ಉ: ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪
- ಉ: ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪ By: girish.rajanal (Dec 20 2007 - 5:50pm)
- ಉ: ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪ By: hamsanandi (Dec 20 2007 - 11:14pm)
- ಉ: ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪ By: savithru (Dec 12 2007 - 9:06am)
- ಉ: ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪ By: Sunil Jayaprakash (Dec 12 2007 - 8:36am)
- ಉ: ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪ By: benaka (Dec 23 2007 - 4:10am)
- ಉ: ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪ By: Sunil Jayaprakash (Dec 28 2007 - 9:50pm)
- ಉ: ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪ By: benaka (Dec 23 2007 - 4:10am)

RSS:
ಉ: ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪
ಹೌದು, ಬೆನಕರೇ ನನಗೂ ಹಾಗೆಯೇ ತೋರುತ್ತಿದೆ. ನೋಡಿ, ೧೬ ಅಂಕಿಗೆ ಅದೇನೋ ತುಂಬಾ ಮಹತ್ವವಿದೆ ಅಂತ ಕಾಣತ್ತೆ. ಹಾಡೇ ಇದೆಯಲ್ಲವೇ. "ಹುಚ್ಚುಕೋಡಿ ಮನಸು ಅದು ೧೬ರ ವಯಸು" ಎನ್ನುವ ಹಾಗೆ
ಛಾಂದೋಗ್ಯೋಪನಿಷತ್ತಿನಲ್ಲಿ ಒಂದು ಕಡೆ, "ಸತ್ಯಕಾಮ-ಜಾಬಾಲನ" ಕತೆ ಆದಮೇಲೆ ನಾಲ್ಕು ಬ್ರಹ್ಮಗಳ ಬಗ್ಗೆ ಬರತ್ತೆ. ಒಂದೊಂದು ಬ್ರಹ್ಮರೂಪವೂ ಚತುಷ್ಕಲಪಾದಬ್ರಹ್ಮ ಎಂಬುದಾಗಿ ಹೇಳತ್ತೆ.
ಪ್ರಕಾಶವಾನ್ ಬ್ರಹ್ಮ - ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ
ಅನಂತವಾನ್ ಬ್ರಹ್ಮ - ಪೃಥ್ವಿ, ಅಂತರಿಕ್ಷ, ದ್ಯುಲೋಕ, ಸಮುದ್ರ
ಜ್ಯೋತಿಷ್ಮಾನ್ ಬ್ರಹ್ಮ - ಅಗ್ನಿ, ಸೂರ್ಯ, ಚಂದ್ರ, ವಿದ್ಯುತ್
ಆಯತನವಾನ್ ಬ್ರಹ್ಮ - ಪ್ರಾಣ, ಚಕ್ಷುಸ್, ಶ್ರೋತ್ರಂ, ಮನಃ
ಅದರ ಶ್ಲೋಕಗಳು ಇಲ್ಲಿವೆ. ಇವನ್ನು ತಿಳಿದುಕೊಂಡವನು ಷೋಡಶಕಲಾಪುರುಷನಾಗಬಲ್ಲನು.