ಉ: ಇದು ಯಾಕೆ ಹಿಂಗೆ?
- ಉ: ಇದು ಯಾಕೆ ಹಿಂಗೆ? By: girish.rajanal (Oct 22 2007 - 4:40pm)
- ಉ: ಇದು ಯಾಕೆ ಹಿಂಗೆ? By: mahesha (Oct 22 2007 - 5:41pm)
- ಉ: ಇದು ಯಾಕೆ ಹಿಂಗೆ? By: kpbolumbu (Oct 22 2007 - 7:26pm)
- ಉ: ಇದು ಯಾಕೆ ಹಿಂಗೆ? By: Sunil Jayaprakash (Oct 22 2007 - 9:33pm)
- ಉ: ಇದು ಯಾಕೆ ಹಿಂಗೆ? By: ಸಂಗನಗೌಡ (Oct 26 2007 - 8:46am)
- ಉ: ಇದು ಯಾಕೆ ಹಿಂಗೆ? By: mahesha (Oct 26 2007 - 9:00am)
- ಉ: ಇದು ಯಾಕೆ ಹಿಂಗೆ? By: girish.rajanal (Jan 24 2008 - 5:39pm)
- ಉ: ಇದು ಯಾಕೆ ಹಿಂಗೆ? By: mahesha (Oct 26 2007 - 9:00am)
- ಉ: ಇದು ಯಾಕೆ ಹಿಂಗೆ? By: mahesha (Oct 23 2007 - 10:56am)
- ಉ: ಇದು ಯಾಕೆ ಹಿಂಗೆ? By: ಸಂಗನಗೌಡ (Oct 26 2007 - 8:46am)
- ಉ: ಇದು ಯಾಕೆ ಹಿಂಗೆ? By: mahesha (Oct 22 2007 - 8:08pm)
- ಉ: ಇದು ಯಾಕೆ ಹಿಂಗೆ? By: Sunil Jayaprakash (Oct 22 2007 - 9:33pm)
- ಉ: ಇದು ಯಾಕೆ ಹಿಂಗೆ? By: kpbolumbu (Oct 22 2007 - 7:26pm)
- ಉ: ಇದು ಯಾಕೆ ಹಿಂಗೆ? By: mahesha (Oct 22 2007 - 5:41pm)
- ಉ: ಇದು ಯಾಕೆ ಹಿಂಗೆ? By: Sunil Jayaprakash (Oct 22 2007 - 1:18pm)
- ಉ: ಇದು ಯಾಕೆ ಹಿಂಗೆ? By: mahesha (Oct 22 2007 - 4:07pm)
- ಉ: ಇದು ಯಾಕೆ ಹಿಂಗೆ? By: mahesha (Oct 22 2007 - 12:37pm)
- ಉ: ಇದು ಯಾಕೆ ಹಿಂಗೆ? By: mahesha (Oct 22 2007 - 12:39pm)

RSS:
ಉ: ಇದು ಯಾಕೆ ಹಿಂಗೆ?
ರೀ ಮಾರಾಯ್ರೆ..
ಅದು ಸರಿಯಾಗೇನೇನೇಯ ಇದೆ...
ಕನ್ನಡದಲ್ಲಿ ಯಾವ ಒರೆ/ಪದವೂ 'ಉದ್ದ ಸೊರ/ದೀರ್ಘಸ್ವರ'ದಿಂದ ಕೊನೆಯಾಗದು.
ಬೋಶ( ಬಹುಶಃ ) ಶಬ್ದಮಣಿದರ್ಪಣದಲ್ಲಿ ಇರಬೇಕು.. ಇದನ್ನು ಸರಿಯಾಗಿ ಬಿಡಿಸಿ ಬಿಡಿಸಿ ಹೇಳಿದ್ದಾರೆ.
ಸಕ್ಕದದ ಶಾಸ್ತ್ರೀ, ಕನ್ನಡದೊಳು ಶಾಸ್ತ್ರಿ.
