ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?

October 28, 2007 - 12:57pm — mahesha

ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?

mahesha's picture

ಕೇವೆಂ....

ನಿಮಗೆ, ದಯವಿಟ್ಟು ನಾನು ನಿಮ್ಮ ಸಾಲುಗಳನ್ನೇ ( ಅಣಕದ ) ತುಸು ನೀಟಾಗಿಸಿ ಗೊಂದಲ ಕಡಮೆ ಮಾಡಲೆಳಸಿದ್ದೀನಿ.

ಇವೆಲ್ಲ ದಿಟಗಳು
* ಅತಿ, ಹದಮೀರಿದ ಸಂಸ್ಕೃತದಿಂದಲೇ ಕನ್ನಡಕ್ಕೆ ಕುತ್ತು.( ಕಕ್ಕುಟೋದ್ಯಮ, ಕೋಳಿ ಸಾಕಣೆ )
* ಮಹಾಪ್ರಾಣಗಳ ಪ್ರಾಣ ತೆಗೀಬೇಕು.ಕನ್ನಡಕ್ಕೆ ಒಗ್ಗದ ಸಂಸ್ಕೃತ ಒರೆಗಳನ್ನು ಓಡಿಸಲೇಬೇಕು. ( ಬೃಹತ್, ಬಾಹ್ಯಾಕಾಶ, ಕೃತಕ ಗರ್ಭಧಾರಣೆ)
* ಕನ್ನಡ ದ್ರಾವಿಡ ನುಡಿ.ಆದ್ದರಿಂದ ಕನ್ನಡಿಗರು ದ್ರಾವಡ ನುಡಿ ಗುಂಪಿನವು. ಸಂಸ್ಕೃತ ನಮ್ಮದಲ್ಲದ,ಬೇರೆ ನುಡಿ-ಕುಟುಂಬದ ನುಡಿ, ಕನ್ನಡಕ್ಕೂ - ಸಂಸ್ಕೃತಕ್ಕೂ ಬಾಶಾ ವಿಜ್ನಾನದಂತೆ ಯಾವ ನಂಟೂ ಇಲ್ಲ. ಸಕ್ಕದ-ಕನ್ನಡಗಳ ನಂಟು ಬರೀ ದಾರ್ಮಿಕ, ಜಾತಿ. ( ತುಳು ಬ್ರಾಹ್ಮಣರು ಅಶನಾನ, ಇಲ್ಲಿ ಅಶನ ಸಕ್ಕದ, ಅದೇ ಬಂಟ ತುಳು ಒಣಸು ಆಂಡ, ಇಲ್ಲಿ ಒಣಸು ದ್ರಾವಿಡ )
* ಸಂಸ್ಕೃತ ಹಾರುವರು ಬಳಕೆ ಹೆಚ್ಚು.ಅದರಲ್ಲಿರುವ ಅರಿಮೆ ಒಂದು ಧರ್ಮಕ್ಕೆ ಮಾತ್ರ ಸೇರಿದ್ದು ಹೆಚ್ಚು, ವಿಜ್ನಾನ ಮುಂತಾದವು ಇದೆ. ಆದರೆ ಇಂದು ಅವನ್ನು ಪಡೆಯಲೂ ನಮಗೆ ಇಂಗ್ಲೀಶ್ ಸುಲಬ ದಾರಿ.
* ಸಂಸ್ಕೃತದಿಂದ ನಾವು ಕಲಿಯುವಂತದ್ದು ಏನೂ ಇಲ್ಲ. ಹೊಟ್ಟೆ ಹೊರೆಯೋಕೆ ಏನೂ ಗಿಟ್ಟುವುದಿಲ್ಲ. ( ೯೯% ಮಂದಿಗೆ ಈ ಮಾತು ದಿಟ)
* ಸಂಸ್ಕೃತವನ್ನು ಹೊಗಳುವುದಕ್ಕಾಗಿ, ಕನ್ನಡವನ್ನು ಕೀಳೆನ್ನುವು, ತಾಯಿನೆಲಕ್ಕೆ ಎರೆಡು ಬಗೆಯುವುದು.( ಸಂಸ್ಕೃತವಿಲ್ಲದ ಕನ್ನಡ ಜಾಳು. ಒಮ್ಮ ಸಕ್ಕದ ಪ್ರಚಾರಕ ಹೇಳಿದ್ದು )

ಇವೆಲ್ಲ ಸುಳ್ಳುಗಳು
# ಸಂಸ್ಕೃತ ಕನ್ನಡದ ಜನನಿ (ದೇವಕಿಯಲ್ಲದಿದ್ದರೂ ಕನಿಷ್ಟ ಯಶೋದೆ).
# ಸಂಸ್ಕೃತವಿಲ್ಲದ ಕನ್ನಡ ಸತ್ವಹೀನ. ಬಹಳಷ್ಟು ಕನ್ನಡ ಪದಗಳು ಸಂಸ್ಕೃತದ ಭಿಕ್ಷೆ.ಪಾರಿಭಾಷಿಕ ಪದಗಳಿಗೆ ಸಂಸ್ಕೃತವೇ ಶ್ರೇಷ್ಟ.
# ಸಂಸ್ಕೃತದ ವಿರುದ್ಧ ಮಾತಾಡುವವರೆಲ್ಲಾ ಜಾತಿ ರಾಜಕೀಯದ ಉದ್ದೇಶದಿಂದ ಮಾಡುತ್ತಾರೆ.
# ನಮ್ಮ ಧರ್ಮ ಮತ್ತು ಸಂಸ್ಕೃತಿಯ ಸಾರವಿರುವುದೇ ಸಂಸ್ಕೃತದಲ್ಲಿ.
# ಸಂಸ್ಕೃತ ಸಕಲ ಜ್ಞಾನಗಳ ಭಂಢಾರ.ಮೇಲಾಗಿ ದೇವ ಭಾಷೆ ( ಕಂಪ್ಯೂಟರ್‍ ಬಗ್ಗೆ ಎಲ್ಲಿದೆ? _
# ಸಂಸ್ಕೃತ ಗಣಕಕ್ಕೆ ಹೇಳಿ ಮಾಡಿಸಿದ ಭಾಷೆ.ಪಾಣಿನಿಯ ಅಷ್ಟಾಧ್ಯಾಯೀ ಕನ್ನಡಕ್ಕೂ ಚಾಚೂ ತಪ್ಪದೆ ಅನ್ವಯಿಸುತ್ತದೆ. ( Smiling )

