ಉ: ಬೇಸಿಸ್ ಪಾಯಿಂಟ್ ಎಂದರೇನು ?
- ಉ: ಬೇಸಿಸ್ ಪಾಯಿಂಟ್ ಎಂದರೇನು ? By: Sunil Jayaprakash (Feb 12 2008 - 10:39pm)
- ಉ: ಬೇಸಿಸ್ ಪಾಯಿಂಟ್ ಎಂದರೇನು ? By: ASHOKKUMAR (Feb 12 2008 - 10:04pm)
- ಉ: ಬೇಸಿಸ್ ಪಾಯಿಂಟ್ ಎಂದರೇನು ? By: Ennares (Feb 12 2008 - 7:10pm)
- ಉ: ಬೇಸಿಸ್ ಪಾಯಿಂಟ್ ಎಂದರೇನು ? By: ಶ್ಯಾಮ ಕಶ್ಯಪ (Feb 15 2008 - 3:32pm)

RSS:
ಉ: ಬೇಸಿಸ್ ಪಾಯಿಂಟ್ ಎಂದರೇನು ?
ಪ್ರಿಯ ಸುನಿಲ್,
ಹಣಕಾಸಿನ ವ್ಯವಹಾರಗಳಲ್ಲಿ ಬಡ್ಡಿಯ ದರವನ್ನು “ಪ್ರತಿಶತ” ( ಪರ್ಸೆಂಟ್) ಅನ್ನೋ ಮಾನವನ್ನು ಉಪಯೋಗಿಸುತ್ತೇವೆ ಅಲ್ಲವೇ? ಉದಾಹರಣೆಗೆ ಮನೆ ಸಾಲದ ಬಡ್ಡಿ ದರ ೮ ಪ್ರತಿಶತ ಅಥವಾ ೮ ಪರ್ಸೆಂಟ್ ಅಂದರೆ ನೂರು ರೂಪಾಯಿ ಅಸಲಿಗೆ ಎಂಟು ರೂಪಾಯಿ ವಾರ್ಷಿಕ ಬಡ್ಡಿ ಅನ್ನೋ ಅರ್ಥ. ಈ ಬಡ್ಡಿಯ ದರಗಳಲ್ಲಿ ಇನ್ನೂ ಸೂಕ್ಷ್ಮವಾದ ಬದಲಾವಣೆಗಳನ್ನು ಸೂಚಿಸಲು “ಬೇಸಿಸ್ ಪಾಯಿಂಟ್” ಅನ್ನುವ ಮಾನದಂಡ ಬಳಸಲಾಗುತ್ತೆ.
ಒಂದು ಪರ್ಸೆಂಟ್ = ನೂರು ಬೇಸಿಸ್ ಪಾಯಿಂಟ್‍ಗಳು. ಇದು ವಿಶ್ವಾದ್ಯಂತ ಹಣಕಾಸಿನ ವಹಿವಾಟಿನಲ್ಲಿ ಉಪಯೋಗಿಸುವ ಮಾನ. ಇದು ಬರೀ ನಮ್ಮ ಆರ್. ಬಿ. ಐ ಗೆ ಸೀಮಿತವಲ್ಲ.
ಬಡ್ಡಿಯದರ ೮ ರಿಂದ ೮.೨ ಪರ್ಸೆಂಟ್ ವರೆಗೂ ಹೆಚ್ಚಾದರೆ ಇಪ್ಪತ್ತು ಬೇಸಿಸ್ ಪಾಯಿಂಟ್ಗಳ ವೃಧ್ಧಿ ಅಂತ ಹೇಳುವ ವಾಡಿಕೆ. ಇದನ್ನೇ ೦.೨ ಪರ್ಸೆಂಟ್ ವೃಧ್ಧಿ ಅಂತಲೂ ಹೇಳಬಹುದು. ಹೆಚ್ಚಿನ ಮಾಹಿತಿಗೆ ಕೆಳಕಂಡ ಕೊಂಡಿಗಳನ್ನು ಉಪಯೋಗಿಸಿ ನೋಡಿ.
http://en.wikipedia.org/wiki/Basis_point
http://www.investopedia.com/ask/answers/05/basispoint.asp
- ನವರತ್ನ ಸುಧೀರ್