Re: ಭೈರಪ್ಪ ಅವರ 'ಮಂದ್ರ'
- ಉ: ಎಸ್ ಎಲ್ ಭೈರಪ್ಪನವರಿಗೆ ಪಂಪ ಪ್ರಶಸ್ತಿ By: Aram (Aug 24 2007 - 7:57pm)
- ಉ:ಎಸ್ ಎಲ್ ಭೈರಪ್ಪನವರಿಗೆ ಪಂಪ ಪ್ರಶಸ್ತಿ By: Sunil Jayaprakash (Jan 12 2006 - 11:36pm)
- ಸುಧಾರಿಸುವಿಕೆ By: hpn (Jan 13 2006 - 12:47am)
- ಅವರ "ದಾಟು" By: karthik (Jan 25 2006 - 11:44am)
- ಉ:ಸುಧಾರಿಸುವಿಕೆ By: Sunil Jayaprakash (Jan 13 2006 - 9:43am)
- ಭೈರಪ್ಪ ಅವರ 'ಮಂದ್ರ' By: shreekant.mishrikoti (Jan 13 2006 - 12:29pm)
- Re: ಭೈರಪ್ಪ ಅವರ 'ಮಂದ್ರ' By: pavanaja (Jan 13 2006 - 8:03pm)
- ಗೃಹಭಂಗ -2 By: Rohit (Jan 13 2006 - 12:23pm)
- ಸುಧಾರಿಸುವಿಕೆ.. By: ಶ್ರೀನಿಧಿ (Jan 13 2006 - 11:17am)
- ಭೈರಪ್ಪ ಅವರ 'ಮಂದ್ರ' By: shreekant.mishrikoti (Jan 13 2006 - 12:29pm)
- ಸುಧಾರಿಸುವಿಕೆ By: hpn (Jan 13 2006 - 12:47am)
- Re: ಎಸ್ ಎಲ್ ಭೈರಪ್ಪನವರಿಗೆ ಪಂಪ ಪ್ರಶಸ್ತಿ By: srikanth (Jan 12 2006 - 10:26am)
- this is too late By: shiv_think (Jan 13 2006 - 10:25am)
- ಕನ್ನಡದಲ್ಲೇ ಬರೆದರೆ ಚೆನ್ನಾಗಿರುತ್ತಲ್ವೆ? By: (Jan 13 2006 - 12:49pm)
- ಶಿವಾ ಕನ್ನಡದಲ್ಲಿ Think ಮಾಡಬಹುದಲ್ಲಾ By: muralihr (Jan 13 2006 - 12:35pm)
- nothing By: shiv_think (Jan 18 2006 - 11:31am)
- ಭೈರಪ್ಪನವರಿಗೆ ಅಭಿನಂದನೆಗಳು By: ಶ್ರೀಶಕಾರಂತ (Mar 22 2006 - 7:29pm)
- nothing By: shiv_think (Jan 18 2006 - 11:31am)
- this is too late By: shiv_think (Jan 13 2006 - 10:25am)


RSS:
Re: ಭೈರಪ್ಪ ಅವರ 'ಮಂದ್ರ'
ಬಹುಶಃ ನೀವು ಭೈರಪ್ಪನವರ "ಸಾಕ್ಷಿ" ಓದಿಲ್ಲ ಎಂದುಕೊಂಡಿದ್ದೇನೆ. ನಾನು ಅದನ್ನು ಓದಿ ಆದ ಮೇಲೆ ನನ್ನ ಸ್ನೇಹಿತರೊಬ್ಬರಿಗೆ ಓದಲು ಕೊಟ್ಟಿದ್ದೆ. ವಾಪಾಸು ತೆಗೆದುಕೊಳ್ಳುವಾಗ ಅವರ ಆಬಿಪ್ರಾಯ ಕೇಳಿದೆ. ಅವರು ಹೇಳಿದ್ದು -"ಫಿಲಾಸಫಿ ಆಫ್ ಹಾದರ". ಭೈರಪ್ಪನವರ ಬಹುಪಾಲು ಕಾದಂಬರಿಗಳಲ್ಲಿ ಲೈಂಗಿಕ ವಿಷಯಗಳು ಇದ್ದೇ ಇವೆ. ಕೆಲವಲ್ಲಿ ಸ್ವಲ್ಪ ಜಾಸ್ತಿ ಅಷ್ಟೆ.
ಮಂದ್ರದಲ್ಲಿ ಸಂಗೀತಗಾರನ ಖಾಸಗಿ ಬದುಕನ್ನು ತೆರೆದು ಇಟ್ಟಿದ್ದಾರೆ. ನಾನು ಹಲವು ಸಾಹಿತಿ, ಕಲಾವಿದರುಗಳನ್ನು ಹತ್ತಿರದಿಂದ ಬಲ್ಲೆ. ಇವರಲ್ಲಿ ಹೆಚ್ಚಿನವರು "ಕಚ್ಚೆಹರುಕರು". ಇದು ನಾನು ಹೇಳಿದ ಮಾತಲ್ಲ. ಒಮ್ಮೆ ಮಾ. ಹಿರಣ್ಣಯ್ಯನವರ ಸಂದರ್ಶನ ಆಕಾಶವಾಣಿಯಲ್ಲಿ ಬರುತ್ತಿತ್ತು. ಅದರಲ್ಲಿ ಅವರೇ ಹೇಳಿದ ಮಾತು -"ನಮಗೆ ವೇದಿಕೆಯ ಮೇಲೆ ಜನ ಗೌರವಿಸುತ್ತಾರೆ. ಆದರೆ ಮನೆಗಳಿಗೆ ಪ್ರವೇಶ ಇಲ್ಲ. ನಮ್ಮನ್ನು ಸಾಮಾಜಿಕವಾಗಿ ದೂರವೇ ಇಟ್ಟಿದ್ದಾರೆ. ಕೌಟುಂಬಿಕ ಕಾರ್ಯಕ್ರಮಗಳಿಗೆ ನಮ್ಮನ್ನು ಸೇರಿಸುವುದಿಲ್ಲ. ಯಾಕೆಂದರೆ ನಾವೆಲ್ಲ ಕಚ್ಚೆಹರುಕರು". ಮಂದ್ರದಲ್ಲೂ ಇದೇ ಮಾತುಗಳ ಪುನರಾವರ್ತನೆಯಾಗುತ್ತದೆ. ಒಬ್ಬ ಸಂಗೀತ ಪ್ರೇಮಿ ಹೇಳುತ್ತಾನೆ -"ನಾವು ಕಲಾವಿದರನ್ನು ವೇದಿಕೆಯ ಮೇಲೆ ಗೌರವಿಸುತ್ತೇವೆ. ಅವರನ್ನು ಸನ್ಮಾನಿಸುತ್ತೇವೆ. ಆದರೆ ಮನೆಗಳಿಗೆ ಸೇರಿಸುವುದಿಲ್ಲ."
ಅಂದ ಹಾಗೆ ನೀವು ಕಂಬಾರರ ನಾಟಕಗಳನ್ನು ನೋಡಿದ್ದೀರಾ? ಉದಾ: ಜೋಕುಮಾರಸ್ವಾಮಿ. ಅದರಲ್ಲಿ ಪ್ರಾರಂಭದಲ್ಲೇ ಹಾದರ ಎಂದು ಪ್ರಾರಂಭಿಸುತ್ತಾರೆ.
ಸಿಗೋಣ,
ಪವನಜ