ಇಲ್ಲಿ ಸಂಗತಿ ಇಸ್ಟೇ, ತಮ್ಮ ಪೊಳ್ಳುಹಿರಿಮೆಯನ್ನು ಮೆರೆಸಲು ಸಕ್ಕದ fascistಗಳು ಇಂತ ಕಂತ್ರಿ ಕೆಲಸಗಳನ್ನು ಮಾಡುತ್ತಿದ್ದಾರೆ. ಎಲ್ಲೆಡೆ ಇವರ lobby ಇದೆ. ಇಲ್ಲದೇ ಹೋಗಿದ್ರೆ ಕೇಂದ್ರೆ ಸರಕಾರ ಯಾಕೆ ೬೦೦ ಕೋಟಿ ರೂ ವರ್ಶ ವರ್ಶ ಸಕ್ಕದದ ಮೇಲೇ ಚಲ್ಲೀತು.

ಇಲ್ಲಿ ಸಕ್ಕದವನ್ನು ಇದಿರುಸುತ್ತಿಲ್ಲ, ಸಕ್ಕದದ ಹೆಸರಲ್ಲಿ ರೊಕ್ಕ ಮಾಡಲು, ಅದಕ್ಕೆ ಇಲ್ಲದೆ ರೆಕ್ಕೆಪುಕ್ಕ ಕಟ್ಟುವವರ ಬಗ್ಗೆ ಅಸ್ಟೇ ಎದುರು.

ನೀವು ಶಂಕರ ಬಟ್ರ ಹೊತ್ತಗೆಗಳನ್ನು ಓದದಿದ್ರೆ, ದಯವಿಟ್ಟು ಓದಿ..
============================================================

೧) ಕನ್ನಡದಲ್ಲಿ ಎಷ್ಟು ಸಂಸ್ಕೃತ ಬಳಸಬೇಕು ? ಇದನ್ನ ಅವರವರಿಗೆ ಬಿಡಿ. ಆಡು ನುಡಿಗೆ ದೂರಾದ "ಸಂಸ್ಕೃತಭೂಯಿಷ್ಟ"ವಾದ ಬರಹ ಸಹಜ ಸಾವನ್ನು ಅಪ್ಪುತ್ತದೆ. ನಾವು ನಮ್ಮ ಕೈಯಲ್ಲಿ ನೆತ್ತರು ಹರಿಸುವುದು ಬೇಡ.ನಾವು ತಿಳಿಗನ್ನಡದಲ್ಲಿ ಬರೆದು ಮೇಲ್ಪಂಕ್ತಿ ಹಾಕಿದರಾಯಿತು

( ನೀವು ಎಸ್ಟು ಹಿರಿಯರೋ, ಕಿರಿಯರೂ ನಾನರಿಯೇ, ಆದ್ರೆ, ಇದಿರು ದನಿ ಎತ್ತಬೇಡಿ, ಪ್ರತಿಬಟನೆ ಬೇಡ ಅನ್ನೋದು ಸರಿಯಿಲ್ಲ, ಇದು personal attack ಅಲ್ಲ )

ಮಂದಿ ದನಿ ಎತ್ತದೇನೇ ಇಂದು ಕನ್ನಡದಲ್ಲಿ ಸಿಕ್ಕಾಪಟ್ಟೆ ಸಕ್ಕದ ತುಂಬಿರೋದು.. ಸರಕಾರಿ ಬಸ್ ನಿಲ್ದಾಣದಲ್ಲಿ "ಪುರುಷರ ಶೌಚಾಲಯ, ಮಹಿಳಾ ಶೌಚಾಲಯ" ಇರೋದು.. ( ಇದೇ ಸಕ್ಕದದವರ ಸರಕಾರ lobby ).. ಅದು ಎಂದು "ಗಂಡಸರ ಬಚ್ಚಲು, ಹೆಂಗಸರ ಬಚ್ಚಲು" ಆಗೋದು? ನೀವು ಏನು ಮಾಡಕ್ಕೆ ಆಗದಿದ್ರೆ, ಮಾಡಬೇಡಿ. ( ನಿಮಗೆ ಬೇಕಾಗಿಲ್ಲ ಅಲ್ವ.. ಯಾಕೆ ಅಂದ್ರೆ ನಿಮಗೆ ಪುರುಷ, ಮಹಿಳೆ, ಇವೆಲ್ಲ ಸಲೀಸಾಗಿ ಬರೋರು, personal attack ಅಲ್ಲ )

ಆದ್ರೆ ಇದರ ಇದಿರು, ದನಿ ಎತ್ತಿದವರಿಗೆ "ನಾವು ನಮ್ಮ ಕೈಯಲ್ಲಿ ನೆತ್ತರು ಹರಿಸುವುದು ಬೇಡ" ಅನ್ನೋದೇ ಸರಿಯಲ್ಲ.. ಈಗ ನೆತ್ತರು ಹರಿಸೇ ಬದಲಾವಣೆ ತರ್ತೀವಿ ಅನ್ನೋ ಮಂದಿಯ ಗುರಿಯಲ್ಲಿ ಯಾವ ತಪ್ಪೂ ಇಲ್ಲ.( ಅವರವರ ಇಸ್ಟಕ್ಕಾಗೇ ಎಲ್ಲರೂ ಬದುಕುವುದು. ನಿಮ್ಮ ಇಷ್ಟ ನೆತ್ತರು ಹರಿಸದಿರುವುದು. ಅವರದು ಬದಲಾವಣೆಗಾಗಿ ಹರಿಸುವುದು)

"ಬೃಹತ್ ಬೆಂಗಳೂರು ಯಾಕೆ? ದೊಡ್ಡ ಬೆಂಗಳೂರು ಯಾಕೆ ಬೇಡ?" ( ಇದರ ಎದಿರು ಮಾತಾಡೋದು, ನೆತ್ತರು ಹರಿಸುವುದು ಎಂದು ಉತ್ಪ್ರೇಕ್ಷ ಯಾಕೆ? )

ಜಗದಲ್ಲಿ ಎಲ್ಲ ಅನ್ಯಾಯ, ಹೇರಿಕೆಗಳು ನಾವು ದಂಗೆ ಎದ್ದು ಕೂಗಿದಾಗಲೇ ಸರಿದು ಹೋಗಿರೋದು( ಕಡೆ ಪಕ್ಷ atleast ಅದಕ್ಕೆ ವಿರೋದ ಇದೆ ಅಂತಾನಾದ್ರು ಗೊತ್ತಾಗ ಬೇಕಲ್ಲ). ನಿಮಗೆ ಬದಲಾವಣೆ ಬೇಡ, ಇಲ್ವೇ ಅದಕ್ಕೆ ನಿಮ್ಮ ಒತ್ತು ಕಡಮೆ.

...೨) ವರ್ಣಮಾಲೆಯ/ವ್ಯಾಕರಣ ಸರಳೀಕರಣ - ಇದು ಒಪ್ಪತಕ್ಕ ಸಂಗತಿ. ಪುಟಾಣಿ ಮಕ್ಕಳಿಗೆ ಮತ್ತು ಕನ್ನಡೇತರರಿಗೆ ಸರಳ ವರ್ಣಮಾಲೆ ಕಲಿಸೋಣ. ನಿತ್ಯ ಬಳಕೆಯಲ್ಲಿರುವ ಎಲ್ಲ ಪದಗಳಿಗೂ ಸರಳ ವರ್ಣಮಾಲೆಯಲ್ಲೇ ಬರೆಯುವಂತ ಉಚ್ಚಾರಣೆ("alternate spelling") ಉಪಯೋಗಿಸೋಣ. ಇದನ್ನು ಒಪ್ಪದವರಿಗೆ ಆಯ್ಕೆ ಇದ್ದೇ ಇದೆ. ಆದರೆ ಚಿಕ್ಕ ಮಕ್ಕಳ ಹೊತ್ತಗೆಗಳಲ್ಲಿ ಸರಳ ಕನ್ನಡವೇ ಬಳಕೆಯಾಗಲಿ. ೫ನೇ ತರಗತಿಯಿಂದ ಪೂರ್ತಿ ವರ್ಣಮಾಲೆಯ ಪಾಠವಾಗಲಿ. ಇದು ೬/೭ ಆದರೂ ಚಿಂತೆಯಿಲ್ಲ.
(ಶಂಕರ ಬಟ್ರ.. ಹೊತ್ತಗೆ ಇದಕ್ಕೆ ಹೇಳಿರೋದು.. )

೩) ಪಾರಿಭಾಷಿಕ (technical) ಪದಗಳು- ಆದಷ್ಟು ತಿಳಿಗನ್ನಡ ಇಲ್ಲವೆ ಈಗಾಗಲೆ ಬಳಕೆಯಲ್ಲಿರುವ ಸರಳ ಸಂಸ್ಕೃತ ಪದಗಳನ್ನು ಉಪಯೋಗವಾಗಲಿ.ಅರ್ಥವಾಗದ ಮೂಲ ದ್ರಾವಿಡ (ಇಲ್ಲವೇ ತಮಿಳು) ಒರೆಗಳು ಸಂಸ್ಕೃತದಷ್ಟೇ ದೊರ ಇಡೋಣ.ಬೇಕಿದ್ದರೆ ಇಂಗ್ಲೀಶು ಪದವನ್ನೇ ಕನ್ನಡ ನಾಲಿಗೆಗೆ ಹೊಂದುವಂತೆ ಮಾರ್ಪಡಿಸೋಣ.ಇವುಗಳಲ್ಲಿ ನಮ್ಮ ದೇಶದ ಎಲ್ಲ ನುಡಿಗಳು ಒಂದೇ ನೀತಿ ಅನುಸರಿಸಿದರೆ ಒಳಿತು.
(ಶಂಕರ ಬಟ್ರ.. ಹೊತ್ತಗೆ ಇದಕ್ಕೆ ಹೇಳಿರೋದು.. )

೪) ಹಳ್ಳಿ ಇಲ್ಲವೆ ಕನ್ನಡ ಶಾಲೆಗಳಿಂದ ಬಂದ ಹುಡುಗರು ಕಾಲೇಜಿಗೆ ಬಂದಾಗ ಕೀಳರಿಮೆಯಾಗುವುದು ಅವರ ಕನ್ನಡದಲ್ಲಿರುವ ಸಂಸ್ಕೃತ ಕೊರತೆಯಿಂದಲ್ಲ . ಅವರ ಇಂಗ್ಲೀಶಿನಿಂದ. ನನ್ನ ಜೊತೆಯಲ್ಲಿ ಓದುತಿದ್ದ ಅನೇಕ ಮಂದಿಗೆ ಈ ರೀತಿ ಆದದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಸುಮಾರು ಜನ ಓದಿಗೆ ಶರಣು ಹೊಡೆದರು. ಕಾಲೇಜಿನಲ್ಲಿ ಪರೀಕ್ಷೆಯಲ್ಲಿ ಉತ್ತರಗಳನ್ನು ಬರೆಯಲು ಅರೆಕನ್ನಡ -ಅರೆಇಂಗ್ಲೀಶು ಬಳಸಲು ಅನುವು ಮಾಡಿಕೊಟ್ಟರೆ ಇವರೆಲ್ಲ ಮುನ್ನೆಡೆಯುತ್ತಾರೆ. ಕ್ರಮೇಣ ಕೆಲಸಕ್ಕೆ ಬೇಕಾದಷ್ಟು ಇಂಗ್ಲೀಶು ಕಲಿಯುತ್ತಾರೆ.

ಇಲ್ಲೂ ಕೆಲವು ನಿಮ್ಮದೇ ತೀರ್ಪಿತ್ತಿದ್ದೀರಿ.

ಹಳ್ಳಿಗಳಲ್ಲಿ ಕಲಿಯುವ ಮಕ್ಕಳು ಹೆಚ್ಚು so called ಕನ್ನಡ ಮಾಧ್ಯಮದಲ್ಲಿ ಓದಿರುತ್ತಾರೆ. ಅದರಲ್ಲಿ "ಪತ್ರಹರಿತ್ತು, ಉಚ್ಛಾವಸ, ..." ಇಂತಹ ಅವರಿಗೆ ತಿಳಿಯದ ದೊಡ್ಡ ದೊಡ್ಡ ಸಂಸ್ಕೃತ ಪದ ತುಂಬಿದ ಕಲಿಕೆ.. ಅವರಿಗೆ ದಿಟವಾಗಲೂ ಅವು ತಿಳಿದಿರಲ್ಲ. ಅವರೀ ಮಾತೃಭಾಷಾ ಶಿಕ್ಷಣ ಎಂದು ಸಂಸ್ಕೃತದಲ್ಲಿ, ಸಂಸ್ಕೃತ ಪದಗಳಿಂದ ಕಲಿಸೋದೇ ದೊಡ್ಡ ಮೋಸ.. ( ಇದು common sense ಇಂದ ನೋಡಿದ್ರೂ, ಮನೆಯಲ್ಲಿ ಸಂಸ್ಕೃತ ವಾತಾವರಣ ಇರೋರಿಗೇನೇ ಲಾಭ ಇರೋದು )

ಇಂಗ್ಲೀಶ ಬಗ್ಗೆ ನಿಮ್ಮ ಸೊಂತ ವಿಚಾರ ಎಲ್ಲರಿಗೂ ಹಿಡಿಸಲ್ಲ.

"ಇನ್ನು ಕನ್ನಡಿಗರೇ ಆದ ಸಂಸ್ಕೃತ ಪ್ರೇಮಿಗಳು ಯಾಕೆ ಸುಮ್ಮನೆ ಸಿಟ್ಟಾಗುತ್ತಾರೆ? ಇಲ್ಲಿ ಬಿಡಿಸಿ ಹೇಳದ ಒಳಮನಸ್ಸಿನ ಗುಟ್ಟುಗಳಿವೆ. ಕನ್ನಡಿಗರು ನಮ್ಮ ದೇಶದಲ್ಲಿ ಇರುವ ಬಹಳ "ದೇಶಭಕ್ತ"( nationalist) ಜನ. ಕನ್ನಡಿಗರ ಜಾಯಮಾನಕ್ಕೆ ಪ್ರಾದೇಶಿಕತೆ ಒಗ್ಗಲ್ಲ. ಅಷ್ಟೇ ಅಲ್ಲ,ನಮ್ಮ ಇಡೀ ಧಾರ್ಮಿಕ(ಹಿಂದು) ಪರಂಪರೆಯನ್ನು ತುಂಬಾ ಗೌರವಿಸುತ್ತಾರೆ. ಇಲ್ಲಿ ಯಾವತ್ತೂ ಜಾತಿ/ ನುಡಿ ಅಡ್ಡ ಬಂದಿಲ್ಲ. ಉದಾಹರೆಣೆಗೆ ಶ್ರೀವೈಷ್ಣವ ಗುಡಿಗಳಲ್ಲಿ ತಿರುಪ್ಪಾವೆ ಹಾಡಿದರೆ ಯಾರು ತಲೆ ಬಿಸಿ ಮಾಡಿಕೊಳ್ಳುವುದಿಲ್ಲ. ಲಿಂಗಾಯತ / ಒಕ್ಕಲಿಗ ಮಠಗಳೂ ಕೊಡ ವೇದಾಧ್ಯಯನವನ್ನು ಪೋಷಿಸುತ್ತವೆ.ಇಲ್ಲಿ ಜಾತಿಗಳಲ್ಲಿ ಸ್ಫರ್ಧೆ ಇದ್ದರೂ ಕೊಚ್ಚಿಹಾಕುವಂತ ಆಕ್ರೋಶ ಇಲ್ಲ. ನಮ್ಮ ನೆರೆ ರಾಜ್ಯದಲ್ಲಿ ಇರುವಂತ ರಾಜಕೀಯ "ದ್ರಾವಿಡ ಪ್ರಜ್ಞೆ " ನಮಗೆ ಇಲ್ಲ. ನಾವೇನೆ ಹೇಳಿದರೂ ಸಂಸ್ಕೃತ ತನ್ನದೇ ರೀತಿಯಲ್ಲಿ ಪ್ರಾದೇಶಿಕ ಮಿತಿಗಳನ್ನು ಮೀರಿ ನಿಂತಿದೆ. ಸಂಸ್ಕೃತ ಸಾಹಿತ್ಯಕ್ಕೆ ಮತ್ತು ಧಾರ್ಮಿಕ(ಹಿಂದು) ಪರಂಪರೆಗೆ ಉತ್ತರದವರಷ್ಟೆ ನಮ್ಮ ಕೊಡುಗೆ ಇದೆ. ಶಂಕರ, ಮಧ್ವ ಮತ್ತು ರಾಮಾನುಜ ಮೂವರು ಕೆಲಸ ಮಾಡಿದ ಜಾಗ ನಮ್ಮ ನಾಡು.ಆದ್ದರಿಂದ ಸಂಸ್ಕೃತವು ನಮ್ಮದೇ ಎನ್ನುವ ಅನಿಸಿಕೆ ಇದೆ."

