ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಇರುವುದೆ ಮುಕ್ತಿಯ ಆನಂದ ಕುವೆಂಪು ಕವಿತೆ

February 7, 2006 - 7:48am — olnswamy

ಇರುವುದೆ ಮುಕ್ತಿಯ ಆನಂದ ಕುವೆಂಪು ಕವಿತೆ

olnswamy's picture

ಪಕ್ಷಿಕಾಶಿ ಸಂಕಲನದ "ಇಂತಹ ಸುಂದರ ಪ್ರಾತಃಕಾಲದಿ" ಕವಿತೆಯ ಕೊನೆಯ ಎರಡು ಸಾಲು ಇವು.
"ಇಂತಹ ಸುಂದರ ಪ್ರಾತಃಕಾಲದಿ
ಜೀವಿಸುವುದಕಿಂತಲು ಬೇರೆಯ ಗುರಿ
ಜೀವಕೆ ಬೇಕಿಲ್ಲ:
ಚಿರ ಸೌಂದರ್ಯದ ಸಂಪದವಿದ್ದರೆ
ಧರ್ಮಕೆ ಚ್ಯುತಿಯಿಲ್ಲ.
ಮತಿಯಲ್ಲ
ರಸಾನುಭೂತಿಯ ರಸಪಥವಲ್ಲದೆ
ಸತ್ಯಕೆ ಗತಿಯಿಲ್ಲ!"

ಎಂದು ಕವಿತೆ ಆರಂಭವಾಗುತ್ತದೆ. ಸಾಮಾನ್ಯವಾಗಿ ನಮ್ಮ ಧರ್ಮಗಳೆಲ್ಲ ಸೌಂದರ್ಯ ದ್ವೇಷಿಗಳು. ಕುವೆಂಪು ಸೌಂದರ್ಯವನ್ನು ಗ್ರಹಿಸುವ ಮೂಲಕವೇ ಸತ್ಯದ ಗ್ರಹಿಕೆ ಅನ್ನುತ್ತಾರೆ. ಮತಿ ಸತ್ಯವನ್ನು ಕಾಣಿಸಲಾರದು ಅನ್ನುತ್ತಾರೆ.
ಮುಂದೆ ನೋಡಿ:
"ನಿನ್ನೆಯ ಸಂಜೆಯ ಮಳೆಯಲಿ ಮಿಂದು
ಕಳಕಳಿಸುವ ಹಸುರ್ಬಯಲಲಿ ಇಂದು
ಹೊಂಬಿಸಿಲಲಿ ಉರಿದಿರೆ ಜಲಬಿಂದು
ಸತ್ತಳೊ ಉರ್ವಶಿ ಸ್ವರ್ಗದಲಿ!
ಗಾಳಿಯ ಮಂಡಲ ಸ್ಫಟಿಕದವೋಲಿದೆ;
ನಭವೋ ನೀಲವಿತಾನವ ಹೋಲಿದೆ;
ಅಲ್ಲಲ್ಲಿಯೆ ಮುಗಿಲಿನ ಪಟ ತೇಲಿದೆ;
ವೈಕುಂಠವಿದೆ ನಿಸರ್ಗದಲಿ!"
ನಿನ್ನೆ ಸಂಜೆ ಬಿದ್ದು ಇಂದಿನ ಬೆಳಗಿನ ಬಿಸಿಲಲ್ಲಿ ಹೊಳೆಯುವ ಮಳೆ ಹನಿಯ ಚೆಲುವಿನ ಮುಂದೆ ಉರ್ವಶಿ ಸತ್ತಂತೆ. ಸ್ಫಟಿಕದಂಥ ಸ್ವಚ್ಛ ಗಾಳಿ, ನೀಲಿ ಬಾವುಟದಂಥ ಆಕಾಶ, ಇದೇ ವೈಕುಂಠ. ಚೆಲುವನ್ನು ಕಾಣುವ ಕಣ್ಣಲ್ಲವೆ ಇದು!
ಈಗ ಕೊನೆಯ ಸ್ಟಾಂಜಾ. ನೀವು ಕೇಳಿದ ಸಾಲುಗಳು:
ದನಕರುಗಳು ಮೇಯುತ 'ಇವೆ';
ಗಿರಿತರುಗಳು ಬದುಕನು ಸವಿಯುತ 'ಇವೆ';
ಅರಿವಾಸೆಯ ಮಾಯೆಗೆ ಬೀಳದೆ 'ಇವೆ';
ಇರುವಿಕೆಯಾನಂದದಿ ನಲಿಯುತ 'ಇವೆ';
ಇರುವಿಕೆಗಿಂತಲು ಹೆಚ್ಚಿನ ಗೋಜಿಗೆ ಹೋಗದಿವೆ!
'ಅರಿವಾ'ಸೆಯೆ ಮಾಯಾಬಂಧ;
'ಇರು'ವುದೆ ಮುಕ್ತಿಯ ಆನಂದ!
'ಅರಿವಾ'ಸೆಯ ಬಿಡು; 'ಇರು'ವಾಸೆಯ ತೊಡು!
ಇಂತಹ ಸಮಯದಿ 'ಇರುವಿಕೆ'ಗಿಂತಲು
ಹೆಚ್ಚಿನ 'ಅರಿವಿ'ಲ್ಲ!
ಇಂತಹ ದಿವ್ಯಪ್ರಭಾತ ಕಾಲದಿ
ಜೀವಿಸುವುದಕಿಂತಲು ರಸಜೀವಿಗೆ
ಬೇರೆಯ ಗುರಿಯಿಲ್ಲ!"
ಕುವೆಂಪು ಈ ಕವಿತೆ ಬರೆದದ್ದು ೮-೯-೧೯೩೪. ನಾನು ಕೋಟ್ ಮಾಡಿದ ಸಾಲುಗಳು ಕೊನೆಯ ಸ್ಟಾಂಜಾದವು. ನೆನಪು ಕೈಕೊಟ್ಟದ್ದರಿಂದ ಕೊನೆಯ ಸಾಲು ಎಂದಿದ್ದೆ. ಈಗ ನೋಡಿದರೆ ಹೀಗಿದೆ. ಇರಲಿ. ಅದರಿಂದ ಅರ್ಥಕ್ಕೇನೂ ತೊಂದರೆಯಿಲ್ಲ.
ಕುವೆಂಪು ಇಲ್ಲಿ ಇರುವುದು ಮತ್ತು ಅರಿಯುವುದು, ಇಂಗ್ಲಿಷಿನ ಬೀಯಿಂಗ್ ಮತ್ತು ಬಿಕಮಿಂಗ್ ಎಂಬ ನಿಲುವುಗಳಲ್ಲಿ ಇರುವಿಕೆಗೆ, ಬೀಯಿಂಗ್‌ಗೆ ಮಹತ್ವ ನೀಡಿದ್ದಾರೆ. ಆದರೆ ನಾವು ನೀವೆಲ್ಲ ಸಾಮಾನ್ಯವಾಗಿ ಬಿಕಮಿಂಗ್ ಏನೋ ಆಗಬೇಕು, ಆಗಲೇ ಬದುಕು ಸಾರ್ಥಕ ಎಂದು ತಿಳಿದು ಬದುಕುತ್ತಿರುವವರು. ಝೆನ್ ಕತೆಯೂ ಕುವೆಂಪು ಕವಿತೆಯೂ ಆಗುವ ಆಸೆಗಿಂತ, ಅರಿಯುವ ಆಸೆಗಿಂತ ಸುಮ್ಮನೆ ನಿಜವಾಗಿ ಇರುವುದು ಮುಖ್ಯ, ಅದೇ ಮುಕ್ತಿ ಅನ್ನುತ್ತವೆ. ಹಾಗೆ ಇರದೆ ನಾವು ಎಷ್ಟೊಂದು ಸುಂದರ ಪ್ರಾತಃ ಕಾಲಗಳನ್ನೂ, ಜೀವಂತ ಕ್ಷಣಗಳನ್ನೂ ಕಳೆದುಕೊಂಡಿದ್ದೇವೆ! ಸುಮ್ಮನೆ ಇರುವುದಕ್ಕೆ ಸಾಧ್ಯವಿದ್ದಿದ್ದರೆ...!! ಅದು ಎಷ್ಟು ಕಷ್ಟ ಎಂದು ನಿಮಗೂ ನನಗೂ ಗೊತ್ತು, ಅಲ್ಲವೇ!

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಝೆನ್ ಕಥೆ ೩೪: ಜ್ಞಾನೋದಯ By: olnswamy (4 replies) February 6, 2006 - 4:56pm
  • ಕುವೆಂಪುರವರ ಯಾವ ಕವಿತೆಯದು? By: bhatpp (Feb 6 2006 - 10:24pm)
    • ಇರುವುದೆ ಮುಕ್ತಿಯ ಆನಂದ ಕುವೆಂಪು ಕವಿತೆ By: olnswamy (Feb 7 2006 - 7:48am)
      • ಇರುವಂತೆ ಇರು! By: bhatpp (Feb 7 2006 - 9:54pm)
  • ಅಬ್ಬಾ! By: tvsrinivas41 (Feb 6 2006 - 8:17pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
  • uniquesupri
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:55pm
ಇನ್ನಷ್ಟು


ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator