ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ...
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: Sunil Jayaprakash (Nov 7 2007 - 11:52am)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: srivathsajoshi (Nov 8 2007 - 7:56am)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: ವೈಭವ (Nov 7 2007 - 1:26pm)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: srivathsajoshi (Nov 8 2007 - 8:03am)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: ವೈಭವ (Nov 8 2007 - 11:09am)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: ವೈಭವ (Nov 8 2007 - 11:14am)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: ವೈಭವ (Nov 8 2007 - 11:09am)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: Khavi (Nov 7 2007 - 4:30pm)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: srivathsajoshi (Nov 8 2007 - 8:03am)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: ಶ್ರೀನಿವಾಸ ವೀ. ಬ೦ಗೋಡಿ (Nov 7 2007 - 12:27pm)
- ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ... By: srivathsajoshi (Nov 8 2007 - 7:58am)

RSS:
ಉ: ಕೂಟು : ಒಂದು 'ಪದಾರ್ಥ' ಚಿಂತಾಮಣಿ...
ಅಯ್ಯೊ ಬಿಟ್ಟು ಬಿಡರಿ...
ಏನೋ ಜೋಶಿಗಳು ಕೂಟಿನ ರುಚಿ ಸವಿದಿದ್ದು.. ಒಬ್ಬ ತಮಿಳು ಗೆಳೆಯನ ಮನೆಯಲ್ಲಿ, ತೆಂಕಣಗನ್ನಡದಲ್ಲಿ ಅದು ಇದೆ ಅಂತ ಅವರಿಗೆ ಗೊತ್ತಿಲ್ಲವಷ್ಟೆ.. ಅಲ್ಲಿ ಸವಿದಿದ್ದರಿಂದ ಅದಕ್ಕೆ ತಮಿಳಿನಿಂದ ಆ ಹೆಸರು ಹ್ಯಾಗೆ ಬಂದಿರಬಹುದು ಅಂತ ಅವರ ಮನಸ್ಸು ಹುಡುಕಾಡಿದೆ...
ತೆಂಕಣಗನ್ನಡದವರು ಕೂಟ ಮಾಡುತ್ತಾರೆ ನನಗೂ ಗೊತ್ತಿಲ್ಲ, ಬೆಂಗಳೂರಿಗೆ ಬಂದು ಎಂಟೇಡುಗಳಾದರೂ ನಾನೆಂದು ಸವಿದಿಲ್ಲ.. ಹಾಗೆನಾದರೂ ತಿಳಿಯದೆ ತಮಿಳಿರ ಮನೆಯಲ್ಲಿ ಕೂಟ ಉಂಡಿದ್ದರೆ.. ನಾನು ಅದು ತಮಿಳಿನದೆ ಅಂತಿದ್ದೆ.. ಅದಕ್ಕೆ ಜೋಶಿಯವರು ಹಾಗೆ ಹೇಳಿದ್ದಾರೆ... ಆದರೆ ಸೊಪ್ಪು ಸಾರು ಅಂತ ಒಂದಿದೆ ಅಲ್ಲ ಅದು ಕೂಡ ಗಟ್ಟಿಯಾಗೇ ಇರೋದು... ಅದರ ರುಚಿ ಕಂಡಿದ್ದೇನೆ... ಅದರದು ದೊಡ್ಡರುಚಿ..
ನಮ್ಮ ಕಡೆ (ಬಡಗನ್ನಡನೆಲದಲ್ಲಿ) ಬೇಳೆ ಕಟ್ಟಿನ ಸಾರು ಅಂತ ಮಾಡ್ತಾರೆ ಯಾರಾದರೂ ಸವಿದಿದ್ದೀರಾ... ?
ಅಲ್ಲದೆ ಹುರುಳಿಕಟ್ಟಿನ ಸಾರು (ಇದು ಬೇಳೆ ಕಟ್ಟಿನ ಸಾರಿಗಿಂತ ಬೇರೆದು), ಅಲಸಂದಿ ಸಾರು, ನುಗ್ಗೆಕಾಯಿ ಸಾರು, ಟೊಮೇಟೋ ಸಾರು, ಕಾರಬ್ಯಾಳಿ (ಇದು ರೊಟ್ಟಿ ಜೊತೆಗೆ ಜಡಿದರೆ ಭರ್ಜರಿಯಾಗಿರುತ್ತೆ) ಹೀಗೆನೇ ಸಿಕಾಪಟ್ಟೆ ಸಾರುಗಳು....
ಜೋಶಿಯವರೆ ಒಂದು ಸಾರಿ ನಮ್ಮ ಕಡೆಗೂ ಬರ್ರೆಲಾ... ಕಟ್ಟಿನ ಸಾರು ಸವಿರಿ (ಕೂಟದ ಸಾರಲ್ಲಾ ಮತ್ತೆ..)