ಇಲ್ಲಿ ನಿಮ್ಮದೇ ಆದ "ದೇಶಬಕ್ತಿ". ದೇಶಬಕ್ತಿ ಅಂದ್ರೆ ಹೇರಿದನ್ನೆಲ್ಲ ಮುಚ್ಕೊಂಡ್ ಹೇರಿಸಿಕೊಳ್ಳೋದಲ್ಲ. ನಮ್ಮ ಕನ್ನಡದಲ್ಲಿ ಪಕ್ಕ ತಮಿಳು ನಾಡಿನಂತೆ ಹೋರಾಟದ ಮಂದಿಯಿಲ್ಲ, ಎಲ್ಲ ಸಪ್ಪೆ, ತಪ್ಪೆಗೆ ಇದ್ದು ,ಹೇರಿಕೆಯನ್ನು ದಬ್ಬಾಳಿಕೆಯನ್ನು ತಾಳುವವರೇ ಹೆಚ್ಚು ಎಂದು ನಿಮ್ಮ ಮಾತನ್ನು ಅರಿತಮಾಡಿಸಬೋದು.. ತಪ್ಪೆಗಿರೋದನ್ನು 'ದೇಸಬಕ್ತಿ' ಅನ್ನೋದಲ್ಲ.

"ಕನ್ನಡಿಗರ ಜಾಯಮಾನಕ್ಕೆ ಪ್ರಾದೇಶಿಕತೆ ಒಗ್ಗಲ್ಲ." ಮತ್ತೊಂದು ತೀರ್ಪು.. ಕರ್ನಾಟಕ ಏಕೀಕರಣ ಯಾಕೆ ಆಯ್ತು.. ಪ್ರಾದೇಶಿಕತೆಯ ಮನಸ್ಸುಗಳಿಂದಲೇ ಅಲ್ವಾ!! ಯಾಕೆ ನಿಮ್ಮ ತೀರ್ಪುಗಳನ್ನು ಹೇರುತ್ತೀರಿ? ನಾವೊಂದು ಪ್ರದೇಶ ಆದ ಮೇಲೇ, ಪ್ರಾದೇಶಿಕತೆ ಇರಲೇ ಬೇಕಲ್ಲ. ಹಾಗಾದ್ರೆ ನಮಗೆ ನಮ್ಮ ಪ್ರದೇಶದ ಗುರುತೇ ಇಲ್ವಾ?

---"ಅಷ್ಟೇ ಅಲ್ಲ,ನಮ್ಮ ಇಡೀ ಧಾರ್ಮಿಕ(ಹಿಂದು) ಪರಂಪರೆಯನ್ನು ತುಂಬಾ ಗೌರವಿಸುತ್ತಾರೆ. " ಮತ್ತೊಂದು ಮಹಾತ್ಮರ ತೀರ್ಪು...
ಮೊನ್ನೆ "ಲಿಂಗಾಯತರು ಹಿಂದುಗಳಲ್ಲ" ಅಂತ ಹೊತ್ತಗೆ ಹೊರಬಂದಿದೆ ನೋಡಿ..( ಅವರನ್ನೂ ನಾಲ್ಕೈದು ತಲೆಕೆಟ್ಟ ಮಂದಿ ಎಂದು ನಮ್ಮ ಮನೆಯಲ್ಲಿ ನಾನೇ ಸರಿ ಅಂತ ಇರುವ ಎಲ್ಲ ಅನುವುಗಳಿವೆ, personal attack ಅಲ್ಲ. ಹೀಗೆಯೇ ಹಲಮಂದಿ... ಹಲವು ಸರತಿ ನಾನೂ, ನೀವೂ ಕೂಡ ).

----"ನಮ್ಮ ನೆರೆ ರಾಜ್ಯದಲ್ಲಿ ಇರುವಂತ ರಾಜಕೀಯ "ದ್ರಾವಿಡ ಪ್ರಜ್ಞೆ " ನಮಗೆ ಇಲ್ಲ. ನಾವೇನೆ ಹೇಳಿದರೂ ಸಂಸ್ಕೃತ ತನ್ನದೇ ರೀತಿಯಲ್ಲಿ ಪ್ರಾದೇಶಿಕ ಮಿತಿಗಳನ್ನು ಮೀರಿ ನಿಂತಿದೆ. ಸಂಸ್ಕೃತ ಸಾಹಿತ್ಯಕ್ಕೆ ಮತ್ತು ಧಾರ್ಮಿಕ(ಹಿಂದು) ಪರಂಪರೆಗೆ ಉತ್ತರದವರಷ್ಟೆ ನಮ್ಮ ಕೊಡುಗೆ ಇದೆ. ಶಂಕರ, ಮಧ್ವ ಮತ್ತು ರಾಮಾನುಜ ಮೂವರು ಕೆಲಸ ಮಾಡಿದ ಜಾಗ ನಮ್ಮ ನಾಡು.ಆದ್ದರಿಂದ ಸಂಸ್ಕೃತವು ನಮ್ಮದೇ ಎನ್ನುವ ಅನಿಸಿಕೆ ಇದೆ."

ಹೌದು ನಮಗ ಯಾಕೆ "ದ್ರಾವಿಡ ಪ್ರಜ್ನೆ" ಬೇಕು? ನಾವು ದ್ರಾವಿಡರಲ್ಲವಲ್ಲ.. ನಮಗೆ ಕನ್ನಡ ಪ್ರಜ್ನೆ ಬೇಕು...

ಇನ್ನು ಶಂಕರ, ಮದ್ವ, ರಾಮಾನುಜರು ಬ್ರಾಹ್ಮಣಗುರುಗಳು( ನೀವು ಬ್ರಾಹ್ಮಣರೇ ಅನ್ನೋ ೧೦೦%, ನನ್ನ ಊಹೆ ? Smiling, ಹಾಗೆ ನಿಮ್ಮ ಜಾತಿಯ ಗುರುಗಳೇ ಎಲ್ಲಿರಿಗೂ ದೊಡ್ಡವರು ಎಂಬ ತೀರ್ಪಿಲ್ಲಿ. ಜಗದ್ಗುರುಗಳು Smiling ).. ( ಅಣಕದ ಬರಹ ನಿಮಗೆ ಇಸ್ಟ ಅಲ್ವ! )

ಹೌದು ಸಂಸ್ಕೃತವು ಶಂಕರ, ಮದ್ವ, ರಾಮಾನುಜರ ಹಿಂಬಾಲಕರದು ದಿಟ.. ಆದ್ರೆ ಕನ್ನಡ ಮಂದಿಯಲ್ಲಿ ಆ ಹಿಂಬಾಲಕರು ಇರೋದು ಬರೀ ೩-೪%.

ಲಿಂಗಾಯರಿಗೆ, ವಕ್ಕಲಿಗರಿಗೆ, ಕುರುಬರಿಗೆ....... ಈ ಮೂವರು ಯಾವ ಲೆಕ್ಕಕ್ಕೆ? ( ಅವರು ನಾವು ಈ ಮಹಾಶಯರ ಹಿಂಬಾಲಕರು ಎಂದು ಹೇಳಿಕೊಳ್ಳಲ್ಲ ಅಲ್ವ )

ಅದರಲ್ಲೂ ಲಿಂಗಾಯರು "ಶಂಕರರನ್ನು, ವೈಷ್ಣವರನ್ನು" ಹಳಿದುದು ಇದೇ..

ಇಲ್ಲೊಂದು ಸಂಗತಿ... ನೀವು ಮುನ್ನ ಜಾತಿಯ ಜಗಳ ಬೇಡ ಅಂದು, ಈಗ ಒಂದು ಜಾತಿಯ ಗುರುಗಳನ್ನು ಮರೆಸುತ್ತಿರುವುದು ತರವೇ? ಕನ್ನಡದಲ್ಲಿ ವಿಷಯ ಬರೆದ ಲಿಂಗಾಯತರು, ಶಂಕರ, ಮದ್ವ, ರಾಮಾನುಜ ಮುಂದೇ ಕೀಳೇ?( ಇಲ್ಲಿ.. ಹಿಂದು ದರ್ಮ, ಅಂತ ತಕ್ಷಣ, ಈ ಶಂಕರ-ರಾಮಾನುಜ-ಮದ್ವರ ಹೆಸರು ಹೇಳೋದು, ಯಾಕೆ? ನಮ್ಮ ದೇಸದಲ್ಲಿ ಇವರ ಹಿಂಬಾಲಕ ಬಲು ಕಡಮೆ ಅವ್ರಲ್ಲ? )

------""ಸಂಸ್ಕೃತ ಬೇಡ"ಎಂದ ಒಡನೆ ಹಲವರಿಗೆ ಕೇಳುವುದು ಜಾತಿ/ಧರ್ಮ/ ಪ್ರಾದೇಶಿಕ ರಾಜಕೀಯದ ಕೂಗು. ಇದು ಪೂರ್ತಿ ಕಾರಣವಿಲ್ಲದೆಯೂ ಇಲ್ಲ. ಭಾಷೆ-ರಾಷ್ಟ್ರಪ್ರಜ್ಞೆ-ಧರ್ಮ ಎಲ್ಲವೂ ಕೆಲವು ಸಲ ಬಿಡಿಸಲಾಗದ ರೀತಿಯಲ್ಲಿ ತಳಕು ಹಾಕಿಕೊಂಡಿರುತ್ತವೆ. ಅದಕ್ಕೆ ಪರಿಹಾರ ಇದ್ದೇ ಇದೆ. "ಕನ್ನಡ ಬೇಕು" ಅನ್ನಿ. ನಿಮ್ಮನ್ನು ಯಾರು ತಡೆಯುವುದಿಲ್ಲ. ವಚನಕಾರರು ಯಾವ ಋಷಿ ಗಳಿಗೂ ಕಮ್ಮಿ ಇಲ್ಲ ಅನ್ನಿ. ಯಾರೂ ಇಲ್ಲ ಎನ್ನುವುದಿಲ್ಲ. ಕನ್ನಡ ಮುಂದೆ ಹೋಗಬೇಕಾದ ವೇಳೆಯಲ್ಲಿ ಈ ಚರ್ಚೆ ಒಳ್ಳೆಯದೆ. ತಪ್ಪು ದಾರಿಯಲ್ಲಿ ಹೋಗಬಾರದು . ಏನಂತೀರಿ?"

ಈ ಕೊನೆ ಪ್ರಾರಾದ ದೊಡ್ಡ ಮಾತನ್ನು ಹಿಂದೆ, ನೀಡಿದ ಶಂಕರ-ರಾಮಾನುಜ-ಮದ್ವರ ಮಾದರಿ/ನಿದರ್ಶನ, ಚಿಕ್ಕದಾಗಿಸಿತು.....

ಕೊನೆಯಲ್ಲಿ ವಚನಕಾರರಿಗೂ ಕಮ್ಮಿ ಇಲ್ಲ ಅಂದುದು.. ಶಾಸ್ತ್ರಕ್ಕೆ ಬಂದಾಯ್ತು(ನನ್ನದು ಕೆಡುಗಣ್ಣು, ನೀಚಬುದ್ದಿ, ಅಲ್ವ ಇಲ್ಲಿ?).. ಯಾಕೆ ಅಂದ್ರೆ.. ಹಿಂದೆ ಹಿಂದುದರ್ಮ ಅಂದ್ರೆ, ಶಂಕರ-ರಾಮಾನುಜ-ಮದ್ವರು ಎಂದು.. ಅವರು ಹಿಂಬಾಲಕರು ೩-೪% ಇರೋದ್ರಿಂದ ಸಂಸ್ಕೃತ ನಮ್ಮದೇನೇನೇಯ.. ಅದನ್ನು ನಾವೂ ತಲೆಮೇಲೆ ಹೊತ್‌ಕೋಬೇಕು ಅಂದುಬಿಟ್ಟು.. ಕೊನೆ... ವಚನಕಾರರೂ ಋಷಿಗಳು ಅನ್ನೋದು ಋಜುತ್ವವಲ್ಲ( ನಿನ್ನ ಕಾಮಾಲೆಗಣ್ಣ ಹಾಳಾಗ,, ಅಂದುಕೊಳ್ಳಿ ಮಹಾತ್ಮರೇ, ಆದ್ರೆ,, ನಿಮ್ಮ ವಚನದಲ್ಲಿ ನನಗೆ ನೇರ ಮಾತು ಕಂಡಿಲ್ಲ. )

...
ಮನವಿ:
೧) ಈ ಮಹಾತ್ಮರು, ಮಹಾನೀಯರು, ಎಷ್ಟು ದೊಡ್ಡವರೋ, ಎಸ್ಟು ಬಲ್ಲವರೋ, ನನಗೆ ದಿಟವಾಗಲೂ ಗೊತ್ತಿಲ್ಲ.

೨) ನನಗೆ ಅವರ ಮೇಲೆ person attack ಮಾಡುವ ಯಾವ ಗುರಿಯಿಲ್ಲ.

೩) ನಮ್ಮ ಮೇಲೆ ವಿಚಾರ ಹೇರಿಕೆ( ನಾನು ಒಂದು 'ಲಾನಗ 'ಬುಡಕಟ್ಟು ಮಂದಿ ಅಂತ ಇಟ್ಟುಕೊಳ್ಳಿ, ನಾನು ಹಿಂದು ಎಂದು ಒಪ್ಪದಿದ್ರೂ, ನೀವು ಹಿಂದೂನೇ ತಿ* ಮುಚ್ಚಕೊಂಡು ಒಪ್ಕೋ ) ಅನ್ನೋದರ ಎದಿರು ಹೇಳಬೇಕಾದುದು ನಮಗಿರುವ ಹಕ್ಕು.
ಇದನ್ನು ಅಹಂಕಾರ, ತಲೆಪ್ರತಿಷ್ಟೇ, ಬಡಿದಾಟ, ಪ್ರಾದೇಶಿಕತೆ, fundamentalist, ಅಸಭ್ಯ, ಮುಂತಾದ ನಾಮಾವಳಿಗಳಿಂದ ಕರೆಯೋದು, ಬರೀ ತಮ್ಮ lobby ಗೆಲ್ಲಲಿ, ತಮ್ಮದೇ ನಡೆಯಲಿ ಎಂದು ನಮ್ಮ ದೇಶದಲ್ಲಿ ಬಲು ವಿಖ್ಯಾತ lobbyಗಾರರ ತಂತ್ರ ಎನ್ನಬೋದು..
...
ಇಲ್ಲ ನಾವೇ ತಪ್ಪು ಇರಲೂ ಬೋದು Smiling

೪) ಬಾಶೆ ಮೇಲಿನ ಚರ್ಚೆಯನ್ನು ಜಾತಿ-ಧರ್ಮ-ರಾಜಕೀಯದಿಂದ ದೂರವಿಟ್ಟು "ನೆತ್ತರು ಹರಿಸದೇ" ಇರಬಯಸುವರು, ದಯವಿಟ್ಟು ಬಾಶೆ ಮೇಲಣ ಬರಹದಲ್ಲಿ ಅವನ್ನು ತರದಿರುವುದು ಒಳಿತು.. ಯಾಕೆ ಅಂದ್ರೆ, ಒಬ್ಬೊಬ್ಬರಿಗೆ ಒಂದೊಂದೊ ಒತ್ತು.. ಹಾಗೆ ಹಲವರಿಗೆ ಜಾತಿಯ ಮೇಲೂ ಬಲು ಒತ್ತಿದೆ.

ಇನ್ನು ಜಾತಿಯೇ ನಮ್ಮಮ್ಮ individual ಸಂಸ್ಕೃತಿಗಳಿಗೆ ಆಧಾರ.. ಬ್ರಾಹ್ಮಣ ಮದುವೆಗೂ, ಒಕ್ಕಲಿಗರ ಬಳಗ ಧಾರೆಗೂ ( ಎರಡು ಸಂಸ್ಕೃತಿಗಳು ) ಇರುವ ವ್ಯತ್ಯಾಸ ಹೇಳೋದು ಜಾತಿಯೇ.. ಜಾತಿಯನ್ನು ಬಿಡಿ ಬಿಡಿ ಅನ್ನೋರೇ ಜಾತಿ ಬಿಡಲ್ಲ.( ಬದಲು ತಮ್ಮ ಜಾತಿಯ ಗುರುಗಳೇ ಎಲ್ಲಾ ಜಾತಿಯವರಿಗೂ ಮಾದರಿ ಎಂದು ದೊಡ್ಡ ಮನಸ್ಸು ಮಾಡಿದಂತೆ ಆಡುವವರು )
..
..
...
..

೫) ಕೇವೆಂ.. ನಿಮ್ಮ ಬರಹಗಳು ನನಗೆ ಹಿಡಿಸಿವೆ..( ಇದೂ ಸೇರಿಸಿ ). ಆದ್ರೆ ಅದರಲ್ಲಿ ನನಗೆ ಒಪ್ಪುಗೆಯಾದವನ್ನು ನೇರವಾಗಿ ಮುಂದಿಟ್ಟಿದ್ದೀನಿ. ಇದರಲ್ಲಿ ವಿಷಯ-ವಿರೋಧ ಮಾತ್ರ ಇದೆ, ಹೊರತು ವ್ಯಕ್ತಿ-ವಿರೋಧವಿಲ್ಲ.

ನಿಮನ್ನು ಕಂಡ್ರೆ ನನಗೆ ದ್ವೇಷವಿಲ್ಲ. ನಿಮ್ಮ ಮೇಲಣ ಒಲವು ಇದ್ದೇ ಇದೆ. ವಿಚಾರಗಳನ್ನು ಮಂಡಿಸಿ, ಹಾಗೇ ಅದಕ್ಕೆ ಬರುವ ಅನಿಸಿಕೆಯನ್ನು, ವಿಚಾರಕ್ಕೆ ಬಂದ ಅನಿಸಿಕೆ, ಹೊರತು ವ್ಯಕ್ತಿಯ ಮೇಲೆ ಬಂದುದು ಎಂದುಕೊಳ್ಳಬೇಡಿ..

"ನಾನು ೧೦೦% perfect ಎಂದು ಅಂದುಕೊಂಡಿದ್ರೆ, ಅದು ನನ್ನ ಕೊರತೆಯೇ!"

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: ಕೇವೆಂ (33 replies) October 28, 2007 - 5:46am
  • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: ಸಂಗನಗೌಡ (Nov 2 2007 - 5:41pm)
  • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: tarlesubba (Oct 30 2007 - 10:36pm)
    • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 10:42am)
  • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 4:53pm)
  • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 4:53pm)
    • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 5:23pm)
      • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 5:43pm)
        • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 6:08pm)
          • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 8:06pm)
            • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 8:56pm)
              • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 11:51am)
              • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 11:51am)
              • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 11:51am)
                • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 12:21pm)
                • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: ವೈಭವ (Oct 31 2007 - 12:20pm)
                  • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 2:05pm)
                    • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 2:19pm)
                      • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 2:53pm)
                        • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 3:14pm)
                          • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 3:54pm)
                            • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 7:58pm)
                              • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Nov 2 2007 - 12:46pm)
                  • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 12:26pm)
                • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 12:10pm)
        • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 5:59pm)
  • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: tarlesubba (Oct 29 2007 - 8:41pm)
    • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: ವೈಭವ (Oct 30 2007 - 8:59am)
    • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 29 2007 - 8:54pm)
      • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: tarlesubba (Oct 29 2007 - 10:52pm)
        • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 9:32am)
  • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: ವೈಭವ (Oct 29 2007 - 5:58pm)
    • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: HV SURYANARAYANA SHARMA (Oct 29 2007 - 6:31pm)
  • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 28 2007 - 12:57pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ನರಸಿಂಹ ಸಾಲಿಗ್ರಾಮ
    September 5, 2008 - 12:02pm
  • madhava_hs
    ಉ: ನರಸಿಂಹ ಸಾಲಿಗ್ರಾಮ
    September 5, 2008 - 11:47am
  • srinivasps
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 11:41am
  • madhava_hs
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 11:36am
  • ASHOKKUMAR
    ಉ: ’ಕೊಲಂಬಿಯ ಪೋಸ್ಟ್ ಆಫೀಸ್’
    September 5, 2008 - 11:18am
  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 11:11am
  • mahesha
    ಉ: ಹುಡುಗಿಯಿಂದ ಆಯ್ತು
    September 5, 2008 - 11:08am
  • ASHOKKUMAR
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 11:07am
  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 11:03am
  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 11:01am
ಇನ್ನಷ್ಟು


ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator