ಜ್ಞಾನ ಎಂಬುದಕ್ಕೆ ಕನ್ನಡ ಪದ
- ಇದು ಬಹಳವೇ ಇಷ್ಟವಾಯಿತು By: Sunil Jayaprakash (Feb 4 2006 - 10:54pm)
- ಉ: ಇದು ಬಹಳವೇ ಇಷ್ಟವಾಯಿತು By: (Feb 4 2006 - 11:27pm)
- ಜ್ಞಾನ ಎಂಬುದಕ್ಕೆ ಕನ್ನಡ ಪದ By: olnswamy (Feb 5 2006 - 2:19pm)
- ತಿಳುವಳಿಕೆ By: tvsrinivas41 (Feb 4 2006 - 11:08pm)
- ಉ: ಇದು ಬಹಳವೇ ಇಷ್ಟವಾಯಿತು By: (Feb 4 2006 - 11:27pm)

RSS:
ಜ್ಞಾನ ಎಂಬುದಕ್ಕೆ ಕನ್ನಡ ಪದ
ತಿಳಿವು ಎಂಬುದು ಜ್ಞಾನ ಎಂಬ ಪದಕ್ಕೆ ಸಮನಾದ ಅರ್ಥ ನೀಡುವ ಕನ್ನಡ ಪದ. ಜ್ಞಾತ=known ಎಂಬುದಕ್ಕೆ ತಿಳಿದದ್ದು, ತಿಳಿವು ಇವು ಸೂಕ್ತ ಎಂದು ತೋರುತ್ತದೆ.
ಉದಯ ಎಂಬುದಕ್ಕೆ ಮೂಡು ಸೂಕ್ತ. ಸೂರ್ಯ ಮೂಡಿದ ಇತ್ಯಾದಿ.
ಜ್ಞಾನೋದಯ ಎಂಬುಕ್ಕೆ ತಿಳಿವು ಮೂಡಿತು ಸರಿಯಾದ ಕನ್ನಡ ಬಳಕೆ ಅನಿಸುತ್ತದೆ.
ಅರಿವು ಎಂಬ ಇನ್ನೊಂದು ಪದವನ್ನು awareness ಎಂಬ ಅರ್ಥದಲ್ಲಿ ಬಳಸುವುದು ಒಳ್ಳೆಯದೆಂದು ತೋರುತ್ತದೆ. ತಿಳಿವು ನಮಗೆ ಈಗಾಗಲೇ ಗೊತ್ತಿದ್ದದ್ದು ಮತ್ತೆ ಮನಸ್ಸಿಗೆ ಬರುವುದು. ಅರಿವು ಇಡೀ ವ್ಯಕ್ತಿತ್ವಕ್ಕೆ ಆಗುವ ಅನುಭವಾಘಾತ! ಅದಕ್ಕೇ ವಚನಗಳಲ್ಲಿ ತಿಳಿವಿಗಿಂತ ಅರಿವು ಮಿಗಿಲು ಎಂಬ ಧೋರಣೆ ಇದೆ.