ಉ: ಸಂನ್ಯಾಸಿಯೊಂದಿಗೆ ಸಂವಾದ
- ಉ: ಸಂನ್ಯಾಸಿಯೊಂದಿಗೆ ಸಂವಾದ By: yajamanfrancis (Feb 27 2008 - 5:24pm)
- ಉ: ಸಂನ್ಯಾಸಿಯೊಂದಿಗೆ ಸಂವಾದ By: cmariejoseph (Feb 27 2008 - 10:31pm)
- ಉ: ಸಂನ್ಯಾಸಿಯೊಂದಿಗೆ ಸಂವಾದ By: ಗಣೇಶ (Feb 27 2008 - 11:52pm)
- ಉ: ಸಂನ್ಯಾಸಿಯೊಂದಿಗೆ ಸಂವಾದ By: cmariejoseph (Feb 28 2008 - 10:12am)
- ಉ: ಸಂನ್ಯಾಸಿಯೊಂದಿಗೆ ಸಂವಾದ By: ಗಣೇಶ (Feb 27 2008 - 11:52pm)
- ಉ: ಸಂನ್ಯಾಸಿಯೊಂದಿಗೆ ಸಂವಾದ By: cmariejoseph (Feb 27 2008 - 10:31pm)

RSS:
ಉ: ಸಂನ್ಯಾಸಿಯೊಂದಿಗೆ ಸಂವಾದ
ಒಂದೆರಡು ಹೊಳಹುಗಳು -
೨ನೆಯ ಕ್ರಮಸಂಖ್ಯೆಗೆ -
“ವಿಪರ್ಯಾಸವೆಂದರೆ ಎಲ್ಲ ಧರ್ಮಗಳೂ ತಮ್ಮನ್ನು ಶ್ರೇಷ್ಠಾತಿಶ್ರೇಷ್ಠ ಎಂದು ಭಾವಿಸಿವೆ ಮತ್ತು ಅದನ್ನೆ ಬೋಧಿಸುತ್ತಿವೆ ಕೂಡ.”
೩ನೆಯ -
“ಇಲ್ಲಿ ಒಳಿತು ಮತ್ತು ಕೆಡುಕು ಯಾವುದೆನ್ನುವುದರ ವಿವೇಚನೆ ಅಗತ್ಯ. ಒಂದು ಧರ್ಮದ ಒಳಿತು ಮತ್ತೊಂದು ಧರ್ಮಕ್ಕೆ ಕೆಡುಕಾಗಿ ಕಾಣುವ ಪ್ರಮೇಯಗಳು ಈಗ ಇಲ್ಲದಿಲ್ಲ. ನಿಜವಾದ ಧರ್ಮಯುದ್ಧ ಎಂದರೆ ಏನು?”
೫ನೆಯ -
“ಪ್ರಶ್ನೆ ಎರಡಕ್ಕೂ ಇದಕ್ಕೂ ಹೆಚ್ಚಿನ ವ್ಯತ್ಯಾಸ ಕಾಣುತ್ತಿಲ್ಲ.”
೬ನೆಯ -
“ಈ ಸ್ವಪ್ರೇರಣೆಯೇ ಈಗ ಕಣ್ಣುಗಳಿಗೆ ಮತಾಂತರವಾಗಿ ಕಾಣಿಸುತ್ತಿರುವುದು.
ಒಬ್ಬ ವ್ಯಕ್ತಿಗೆ ಒಂದು ಧರ್ಮದ ಕೆಲ ಅಂಶ, ಮತ್ತೊಂದು ಧರ್ಮದ ಸಣ್ಣ ವಿಚಾರ ಇಷ್ಟವಾಗಿದೆ ಎಂದಿಟ್ಟುಕೊಳ್ಳೋಣ. ಹಾಗಾದಾಗ, ಆತ ಅವುಗಳನ್ನು ಆಂತರಿಕವಾಗಿ ಅನುಸರಣೆಗೆ ತೊಡಗುತ್ತಾನೆಯೇ ವಿನಃ, ಆದನ್ನು ಹೊರಗೆಲ್ಲೂ ಪ್ರಕಟಪಡಿಸಲಾರ. ಕಾರಣ ಈಗಾಗಲೇ ಅವನು ಅನುಸರಿಸುತ್ತಿರುವ ಧರ್ಮ, ಅಡ್ಡಿ ಮಾಡೀತೆಂಬ ಆತಂಕ. ಈ ದೃಷ್ಟಿಯಲ್ಲಿ ಒಂದು ಧರ್ಮವೇ ಇನ್ನೊಂದು ಧರ್ಮವನ್ನು ಹಿಚುಕುತ್ತಿರುವುದು ಸ್ಪಷ್ಟ.”
