ಉ: ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು?
- ಉ: ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು? By: ವೈಭವ (Dec 5 2007 - 2:28pm)
- ಉ: ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು? By: mahesha (Dec 5 2007 - 10:05pm)
- ಉ: ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು? By: mahesha (Dec 5 2007 - 3:08pm)
- ಉ: ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು? By: olnswamy (Dec 5 2007 - 7:08pm)
- ಉ: ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು? By: savithru (Dec 5 2007 - 7:29pm)
- ಉ: ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು? By: savithru (Dec 5 2007 - 7:35pm)
- ಉ: ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು? By: savithru (Dec 5 2007 - 7:29pm)
- ಉ: ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು? By: olnswamy (Dec 5 2007 - 7:08pm)

RSS:
ಉ: ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು?
--
ಅರವಟ್ಟಿಗೆ: ಅಱ ಅಂದರೆ ಧರ್ಮ. ಈಗ ಅರವಟ್ಟಿಗೆ ಅನ್ನುವ ಪದವೂ ಕಾಣೆಯಾಗಿದೆ. ಅದರ ಅರ್ಥ ಧರ್ಮದ ಕಟ್ಟಿಗೆ. ಬಿಸಿಲಲ್ಲಿ ಬಳಲಿ ಬಂದವರಿಗೆ ನೀರು, ತಣ್ಣನೆ ಮಜ್ಜಿಗೆ, ಪಾನಕ ಇತ್ಯಾದಿಗಳನ್ನು ಉಚಿತವಾಗಿ ಒದಗಿಸಿ ದಣಿವಾರಿಸುತ್ತಿದ್ದ ತಾಣ.
ಅರಭಟ್ಟ ಚಾಲುಕ್ಯರ ಕಾಲದವನು, ಬಹುಶಃ ಒಬ್ಬ ಮಂತ್ರಿ. ಅವನ ಪ್ರಸ್ತಾಪವಿರುವ ಶಾಸನ ಕನ್ನಡದಲ್ಲಿ ಪ್ರಸಿದ್ದ. ಅದರ ಪದ್ಯದ ಸಾಲುಗಳು ಯಥಾವತ್ ಈಗ ಹೇಳಲಾರೆ, ಅದರ ಸಾರಾಂಶ ಹೀಗೆ: ಕೆರಯನ್ನು ಕಟ್ಟಿಸು, ಬಾವಿಯನ್ನು ತೋಡಿಸು, ಜನರಿಗೆ ಒಳ್ಳೆಯದು ಮಾಡು ಎಂದು ಅರಭಟ್ಟನ ತಾಯಿ ಹಾಲು ಕುಡಿಸುತ್ತಾ ಅವನಿಗೆ ಹೇಳಿಕೊಟ್ಟಳು. ಅವನು 'ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ, ಬಾಧಿಪ್ಪ ಕಲಿಗೆ ವಿಪರೀತನ್ ಮಾಧವನೀತನ್ ಪೆರನಲ್ಲ' ಒಳ್ಳೆಯವರಿಗೆ ಒಳ್ಳೆಯವನಾಗಿ ಎಲ್ಲರನ್ನೂ ಬಾಧಿಸುವ ಕಲಿಯನ್ನೂ ಸೋಲಿಸಿದವನಾಗಿ, ಮಾಧವನೇ ಇವನು ಎಂಬಂತೆ ಪ್ರಸಿದ್ಧನಾದ ಅನ್ನುತ್ತದೆ ಶಾನಸ.
ಕನ್ನಡದ ಮೊದಲ ಶಾನಸ ಹಲ್ಮಿಡಿ ಶಾಸನದಷ್ಟೇ ಪ್ರಸಿದ್ಧವಾದದ್ದು ಇದು.
ಧಾರವಾಡದಲ್ಲಿ ಅರವಟ್ಟಿಗೆ ಎಂಬ ಬೋರ್ಡು ಇನ್ನೂ ಇದ್ದರೆ ಅಲ್ಲಿನ ಜನ ಸುಮಾರು ಸಾವಿರ ವರ್ಷಗಳ ಕನ್ನಡಪದವನ್ನು ಇನ್ನೂ ಕಾಪಾಡಿಕೊಂಡಿದ್ದಾರೆ ಅಂತ ಸಂತೋಷಪಡೋಣ!