ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ...
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: Sunil Jayaprakash (Nov 7 2007 - 11:52am)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: srivathsajoshi (Nov 8 2007 - 7:56am)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: ವೈಭವ (Nov 7 2007 - 1:26pm)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: srivathsajoshi (Nov 8 2007 - 8:03am)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: ವೈಭವ (Nov 8 2007 - 11:09am)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: ವೈಭವ (Nov 8 2007 - 11:14am)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: ವೈಭವ (Nov 8 2007 - 11:09am)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: Khavi (Nov 7 2007 - 4:30pm)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: srivathsajoshi (Nov 8 2007 - 8:03am)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: ಶ್ರೀನಿವಾಸ ವೀ. ಬ೦ಗೋಡಿ (Nov 7 2007 - 12:27pm)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: srivathsajoshi (Nov 8 2007 - 7:58am)


RSS:
ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ...
ಗೆಳೆಯರೆ, ಯಾರಾದರೂ ಕೂಟಿನ ಸುತ್ತ ಇರುವ, ಶ್ರೀವತ್ಸ ಜೋಶಿಯವರ ಬರಹವನ್ನು ಇನ್ನೂ ಓದಿಲ್ಲವಾದರೆ, ದಟ್ಸ್-ಕನ್ನಡದಿಂದ ನೇರವಾಗಿ ಓದಿಕೊಳ್ಳಿ. ಆಗ ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು ಎಳೆಯಲ್ಲಿ ಕೂಟಿನ ಸುತ್ತ ಚರ್ಚೆ ಏಕೆ ನಡೆಯುತ್ತಿದೆ ಎಂಬುದು ಎಲ್ಲರ ಅರಿವಿಗೆ ಬರುತ್ತೆ.
ಶ್ರೀವತ್ಸ ಜೋಶಿ(ಹಾಗು ಎಲ್ಲರೂ), ನನ್ನ ಈ ಕಾಮೆಂಟನ್ನು ನೀವು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು ಅಂತ ವಿನಂತಿಸುತ್ತೇನೆ. ಏಕೆಂದರೆ, ನೀವು ಬರೆದ ಎಷ್ಟೋ ಲೇಖನಗಳನ್ನು ನಾನು ಓದಿ, ಮೆಚ್ಚಿಕೊಂಡಿರುವೆ. ನಿಮ್ಮೊಂದಿಗಿರುವ ಆ ಆತ್ಮೀಯತೆಯ ಭಾವದಿಂದಲೇ ನಾನು ಇದನ್ನು ಬರೆಯುತ್ತಿರುವುದು. ಹಾಗೆಯೇ, ನಿಮ್ಮ ಬರಹವನ್ನು ಓದಿಕೊಳ್ಳುವಲ್ಲಿ ನಾನು ತಪ್ಪು ಮಾಡಿದ್ದರೆ ನನ್ನನ್ನು ಯಾವುದೇ ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಳ್ಳಿ.
ಶ್ರೀವತ್ಸ ಜೋಶಿ, ಇಲ್ಲಿ ನೀವು ಒಬ್ಬ ಜವಾಬ್ದಾರಿಯುತ ಬರಹಗಾರರಾಗಿ ಪ್ರಶ್ನೆ ಕೇಳಿದ್ದರಿಂದ ಅದಕ್ಕೆ ಉತ್ತರಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಇಲ್ಲಿ ತಮಿಳು-ಕನ್ನಡ ಭಾಷೆಯ ಶ್ರೇಷ್ಠತೆಯ ತುಲನೆ ಆಗಲಿಲ್ಲ, ನಿಜ ಮಾರಾಯ್ರೆ. ಆದರೆ ಇದು ಈ ನಾಡಿನ ಜನರ ಆಹಾರ ಪದ್ಧತಿಯ ಸಂಸ್ಕೃತಿಯ ಪ್ರಶ್ನೆಯಾಗಿದೆ. ಹೇಗೆ ಎಂದು ತೋರಿಸುತ್ತೇನೆ ಓದಿ. ನಿಮ್ಮ ಲೇಖನದಲ್ಲಿ ಬಂದಿರುವ ಕೆಲವು ಮಾತುಗಳನ್ನು ಗಮನಿಸಿ.
೧. ``ಕೂಟು ಅಥವಾ ಕೂಟ್ಟು ಒಂದು ಟಿಪಿಕಲ್ ತಮಿಳಿಯನ್ ಡಿಶ್, ನಿಮಗೆ ಗೊತ್ತಿರಲಿಕ್ಕಿಲ್ಲ... ಹೇಗಿದೆ ರುಚಿ ನೋಡಿ" ಎಂದು ಅಭಿಮಾನದಿಂದ ಬಡಿಸಿದ್ದರು.
೨. ಕರಾವಳಿ ಕರ್ನಾಟಕದವನಾದ ನನಗೆ `ಕೂಟು' ಅಂತೊಂದು ಸ್ವಾದಿಷ್ಟ ವ್ಯಂಜನದ ಹೆಸರು ಗೊತ್ತಿರದಿದ್ದರೂ ತಮಿಳಿನಲ್ಲಿ ಅದರ ವ್ಯುತ್ಪತ್ತಿ ಹೇಗೆ ಆಗಿರಬಹುದೆಂಬ ಲಾಜಿಕ್ ಫಕ್ಕನೆ ಹೊಳೆಯಿತು.
೩. ತಮಿಳು ಉದ್ಘೋಷಕ ಹೇಳುತ್ತಿದ್ದ ``ಇಲಂಗೈ ಒಲಿವರಪ್ಪು ಕೂಟ್ಟುತ್ತಾಪನಂ ಆಸಿಯ ಸೇವೈ... " ಎಂಬ ಉಲಿ ಥಟ್ಟನೆ ನೆನಪಾಯಿತು. ಕಾರ್ಪೊರೇಶನ್ ಎಂಬ ಪದದ ತದ್ಭವರೂಪದ ತಮಿಳು ಪದ ಕೂಟ್ಟುತ್ತಾಪನಂ.
೪. ಹಾಗಿದ್ದರೆ ಸಾಂಬಾರ್‌ನಲ್ಲಿ, ಪಲ್ಯದಲ್ಲಿ, ಅಷ್ಟೇಕೆ ನಮ್ಮನಾಡಿನ ಬಿಸಿಬೇಳೆಭಾತಿನಲ್ಲಿ ವಿವಿಧ ತರಕಾರಿ ಮತ್ತು ಬೇಳೆಗಳು incorporate ಆಗಿಲ್ಲವೇ, ಒಂದುಗೂಡಿಲ್ಲವೇ - ಎಂಬ ಪ್ರಶ್ನೆ ಬರಬಹುದು.
೫. ಅಂದಹಾಗೆ ತಮಿಳರಿಗೆಲ್ಲ (ನನ್ನ ಹೈದರಾಬಾದ್ ದೋಸ್ತ್ ಗುರುಮೂರ್ತಿಯೂ ಸೇರಿದಂತೆ) ಕೂಟು ಬಗ್ಗೆ ಅಪಾರ ಹೆಮ್ಮೆ ಎಂದೆನಷ್ಟೆ.
........
೪ನೇ ಪಾಯಿಂಟಿನಲ್ಲಿರುವ "ನಮ್ಮ ನಾಡು" ಎಂದರೆ ಯಾವುದು ? ಶ್ರೀವತ್ಸ ಜೋಶಿ, ನೀವು ನಿಮ್ಮ ಅಂಕಣದಿಂದ ಇಡೀ ಕರ್ನಾಟಕದಲ್ಲಿ ಮನೆಮಾತಾಗಿದ್ದೀರಿ. ನೀವು ಕೇವಲ ಕರಾವಳಿಯರಲ್ಲ, ನಿಮ್ಮನ್ನು ನಾವು ಓದುಗರು, ಕರ್ನಾಟಕದವರು ಅಂತಲೇ ಗುರುತಿಸುವುದು. ನೀವು ಏನನ್ನಾದರೂ ಹೇಳಿದರೆ, ಅದು ಕರಾವಳಿಯವರು ಯಾರೋ ಹೇಳುತ್ತಿದ್ದಾರೆ ಅಂದುಕೊಳ್ಳುವುದಿಲ್ಲ, ಬದಲಾಗಿ ಕರ್ನಾಟಕದವರು ಏನೋ ಹೇಳುತ್ತಿದ್ದಾರೆ ಎಂದುಕೊಳ್ಳುತ್ತೇವೆ. ಈಗ ಬೇಕಿದ್ದರೆ "ನಾಲ್ಕನೇ ಪಾಯಿಂಟ್" ಅನ್ನು ಮತ್ತೊಮ್ಮೆ ಮಗದೊಮ್ಮೆ ಓದಿ, ಜೋಶಿ. ಅಲ್ಲ "ಕೂಟು" ಅಂದರೇನು ಅಂತ ತಿಳಿಯದ ಕನ್ನಡ ಸೀಮೆಯವರು ಅದನ್ನು ಓದಿದರೆ, "ಓಹೋ, ಬಿಸಿಬೇಳೆಭಾತ್ ಕನ್ನಡಿಗರದ್ದು, ಕೂಟು ತಮಿಳರದ್ದಿರಬೇಕು" ಅಂತ ತಿಳಿದುಕೊಳ್ಳುದಿಲ್ಲವೇ. ಆ ಬರಹದುದ್ದಕ್ಕೂ ನೀವು, ನಿಮಗೆ ತಮಿಳು ಗೆಳೆಯರೊಡನೆ ಇದ್ದ ಒಡನಾಟ, ಸ್ನೇಹ, ಅಕ್ಕರೆ ಇವುಗಳನ್ನು ಒಟ್ಟಾಗಿಸುತ್ತಾ, "ಕೂಟು" ಎಂಬ ಪದಾರ್ಥ ತಮಿಳಿನಲ್ಲಿ ಹೇಗೆ ಕಾನ್ಸೆಪ್ಚುಯಲೈಸ್ ಆಗಿದೆ ಎಂಬುದನ್ನು ಚೆನ್ನಾಗಿ ತಿಳಿಸಿದಿರಿ. ಆದರೆ ಇದನ್ನು ಒಂದು "ಪದಾರ್ಥ ಚಿಂತಾಮಣಿ" ಎಂಬ ಹೆಸರಿನಡಿ ನೀಡಿದ ಔಚಿತ್ಯವೇನು ? ನಾವು ನೀವು ಓದಿರುವಂತೆ, "ಪದಾರ್ಥ ಚಿಂತಾಮಣಿಯಲ್ಲಿ" ಪಾ.ವೆಂ.ಆಚಾರ್ಯ ಅವರು ಒಂದೊಂದು ಪದದ ಬಗ್ಗೆಯೂ ಆಳವಾಗಿ ಅಭ್ಯಾಸ ಮಾಡಿ ವಿಚಾರಗಳನ್ನು ಮುಂದಿಟ್ಟಿದ್ದಾರೆ. ಆದರೆ ನೀವು ನಿಮ್ಮ ಲೇಖನವನ್ನು "ಪದಾರ್ಥ ಚಿಂತಾಮಣಿ" ಎಂಬ ಹೆಸರಿನಡಿ ನೀಡುವ ಮುಂಚೆ, ಕೂಟಿನ ಸುತ್ತಾ ಇರುವ ಅನೇಕ (ಕೇವಲ ತಮಿಳು ಸಂಸ್ಕೃತಿಯಷ್ಟೇ ಅಲ್ಲ, ಕನ್ನಡಿಗರ ಸಂಸ್ಕೃತಿಯನ್ನೂ) ವಿಚಾರಗಳನ್ನು ತಿಳಿದುಕೊಂಡು ಆನಂತರ ನಮಗೆ ನೀಡಬಹುದಿತ್ತು. ಆದರೆ ನಿಮ್ಮ ಸದ್ಯದ ಲೇಖನ ತೀರಾ ತೀರಾ ಒನ್-ಸೈಡೆಡ್ ಆಗಿದೆ.
ಇದು ನನ್ನದೊಬ್ಬನ ಬೇಸರವಷ್ಟೇ ಆಗಿದ್ದರೆ ನನ್ನಲ್ಲಿಯೇ ಏನೋ ತಪ್ಪಿರಬೇಕು ಎಂದೆಣಿಸಬಹುದಿತ್ತು. ಆದರೆ ನೋಡಿ, ದಟ್ಸ್-ಕನ್ನಡದಲ್ಲಿ ಪ್ರಕಟವಾದ ನಿಮ್ಮ ಲೇಖನದ ಅಡಿಯಲ್ಲಿಯೇ, ಉಮಾ ಎಂಬುವರು ಹೀಗೆ ಬರೆದಿದ್ದಾರೆ.
Joshi avare namme bengalooru kadenoo kootu madthare kanri. Tamilarige adara patent kodbededi
(Posted: Saturday 13th of October 2007 10:12:15 AM)
ಅಂದರೆ, ಬರಹದಲ್ಲಿ ಎಲ್ಲೋ ಏನೋ ಎಡವಟ್ಟಾಗಿದೆ ಎಂದು ನಿಮಗೆ ಅನಿಸುವುದಿಲ್ಲವೇ ? ಒಟ್ಟಿನಲ್ಲಿ "ನಮ್ಮದೇ" ಆದ ಕೆಲವು ವಿಚಾರಗಳನ್ನು ಹೆಮ್ಮೆಯಿಂದ, ಎದೆಯುಬ್ಬಿಸಿ "ನಮ್ಮದು" ಎಂದು ಹೇಳಿಕೊಳ್ಳುವಾಗಲೂ, "ಪ್ರಪಂಚದಲ್ಲಿ ಎಲ್ಲದಕ್ಕೂ ಕನ್ನಡವೇ ಮೂಲ ಎಂದು ಸಾಧಿಸಹೊರಟಿದ್ದೀರಾ?" ಎನ್ನುವಂತಹ ಕುಹಕ ಕೇಳುವಂತಾದ ಪರಿಸ್ಥಿತಿ ನಮ್ಮ ಕಣ್ಣ ಮುಂದೆಯೇ ನಿರ್ಮಾಣವಾದ್ದು ವೈಯಕ್ತಿಕವಾಗಿ ನನಗೆ ತುಂಬಾ ಬೇಸರ ತಂದಿತು
ಯಾಕೋ ಈ ದಿನ ಎದೆಯುಬ್ಬಿಸಿ ಕವನ ಮನಸ್ಸಿಗೆ ತುಂಬಾ ಕಹಿಯೆನಿಸಿತು.