ಉ: ಕಟವಾಯಿ, ಓರಗೆ, ಕರ್ಬೊನ್.......
- ಉ: ಕಟವಾಯಿ, ಓರಗೆ, ಕರ್ಬೊನ್....... By: mahesha (Dec 18 2007 - 5:39pm)
- ಉ: ಕಟವಾಯಿ, ಓರಗೆ, ಕರ್ಬೊನ್....... By: hamsanandi (Dec 17 2007 - 11:01pm)
- ಉ: ಕಟವಾಯಿ, ಓರಗೆ, ಕರ್ಬೊನ್....... By: hamsanandi (Dec 17 2007 - 11:00pm)
- ಉ: ಕಟವಾಯಿ, ಓರಗೆ, ಕರ್ಬೊನ್....... By: hamsanandi (Dec 17 2007 - 10:58pm)
- ಉ: ಕಟವಾಯಿ, ಓರಗೆ, ಕರ್ಬೊನ್....... By: ವೈಭವ (Dec 18 2007 - 2:04pm)
- ಉ: ಕಟವಾಯಿ, ಓರಗೆ, ಕರ್ಬೊನ್....... By: Sunil Jayaprakash (Dec 17 2007 - 4:16pm)
- ಉ: ಕಟವಾಯಿ, ಓರಗೆ, ಕರ್ಬೊನ್....... By: kpbolumbu (Dec 17 2007 - 3:29pm)
- ಉ: ಕಟವಾಯಿ, ಓರಗೆ, ಕರ್ಬೊನ್....... By: ವೈಭವ (Dec 17 2007 - 3:47pm)
- ಉ: ಕಟವಾಯಿ, ಓರಗೆ, ಕರ್ಬೊನ್....... By: shreekant.mishrikoti (Dec 17 2007 - 2:55pm)

RSS:
ಉ: ಕಟವಾಯಿ, ಓರಗೆ, ಕರ್ಬೊನ್.......
ಸೂಪರ್ ಹಂಸಾನಂದಿಗಳೆ,
೧,೨,೩,೮,೯,೧೦ - ಒಪ್ಪು
೪. ಅನಿಬರು = ಅಶ್ಟು ಜನರು ( ಇನಿಬರು=ಇಶ್ಟು ಜನರು, ಉನಿಬರು=ಉಶ್ಟು ಜನರು, ಎನಿಬರು=ಎಶ್ಟು ಜನರು)
'ಉಶ್ಟು' ( ಸರಿಯಾಗಿ ಗೊತ್ತಿಲ್ಲ, ಅಶ್ಟು , ಇಶ್ಟು ಇವುಗಳ ನಡುವೆ) ಇದು 'ಹೊಸಗನ್ನಡ'ದಲ್ಲಿ ಇಲ್ಲ.
೫. ಕೆಮ್ಮನೆ = ಸುಮ್ಮನೆ
೬. ಬಿರ್ದಿನನ್ = ಆತಿಥ್ಯಕ್ಕೆ ಯೋಗ್ಯವಾದವನು, ಅತಿಥಿ
೭. ಕಿಸುರು = ಜಗಳ, ಅಸೂಯೆ
೧೧. ಕೂರನ್ = ಕೂರದನ್ = ಪ್ರೀತಿಪಾತ್ರನಲ್ಲ, ಪ್ರೀತಿಗೆ ಯೋಗ್ಯನಲ್ಲ
ಎದುರುಪದಗಳು : ಕೂರ್ಪನ್ x ಕೂರನ್
ಓರೆಗೆ/ವಾರ್ಗೆ ಬಗ್ಗೆ : ರಾಮ, ಸೋಮ ಇಬ್ಬರು ಒಂದೇ ವಾರ್ಗೆಯವರು ಅಂದ್ರೆ ಒಂದೆ ವಯಸ್ಸಿನವರು/ಸಮವಯಸ್ಕರು
ಕರ್ಬೊನ್ ಬಗ್ಗೆ: ಕರ್+ಪೊನ್ = ಕರ್ಬೊನ್ => ಹೊಸಗನ್ನಡದಲ್ಲಿ 'ಕರ್ಬೊನ್' ಕಬ್ಬಿಣವಾಗಿದೆ. ಕಬ್ಬಿಣ ಸಾಮಾನಿಯ ಅಲ್ಲ ಕರಿ ಚಿನ್ನ ಅದು
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು