ಉ: ಉತ್ತರ ಕರ್ನಾಟಕದ ಕಟಿರೊಟ್ಟಿ
- ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: ಸಂಗನಗೌಡ (Nov 23 2007 - 11:53pm)
- ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: shreekant.mishrikoti (Nov 23 2007 - 11:53am)
- ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: naasomeswara (Nov 23 2007 - 12:14pm)
- ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: ishwar.shastri (Nov 27 2007 - 11:55am)
- ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: gc (Nov 27 2007 - 8:32pm)
- ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: naasomeswara (Nov 27 2007 - 1:32pm)
- ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: shreekant.mishrikoti (Nov 23 2007 - 12:24pm)
- ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: naasomeswara (Nov 23 2007 - 1:26pm)
- ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: ಸಂಗನಗೌಡ (Nov 23 2007 - 11:47pm)
- ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: naasomeswara (Nov 23 2007 - 1:26pm)
- ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: ishwar.shastri (Nov 27 2007 - 11:55am)
- ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: naasomeswara (Nov 23 2007 - 12:14pm)
- ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: shreekant.mishrikoti (Nov 23 2007 - 11:52am)
- ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: savithru (Nov 23 2007 - 11:11am)
- ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: ishwar.shastri (Nov 26 2007 - 7:10pm)
- ಉ: ಉತ್ತರ ಕರ್ನಾಟಕದ ಕಟಿರೊಟ್ಟಿ By: mahesha (Nov 23 2007 - 10:52am)

RSS:
ಉ: ಉತ್ತರ ಕರ್ನಾಟಕದ ಕಟಿರೊಟ್ಟಿ
ಈಶ್ವರರೆ, ನನಗೂ ಹಾಗೆ ಅನ್ನಿಸಿತು. ಆಹಾರದ ವಿಷಯದಲ್ಲಿ ಸಂಶೋಧನೆಗಳು ದಾರಿ ತಪ್ಪಿವೆ ಅನ್ನಿಸುತ್ತೆ. ಕಟಿರೊಟ್ಟಿಯಂತೆ ಬಹುತೇಕ ಓಣ ಆಹಾರ ಪದಾರ್ಥಗಳನ್ನು ಹೆಚ್ಚಿನ ದಿನವಿಡಬಾರದು ಎಂಬುದು ಸಾಮಾನ್ಯ ಪ್ರಜ್ಞೆ. ದೇಶದ ಯಾವದೋ ಮೂಲೆಯಲ್ಲಿ ತಯಾರದ ಹಾಗು ತಿಂಗಳುಗಟ್ಟಲೆ ಅಂಗಡಿಯಲ್ಲಿರುವ ಓಣ ಬಿಸ್ಕಿಟ್ ಗಳಾಗಲಿ ಹಾಗೂ ಮಳೆಗಾಲದಲ್ಲಿ ಕೆಲವೇ ದಿನಗಳಲ್ಲಿ ಸುಕ್ಷ್ಮಾಣುಗಳು ಬೆಳೆದು ಕೆಡುವ ಬ್ರೆಡ್ಡಿನ ಬಗ್ಗೆ ಇದೇ ಕಾಳಜಿ ಇರಬೇಕು. ಸಣ್ಣ ಊರುಗಳಿಗೂ ಬಂದಿರುವ retail chains ಎಂದೋ ಪ್ಯಾಕೇಜ್ ಮಾಡಿದ ಪದಾರ್ಥಗಳನ್ನೆ ಮಾರೋದು ಹೆಚ್ಚು. ತಾಜಾ ಆಹಾರ ಪದಾರ್ಥಗಳ ಬಗ್ಗೆ ನಮಗಿದ್ದ ಪ್ರಜ್ಞೆ ಕಡಿಮೆಯಾಗ್ತಿದೆ ಅನ್ನಿಸುತ್ತೆ.
ಹೋದ ವರ್ಷ coke/pepsi ತಂಪು ಪಾನೀಯಗಳಲ್ಲಿ ಕ್ರಿಮಿನಾಶಕಗಳಿವೆ ಎಂದು CSE ಬೊಬ್ಬೆ ಹೊಡೆಯಿತು. ವಾಸ್ತವವಾಗಿ ಯದ್ವಾ-ತದ್ವಾ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳ ಬಳಕೆಯಿಂದ ನಮ್ಮ ಕೆರೆ, ನದಿ, ಅಂತರ್ಜಲಗಳಲ್ಲಿ ಮಿತಿಮೀರಿದ ಕ್ರಿಮಿನಾಶಕಗಳ ಪ್ರಮಾಣವಿದೆ. ನಮ್ಮ ದೇಶ್ದಲ್ಲಿ coke/pepsi ಕುಡಿಯುವ ಜನರೆಷ್ಟು? ಯಾವದೇ ಫಿಲ್ಟರ್ ಬಳಸದೆ ಕಲುಷಿತ ನೀರನ್ನು ಕುಡಿಯುವ ಜನರೆಷ್ಟು ಎಂಬುದರ ಬಗ್ಗೆ ಹೆಚ್ಚಿನ ಜನ ತಲೆ ಕೆಡಿಸಿಕೊಳ್ಳಲಿಲ್ಲ.
ಒಂದೇ ಪದಾರ್ಥವನ್ನು ಮುಂದಿಟ್ಟುಕೊಂಡು ಅದರ ಅನುಕೂಲ ಅಥವಾ ಹಾನಿಗಳನ್ನು ಪಟ್ಟಿ ಮಾಡಬಹುದು. ಆದರೆ ಒಂದೇ ಪದಾರ್ಥವನ್ನು ನಾವು ಊಟವೆಂದು ಸೇವಿಸುವುದಿಲ್ಲವಲ್ಲ. ಕಟಿರೊಟ್ಟಿಯ ಜೊತೆಗೆ ಸೇವಿಸುವ ಖಾರದ ಚಟ್ನಿ, ಪಲ್ಯ, ಇತ್ಯಾದಿಗಳ ಒಟ್ಟಿನ ಪರಿಣಾಮವೇನು? ಹಾಲು, ಕಾಫಿ, ಟೀ, ಮತ್ತು ಮದ್ಯಪಾನಗಳ ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳ ಬಗ್ಗೆ ದಿನನಿತ್ಯ ಸಂಶೋಧನೆಗಳು ಹೊರಬರುತ್ತವೆ. ಎಷ್ಟು ನಂಬೋದು? ಎಷ್ಟು ಬಿಡೋದು?
ವಾಸ್ತವವೇನೇ ಇರಲಿ, ನಾನು ನಂಬಿರೋದು - moderation is the key to a healthy diet.