೮ನೆಯ -
“ಮತಗಳ ವಿಶಾಲ ಭಾವನೆಯ ತತ್ವಗಳು ಎಂದಾಗಲೇ ಅಲ್ಲಿ ಸಂಕುಚಿತ ಚೌಕಟ್ಟು ಇಲ್ಲ ಎಂಬ ಅರ್ಥ ಹೊರಡುತ್ತದೆಯಲ್ಲವೆ? ಪ್ರಶ್ನೆಯನ್ನು ಕೊಂಚ ರಿಪೇರಿ ಮಾಡಲು ಸಾಧ್ಯವೇ ನೋಡಿ. (ಪ್ರೀತಿಯ ಸಲಹೆಯಷ್ಟೆ)”
೧೦ನೆಯ -
“ಪ್ರತಿ ಧರ್ಮದಲ್ಲೂ ಸಮಾನ ಅಂಶಗಳೂ ಸಾಕಷ್ಟು ಕಂಡುಬರುತ್ತವೆ. ಆದರೆ ಯಾವುದು ಉನ್ನತ ಧರ್ಮ ಎಂದು ನಾವೆಲ್ಲಾ ತಲೆಕೆಡಿಸಿಕೊಳ್ಳುತ್ತಿರುವುದರಿಂದ ಅವು ನಮಗೆ ಕಾಣುತ್ತಿಲ್ಲ ಅಷ್ಟೇ.”
೧೪ನೆಯ -
“ಪರಸ್ಪರ ಸಂವಹನ, ಸಂವಾದ, ಧಾರ್ಮಿಕ ಕಾರ್ಯಕ್ರಮಗಳಿಗೆ ಆಹ್ವಾನ, ಧಾರ್ಮಿಕ ಸಾಮ್ಯತೆಗಳ ಮನದಟ್ಟಿಗೆ ಪೂರಕ ಪ್ರಯತ್ನ. “
೧೬ನೆಯ -
“ಸರ್ವ ಧರ್ಮ ಸಹಿಷ್ಣುತೆಯ ಅರ್ಥ ಇಲ್ಲಿ ಸ್ಪಷ್ಟ. ಇಲ್ಲಿ ಪರರನ್ನು ಎಂದಾಗ ತನ್ನದೇ ಧರ್ಮದವನೆಂದು ಪರಿಭಾವಿಸುವುದು ಸಲ್ಲ, “
೧೭ನೆಯ -
“ಯೇಸು ಪ್ರತಿಪಾದಿಸಿದ್ದು ಪ್ರೀತಿ. ಗಾಂಧಿಯದು ಅಹಿಂಸೆ. ಎರಡು ಒಂದರೊಳಗೊಂದು ಹೇಗೆ ಮಿಳಿತವಾಗಿವೆ ನೋಡಿ”
೧೮ನೆಯ -
“ಇನ್ಯಾರೋ ಮಾಡಲಿ ಎಂದು ಕೈಕಟ್ಟಿ ಕುಳಿತುಕೊಳ್ಳುವ ಬದಲು, ನಮ್ಮ ಅಳಿಲುಸೇವೆಗಳಿಂದ ಮುಂದಾದರೆ ಮನುಷ್ಯ ಮತ್ತು ಧರ್ಮ ಎರಡೂ ಗಟ್ಟಿಗೊಳ್ಳಲು ಸಾಧ್ಯ.”
೧೯ನೆಯ -
“ತಲೆಬುಡವಿಲ್ಲದ ಮುದಿ ಬರೆಹಗಳು, ಸಂಶೋಧನೆ ಎಂಬ ಹೆಸರಲ್ಲಿ ರಾತೋರಾತ್ರಿ ಜೀವ ಪಡೆವ ಕಲ್ಲುಬಂಡೆಗಳು, ಪ್ರಾರ್ಥನೆಯನ್ನೆ ಮತಾಂತರ ಎನ್ನುವ ಹೇಳಿಕೆಗಳು, ಹಿಂಸೆಗೆ ಪ್ರಚೋದನೆ, ಮುಂತಾದ ಮೌಢ್ಯಗಳಿಂದ ಒಂದು ಧರ್ಮ ಉಳಿಯುತ್ತದೆಯೇ?. ಉಳಿದರೂ ಅದು ಧರ್ಮ ಎಂದು ಕರೆಸಿಕೊಳ್ಳಲು ಯೋಗ್ಯವೆ?“
ಒಲುಮೆಯಿಂದ,
ಯಜಮಾನ್ ಫ್ರಾನ್ಸಿಸ್