಯಾಕಂಡಿದಿಯಪ್ಪ
ಎಕ್ಕತ್ತು = ಇದು ಕತ್ತಿನ ಹಿಂಬಾಗ. ಹೇಗೆ ಬಿಡಿಸುವುದು ಗೊತ್ತಿಲ್ಲ
ಎಡೊತ್ತು = ಎಡ + ಹೊತ್ತು , ಅಂದ್ರೆ ನಮ್ಮಲ್ಲಿ 'ಬಲ'ಕ್ಕೆ ಸರಿ ಮತ್ತು 'ಎಡ' ತಪ್ಪು ಎಮ್ಬ ಅನಿಸು ಇದೆ. ಇಲ್ಲಿ ಎಡ= ಸರಿಯಲ್ಲದ ಎಂಬ ತಿಳಿವು
ಎಡೊತ್ತು = ಸರಿಯಲ್ಲದ ಹೊತ್ತು. ಹೊತ್ತಲ್ಲದ ಹೊತ್ತು
ಮಾದರಿ: ಏನಪ್ಪ ನೀನು ಎಡೊತ್ತಿನಲ್ಲಿ ತಿಂತಾ ಇದಿಯ. ಉಂಡಿದ್ ಮೈಗೆ ಇಡಿತದಾ?
ಮೊಗಳು = ಮುಚ್ಚಳ. ಇದನ್ನು ನಾವು ಎಳನೀರು ಬುಂಡೆ ಕೊಚ್ಚಬೇಕಾದರೆ ಹೇಳದು. ಮೇಲಿನ ಪದರವನ್ನು ಅರ್ದ ಕೊಚ್ಚಿ ಆಮೇಲೆ 'ಮೊಗಳು' ತೆಗೆದು ಎಳನೀರು ಕುಡಿಯದು.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು