ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಉ: ರಥ ಸಪ್ತಮಿ
- ratha saptami By: Vani (Feb 5 2006 - 8:13am)
- ಕನ್ನಡದಲ್ಲಿ ಹೀಗೆ By: tvsrinivas41 (Feb 5 2006 - 8:22am)
- ರಥಸಪ್ತಮಿಯ By: gvmt (Feb 5 2006 - 3:03am)
- ರಥಸಪ್ತಮಿ By: Sunil Jayaprakash (Feb 4 2006 - 10:47pm)
- ಸಿನೆಮಾನಾ? By: tvsrinivas41 (Feb 4 2006 - 10:52pm)
- Re: ಸಿನೆಮಾನಾ? By: (Feb 4 2006 - 11:03pm)
- ಎರಡನೇ ಸಿನಿಮಾ... By: karthik (Feb 6 2006 - 2:19pm)
- ರಥಸಪ್ತಮಿ ಚಿತ್ರ By: nayak_sathish (Feb 7 2006 - 6:47pm)
- ಎರಡನೇ ಸಿನಿಮಾ... By: karthik (Feb 6 2006 - 2:19pm)
- Re: ಸಿನೆಮಾನಾ? By: (Feb 4 2006 - 11:03pm)
- ಸಿನೆಮಾನಾ? By: tvsrinivas41 (Feb 4 2006 - 10:52pm)

RSS:
ರಥಸಪ್ತಮಿಯ
ರಥಸಪ್ತಮಿಯ ಬಗ್ಗೆ ಬರೆಯುವ ನೆವದಲ್ಲಿ ಸೂರ್ಯಾರಾಧನೆಯ ವಿವರಗಳನ್ನು ಒದಗಿಸಿದ್ದಕ್ಕೆ ತವಿಶ್ರೀಯವರಿಗೆ ಧನ್ಯವಾದಗಳು.
ಸೂರ್ಯನ ಬಗ್ಗೆ ನನ್ನ ಬ್ಲಾಗಿನಲ್ಲಿ ಚುಟುಕು ಲೇಖನವನ್ನು ಇತ್ತೀಚಿಗೆ ಬರೆದಿದ್ದೇನೆ.
ಸುಮಾರು ಸಾಮಾನ್ಯ ಶಕೆಯ ೧೦-೧೧ನೆ ಶತಕಗಳವರೆಗೂ ಸೂರ್ಯಾರಾಧನೆ ಸಾಕಷ್ಟು ವ್ಯಾಪಕವಾಗಿತ್ತು. ಬೆಂಗಳೂರಿನ ಬಳಿಯ ಬೇಗೂರಿನ ಗಂಗರ ಕಾಲದ ಗುಡಿ ಈಗ ಶಿವಾಲಯವಾಗಿದೆ ಆದರೆ ಹಿಂದೆ ಸೂರ್ಯನ ಗುಡಿಯಾಗಿರಲಿಕ್ಕೆ ಸಾಧ್ಯ. ಪ್ರಾಕಾರದಲ್ಲಿ ಹಳೆಯ ಸೂರ್ಯ ಮೂರ್ತಿಯನ್ನು ನಿಲ್ಲಿಸಿದ್ದಾರೆ. ಅಲ್ಲದೆ ಬೇಗೂರನ್ನು "ಭಾಸ್ಕರ ಕ್ಷೇತ್ರ"ವೆಂದೂ ಕರೆಯುತ್ತಾರೆ.
ತ್ಯಾಮಗೊಂಡಲಿನ ಬಳಿಯ ಮಣ್ಣೆಯಲ್ಲಿಯೂ (ನೆಲಮಂಗಲ ತಾ.) ಹಳೆಯ "ಅರ್ಕೇಶ್ವರ" ದೇವಾಲಯವಿದೆ (ಈಗಿನವರು ಅದನ್ನು ಕಪಿಲೇಶ್ವರ ದೇವಾಲಯವೆಂದು ಕರೆಯುವುದು ವಾಡಿಕೆ, ಆದರೆ ಶಾಸನಗಳಲ್ಲಿ 'ಅರ್ಕೇಶ್ವರ'ವೆಂದು ಕರೆದಿದೆ). ಇಲ್ಲಿದ್ದಿರಬಹುದಾದ ಮೂಲಮೂರ್ತಿಯನ್ನು ಊರಾಚೆಯ ಕೆರೆಯು ಏರಿಯ ಮೇಲೆ ಇರಿಸಿದ್ದಾರೆ.
[ ಈ ಎರಡೂ ಸೂರ್ಯಮೂರ್ತಿಗಳ ಚಿತ್ರಗಳೂ ನನ್ನಲ್ಲಿವೆ ಆದರೆ ಎಟುಕಿನಲ್ಲಿಲ್ಲ; ಇದ್ದಿದ್ದರೆ ಲೇಖನದಲ್ಲಿ ಹಾಕುತ್ತಿದ್ದೆ. ]
ಮೂಲಸ್ಥಾನಪುರಿ (ಇಂದಿನ ಮುಲ್ತಾನ, ಪಾಕಿಸ್ತಾನದಲ್ಲಿದೆ) ಸೂರ್ಯಾರಾಧನೆಯ ಕೇಂದ್ರವಾಗಿತ್ತು [ಹಿರಣ್ಯಕಶಿಪು ಪ್ರಹ್ಲಾದರ ರಾಜಧಾನಿಯೂ ಸಹ ! ]
ಸೌರಪಂಥ ಅಳಿದರೂ ಅದರ ಕೆಲವಾದರೂ ಅಂಶಗಳು ಬೇರೆ ಪದ್ಧತಿಗಳಲ್ಲಿ ಸೇರಿ ಬೆರೆತು ಇನ್ನೂ ಒಂದಲ್ಲ ಒಂದು ಬಗೆಯಲ್ಲಿ, ನೆವದಲ್ಲಿ ನಡೆದುಕೊಂಡು ಬರುತ್ತಿವೆ. ಇದಲ್ಲವೆ ಭಾರತದ ರಿಲಿಜಿಯನ್ನುಗಳ ವೈಶಿಷ್ಟ್ಯ? ಬರೆದರೆ ಅದೇ ಕೆಲವಾರಾದರೂ ಲೇಖನಗಳಾದೀತು.
ವೆಂ.