ಉ: ಗಾಳಿಪಟ
- ಉ: ಗಾಳಿಪಟ By: ravee... (Jan 19 2008 - 8:36pm)
- ಉ: ಗಾಳಿಪಟ By: kpbolumbu (Jan 19 2008 - 11:16pm)
- ಉ: ಗಾಳಿಪಟ By: ಸಂಗನಗೌಡ (Jan 21 2008 - 12:43am)
- ಉ: ಗಾಳಿಪಟ By: ASHOKKUMAR (Jan 21 2008 - 5:39pm)
- ಉ: ಗಾಳಿಪಟ By: ಸಂಗನಗೌಡ (Jan 21 2008 - 6:16pm)
- ಉ: ಗಾಳಿಪಟ By: ಸಂಗನಗೌಡ (Jan 21 2008 - 6:16pm)
- ಉ: ಗಾಳಿಪಟ By: ಹರೀಶ್ (Jan 21 2008 - 4:34pm)
- ಉ: ಗಾಳಿಪಟ By: ASHOKKUMAR (Jan 21 2008 - 5:39pm)
- ಉ: ಗಾಳಿಪಟ By: uniquesupri (Jan 20 2008 - 1:31pm)
- ಉ: ಗಾಳಿಪಟ By: ಸಂಗನಗೌಡ (Jan 21 2008 - 12:43am)
- ಉ: ಗಾಳಿಪಟ By: kpbolumbu (Jan 19 2008 - 11:16pm)
- ಉ: ಗಾಳಿಪಟ By: ವೈಭವ (Jan 19 2008 - 6:58pm)
- ಉ: ಗಾಳಿಪಟ By: kpbolumbu (Jan 19 2008 - 7:53pm)
- ಉ: ಗಾಳಿಪಟ By: ಶಿವ (Jan 19 2008 - 3:24pm)
- ಉ: ಗಾಳಿಪಟ By: ವೈಭವ (Jan 19 2008 - 7:12pm)
- ಉ: ಗಾಳಿಪಟ By: ಶಿವ (Jan 19 2008 - 7:28pm)
- ಉ: ಗಾಳಿಪಟ By: kpbolumbu (Jan 19 2008 - 5:34pm)
- ಉ: ಗಾಳಿಪಟ By: ವೈಭವ (Jan 19 2008 - 7:12pm)

RSS:
ಉ: ಗಾಳಿಪಟ
ಎಂದಿಗೆ ಸಂಕೇಸ್ವರ್ ಪ್ಯೂರ್ ಬಿಜಿನೆಸ್ ಮೈಂಡೆಡ್ ಆಗಿ ವಿಜಯ ಕರ್ನಾಟಕಾನ ಹೋಗಿ ಹೋಗಿ ಟಿ.ಓ.ಐ ಗೆ ಮಾರಿಕೊಂಡನೋ ಅಂದೇ ಅದು ಸತ್ತು ಹೋಯಿತು. ಈಗೇನಿದ್ದರು ಅದರ ದೇಹ, ಒಳಗಿರುವದು ಕನ್ನಡಕ್ಕೆ ಮಾರಕವಾದ ದೆವ್ವ ಅನಿಸುತ್ತೆ. ನನ್ನ ಮಾತು ನಿಮಗೆ ಅತೀ ಅನಿಸಬಹುದು. ಆದರೆ ವಿ.ಕ ಮಾರಾಟವಾದ ಮರುದಿನದಿಂದಲೇ ಕನ್ನಡದ ಹಿತ ಬಯಸುವ ಸುದ್ದಿಗಳು ಒಳಪುಟದ ಯಾವುದೋ ಮೂಲೆ ಸೇರತೊಡಗಿದವು. ಕನ್ನಡವನ್ನು ಲೋಕಸಭೆಯಲ್ಲಿ ಮಹಾರಾಸ್ಟ್ರದ ಕಿತಾಪತಿಯಿಂದ ತೆಗೆದದ್ದು, ಮುಕಪುಟದಲ್ಲಿ ಬರ್ತಾ ಇತ್ತು. ಅದೇ ಹೊತ್ತಲ್ಲೇ ಸಂಕೇಸ್ವರ್ ತಮ್ಮ ಪೇಪರನ್ನು ಮಾರಿಕೊಳ್ಳುವ ತುರಾತುರಿ ನಡೆಸಿದ್ದರು. ಮಾರಾಟವಾದ ಮರುದಿನಾನೇ ಆ ಸುದ್ದಿ ಒಳಪುಟ ಸೇರಿತು, ಅದೂ ಅರ್ದಂಬರ್ದ!
ವಿ.ಕ.ದ ವರದಿಗಾರರನ್ನು ತುರ್ಜಮೆಗಾರನ್ನಾಗಿ ಬಳಸಿಕೊಳ್ಳಲು ಮುಂದಾದ ಟಿ.ಓ.ಐ ಪಾಲಿಗೆ ಟೈಮ್ಸ್ ಕನ್ನಡ ವರದಿಗಾರರು ಬರೀ ಇಂಗ್ಲೀಸಿನಲ್ಲಿ ಬರೆದದ್ದನ್ನು ಕನ್ನಡಕ್ಕೆ ತರುವ ಮಶೀನುಗಳಸ್ಟೇ. ಕನ್ನಡ ಪೇಪರುಗಳಲ್ಲಿ ಮೊದಲು ಕನ್ನಡ ಸಿನಿಮಾಗಳ ಬಗ್ಗೆ ಅಸ್ಟೇ ಬರ್ತಾ ಇತ್ತು. ಈಗ ನಮ್ಮ ಸಂಕೇಸ್ವರರ ಒಂದು ಎಡವಟ್ಟಿನಿಂದ ಹಿಂದಿ ಸಿನಿಮಾ ಸುದ್ದಿಗಳದೇ ಅಬ್ಬರ. ಕನ್ನಡ ಪೇಪರುಗಳಲ್ಲಿ ಹಿಂದಿ ಸಿನಿಮಾ ಸುದ್ದಿಗಳು ಇಸ್ಟು ದೊಡ್ಡ ಬಗೆಯಲ್ಲಿ ಬರತೊಡಗಿದ್ದು ಇದೇ ಪೇಪರಿನಲ್ಲಿ.
ಶನಿವಾರ ವಿ.ಕ ದಲ್ಲಿ ಬಂದ ತಿಕ್ಕಲುತನದ ರಿವೀವ್ ನೋಡಿಯೇ ನಾನು ಹೆಂಗೋ ಕಸ್ಟಪಟ್ಟು ಟಿಕೆಟ್ "ಗಳಿಸಿಕೊಂಡು"(
)) ಸಿನಿಮಾ ನೋಡಿದೆ. ನೋಡಿದ ಮೇಲೆ ನನಗನಿಸಿದ್ದು, ಆ ಬರಹವನ್ನು ಬರೆದ ದೇವಶೆಟ್ಟಿ ಮತ್ತು ಮುಕಪುಟದಲ್ಲಿ ಹಾಕಿದ ವಿ.ಕ ಎಡಿಟರ್ರು ಇಬ್ಬರೂ ದೊಡ್ಡ ಸ್ಯಾಡಿಸ್ಟಗಳೆಂದು 
ಸಿನಿಮಾ ಸಕ್ಕಾತ್ತಾಗಿದೆರೀ, ಇಂತ ಸ್ಯಾಡಿಸ್ಟ್ ಗಳ ಕೆಟ್ಟ ರಿವೀವ್ ಓದಿಕೊಂಡು ತುಂಬಾ conscious ಆಗಿ ನೋಡದೇ, ತಿಳಿ ಮನಸ್ಸಿ(ಪ್ರಾಂಜಲ ಮನಸ್ಸು)ನಿಂದ ಸಿನಿಮಾ ನೋಡಿ. ನನಗಂತೂ ಸಿನಿಮಾ ತುಂಬಾ ಹಿಡಿಸಿತು.
ಆ ಈ ರಿವೀವ್ ಗಳನ್ನು ತಲೆಗೆ ಹಾಕೊಳ್ಳದೇ ನೋಡಿದ್ರೆ ಯಾರಿಗಾದ್ರೂ ಇಸ್ಟ ಆಗುತ್ತೆ ಈ ಸಿನಿಮಾ, ನನಗನಿಸುವಂತೆ ಇದು ಮತ್ತೊಂದು ಮುಂಗಾರು ಮಳೆನೇ.