ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ
- ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ By: Sunil Jayaprakash (Dec 31 2007 - 2:47pm)
- ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ By: muralihr (Jan 8 2008 - 12:16pm)
- ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ By: hamsanandi (Jan 7 2008 - 11:11pm)
- ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ By: ವೈಭವ (Dec 28 2007 - 8:16am)
- ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ By: hamsanandi (Dec 29 2007 - 12:02am)
- ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ By: mahesha (Dec 28 2007 - 1:50pm)
- ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ By: ಶ್ರೀನಿವಾಸ ವೀ. ಬ೦ಗೋಡಿ (Dec 28 2007 - 2:23pm)
- ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ By: hamsanandi (Dec 29 2007 - 12:15am)
- ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ By: ಶ್ರೀನಿವಾಸ ವೀ. ಬ೦ಗೋಡಿ (Dec 31 2007 - 12:11pm)
- ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ By: hamsanandi (Dec 29 2007 - 12:15am)
- ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ By: ಶ್ರೀನಿವಾಸ ವೀ. ಬ೦ಗೋಡಿ (Dec 28 2007 - 2:23pm)
- ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ By: ವೈಭವ (Dec 28 2007 - 8:14am)

RSS:
ಉ: ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ
ಶ್ರೀನಿವಾಸರೆ,
ಇಲ್ಲಿ ಒಂದು ವಿಷಯವನ್ನು ತಿಳಿಯಪಡಿಸುವೆ.
ಹಿಂದೂಸ್ತಾನಿ ಪದ್ಧತಿ ಮತ್ತು ಕರ್ನಾಟಕ ಪದ್ದತಿಯಲ್ಲಿ ರಾಗಗಳ ಹೆಸರು ಬೇರೆಬೇರೆಯಾಗಿರುತ್ತವೆ. ಕೆಲವೊಮ್ಮೆ, ಸರಿಸುಮಾರು ಒಂದೇ ರಾಗಕ್ಕೆ ಬೇರೆಬೇರೆ ಹೆಸರುಗಳು ಇದ್ದರೆ (ಉದಾ: ಹಿಂದೋಳ - ಮಾಲಕೌಂಸ್, ಕಲ್ಯಾಣಿ- ಯಮನ್, ವಕುಳಾಭರಣ - ಬಸಂತ್ ಮುಖಾರಿ, ಚಕ್ರವಾಕ - ಆಹಿರ್ ಭೈರವ್, ಕಾಮವರ್ಧನಿ- ಪೂರಿಯಾ ಧನಾಶ್ರೀ)) - ಮತ್ತೆ ಕೆಲವು ಬಾರಿ ಒಂದೇ ಹೆಸರಿನ ರಾಗಗಳ (ಹಿಂದೋಳ, ತೋಡಿ, ಭೈರವಿ, ಭೈರವ್, ಶ್ರೀ) ರೂಪ ಪೂರ್ತಿ ಬೇರೆಯಾಗಿರುತ್ತೆ. ಈಗ ತೋಡಿ ರಾಗದ ವಿಷಯವೂ ಹಾಗೆಯೇ.
ನೀವು ಹೇಳಿದ, ಶೋಕಾಚರಣೆಯ ಸಮಯದಲ್ಲಿ ರೇಡಿಯೋ ಟಿವಿಗಳಲ್ಲಿ ಬಿತ್ತರವಾಗುವುದು (ಬಹುಪಾಲು) ಹಿಂದೂಸ್ತಾನಿಯ ತೋಡಿ ಎಂಬ ರಾಗ. ಅದಕ್ಕೆ ಕರ್ನಾಟಕ ಸಂಗೀತದಲ್ಲಿ ಶುಭಪಂತುವರಾಳಿ ಎನ್ನುತ್ತೇವೆ. ಅದು ಶೋಕರಸ ಪ್ರಧಾನರಾಗ. ಚಲನಚಿತ್ರಗಳಲ್ಲೂ ಇದು ಹಲವು ಗೀತೆಗಳಲ್ಲೂ, ಮತ್ತ್ತು ದುಃಖದ ಸನ್ನಿವೇಶಗಳಲ್ಲಿ ಹಿನ್ನಲೆಯಲ್ಲೂ ಬಹಳವೇ ಉಪಯೋಗವಾಗಿದೆ.
ಕರ್ನಾಟಕ ಸಂಗೀತದಲ್ಲೊಂದು ತೋಡಿ ರಾಗವಿದೆ. ಅದು ಪೂರ್ತಿ ಬೇರೆಯೇ. ಅದು ಅಷ್ಟಾಗಿ ಶೋಕ ಪ್ರಧಾನವಲ್ಲ. ಬದಲಿಗೆ ವಿಸ್ಮಯ, ಭಕ್ತಿ, ಅಧ್ಬುತ, ವಾತ್ಸಲ್ಯ ಮೊದಲಾದ ಬಗೆಬಗೆಯ ಭಾವಗಳನ್ನು ವ್ಯಕ್ತಪಡಿಸಲು ಉಪಯೋಗಿಸುವ ರಾಗ. ಈ ರಾಗದಲ್ಲಿರುವ ಒಂದು ಪ್ರಸಿದ್ಧ ಚಿತ್ರಗೀತೆಗೆ ಡಾ.ರಾಜ್ ಕುಮಾರ್ ಅವರಿಗೆ ಅತ್ಯುತ್ತಮ ಹಿನ್ನಲೆ ಗಾಯಕ ರಾಷ್ಟ್ರೀಯ ಪ್ರಶಸ್ತಿ ದೊರೆಯಿತು ಕೂಡ. ಯಾವುದು ತಿಳಿಯಿತೇ? ಅದೇ ನಾದಮಯ ಈ ಲೋಕವೆಲ್ಲ ಎಂಬ ಗೀತೆ. ಅದನ್ನು ನೀವು ಈ ಕೆಳಗಿನ ಕೊಂಡಿಯಲ್ಲಿ ಕೇಳಬಹುದು:
http://www.musicindiaonline.com/p/x/zJIjrrQz-t.As1NMvHdW/
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕರ್ನಾಟಕ ಸಂಗೀತದ ತೋಡಿ ರಾಗಕ್ಕೆ ಸಮನಾದ (ಅದೇ ರೀತಿಯ) ರಾಗ ಹಿಂದೂಸ್ತಾನಿ ಪದ್ಧತಿಯಲ್ಲಿ ಇಲ್ಲ.
-ಹಂಸಾನಂದಿ