ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ?
- ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? By: benaka (Nov 9 2007 - 5:24pm)
- ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? By: Srimatha (Nov 5 2007 - 2:04pm)
- ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? By: hamsanandi (Nov 6 2007 - 4:48am)
- ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? By: Srimatha (Nov 5 2007 - 2:10pm)
- ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? By: hamsanandi (Nov 5 2007 - 11:16pm)
- ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? By: benaka (Nov 5 2007 - 12:22am)
- ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? By: ವೈಭವ (Nov 5 2007 - 6:33pm)
- ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? By: hamsanandi (Nov 5 2007 - 11:27pm)
- ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? By: ವೈಭವ (Nov 5 2007 - 12:59am)
- ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? By: ವೈಭವ (Nov 5 2007 - 6:33pm)
- ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ? By: ವೈಭವ (Nov 4 2007 - 1:04am)

RSS:
ಉ: ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ?
ಪ್ರಿಯ ವೈಭವ,
ಮುತ್ತುಸ್ವಾಮಿ ದೀಕ್ಷಿತರ ಈ ಕೃತಿ "ಸ್ತವರಾಜ" ರಾಗದಲ್ಲಿದೆ. ದೀಕ್ಷಿತರ ಕಾಲದ ಅಸಂಪೂರ್ಣ ಮೇಳಪದ್ಧತಿಯಲ್ಲಿ ಈ ರಾಗಕ್ಕೆ ಸ್ತವರಾಜ ಎಂದೇ ಹೆಸರಿತ್ತಾದರೂ, ಸಂಪೂರ್ಣಮೇಳಪದ್ಧತಿಯಲ್ಲಿ ಇದಕ್ಕೆ "ಷಡ್ವಿಧಮಾರ್ಗಿಣಿ" ರಾಗವೆನ್ನುತ್ತಾರೆ. ೪೬ನೇ ಮೇಳಕರ್ತರಾಗವಾದ ಇದರ ಆರೋಹಣಾವರೋಹಣಗಳು ಹೀಗಿವೆ:
ಸ ರಿ೧ ಗ೨ ಮ೨ ಪ ಧ೨ ನಿ೨ ಸ'
ಸ' ನಿ೨ ಧ೨ ಪ ಮ೨ ಗ೨ ರಿ೧ ಸ
ಸ್ತವರಾಜದ ಆರೋಹಣಾವರೋಹಣಗಳು ಹೀಗಿವೆ:
ಸ ರಿ೧ ಮ೨ ಪ ಧ೨ ಸ'
ಸ' ನಿ೨ ಧ೨ ಮ೨ ಗ೨ ಸ
ದೀಕ್ಷಿತರ ಕೃತಿಗಳಲ್ಲಿ ಸಾಮಾನ್ಯವಾಗಿ ರಚನೆಯ ಆಯಾ ರಾಗದ ಹೆಸರೂ ಕಾಣಸಿಗುತ್ತವೆ. ಈ ಕೃತಿಯ ಕೊನೆಯಲ್ಲಿ "ಶ್ರೀಸ್ತವರಾಜನುತಿಪ್ರಸಾದಿನಿ..." ಎಂಬುದನ್ನು ಗಮನಿಸಿ. ಈ ಕೃತಿ ಲಲಿತಾತ್ರಿಪುರಸುಂದರೀ ಸ್ವರೂಪಳಾದ ಮಧುರೆಯ ಮೀನಾಕ್ಷಿಯನ್ನು ಕುರಿತಾಗಿ ರಚಿಸಲ್ಪಟ್ಟಿದೆ. ಸರಿಯಾದ ಪಾಠ ಹೀಗಿದೆ:
ಮಧುರಾಂಬಾಂ ಭಜರೇ ರೇ ಮಾನಸ|ಮದನಜನಕಾದಿಗುರುಗುಹಸೇವಿತ||ಪ||
ಮಧುರಾಪುರಿನಿವಾಸಿನೀಂ ಧನಿನೀಂ|ಮನುಕುಬೇರಾದಿಮಾನಸೋಲ್ಲಾಸಿನೀಂ||ಅ.ಪ||
ಮಾತಂಗತನಯಾಂ ಮಧುಕರವೇಣೀಂ ಮಾಧವಾದ್ಯಭಯವರಪ್ರದಾಯಿನೀಂ|
ಭಕ್ತವಿಶ್ವಾಸಿನೀಂ ಸುವಾಸಿನೀಂ, ಶ್ರೀಸ್ತವರಾಜನುತಿಪ್ರಸಾದಿನೀಂ||ಚ||
ಅರ್ಥ:
ಮಧುರೆಯ(ಲ್ಲಿಹ) ತಾಯಿಯನ್ನು ನೆನೆ ಎಲೆ ಮನವೇ|ನಾರಾಯಣನೇ ಮೊದಲಾಗಿ ಗುರು-ಗುಹರಿಂದ(ಅಥವಾ ಅಂಕಿತನಾಮ ಗುರುಗುಹ-ದೈವ/ಭಕ್ತನಿಂದ)ಸೇವಿಸಲ್ಪಡುವ(ವಳನ್ನು ನೆನೆ)||ಪ||
ಮಧುರಾನಗರದಲ್ಲಿ ನೆಲೆಸಿದ ಧನಿಕಳಾದ(ಅಥವಾ ಕುಬೇರನಿಗೆ ಸಂಬಂಧಿಕಳಾದ), ಮನು-ಕುಬೇರಾದಿಗಳ ಮನಸ್ಗಿಗೆ ಮುದನೀಡುವವಳನ್ನು(ನೆನೆ)||ಅ.ಪ||
ಮತಂಗಮುನಿಯ ಮಗಳಾದ, ದುಂಬಿಯ ಸಾಲೋ ಎಂಬಂಥ ಜಡೆಯವಳಾದ, ವಿಷ್ಣು ಇತ್ಯಾದಿಗಳಿಗೇ ಅಭಯ-ವರ ನೀಡುವವಳಾದ, ಭಕ್ತರ ವಿಶ್ವಾಸಕ್ಕೆ ಯೋಗ್ಯಳೂ, ಸುಮಂಗಲಿಯೂ ಆದ, ಶ್ರೀಸ್ತವರಾಜ(ಮಂತ್ರ)ರಾಗದ ಸ್ತೋತ್ರಕ್ಕೆ ಪ್ರಸಾದವನ್ನು ನೀಡುವವಳನ್ನು (ನೆನೆ ಮನವೇ)||ಚರಣ||
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.