ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಉ: ಕರ್ನಾಟಕದ ರಕ್ಷಣೆ ಯಾರಿಂದ?

January 21, 2008 - 1:55pm — ತಿಮ್ಮಯ್ಯ

ಉ: ಕರ್ನಾಟಕದ ರಕ್ಷಣೆ ಯಾರಿಂದ?

ತಿಮ್ಮಯ್ಯ's picture

ಪ್ರಿಯ ಲೇಖಕರೇ,
ಮೊದಲಿಗೆ, ನಿಮ್ಮ ಸಮಾಜವಾದಿ ಗೆಳೆಯರಿಗೆ ನಮ್ಮದೊಂದು ಶ್ರದ್ಧಾಂಜಲಿ. ಅವರ ತಾತ್ವಿಕ ಬದ್ಧತೆಯನ್ನು ಶ್ಲಾಘಿಸುವ ಭರದಲ್ಲಿ ತಾವು ಬೀದಿ ಬಂಟರೆಂದು ಹೀಯಾಳಿಸಿ(?) ಮಾತಾಡಿರುವುದು ಸರಿಯಲ್ಲ. ಬೀದಿಗಿಳಿದು ಹೋರಾಟ ಮಾಡುವವರಿಗೆ ತಾತ್ವಿಕ ಬದ್ಧತೆಯಿರುವುದಿಲ್ಲ ಎನ್ನುವ ನಿಮ್ಮ ಅನಿಸಿಕೆಯೇ ಬಾಲಿಷ. ತಾತ್ವಿಕ ಬದ್ಧತೆಗೂ ಬೀದಿ ಹೋರಾಟಕ್ಕೂ ಸಂಬಂಧವಿಲ್ಲ ಎಂದು ಒಪ್ಪುತ್ತೀರಷ್ಟೆ?
ಅಥವಾ ನಾರಾಯಣ ಗೌಡರಿಗೆ ವಿಶೇಷಣವಾಗಿ ನೀವು ಬೀದಿ ಬಂಟರೆಂದು ಬರೆದಿದ್ದರೆ ಅದು ಕನ್ನಡ ಹೋರಾಟದ ಬಗ್ಗೆ ತಮಗಿರುವ ಅರೆ ಜ್ಞಾನ ಮತ್ತು ತಾತ್ಸಾರವನ್ನು ತೋರಿಸುತ್ತದೆ. ಇರಲಿ ಬಿಡಿ. ಕರವೇಯ ರಾಜ್ಯಾಧ್ಯಕ್ಷರಿಗೆ ತಾತ್ವಿಕ ಬದ್ಧತೆ ಇಲ್ಲ ಎನ್ನಲು ತಮ್ಮಲ್ಲಿ ಏನಾದರೂ ಆಧಾರವಿದೆಯೇ? ಜನ ಪ್ರತಿನಿಧಿ ಎನ್ನುವಾಗ ಅಧಿಕೃತ, ಅನಧಿಕೃತ ಎನ್ನುವ ಪದ ಪ್ರಯೋಗ ಎಷ್ಟು ಸರಿ? ಚುನಾವಣಾ ರಾಜಕಾರಣಕ್ಕಿಳಿದವರು ಅಧಿಕೃತ ಉಳಿದವರು ಅನಧಿಕೃತ ಎನ್ನುವುದು ಸರಿನಾ? ನಿಮ್ಮ ಅನಿಸಿಕೆಯಂತೆ ನಾಳೆ ಕರವೆ ಅಧಿಕೃತ ಜನಪ್ರತಿನಿಧಿಯಾಗಲು ಹೊರಟರೂ ತಮ್ಮಂತಹವರು ರಾಜಕೀಯ ದುರುದ್ದೇಶ ಎನ್ನದೇ ಬಿಡುವುದಿಲ್ಲ. ಅಲ್ಲವೇ?
ಕನ್ನಡಿಗರ ಹಿತ ಕಾಪಾಡಲು ಎಷ್ಟೋ ವ್ಯವಸ್ಥೆಗಳನ್ನು ನಮ್ಮ ಪ್ರಜಾಪ್ರಭುತ್ವ ಕಲ್ಪಿಸಿಕೊಟ್ಟಿದೆ ಅನ್ತೀರಾ. ಆದರೆ ಈ ವ್ಯವಸ್ಥೆಗಳು ಪ್ರಾಮಾಣಿಕವಾಗಿ ಮತ್ತು ಪರಿಣಾಮಕಾರಿಯಾಗಿ ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿಲ್ಲದಿರುವುದರಿಂದಲೇ ನಮಗೆ ಕರವೇಯಂತಹ ಸಂಘಟನೆಯ ಅಗತ್ಯ ಹುಟ್ಟೋದು ಅನ್ನೋದು ಕೂಡಾ ಸತ್ಯವಲ್ಲವೇ?
ಕನ್ನಡಿಗರ ಸಮಸ್ಯೆಗಳಿಗೆ ನಿಜವಾದ ಪರಿಹಾರ ಇರುವುದೇ ಜಾಗೃತಿಯಲ್ಲಿ. ಈ ಜಾಗೃತಿಯ ಕೆಲಸವನ್ನು ಕರವೇ ತನ್ನ ಹೋರಾಟಗಳ ಮೂಲಕ, ಸಾರ್ವಜನಿಕ ಸಭೆಗಳ ಮೂಲಕ, ಕರಪತ್ರಗಳು, ಬ್ಲಾಗ್, ಅಂತರ್ಜಾಲಗಳ ಮೂಲಕ ಮಾಡುತ್ತಲೇ ಬಂದಿದೆ.
ಸೈದ್ಧಾಂತಿಕ ನೆಲೆಗಟ್ಟೊಂದನ್ನು ಹೊಂದಿದ್ದೇ ಸಂಘಟನೆ ಮುಂದೆ ಸಾಗುತ್ತಿದೆ. ತಾವು ಇವುಗಳತ್ತ ಮುಕ್ತ ಮನಸ್ಸಿನಿಂದ ನೋಡಬೇಕು ಅಷ್ಟೆ.
