ಉ: ಗಾಳಿಪಟ
- ಉ: ಗಾಳಿಪಟ By: ravee... (Jan 19 2008 - 8:36pm)
- ಉ: ಗಾಳಿಪಟ By: kpbolumbu (Jan 19 2008 - 11:16pm)
- ಉ: ಗಾಳಿಪಟ By: ಸಂಗನಗೌಡ (Jan 21 2008 - 12:43am)
- ಉ: ಗಾಳಿಪಟ By: ASHOKKUMAR (Jan 21 2008 - 5:39pm)
- ಉ: ಗಾಳಿಪಟ By: ಸಂಗನಗೌಡ (Jan 21 2008 - 6:16pm)
- ಉ: ಗಾಳಿಪಟ By: ಸಂಗನಗೌಡ (Jan 21 2008 - 6:16pm)
- ಉ: ಗಾಳಿಪಟ By: ಹರೀಶ್ (Jan 21 2008 - 4:34pm)
- ಉ: ಗಾಳಿಪಟ By: ASHOKKUMAR (Jan 21 2008 - 5:39pm)
- ಉ: ಗಾಳಿಪಟ By: uniquesupri (Jan 20 2008 - 1:31pm)
- ಉ: ಗಾಳಿಪಟ By: ಸಂಗನಗೌಡ (Jan 21 2008 - 12:43am)
- ಉ: ಗಾಳಿಪಟ By: kpbolumbu (Jan 19 2008 - 11:16pm)
- ಉ: ಗಾಳಿಪಟ By: ವೈಭವ (Jan 19 2008 - 6:58pm)
- ಉ: ಗಾಳಿಪಟ By: kpbolumbu (Jan 19 2008 - 7:53pm)
- ಉ: ಗಾಳಿಪಟ By: ಶಿವ (Jan 19 2008 - 3:24pm)
- ಉ: ಗಾಳಿಪಟ By: ವೈಭವ (Jan 19 2008 - 7:12pm)
- ಉ: ಗಾಳಿಪಟ By: ಶಿವ (Jan 19 2008 - 7:28pm)
- ಉ: ಗಾಳಿಪಟ By: kpbolumbu (Jan 19 2008 - 5:34pm)
- ಉ: ಗಾಳಿಪಟ By: ವೈಭವ (Jan 19 2008 - 7:12pm)

RSS:
ಉ: ಗಾಳಿಪಟ
ಸ್ನೇಹಿತರೆ,
ಚಿತ್ರ ನೋಡಿದವರದೆಲ್ಲ್ಲ ಒಂದೇ ಅಭಿಪ್ರಾಯ-ಚಿತ್ರ ಒಳ್ಳೆ ಮನರಂಜನೆ ಕೊಡುತ್ತೆ ಅನ್ನೋದು. ಒಬ್ಬ ಸರ್ವೆ ಸಾಮಾನ್ಯ ಪ್ರೇಕ್ಷಕನಿಗೆ ಇದಕ್ಕಿಂತ ಇನ್ನೇನು ಬೇಕು. ಇಷ್ಟಕ್ಕೂ ಚಿತ್ರವನ್ನು ಮುಂಗಾರು ಮಳೆಯ ಜೊತೆಗೆ ಹೋಲಿಕೆ ಮಾಡುವುದೇಕೋ ತಿಳೀತಿಲ್ಲ. ಮುಂಗಾರು ಮಳೆ ಅಂಥಾ ಬಿಗಿ ಕಥಾಹಂದರದ ಚಿತ್ರವೂ ಆಗಿರಲಿಲ್ಲ. ಅದರ ಗೆಲುವಿಗೂ ಅದರದೇ ಆದ ಹಲವಾರು ಸಾಂದರ್ಭಿಕ ಕಾರಣಗಳನ್ನು ಕೊಡುತ್ತಾರಾದರೂ ಕೊನೆಗೂ ಪ್ರೇಕ್ಷಕನೇ ಅದರ ಯಶಸ್ಸಿನ ಸೂತ್ರದಾರ. ಯೋಗರಾಜ ಭಟ್ಟರಿಗೂ ವಿಜಯ ಕರ್ನಾಟಕದವರಿಗೂ ಅದೇನು ಮನಸ್ತಾಪ ಬಂತೋ ವಿಜಯ ಕರ್ನಾಟಕ ಮುಖಪುಟದಲ್ಲಿ ’ಗಾಳಿಪಟ’ವನ್ನು ಅಸಂಬದ್ಧ ಸಿನಿಮ ಅಂತ ಓದುಗರೆದುರು ಅಲವತ್ತುಕೊಂಡಿದ್ದಾರೆ. ಓದುಗರು ಈ ಮಟ್ಟದ ಮೂಢರೇನೂ ಅಲ್ಲ. ’ಗಜ’ ಎಂಬ ತೆಲುಗಿನ ’ಭದ್ರ’ದ ಹಳಸಲನ್ನು ಸ್ವಮೇಕ್ ಎಂಬಂತೆ ಬಿಂಬಿಸಿ ಬರೆದ ದೇವಶೆಟ್ಟಿ ಮಹೇಶ್‍ರಂತವರ ಪ್ರಾಮಾಣಿಕತೆಯೂ ಪ್ರಶ್ನಾರ್ಹ. ಕನ್ನಡದ ಸಿನಿಮ ವರದಿಗಾರರು ಅದೆಷ್ಟು ಭ್ರಷ್ಟರಾಗಿ ಹೋಗಿದ್ದಾರೆಂಬುದಕ್ಕೆ ಇದು ಸಾಕ್ಷಿ. ಇದೆಲ್ಲ ಬಿಟ್ಟು ಯೋಗರಾಜ ಭಟ್ಟರ ಗಾಳಿಪಟವನ್ನು ಎಲ್ಲ ಚಿತ್ರಗಳಂತ ವಿಮರ್ಶಿಸಿದರೆ ಸಾಕಲ್ಲವೆ...? ಮುಖಪುಟದಲ್ಲಿ ಕನ್ನಡ ಚಿತ್ರವೊಂದನ್ನು ಬೈಯ್ಯಲು ಬಳಸುವ ಏಕೈಕ ಪತ್ರಿಕೆ ವಿ ಕ ಒಂದೇ ಇರಬೇಕು. ವಿಶ್ವೇಶ್ವರ ಭಟ್ಟರಿಗೆ ವಿವೇಚಿಸುವ ಸಮಚಿತ್ತತೆ ಬರಲಿ. ದೇವಶೆಟ್ಟಿ ಮಹೇಶ್ ಬರೆದದ್ದನ್ನು ಇನ್ನೊಂದು ಹೆಸರಲ್ಲಿ ಪ್ರಕಟಿಸಿದ ದಟ್ಸ್-ಕನ್ನಡ ಶ್ಯಾಂ ಬೇಸ್ತು ಬಿದ್ದರಾ...? ಅವರನ್ನೇ ಕೇಳಬೇಕು.
ವಂದನೆಗಳೊಂದಿಗೆ..
ರವಿ