ಕನ್ನಡಕ್ಕಿಂದು ಬೇಕಾಗಿರುವುದು....
- ನಿಮ್ಮ ಮಾತನ್ನ ನಾನೂ ಒಪ್ಪುತ್ತೇನೆ ! By: Aravinda (Sep 22 2006 - 6:59pm)
- ಕನ್ನಡಕ್ಕಿಂದು ಬೇಕಾಗಿರುವುದು.... By: ಪ್ರದೀಪ್ ಬೆಳಗಲ್ (Jan 17 2006 - 10:01pm)
- activism ಕುರಿತು By: srikanth (Dec 6 2005 - 12:13pm)
- ಕನ್ನಡ ಪುಸ್ತಕಗಳು By: (Dec 6 2005 - 5:06pm)

RSS:
ಕನ್ನಡಕ್ಕಿಂದು ಬೇಕಾಗಿರುವುದು....
ವ್ಯಕ್ತ ಪಡಿಸಿರುವ ನಿಲುವು ಸರಿಯಾಗಿಯೇ ಇದೆ. ಪತ್ರಿಕೆಗಳು, ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳಸ ಬೇಕಿದೆ. ನನ್ನ ಸಂಬಂಧಿಕರೊಬ್ಬರಿಗೆ ನಿಮ್ಮ ಆದಾಯದ ಎಷ್ಟು ಭಾಗ ಪುಸ್ತಕಗಳಿಗೆ ಖರ್ಚು ಮಾಡುತ್ತೀರೆಂದು ಪ್ರಶ್ನಿಸಿದರೆ ಅವರಿಗೇಕೋ ಇರುಸು ಮುರುಸಾಯಿತು. ಅಲ್ಲಾ ಸ್ವಾಮಿ ನಿಮ್ಮ ಸ್ಥಳದಲ್ಲಿ ನಿಮ್ಮ ಆಯ್ಕೆಯ ಪುಸ್ತಕಗಳು ಲಭ್ಯವಿಲ್ಲವೆನ್ನಿ, ನೀವು ಬೇರೆ ಊರಿಗೆ ಓದಾಗ ತರಬಹುದಲ್ಲವೆ?
ವಾಸ್ತವದಲ್ಲಿ ಕನ್ನಡ ಪುಸ್ತಕ ಮಳಿಗೆಗಳು ಹಲವು ಪಟ್ಟಣಗಳಲ್ಲಿ ಇಲ್ಲ. ಈ ಬಗೆಗೆ ಕನ್ನಡ ಸಾಹಿತ್ಯ ಪರಿಷತ್ ನ ಕೆಲವರೊಂದಿಗೆ ಚರ್ಚಿಸಿದೆ. ಅದು ಬೀಜ ವೃಕ್ಷ ನ್ಯಾಯದಂತಾಗಿದೆ. ಕನ್ನಡ ಪುಸ್ತಕಗಳು ಕೊಳ್ಳಲು ಮಾರಾಟಗಾರರು ಬೇಕು, ಮಾರಟಾಗಾರರು ಮುಂದೆ ಬರಬೇಕೆಂದರೆ ಕನ್ನಡ ಪುಸ್ತಕ ಕೊಳ್ಳುವವರಿರ ಬೇಕು. ಇಷ್ಟೆಲ್ಲ ಕನ್ನಡ ಉತ್ಸವ ಮಾಡುವಲ್ಲಿ ಹಣ ಚೆಲ್ಲುವ ಕೆಲವರಾದರೂ ಈ ಬಗೆಗೆ ಯೋಚಿಸುವಂತಾಗಲಿ.
ಕನ್ನಡದ ಹಲವು ಸಮಸ್ಯೆಗಳ ಬಗೆಗೆ ಚರ್ಚಿಸುವರರಲ್ಲಿ ಪಿ ವಿ ನಾರಾಯಣ ಪ್ರಮುಖರು. ಅವರು `ಕನ್ನಡ ರಾಷ್ಟ್ರೀಯತೆ`ಯ ಪರಿಕಲ್ಪನೆಯನ್ನೂ ಗಂಭೀರವಾಗಿಯೇ ಪ್ರತಿಪಾದಿಸುತ್ತಿರವವರಲ್ಲಿ ಪ್ರಮುಖರು. ಅವರ ಲೇಖನ `ಭಾರತಕ್ಕೊಂದು `ದ್ವಿಪೌರ` ನೀತಿ` ಒಂದು ವರ್ಷದ ಹಿಂದೆ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು. ಇದು ಭಾಷಾ ವಲಸೆಗಳ ಪರಿಣಾಮದಿಂದ ಉಂಟಾಗುವ ಸಮಸ್ಯೆಗಳೆಡೆ ನಮ್ಮ ಗಮನ ಸೆಳೆಯುತ್ತದೆ. ಆಸಕ್ತರು ಲೇಖನವನ್ನು ಓದಬಹುದು.
http://www.prajavani.net/dec072004/870120041207.php