ಉ: ಹಾಡು ಬೇಕಾಗಿತ್ತು.
- ಉ: ಹಾಡು ಬೇಕಾಗಿತ್ತು. By: girish.rajanal (Oct 22 2007 - 10:43am)
- ಉ: ಹಾಡು ಬೇಕಾಗಿತ್ತು. By: srivathsajoshi (Oct 20 2007 - 5:45pm)
- ಉ: ಹಾಡು ಬೇಕಾಗಿತ್ತು. By: Ennares (Oct 21 2007 - 12:13pm)
- ಉ: ಹಾಡು ಬೇಕಾಗಿತ್ತು. By: hpn (Oct 21 2007 - 10:39pm)
- ಉ: ಹಾಡು ಬೇಕಾಗಿತ್ತು. By: Ennares (Oct 21 2007 - 12:13pm)
- ಉ: ಹಾಡು ಬೇಕಾಗಿತ್ತು. By: mahesha (Oct 18 2007 - 2:51pm)
- ಉ: ಹಾಡು ಬೇಕಾಗಿತ್ತು. By: mahesha (Oct 18 2007 - 2:54pm)
- ಉ: ಹಾಡು ಬೇಕಾಗಿತ್ತು. By: veena (Oct 18 2007 - 4:23pm)
- ಉ: ಹಾಡು ಬೇಕಾಗಿತ್ತು. By: mahesha (Oct 18 2007 - 2:54pm)

RSS:
ಉ: ಹಾಡು ಬೇಕಾಗಿತ್ತು.
ಗಿರೀಶ ರಾಜನಾಳ ಅವರಿಗೆ ನಮಸ್ಕಾರ!
ನೀವು ಅಪೇಕ್ಷಿಸಿರುವ ಹಾಡಿನ ಸಾಹಿತ್ಯ ಇಲ್ಲಿದೆ.
===========================
ಧವಳ ಹಿಮದ ಗಿರಿಯ ಮೇಲೆ ಅರುಣ ಧ್ವಜವ ಹಾರಿಸಿ
ಮುಗಿಲ ಏಣಿ ಏರಿ ನಿಂದು ವಿಜಯಭೇರಿ ಬಾರಿಸಿ ||ಪ||
ಸಿಂಧು ಕಣಿವೆಯೊಡಲಿನಿಂದ ವೀರಗಾನ ಮೊಳಗಲಿ
ಧ್ಯೇಯರವಿಯ ಕಿರಣ ತರುಣರೆದೆಯ ಗುಡಿಯ ಬೆಳಗಲಿ
ಎದ್ದು ನಿಲ್ಲು ಭಾರತ..... ದಿವ್ಯಪ್ರಭೆಯ ಬೀರುತ ||೧||
ಮನವ ಹಸಿರುಗೊಳಿಸುತಿಹಳು ಭಾವಗಂಗೆ ಅನುದಿನ
ಇಳೆಯ ಕೊಳೆಯ ತೊಳೆಯುತಿಹಳು ತಾಯಿ ಗಂಗೆ ಕ್ಷಣಕ್ಷಣ
ನೆಲವಿದೆಮ್ಮ ಪಾವನ..... ಎನಿತು ಧನ್ಯ ಜೀವನ ||೨||
ನಾಡಗುಡಿಯ ಮೂರುಕಡೆಯು ಪೊರೆವ ಶಾಂತ ಸಾಗರ
ಹಿಂದುಜನರ ಹೃದಯವಿಂದು ಕ್ಷಾತ್ರತೇಜದಾಗರ
ಸ್ಫೂರ್ತಿ ಗೌರಿಶಂಕರ...... ಕಾಲಯಮನು ಕಿಂಕರ ||೩||
ಅಸುರತನದ ಉಸಿರ ನೀಗಿ ಭೇದಭಾವ ನೀಗುತ
ಸಾಗು ಮುಂದೆ ಮುಂದೆ ಸಾಗು ಮಾತೆಯನ್ನು ಸ್ಮರಿಸುತ
ನಿನಗೆ ಜಯದ ಆರತಿ..... ಹರಸು ತಾಯೆ ಭಾರತಿ ||೪||
============================
ಇದೇ ರೀತಿ ನಿಮಗೆ ಈ ಕೆಳಗಿನ ಹಾಡಿನ ಸಾಹಿತ್ಯವನ್ನೂ ನಾನಿಲ್ಲಿ ಕೊಟ್ಟರೆ ಇಷ್ಟವಾಗಬಹುದೆಂದುಕೊಂಡಿದ್ದೇನೆ. (ಇಷ್ಟೊಂದು ಒಳ್ಳೆಯ ಹಾಡಿನ ಸಾಹಿತ್ಯವನ್ನು ಕೋರಿದ್ದಕ್ಕಗಿ ಇದು ನಿಮಗೆ ಬೋನಸ್. ನನ್ನ ಬಾಯಿಪಾಠ ಸಂಗ್ರಹದಿಂದ).
ವರಭವ್ಯ ಭಾರತದ ನಿರ್ಭೀತ ಸಂತತಿಗೆ...
ಸಂಗ್ರಾಮಸಂಗೀತ ಹಾಡುವಾಸೆ
ರಣಭೇರಿ ಕಹಳೆಗಳ ಘನಘೋರ ಗರ್ಜನೆಗೆ
ನಲಿದು ನರ್ತಿಸುತ ಹೋರಾಡುವಾಸೆ... || ಪ ||
ಮಾನವತೆಯುದ್ಧಾರ ಮಾತೃವೈಭವಕಾರ್ಯ
ಬೆವರುನೆತ್ತರು ಸುರಿಸಿ ದುಡಿಯುವಾಸೆ
ದೇಶಹಿತ ಧರ್ಮಹಿತ ಸರ್ವಜನಹಿತಕಾಗಿ
ಕಲಿತನದಿ ಕಾದಾಡಿ ಮಡಿಯುವಾಸೆ || ೧ ||
ಸವ್ಯಸಾಚಿಯ ತೆರದಿ ದಿವ್ಯಾಸ್ತ್ರಗಳ ಪಡೆದು
ಮರಳಿ ಕುರುಕ್ಷೇತ್ರದಲಿ ನಿಲ್ಲುವಾಸೆ
ಭೋರ್ಗರೆವ ಪಾಂಚಜನ್ಯದಾರಣಘೋಷವನು
ಭೂಮಂಡಲದಿ ಬಿತ್ತರಿಸುವಾಸೆ || ೨ ||
ಧ್ಯೇಯದೇವನಪಥದಿ ಅರ್ಚನೆಯ ಹೂವಾಗಿ
ಧನ್ಯತೆಯ ಸಂತೃಪ್ತಿ ಹೊಂದುವಾಸೆ
ವ್ಯಕ್ತಿಗತ ಮಾನಾಪಮಾನಗಳ ಬದಿಗಿರಿಸಿ
ಭಾರತಿಯ ಅಡಿಯ ಹುಡಿಯಾಗುವಾಸೆ || ೩ ||
===============================