ಕನ್ನಡ someಶೋಧನೆ
- ಕನ್ನಡಿಗರ ಜಡತನ By: vvdooshaka (Jan 19 2006 - 3:41am)
- keyboard ಮೇಲೋ? Penನ್ನೇ ಲೇಸೋ? By: ismail (Sep 10 2005 - 2:34pm)
- ಇದೇ ವಿಷಯ By: nilagriva (Sep 8 2005 - 4:18pm)
- ಇನ್ಸ್ಕ್ರಿಪ್ಟ್ (Inscript) By: (Sep 8 2005 - 5:18pm)
- ಜಡ ವಸ್ತು! By: pavanaja (Sep 7 2005 - 12:53pm)
- ಹಾಳೆ ಕಾಣೆಯಾಗಿದೆ!!! By: ಶ್ರೀನಿಧಿ (Jan 19 2006 - 6:46am)
- Re: ಹಾಳೆ ಕಾಣೆಯಾಗಿದೆ!!! By: pavanaja (Jan 19 2006 - 9:03am)
- ಕನ್ನಡ someಶೋಧನೆ By: shreekant.mishrikoti (Jan 19 2006 - 1:33pm)
- Re: ಹಾಳೆ ಕಾಣೆಯಾಗಿದೆ!!! By: pavanaja (Jan 19 2006 - 9:03am)
- ನಿಜ By: muralihr (Sep 9 2005 - 4:45pm)
- ಹಾಳೆ ಕಾಣೆಯಾಗಿದೆ!!! By: ಶ್ರೀನಿಧಿ (Jan 19 2006 - 6:46am)
- ಒಳ್ಲೆಯ ವಿಚಾರ By: ನಾ. ರಾ. ಸೋಸಲೆ (Sep 6 2005 - 11:52pm)
- ಕನ್ನಡಕ್ಕೆ ಕೈ ಎತ್ತು By: ಶ್ರೀನಿಧಿ (Jan 19 2006 - 6:28am)
- athi dodda samasye.. By: vasista2k (Sep 6 2005 - 11:35pm)
- ಕನ್ನಡದಲ್ಲಿ ಬರೆಯಿರಿ! By: (Sep 7 2005 - 12:04am)
- ಗರ್..ರ್ರ್ By: shreekant.mishrikoti (Jan 19 2006 - 12:46pm)
- ಕನ್ನಡದಲ್ಲಿ ಬರೆಯಿರಿ! By: (Sep 7 2005 - 12:04am)

RSS:
ಕನ್ನಡ someಶೋಧನೆ
"ಹೊಸ ಜಡವಸ್ತುವಿನ ಪತ್ತೆ ಜಗತ್ತಿನ ಪ್ರಮುಖ ಜಡವಸ್ತುಗಳಲ್ಲಿ "ಕನ್ನಡಿಗ" ಕೂಡ ಇದೆ ಎಂದು ಇತ್ತೀಚೆಗೆ ನಡೆಸಿದ someಶೋಧನೆಗಳಿಂದ ಪತ್ತೆಹಚ್ಚಲಾಗಿದೆ. ವಿಜ್ಞಾನಿಗಳ ಪ್ರಕಾರ ಈ ಜಡವಸ್ತು ಬಹು ವರ್ಷಗಳಿಂದಲೇ ಇತ್ತು. ಆದರೆ ಇತ್ತೀಚೆಗಷ್ಟೆ ಅದರ ಅಸ್ತಿತ್ವ ತುಂಬ ಪ್ರಭಾವಶಾಲಿಯಾಗತೊಡಗಿದೆ. "
ನಿಜ, ಎಲ್ಲಕಾಲಕ್ಕೂ ಕನ್ನಡ/ ಕನ್ನಡನಾಡಿನ ಹಣೆಬರಹವೇ ಅದು ಅಗಿದೆ ,
೧. ಕನ್ನಡಿಗರು ಕನ್ನಡ ಇಂದಿನ ಉತ್ತರ ಕರ್ನಾಟಕದ ( ೫೦ ವರ್ಷದ ನಂತರವೂ ಮುಂಬೈ ಕರ್ನಾಟಕ ಹೆಸರು ಇನ್ನೂ ಮುಂದುವರೆದಿದೆ! ) ದಲ್ಲಿ ತಲೆ ತಗ್ಗಿಸಿ / ತಲೆಮರೆಸಿಕೊಂಡು ಅಂಧಕಾರದಲ್ಲಿ ಮುಳುಗಿದ್ದಾಗ ( southern maharashtra ಎಂದು ಕರೆಸಿಕೊಂಡು ಇದ್ದಾಗ )ಬ್ರಿಟಿಷರು ಈ ನೆಲದ ಭಾಷೆ ಕನ್ನಡ ಎಂದು ಗುರುತಿಸಬೇಕಾಯಿತು.
೨. ಕನ್ನಡ ಕೂಡ ಒಂದು ಪುರಾತನ ಭಾಷೆ ಎಂದು ಈಗ -ಶಾಸ್ತ್ರೀಯ ಭಾಷೆ ಸ್ಥಾನಮಾನ ಬೇಡಿಕೆ ಸಂದರ್ಭದಲ್ಲಿ - ಕಂಡು ಹಿಡಿಯುತ್ತಾ ಇದ್ದೇವೆ.
೩. ಕನ್ನಡಿಗರು ಮದ್ರ್‍ಆಸಿಗಳೆಂದು ಹಿಂದೆ ಕರೆಯಲ್ಪಡುತ್ತಿದ್ದರು . ಅವರು ಮದ್ರಾಸಿಗಳಲ್ಲ ಎಂದು ಉತ್ತರ ಭಾರತದವರು ಈಗೀಗ ಕಂಡು ಹಿಡಿಯುತ್ತಿದ್ದಾರೆ. ( ಟೈಮ್ಸ್ ಆಫ಼್ ಇಂಡಿಯದವರು ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ಕೆಲದಿನದ ಹಿಂದೆ ಕೆನಡಾ ಬಗ್ಗೆ ಬರೆಯುವಾಗ ಕನ್ನಡ ದ ಕುರಿತಾದ ತಲೆಬರಹ ಕೊಟ್ಟರು! )
ಆದರೂ ಇನ್ನೂ ಎಷ್ಟೋ ವಿಷಯಗಳು ಕಂಡು ಹಿಡಿಯುವದಕ್ಕಾಗಿ ಕಾದಿವೆ .
೪. ಮುಂಬೈನಲ್ಲಿ ಸಮಾಜವಾದಿ ಪಕ್ಷದವರು ಬಂಗಾರಪ್ಪ ಬೇರೆ , ಬಂಗಾರು ಲಕ್ಷ್ಮಣ ಬೇರೆ ಎಂದು ಕಂಡು ಹಿಡಿಯಬೇಕಿದೆ. ( ಬ್ಯಾನರ್‍ಗಳಲ್ಲಿ ಬಂಗಾರಪ್ಪ ಚಿತ್ರ ಹಾಕಿ ಕೆಳಗೆ ಬಂಗಾರು ಲಕ್ಷ್ಮಣ್ ಎಂದು ಬರೆದಿದ್ದರು!)
೫. ಕನ್ನಡ ಕೂಡ ರಾಷ್ಟ್ರಭಾಷೆ ಎಂದು ಕಂಡು ಹಿಡಿಯಬೇಕಿದೆ!
೬. ತಮ್ಮ ಊರಿನ ಹೆಸರನ್ನು ತಮಗೆ ಬೇಕಾದ ಹಾಗೆ ಇಟ್ಟುಕೊಳ್ಳುವ ಹಕ್ಕು ಕನ್ನಡಿಗರಿಗೂ ಇದೆ ಎನ್ನುವದು.
೭. ಕರ್ನಾಟಕದಲ್ಲೇ ಇರುವ ಎಷ್ಟೋ ಕನ್ನಡಿಗರು ತಾವು ಕನ್ನಡಿಗರು ಎಂಬುದನ್ನೇ ಮರೆತಿದ್ದಾರೆ . ಅದನ್ನು ಕೂಡ ಕಂದು ಹಿಡಿಯಬೇಕಾದ ವಿಷಯವೇ .
ಹೀಗೆ ಎಷ್ಟೋ ವಿಷಯ ಸಂಶೋಧಕರನ್ನು ಕಾದು ಕೂತಿವೆ !