ಹಾಗೆ
ಸೀತಾ = ಸೀತೆ/ಸೀತ ( ಸೀತಮ್ಮ ಅಂತ ಹೆಸರು ಇರ್ತದೆ, ಹೊರತು ಸೀತಾಮ್ಮ ಅಂತ ಇರೊಲ್ಲ. ಹಾಗೇ ರತ್ನಮ್ಮ, ರತ್ನಾಮ್ಮ ಅಲ್ಲ )
ಕಮಲಾ = ಕಮಲೇ/ಕಮಲ ( ಕಮಲಮ್ಮ ಹೊರತು, ಕಮಲಾಮ್ಮ ಅಲ್ಲ )
ರೇಷ್ಮಾ = ರೇಷ್ಮೆ/ರೇಷ್ಮ
ನೀವು ಸಕ್ಕದದ ವ್ಯಾಕರಣವನ್ನು ಇಲ್ಲಿ ಬಳಸ ಹತ್ತಿದ್ದೀರಿ, ಆದ್ರೆ ಕನ್ನಡದೊಳು ಸಕ್ಕದದಿಂದ( ಹಾಗೇ ಬೇರೆನುಡಿಗಳಿಂದ) ಬಂದ ಒರೆಗಳು ಹೇಗೆ ಮಾರ್ಪು/ಮಾಪಾರ್ಟುಗೊಳ್ಳುವುವು ಎಂದು ನಿಮಗೆ ತಿಳೀತಿಲ್ಲ. ತುಸು ಕನ್ನಡದ ವ್ಯಾಕರಣವನ್ನೂ ಓದಿ ಅಣ್ಣಾವ್ರೆ!!
ವ್ಯಾಕರಣ ದೋಷಗಳನ್ನು ಕಂಡುಹಿಡಿಯುವುದು, ಒಳ್ಳೇದೇ ಅದು ನಮ್ಮ ನುಡಿಯನ್ನು ಹೆಚ್ಚೆಚ್ಚು ಅರಿಯಲು ನೆರವಾಗುವುದು. ಆದ್ರೆ ವ್ಯಾಕರಣವನ್ನೂ ಅದರಲ್ಲೂ ಕನ್ನಡದ ವ್ಯಾಕರಣ ಹೊತ್ತಗೆಗಳನ್ನು ಓದಿಕೊಳ್ಳದೇ, ಬರೀ ಸಕ್ಕದದ ನಿಯಮಗಳ ಬಳಸಿ ದೋಷ ಎನ್ನುವುದು ತಕ್ಕುದಲ್ಲ...!!
ಸಕ್ಕದದ "ಸಿಂಹಾತ್ ಭಯಂ" ಕನ್ನಡದಲ್ಲಿ ಸಿಂಗದಿಂದ ಹೆದರಿಕೆ ಹೊರತು, ವ್ಯಾಕರಣ ಶುದ್ಧಿ ಎಂದು "ಸಿಂಗದ ದೆಸೆಯಿಂದ ಹೆದರಿಕೆ" ಅಲ್ಲ.
ಸಕ್ಕದದ "ಗೃಹಾತ್ ಬಹಿ", ಕನ್ನಡದೊಳು "ಮನೆಯಾಚೆ/ಮನೆಯ ಹೊರಗೆ" ಹೊರತು, ಸಕ್ಕದದಂತೆ "ಮನೆಯ ದೆಸೆಯಿಂದ ಹೊರಗೆ" ಅಲ್ಲ
ಸಕ್ಕದದ "ಗೃಹಂ ಗಚ್ಛತಿ", ಕನ್ನಡದೊಳು "ಮನೆಗೆ ಹೋಯ್ತದೆ" ಹೊರತು, "ಮನೆಯನ್ನು ಹೋಯ್ತದೆ" ಅಲ್ಲ.
ಸಕ್ಕದ/ಸಂಸ್ಕೃತದ ವ್ಯಾಕರಣಗಳನ್ನು ಹಾಗ್‌ಹಾಗೆ ಕನ್ನಡಕ್ಕೆ ಹೇರಲು ಬರಲ್ಲ.. ಕನ್ನಡ ಹೇರಿಸಿಕೊಳ್ಳಲ್ಲ.
ಅದಕ್ಕೆ ನಮ್ಮ ಶಂಕ್ರ ಬಟ್ಟರು "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ" ಅಂತ ಸಾರಿರೋದು!