ವಲಸೆ, ಒಕ್ಕೂಟ ವ್ಯವಸ್ಥೆಗಳ ಬಗ್ಗೆ, ಜಾಗತೀಕರಣ ಹುಟ್ಟುಹಾಕಿರುವ ಸನ್ನಿವೇಶಗಳ ಬಗ್ಗೆ, ಕನ್ನಡಿಗರ ನಾಳೆಗಳು ಹಸನು ಮಾಡುವ ಬಗ್ಗೆ ಸ್ಪಷ್ಟವಾದ ನೀತಿ-ನಿಲುವು-ಸಿದ್ಧಾಂತಗಳನ್ನು ಕರವೇ ಹೊಂದಿದೆ ಎನ್ನುವುದನ್ನೆ ತಾವು ಗಮನಿಸಿದ ಹಾಗೆ ತೋರುತ್ತಿಲ್ಲ. ಒಂದೆಡೆ ರೇಲ್ವೆ ಹೋರಾಟದ ಉದಾಹರಣೆ ಕೊಟ್ಟು ತಾವು ವ್ಯವಸ್ಥೆಯಿಂದ ಪ್ರತಿಸ್ಪಂದನೆಯನ್ನು ಗಳಿಸಿದ ಬಗ್ಗೆ ದುರಂತ ಅನ್ನುವ ನೀವೇ ಇನ್ನೊಂದೆಡೆ ರೈಲ್ವೇ ಟಿಕೆಟಲ್ಲಿ ಕನ್ನದ ಮಾಯವಾದರೂ ಇವರು ಎರಡು ದಿನ ಪ್ರತಿಭಟಿಸಿ ಕುಣಿದರು, ಏನೂ ಮಾಡಲಾಗಲಿಲ್ಲ ಅಂತೀರ. ಸಂಸದರ ಮೇಲೆ ಒತ್ತಡ ತರಲು ಕಾವೇರಿ ಹೋರಾಟ ನಡೆದಾಗ ಕರವೇ ಮುಂದಾದದ್ದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಈಗ ರೈಲ್ವೇ ಹೋರಾಟದಲ್ಲೂ ಕರವೇ ನಾಡಿನ ’ಅಧಿಕೃತ’ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುತ್ತಲೇ ಬಂದಿದೆ ಅನ್ನುವುದನ್ನೂ ಗಮನಿಸಿ. ಒಟ್ಟಾರೆ ಒಮ್ಮೆ ಇವುಗಳೆಲ್ಲದರ ಬಗ್ಗೆ ಮುಕ್ತಮನಸ್ಸಿಂದ ಪರಿಚಯ ಮಾಡಿಕೊಂಡರೆ ತಮ್ಮ ಬರಹಕ್ಕೂ ತೂಕ ಬಂದೀತು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕರ್ನಾಟಕದ ರಕ್ಷಣೆ ಯಾರಿಂದ? By: D.S.NAGABHUSHANA (9 replies) January 18, 2008 - 8:18pm
  • ಉ: ಕರ್ನಾಟಕದ ರಕ್ಷಣೆ ಯಾರಿಂದ? By: agilenag (Jan 21 2008 - 8:13pm)
    • ಉ: ಕರ್ನಾಟಕದ ರಕ್ಷಣೆ ಯಾರಿಂದ? By: Ennares (Jan 21 2008 - 9:25pm)
      • ಉ: ಕರ್ನಾಟಕದ ರಕ್ಷಣೆ ಯಾರಿಂದ? By: ಹಿರಣ್ಯಾಕ್ಷ (Jan 22 2008 - 3:54pm)
      • ಉ: ಕರ್ನಾಟಕದ ರಕ್ಷಣೆ ಯಾರಿಂದ? By: agilenag (Jan 22 2008 - 11:07am)
  • ಉ: ಕರ್ನಾಟಕದ ರಕ್ಷಣೆ ಯಾರಿಂದ? By: mahesha (Jan 21 2008 - 3:20pm)
  • ಉ: ಕರ್ನಾಟಕದ ರಕ್ಷಣೆ ಯಾರಿಂದ? By: ತಿಮ್ಮಯ್ಯ (Jan 21 2008 - 1:55pm)
  • ಉ: ಕರ್ನಾಟಕದ ರಕ್ಷಣೆ ಯಾರಿಂದ? By: agilenag (Jan 19 2008 - 10:35am)
    • ಉ: ಕರ್ನಾಟಕದ ರಕ್ಷಣೆ ಯಾರಿಂದ? By: Ennares (Jan 19 2008 - 4:30pm)
      • ಉ: ಕರ್ನಾಟಕದ ರಕ್ಷಣೆ ಯಾರಿಂದ? By: Sunil Jayaprakash (Jan 19 2008 - 5:08pm)

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • vinayudupa
    ಉ: ಒಗಟು - ಬಿಡಿಸಿ!
    December 3, 2008 - 8:15am
  • gnanadev
    ಉ: ಮಕ್ಕಳ ಹಾಡು
    December 3, 2008 - 7:20am
  • rameshbalaganchi
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 7:16am
  • rameshbalaganchi
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 6:55am
  • lsiddappa
    ಉ: ಅಂತರ್ಜಾತಿ ವಿವಾಹ
    December 3, 2008 - 6:22am
  • lsiddappa
    ಉ: "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?":- ಭಾಗ ೨
    December 3, 2008 - 6:21am
  • kannadakanda
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 6:19am
  • kannadakanda
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 6:18am
  • venkatesh
    ಉ: ಅಮೃತ್ ಮಂಗ್ಳೂರ್ ಯಾಕೊ ಕಾಣ್ವಲ್ರಲ್ಲ ; ಬ್ಯಾಸ್ರಿಕೆಆಯ್ತೇನ್ರಿ, ಎಲ್ ಹೋಗ್ಯಾರ್ರಿ ?
    December 3, 2008 - 5:59am
  • lsiddappa
    ಉ: ಕ್ಷಮಿಸು ನಾ ರಾಧೆಯಲ್ಲ-೩
    December 3, 2008 - 5:54am
ಇನ್ನಷ್ಟು


ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator