ಜಿಲ್ಲಾ ಕೇಂದ್ರಗಳಲ್ಲಿರುವ ಕ್ರೀಡಾಂಗಣಗಳನ್ನು ಉತ್ತಮಗೊಳಿಸಲು ಕೆ.ಎಸ್.ಸಿ.ಎ ಏನೂ ಪ್ರಯತ್ನ ಮಾಡಿಲ್ಲ...ಹಾಗಾಗಿ ಅಲ್ಲಿ ಪಂದ್ಯಗಳನ್ನು ಆಡಿಸಲಾಗುತ್ತಿಲ್ಲ ಎನ್ನಬಹುದು. ಒಂದು ರೀತಿಯಲ್ಲಿ ಕರ್ನಾಟಕ ತಂಡ ಅಂದರೆ ಬೆಂಗಳೂರು ಎಂದೇ ಆಗಿದೆ. ಬೆಂಗಳೂರು ಅಥವಾ ಮೈಸೂರುಗಳಲ್ಲಿ ಲೀಗ್ ಕ್ರಿಕೆಟ್ ಆಡಿದರೆ ಮಾತ್ರ ಕೆ.ಎಸ್.ಸಿ.ಎ ದೊರೆಗಳು ಗುರುತಿಸುತ್ತಾರೆ. ಕಳೆದ ದಶಕದಲ್ಲಿ ಅಂದರೆ ೧೯೯೧ ರಿಂದ ೨೦೦೦ ದವರೆಗೆ ತಾಲೂಕು ಕೇಂದ್ರಗಳಲ್ಲೂ ರಣಜಿ ಪಂದ್ಯಗಳು ನಡೆದಿದ್ದವು. ಗೋವಾ ವಿರುದ್ಧ ಪಂದ್ಯವೊಂದು ಶಿರಸಿಯಲ್ಲಿ ನಡೆದಿತ್ತು. ಪಂದ್ಯದ ಎಲ್ಲಾ ದಿನಗಳಲ್ಲೂ ಶಿರಸಿಯಲ್ಲಿ ಜಾತ್ರೆ. ಮಾರಿಕಾಂಬಾ ಜಾತ್ರೆಗೂ ಅಷ್ಟು ಜನರಿರುತ್ತಿರಲಿಲ್ಲ! ಹಾಗೆ ಬಿಜಾಪುರ, ದಾವಣಗೆರೆ, ರಾಯಚೂರು ಇಲ್ಲಿಯೂ ಪಂದ್ಯಗಳು ನಡೆದಿದ್ದವು. ಆದರೆ ೨೦೦೦ದ ಬೆಳಗಾವಿ ಪಂದ್ಯದ ಬಳಿಕ ಮಂಡ್ಯದಲ್ಲಿ ೩ ವರ್ಷಗಳ ಮೊದಲು ಬಂಗಾಲದ ವಿರುದ್ಧ ಪಂದ್ಯ ನಡೆದದ್ದು ಬಿಟ್ಟರೆ, ಬೆಂಗಳೂರಿಗೆ ಮಾತ್ರ ಆದ್ಯತೆ. ಕಳೆದೆರಡು ವರ್ಷಗಳಿಂದ ಮೈಸೂರಿನಲ್ಲಿ ರೆಗ್ಯುಲರ್ ಆಗಿ ಪಂದ್ಯ ನಡೆಸಲಾಗಿತ್ತಿದೆ. ಮೈಸೂರಿನಲ್ಲಿ 'ಗಂಗೋತ್ರಿ ಗ್ಲೇಡ್ಸ್' ಮೈದಾನವನ್ನು ನಿರ್ಮಿಸಿದಂತೆ ರಾಜ್ಯದ ಉಳಿದೆಡೆ ಇದೇ ರೀತಿ ಮಾಡುವ ಸಾಮರ್ಥ್ಯ ಕೆ.ಎಸ್.ಸಿ.ಎ ಗೆ ಇದೆ .... ಆದರೆ ಛಲ ಇಲ್ಲ.
ಉ: ಕರ್ನಾಟಕ(ಬೆಂಗಳೂರು)ದಲ್ಲಿ ರಣಜಿ ಕ್ರಿಕೆಟ್