ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?
- ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: srinivasps (Nov 2 2007 - 6:04pm)
- ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: srinivasps (Nov 2 2007 - 9:55pm)
- ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: Sunil Jayaprakash (Nov 2 2007 - 12:55pm)
- ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: ವೈಭವ (Nov 2 2007 - 2:23pm)
- ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: savithru (Nov 2 2007 - 3:18pm)
- ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: ವೈಭವ (Nov 2 2007 - 8:09pm)
- ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: savithru (Nov 2 2007 - 3:18pm)
- ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: mahesha (Nov 2 2007 - 1:08pm)
- ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: mahesha (Nov 2 2007 - 1:09pm)
- ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: ವೈಭವ (Nov 2 2007 - 2:23pm)

RSS:
ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?
ಮಿಶ್ರಿಕೋಟಿ, ನಾನು ಪ್ರಜಾವಾಣಿಯಲ್ಲಿ ಪ್ರಕಟವಾದ ಆ ಬರಹಗಳನ್ನು ಓದಿದೆ. ಒಂದಂತೂ ನನಗೆ ತೀರಾ ಅಂದರೆ ತೀರಾ ಎಳಸು ಅನಿಸಿತು. ಅದರಲ್ಲಿ ಹವ್ಯಕರನ್ನೂ ಕನ್ನಡದಿಂದ ಬೇರೆ ಎಂಬಂತೆ ತೋರಿಸಲಾಗಿದೆ. ಈ ಮಾಧ್ಯಮಗಳು ಇಷ್ಟೆಲ್ಲ ಸಾಹಿತ್ಯವಿದ್ದರೂ, ಕನ್ನಡ ಎಂಬ ಪದದ ಅರ್ಥವ್ಯಾಪ್ತಿಯನ್ನು ತೀರಾ ಸಂಕುಚಿತಗೊಳಿಸಿ ನಾವು ಬೇರೆ ಬೇರೆ ಸೀಮೆಯ ಜನರು ಒಂದಾಗುವುದಕ್ಕೆ ದೊಡ್ಡ ಅಪಾಯ ತಂದೊಡ್ಡಿದ್ದಾರೆ. ಕನ್ನಡ ಎಂದರೆ ಬರೀ ನುಡಿಯಲ್ಲ, ಅದೊಂದು ನಾಡು, ಆ ನಾಡಿನಲ್ಲಿ ಬದುಕುತ್ತಿರುವ ಜನರು, ಅವರ ನಾಡವಳಿ. ಇದು ನನ್ನ ಮಾತಲ್ಲ. ೯ನೇ ಶತಮಾನದ ಕವಿರಾಜಮಾರ್ಗದ ಈ ಮಾತುಗಳನ್ನು ಗಮನಿಸಿ.
೧. ಕಾವೇರಿಯಿಂದಮಾ...
೨. ವಸುಧಾವಳಯವಿಲೀನವಿಷಯವಿಶದವಿಶೇಷಂ
೩. "ನಾಡೇ ನಾಡೇ ಕನ್ನಡ" (ಇದರ ಪದ್ಯದ ಸಂಖ್ಯೆಯನ್ನು ಬೇಕಿದ್ದರೆ ನಾನು ನೀಡಬಲ್ಲೆ)
ಇವೆಲ್ಲವೂ ತಿಳಿಸುವುದು, ಸೋಲಿಗ, ಬಡಗ, ಕೊಡವ, ಇವರೆಲ್ಲರೂ ಕನ್ನಡಿಗರೆಂಬ ಅಧಿಕೃತ ಮನ್ನಣೆ ಎಂದೋ ಸಿಕ್ಕಿದೆ. ಈಗಲೂ ಕೂಡ, ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ಸಂದರ್ಭದಲ್ಲಿ ಸಿಇಟಿ ಸೆಲ್ ಪ್ರಕಟಿಸುವ ಬ್ರೌಚರ್ ತೆಗೆದುನೋಡಲಿ. ಕನ್ನಡ ಅಂದರೆ ಬರೀ ನುಡಿ ಅಲ್ಲ ಅದೊಂದು ಸಂಸ್ಕೃತಿ ಎಂದು ಜನ ತಿಳಿದುಕೊಂಡಿರುವಾಗ, ಮಾಧ್ಯಮದವರು, ಇಲ್ಲ ಸೋಲಿಗರು ಬೇರೆ, ಹವ್ಯಕರು ಬೇರು, ಕೊಡವರು ಬೇರೆ ಅಂತೆಲ್ಲ ಬರೆದರೆ ಆ ದೇವರೇ ಕಾಪಾಡಬೇಕು.
ನೋಡಿ, ಈ ಯೋಚನೆಯನ್ನು ಮೆಟ್ಟಿನಿಲ್ಲಬೇಕೆಂದರೆ, ಸೋಲಿಗರು(ಹಾಗು ಮುಖ್ಯವಾಗಿ ಕನ್ನಡ ಪಂಡಿತರು) ತಮ್ಮ ಪಾರಿಭಾಷಿಕ ಪದಗಳನ್ನು ಸಾಹಿತ್ಯದಲ್ಲಿ ಬಳಸುತ್ತಾ, ಗಟ್ಟಿಯಾಗಿರಬಹುದಾದಂತಹ ಅವರ ನುಡಿಗಟ್ಟಿಗಳಿಗೆ ಅಧಿಕೃತ ಮನ್ನಣೆಯನ್ನು ನೀಡುವುದು. ಆಗ "ಸೋಲಿಗ ಕನ್ನಡವೂ" ಉಳಿಯತ್ತೆ ಮತ್ತು "ಮಾಧ್ಯಮದವರ ಕನ್ನಡವೂ" ಸೋಲಿಗವನ್ನು ಆಶ್ರಯಿಸುತ್ತಾ ತಾನೂ ಬೆಳೆಯತ್ತೆ. ನಾನು ಸಂಪದದಲ್ಲಿಯೇ ಅನೇಕ ಬಾರಿ ಪ್ರಸ್ತಾಪಿಸಿದ ಹಾಗೆ ಕನ್ನಡಿಗರು ಬೆಳೆಯಬೇಕೆಂದರೆ ನಮ್ಮಲ್ಲಿಯ ಪಾರಿಭಾಷಿಕ ಪದಗಳಿಗೆ ಮನ್ನಣೆ ಸಿಗಬೇಕು. ಸುಮ್ಮನೆ "ಭಾರತ ಜನನಿಯ ತನುಜಾತೆ..." ಅಂತ ಜಪಮಾಡುತ್ತಾ ಕೂತಿರುವುದಲ್ಲ.
ನಾನು ಮೊದಲೇ ಹೇಳಿದ ಹಾಗೆ ಪ್ರಜಾವಾಣಿಯ ಆ ಬರಹ ನನಗೆ ತೀರಾ ತೀರಾ ಎಳೆಸು ಎನಿಸಿತು. ಏಕೆಂದರೆ ಸೋಲಿಗ, ಬಡಗ, ಹವ್ಯಕ ಇವುಗಳನ್ನು ಕುರಿತು ಮಾತು ಬಂದಾಗ ನಾವು ಹೇಳುವುದು "ಸೋಲಿಗ ಕನ್ನಡ", "ಬಡಗ ಕನ್ನಡ", "ಹವ್ಯಕ ಕನ್ನಡ", "ಕುಂದಗನ್ನಡ" ಮುಂತಾಗಿ. ಇಂತಹ ಗಂಭೀರ ವಿಚಾರಗಳನ್ನ ಎಳಸು ಎಳಸಾಗಿ ಓದುಗರ ಮುಂದಿಡುವ ಮುಂಚೆ ಬರೆಯುವವರು ಯೋಚಿಸಬೇಕು.