ಉ: ವರ್ಣಭೇದ ಈಗ ಕ್ರಿಕೆಟ್‍ನಲ್ಲೂ
- ಉ: ವರ್ಣಭೇದ ಈಗ ಕ್ರಿಕೆಟ್‍ನಲ್ಲೂ By: mahesha (Jan 9 2008 - 1:54pm)
- ಉ: ವರ್ಣಭೇದ ಈಗ ಕ್ರಿಕೆಟ್‍ನಲ್ಲೂ By: srinivasps (Jan 10 2008 - 9:52am)
- ಉ: ವರ್ಣಭೇದ ಈಗ ಕ್ರಿಕೆಟ್‍ನಲ್ಲೂ By: ಶ್ಯಾಮ ಕಶ್ಯಪ (Jan 9 2008 - 7:04pm)
- ಉ: ವರ್ಣಭೇದ ಈಗ ಕ್ರಿಕೆಟ್‍ನಲ್ಲೂ By: muralihr (Jan 9 2008 - 8:30am)
- ಉ: ವರ್ಣಭೇದ ಈಗ ಕ್ರಿಕೆಟ್‍ನಲ್ಲೂ By: ಗಣೇಶ (Jan 8 2008 - 4:32pm)

RSS:
ಉ: ವರ್ಣಭೇದ ಈಗ ಕ್ರಿಕೆಟ್‍ನಲ್ಲೂ
ಪ್ರತಿಕ್ರಿಯಿಸಿದವರೆಲ್ಲರಿಗೂ ಧನ್ಯವಾದಗಳು.
ನಾನು ಬರೆಯುತ್ತಿರುವುದು ವರ್ಣಭೇದ ಮಾಡುತ್ತಲೆ. ಇದನ್ನು ಎತ್ತಿ ತೋರಿದ ಮುರಳಿಗೆ ವಂದನೆಗಳು. ಹಾಗೆಯೇ ಮಹೇಶ್‍ಗೆ: ಜನಾಂಗೀಯ ಭೇದ ಇಲ್ಲವೆಂದಿಲ್ಲ ಅದೂ ಸೇರಿದೆ. ಇಲ್ಲಿ ಇದ್ದು ಕಾಣುವುದು ವರ್ಣ. ಜನಾಂಗ, ಮತಗಳು ನಂತರ ಬರುತ್ತವೆ. ಆದ್ದರಿಂದ ವರ್ಣಭೇದ ಎಂಬ ಶಬ್ದವನ್ನು ಬಳಸಿದೆ.
ಇಡೀ ಬಿಳಿಯ ಜನಾಂಗವನ್ನೇ ಸಂಶಯದಿಂದ ಯಾಕೆ ನೋಡಬೇಕು ಎಂಬುದನ್ನು ಒಂದೆರೆಡು ಕಡೆ ಹೇಳಿದ್ದೇನೆ. ನಮ್ಮ ಮತ್ತು ಅವರ, ಇಬ್ಬರ ಮನಸ್ಸಿನಲ್ಲೂ ಸಮಸ್ಯೆಯಿದೆ ಎಂಬುದೂ ಅಲ್ಲಿಯೇ ತಿಳಿಯುತ್ತದೆ. ಅದಿರಲಿ.
ಒಂದು ಆಟವನ್ನು ಬಹಿಷ್ಕರಿಸುವುದಕ್ಕೆ ಅಥವ ಮತ್ತೊಬ್ಬರೊಡನೆ ಆ ಆಟವನ್ನು ಆಡದೇ ಇರುವುದಕ್ಕೆ ಕಾನೂನು ತಂದೇನು ಬಹಿಷ್ಕಾರ ಮಾಡಬೇಕಾಗಿಲ್ಲ. ಮನಸ್ಸಿನಲ್ಲಿದ್ದರೆ ಸಾಕು. ಆಟವನ್ನು ಆಡದಿದ್ದರೆ ಸಾಕು. ನಾನು ಕೇವಲ ’ಕ್ರಿಕೆಟ್ ಎಂಬ ಒಂದು ಆಟ’ದ ಬಗ್ಗೆ ಮಾತಾಡುತ್ತಿಲ್ಲ ಎಂಬುದನ್ನು ಮೇಲಿನ ಲೇಖನದಿಂದಲೇ ನೀವು ಊಹಿಸಬಲ್ಲಿರಿ ಎಂದುಕೊಳ್ಳುತ್ತೇನೆ.
ಇನ್ನು ಈ ವಿಷಯದಲ್ಲಿ ನನ್ನ ಸ್ಪಂದನೆ ತೀರಾ ಭಾವನಾತ್ಮಕವಾಯಿತು, ಸರಿಯಲ್ಲ ಎಂದು ಓದುಗರಿಗೆ ಅನ್ನಿಸಿದರೆ ಸರಿ; ನಿಮ್ಮಿಷ್ಟ. ಇವರು ಮಾಡುತ್ತಾ ಬಂದಿರುವುದನ್ನು ತಿಳಿದೂ, ಹಲವೆಡೆ ಹಲವು ವಿಚಾರಗಳಲ್ಲಿ ಭಾವನಾತ್ಮಕವಾಗಿ ಸ್ಪಂದಿಸಿಯೂ, ಯಾಕೆ ಇವರ ವಿಷಯದಲ್ಲಿ ಭಾವನಾರಹಿತರಾಗಿ, ಅವೇಶರಹಿತವಾಗಿ ನೋಡಬೇಕು ಎಂಬ ಪ್ರಶ್ನೆಯ ಉತ್ತರ ನಿಮಗೆ ಬಿಟ್ಟದ್ದು.
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